Multibagger: ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 5 ವರ್ಷದಲ್ಲಿ ಅದೆಷ್ಟು ಪಟ್ಟು ಏರಿಕೆ ಕಂಡಿದೆ ಗೊತ್ತೆ?

ಐದು ವರ್ಷಗಳ ಹಿಂದೆ ಈ ಸ್ಟಾಕ್ ಮೇಲೆ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ ಇಂದಿಗೆ ರೂ. 40 ಲಕ್ಷ ಆಗಿದೆ. ಯಾವುದು ಆ ಸ್ಟಾಕ್​ ಹೆಸರು ಮತ್ತು ಅದು ಮಾಡುತ್ತಿರುವ ವ್ಯವಹಾರ ಎಂಬ ವಿವರ ಇಲ್ಲಿದೆ.

Multibagger: ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 5 ವರ್ಷದಲ್ಲಿ ಅದೆಷ್ಟು ಪಟ್ಟು ಏರಿಕೆ ಕಂಡಿದೆ ಗೊತ್ತೆ?
ಪ್ರಾತಿನಿಧಿಕ ಚಿತ್ರ

ಷೇರು ಮಾರುಕಟ್ಟೆಯಲ್ಲಿ ಹಣ ಹಾಕಿದ ಮೇಲೆ ದೀರ್ಘಾವಧಿ ಉದ್ದೇಶ ಇದೆಯಾ ಅಂತ ನೋಡಿಕೊಳ್ಳಿ. ಏಕೆಂದರೆ ತಾಳ್ಮೆಯು ಷೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ಷೇರು ಮಾರ್ಕೆಟ್​ನಲ್ಲಿನ ವಿಶ್ಲೇಷಕರ ಪ್ರಕಾರ, ಹೂಡಿಕೆದಾರರಿಗೆ 10 ವರ್ಷಗಳವರೆಗೆ ಒಂದು ಸ್ಟಾಕ್ ಅನ್ನು ಇಟ್ಟುಕೊಳ್ಳಲು ಸಾಧ್ಯವಾಗದಿದ್ದರೆ ಆ ಸ್ಟಾಕ್ ಅನ್ನು ಹತ್ತು ನಿಮಿಷಗಳವರೆಗೆ ಸಹ ಇಟ್ಟುಕೊಳ್ಳಲು ಆಗಲ್ಲ. ಹಾಗಿದ್ದರೆ ದೀರ್ಘಾವಧಿಯಲ್ಲಿ ಷೇರು ಹೂಡಿಕೆ ಮಾಡಿದರೆ ಏನು ಲಾಭ ಎಂಬುದು ಕೂಡ ಗೊತ್ತಾಗುವುದಕ್ಕೆ ಇಲ್ಲಿ ಉದಾಹರಣೆ ಇದೆ. ಐದು ವರ್ಷಗಳ ಹಿಂದೆ, ಫಾರ್ಮಾ ಸ್ಟಾಕ್ ಆದ ಕ್ವಾಲಿಟಿ ಫಾರ್ಮಾ ಪ್ರತಿ ಷೇರಿಗೆ ರೂ. 21.75 (ಸೆಪ್ಟೆಂಬರ್ 28, 2016 ದಿನದ ಕೊನೆಗೆ ಬಿಎಸ್​ಇ ದರ) ಇತ್ತು. ಅಕ್ಟೋಬರ್​ 1, 2021ಕ್ಕೆ ದಿನದ ಕೊನೆಗೆ ಬಿಎಸ್​ಇಯಲ್ಲಿ 40 ಪಟ್ಟು ಏರಿಕೆಯಾಗಿ, 878.90 ರೂಪಾಯಿಗೆ ಮುಟ್ಟಿದೆ.

ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಬೆಲೆಯ ಇತಿಹಾಸದ ಪ್ರಕಾರ, ಈ ಫಾರ್ಮಾ ಷೇರು ಕಳೆದ ಒಂದು ತಿಂಗಳಲ್ಲಿ 419.90 ರೂಪಾಯಿಯಿಂದ 878.90 ರೂಪಾಯಿಗೆ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಶೇಕಡಾ 110ರಷ್ಟು ಹೆಚ್ಚಳ ಆಗಿದೆ. ಕಳೆದ 6 ತಿಂಗಳಲ್ಲಿ 54 ರೂಪಾಯಿಯಿಂದ 878.90 ರುಪಾಯಿ ಮಟ್ಟಕ್ಕೆ ಏರಿದೆ – ಈ ಅವಧಿಯಲ್ಲಿ ಸುಮಾರು ಶೇ 1530ರಷ್ಟು ಏರಿಕೆಯಾಗಿದೆ. ಅದೇ ರೀತಿ ಕಳೆದ ಒಂದು ವರ್ಷದಲ್ಲಿ ಕ್ವಾಲಿಟಿ ಫಾರ್ಮಾ ಪ್ರತಿ ಷೇರಿಗೆ ರೂ. 61ರಿಂದ 878.90 ರೂಪಾಯಿ ಹಂತಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 1340ರಷ್ಟು ಹೆಚ್ಚಳ ಆಗಿದೆ. ಕಳೆದ 5 ವರ್ಷಗಳಲ್ಲಿ ಕ್ವಾಲಿಟಿ ಫಾರ್ಮಾ ಷೇರಿನ ಬೆಲೆ ಪ್ರತಿ ಷೇರಿಗೆ ರೂ. 21.75ರಿಂದ 878.90ಕ್ಕೆ ನೆಗೆದಿದ್ದು, ಈ ಅವಧಿಯಲ್ಲಿ ಸುಮಾರು ಶೇ 3,940ರಷ್ಟು ಮೇಲೇರಿದೆ.

ಕ್ವಾಲಿಟಿ ಫಾರ್ಮಾ ಷೇರಿನ ಬೆಲೆಯ ಇತಿಹಾಸವನ್ನು ಗಮನಿಸಿದರೆ, ಹೂಡಿಕೆದಾರರು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಒಂದು ತಿಂಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದೇ 1 ಲಕ್ಷ ಇಂದು 2.10 ಲಕ್ಷ ಆಗಿರುತ್ತಿತ್ತು. 6 ತಿಂಗಳ ಹಿಂದೆ ಹೂಡಿಕೆದಾರರು ಈ ಫಾರ್ಮಾ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಇಲ್ಲಿಯವರೆಗೆ ಅದನ್ನು ಹಾಗೇ ಉಳಿಸಿಕೊಂಡಿದ್ದಲ್ಲಿ 16.30 ಲಕ್ಷ ರೂಪಾಯಿ ಆಗಿರುತ್ತಿತ್ತು. ಇನ್ನು ಒಂದು ವರ್ಷದ ಹಿಂದೆ ಹೂಡಿಕೆದಾರರು ಈ ಸ್ಟಾಕ್‌ನಲ್ಲಿ 1 ಲಕ್ಷ ಹೂಡಿದ್ದರೆ ಅದು ಇಂದು 14.40 ಲಕ್ಷ ರೂಪಾಯಿ ಆಗುತ್ತಿತ್ತು.

ಯಾರಾದರೂ ಹೂಡಿಕೆದಾರರು 5 ವರ್ಷಗಳ ಹಿಂದೆ ಈ ಸ್ಟಾಕ್‌ನಲ್ಲಿ 1 ಲಕ್ಷವನ್ನು ಹೂಡಿದ್ದರೆ, ಅಂದರೆ ಪ್ರತಿ ಷೇರಿನ ಬೆಲೆ 21.75 ರೂಪಾಯಿಗೆ ಖರೀದಿಸಿದ್ದರೆ ಈ ಅವಧಿಯುದ್ದಕ್ಕೂ ಹೂಡಿಕೆದಾರರು ಹಾಗೇ ಉಳಿಸಿಕೊಂಡಿದ್ದಲ್ಲಿ ಆ 1 ಲಕ್ಷ ರೂಪಾಯಿಯು ಇಂದು 40.40 ಲಕ್ಷ ರೂಪಾಯಿಯಾಗಿ ಬದಲಾಗುತ್ತಿತ್ತು. ಆದ್ದರಿಂದ ಷೇರು ಮಾರುಕಟ್ಟೆಯ ಹೂಡಿಕೆಯ ಪ್ರಮುಖ ಗುಣಗಳಲ್ಲಿ ತಾಳ್ಮೆಯೂ ಒಂದು. ಮತ್ತು ಕ್ವಾಲಿಟಿ ಫಾರ್ಮಾ ಷೇರುಗಳು ಅದರ ಸ್ಪಷ್ಟ ಉದಾಹರಣೆಯಾಗಿದೆ.

ಇದನ್ನೂ ಓದಿ: Coal India: ಕೋಲ್ ಇಂಡಿಯಾ ಷೇರು ಶೇ 12ರಷ್ಟು ಏರಿಕೆ: ಮಿಡ್​ಕ್ಯಾಪ್​ನ ಟಾಪ್ 50 ಕಂಪನಿಗಳಲ್ಲಿ ಸ್ಥಾನ ಪಡೆದ ಸರ್ಕಾರಿ ಉದ್ಯಮ

Read Full Article

Click on your DTH Provider to Add TV9 Kannada