Closing Bell: ಸೆನ್ಸೆಕ್ಸ್, ನಿಫ್ಟಿ ಮರಳಿ ಏರಿಕೆ ಹಾದಿಗೆ; ಒಂದೇ ದಿನ ಡಿವೀಸ್ ಲ್ಯಾಬ್ಸ್ ಶೇ 8ರಷ್ಟು ಗಳಿಕೆ

| Updated By: Srinivas Mata

Updated on: Oct 04, 2021 | 6:22 PM

ಅಕ್ಟೋಬರ್ 1ಕ್ಕೆ ಕೊನೆಯಾದ ವಾರದಲ್ಲಿ ಸತತ ಇಳಿಕೆ ಕಾಣುತ್ತಿದ್ದ ಭಾರತ ಷೇರು ಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಏರಿಕೆ ಹಾದಿಗೆ ಮರಳಿವೆ. ಈ ದಿನದ ವಹಿವಾಟಿನಲ್ಲಿ ಏರಿಕೆ ಮತ್ತು ಇಳಿಕೆ ಕಂಡ ಪ್ರಮುಖ ಷೇರುಗಳ ವಿವರ ಇಲ್ಲಿದೆ.

Closing Bell: ಸೆನ್ಸೆಕ್ಸ್, ನಿಫ್ಟಿ ಮರಳಿ ಏರಿಕೆ ಹಾದಿಗೆ; ಒಂದೇ ದಿನ ಡಿವೀಸ್ ಲ್ಯಾಬ್ಸ್ ಶೇ 8ರಷ್ಟು ಗಳಿಕೆ
ಪ್ರಾತಿನಿಧಿಕ ಚಿತ್ರ
Follow us on

ಭಾರತದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಅಕ್ಟೋಬರ್ 4ನೇ ತಾರೀಕಿನ ಸೋಮವಾರದಂದು ಮರಳಿ ಏರಿಕೆ ಹಾದಿಗೆ ಬಂದಿದೆ. ಕಳೆದ ವಾರ ಸತತವಾಗಿ ಇಳಿಕೆಯನ್ನೇ ಕಾಣುತ್ತಾ ಬಂದಿದ್ದ ಸೂಚ್ಯಂಕಗಳು ಹತ್ತಿರ ಹತ್ತಿರ ತಲಾ ಶೇ 1ರಷ್ಟು ಹೆಚ್ಚಳ ಕಂಡವು. ಇಂದಿನ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್​ 533 ಪಾಯಿಂಟ್ಸ್​ ಅಥವಾ ಶೇ 0.91ರಷ್ಟು ಮೇಲೇರಿ 59,299 ಪಾಯಿಂಂಟ್ಸ್​ನೊಂದಿಗೆ ದಿನಾಂತ್ಯವನ್ನು ಕಂಡರೆ, ನಿಫ್ಟಿ 50 159.20 ಪಾಯಿಂಟ್ಸ್​ ಅಥವಾ ಶೇ 0.91ರಷ್ಟು ಹೆಚ್ಚಳವಾಗಿ, 17,691 ಪಾಯಿಂಟ್ಸ್​ನೊಂದಿಗೆ ವ್ಯವಹಾರವನ್ನು ಮುಗಿಸಿತು. ಅಕ್ಟೋಬರ್ 1ನೇ ತಾರೀಕಿಗೆ ಕೊನೆಗೊಂಡ ವಾರದ ಉದ್ದಕ್ಕೂ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಕಂಡುಬಂತು. ಜಾಗತಿಕವಾಗಿ ಮಾರುಕಟ್ಟೆಗಳು ದುರ್ಬಲವಾಗಿದ್ದರಿಂದ 5 ವಾರಗಳ ಸತತ ಏರಿಕೆಯನ್ನು ಬಿಟ್ಟುಕೊಟ್ಟಿತ್ತು. ಮುಂದಿನ ಹಾದಿ ಯಾವುದು ಎಂದು ನಿರ್ಧರಿಸುವುದಕ್ಕೆ ಮಾರುಕಟ್ಟೆಯು ಜಾಗತಿಕ ಡೇಟಾಗಳ ಕಡೆಗೆ ಕಣ್ಣು ನೆಟ್ಟಿದೆ. ದೇಶೀಯವಾಗಿ ನೋಡುವುದಾದರೆ ಯಾವುದೇ ನಕಾರಾತ್ಮಕ ಅಂಶಗಳು ಕಾಣುತ್ತಿಲ್ಲ.

ಅಕ್ಟೋಬರ್ 8ನೇ ತಾರೀಕಿನಂದು ಆರ್​ಬಿಐ ದ್ವೈಮಾಸಿಕ ಸಭೆಯು ನಿಗದಿ ಆಗಿದ್ದು, ಅಂದು ಹಣದುಬ್ಬರದ ಬಗ್ಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಏನು ಹೇಳುತ್ತಾರೆ ಎಂಬ ಬಗ್ಗೆ ಕುತೂಹಲ ಇದೆ. ಅದೇ ಅಕ್ಟೋಬರ್ 8ನೇ ತಾರೀಕಿನಂದೇ ಟಿಸಿಎಸ್​ನಿಂದ FY22 ಎರಡನೇ ತ್ರೈಮಾಸಿಕದ ಗಳಿಕೆ ಫಲಿತಾಂಶ ಕೂಡ ಇದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಡಿವೀಸ್ ಲ್ಯಾಬ್ಸ್ ಶೇ 8.04
ಹಿಂಡಾಲ್ಕೋ ಶೇ 4.41
ಎನ್​ಟಿಪಿಸಿ ಶೇ 4.04
ಬಜಾಜ್​ಫಿನ್​ಸರ್ವ್ ಶೇ 3.66
ಟಾಟಾ ಮೋಟಾರ್ಸ್ ಶೇ 2.61

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಶೇಕಡಾವಾರು ಪ್ರಮಾಣ
ಸಿಪ್ಲಾ ಶೇ -2.91
ಗ್ರಾಸಿಮ್ ಶೇ -2.15
ಯುಪಿಎಲ್​ ಶೇ -1.36
ಐಷರ್ ಮೋಟಾರ್ಸ್ ಶೇ -0.96
ಐಒಸಿ ಶೇ -0.90

ಇದನ್ನೂ ಓದಿ: Multibagger: ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 5 ವರ್ಷದಲ್ಲಿ ಅದೆಷ್ಟು ಪಟ್ಟು ಏರಿಕೆ ಕಂಡಿದೆ ಗೊತ್ತೆ?