Retrospective Tax: ಕೇರ್ನ್ ಎನರ್ಜಿ, ವೊಡಾಫೋನ್ ವ್ಯಾಜ್ಯ ಇತ್ಯರ್ಥಕ್ಕೆ ಸರ್ಕಾರದಿಂದ ಅಂತಿಮ ನಿಯಾಮವಳಿ ಅಧಿಸೂಚನೆ

ಕೇರ್ನ್ ಎನರ್ಜಿ, ವೊಡಾಫೋನ್ ಸೇರಿದಂತೆ ಇತರ ಕಂಪೆನಿಗಳ ಜತೆಗೆ ತೆರಿಗೆ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಂತಿಮ ನಿಯಮಾವಳಿಗಳ ಅಧಿಸೂಚನೆಯನ್ನು ಸರ್ಕಾರದಿಂದ ಹೊರಡಿಸಲಾಗಿದೆ.

Retrospective Tax: ಕೇರ್ನ್ ಎನರ್ಜಿ, ವೊಡಾಫೋನ್ ವ್ಯಾಜ್ಯ ಇತ್ಯರ್ಥಕ್ಕೆ ಸರ್ಕಾರದಿಂದ ಅಂತಿಮ ನಿಯಾಮವಳಿ ಅಧಿಸೂಚನೆ
ಸಂಸತ್
Follow us
TV9 Web
| Updated By: Srinivas Mata

Updated on:Oct 02, 2021 | 7:04 PM

ಕೇರ್ನ್ ಎನರ್ಜಿ ಪಿಎಲ್​ಸಿ. ಮತ್ತು ವೊಡಾಫೋನ್ ಪಿಎಲ್​ಸಿ. ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳು ಒಳಗೊಂಡಂಥ 17 ತೆರಿಗೆ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸುವ ಸಲುವಾಗಿ ಶನಿವಾರದಂದು ಕೇಂದ್ರ ಸರ್ಕಾರವು ತಳಮಟ್ಟದ ನಿಯಮವೊಂದರ ಅಧಿಸೂಚನೆ ಹೊರಡಿಸಿದೆ. ಅದರೊಳಗೆ 2021ರಲ್ಲಿ ಈ ಹಿಂದಿನ ವಹಿವಾಟುಗಳಿಗೆ ಪರಿಚಯಿಸಲಾದ ತೆರಿಗೆ ಕಾನೂನಿಗೆ ಸಂಬಂಧಿಸಿದ ನಿಯಮಾವಳಿಗಳು ಸಹ ಒಳಗೊಂಡಿವೆ. ಆದಾಯ ತೆರಿಗೆ (31ನೇ ತಿದ್ದುಪಡಿ) ಕಾನೂನು, 2021ರ ಅಡಿಯಲ್ಲಿ ಈ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಷರತ್ತುಗಳನ್ನು ಸಿದ್ಧಪಡಿಸಿದ್ದು, ಅಕ್ಟೋಬರ್ 1ನೇ ತಾರೀಕಿನಿಂದ ಅನ್ವಯ ಆಗಲಿದೆ ಎಂದು ಶನಿವಾರ ಹೊರಡಿಸಿರುವ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ ನಂತರವೇ ಈ ನಿಯಮಾವಳಿ ಸಿದ್ಧಪಡಿಸಲಾಗಿದೆ. ಮತ್ತು ಈ ವರ್ಷದ ಆರಂಭದಲ್ಲಿ ಆದಾಯ ತೆರಿಗೆ ಕಾಯ್ದೆಗೆ ಸೇರಿಸಲಾದ ಷರತ್ತುಗಳನ್ನು ವಿಸ್ತರಣೆ ಮಾಡಲಾಗಿದೆ.

ಈ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದಲೇ ತಿದ್ದುಪಡಿಯನ್ನು ತರಲಾಗಿದೆ. ಆದರೆ ಆದಾಯ ತೆರಿಗೆ ಕಾಯ್ದೆ ಅನ್ವಯ ಉದ್ಯಮವು ಯಾವ ಬಗೆಯಲ್ಲಿ ನಿರ್ದಿಷ್ಟ ಷರತ್ತುಗಳನ್ನು ಪೂರ್ಣಗೊಳಿಸಬೇಕು ಎಂಬುದನ್ನು ವಿವರಿಸಲಾಗುತ್ತದೆ. ಅರ್ಜಿಯನ್ನು ಮರುಪಡೆಯುವಿಕೆ, ಮಧ್ಯಸ್ಥಿಕೆ ಮತ್ತು ಕ್ಲೇಮ್​ಗಳು ಮತ್ತು ಪರಿಹಾರಗಳ ಹಕ್ಕುಗಳನ್ನು ಮನ್ನಾ ಮಾಡುವುದು ಇವೆಲ್ಲವನ್ನೂ ವಿವರಿಸುತ್ತದೆ. ತೆರಿಗೆ ಇಲಾಖೆಯು ಈ ಪ್ರಕರಣಗಳಲ್ಲಿ ಬೇಡಿಕೆ ಮತ್ತು ಕ್ಲೇಮ್​ಗಳನ್ನು ಕೈಬಿಟ್ಟು, ಹಣವನ್ನು ಮರುಪಾವತಿ ಮಾಡುತ್ತದೆ. ಆದರೆ ಅದು ಆ ಕಂಪೆನಿಗಳು ನಿರ್ದಿಷ್ಟ ನಿಯಮಗಳನ್ನು ಪೂರೈಸಿದೆಯೇ ಎಂಬುದರ ಆಧಾರಕ್ಕೆ ಒಳಪಟ್ಟಿರುತ್ತದೆ. “ಘೋಷಣೆ ಮಾಡಿದವರು ಮತ್ತು ಎಲ್ಲ ಆಸಕ್ತರು ಸಂಬಂಧಪಟ್ಟ ಆದೇಶ ಅಥವಾ ಆದೇಶಗಳ ವಿರುದ್ಧ ಎಲ್ಲ ಮೇಲ್ಮನವಿಗಳು ಅಥವಾ ಅರ್ಜಿಗಳು ಅಥವಾ ಅಧಿಕೃತ ಮನವಿ ಅಥವಾ ವಿಚಾರಣೆಗಳನ್ನು ಕೊನೆಗೊಳಿಸಬೇಕು ಅಥವಾ ನಿಲ್ಲಿಸಬೇಕು. ಯಾವುದೇ ಸಂದರ್ಭಗಳಲ್ಲಿ, ಯಾವುದೇ ರೀತಿಯ ಮೇಲ್ಮನವಿ, ಅರ್ಜಿ ಅಥವಾ ಸಂಬಂಧಿತ ಆದೇಶ ಅಥವಾ ಆದೇಶಗಳ ವಿರುದ್ಧ ಭವಿಷ್ಯದಲ್ಲಿ ಮುಂದುವರಿಯುವುದು ಅಥವಾ ಅರ್ಜಿ ಸಲ್ಲಿಸುವುದು ಮಾಡಬಾರದು,” ಎಂದು ನಿಯಮಗಳು ಹೇಳಿವೆ.

ಕರಡು ಸಿದ್ಧಪಡಿಸುವ ಹೊತ್ತಿಗೆ ಸಾರ್ವಜನಿಕರು ಹಾಗೂ ಕೈಗಾರಿಕೆಗಳನ್ನು ಸಂಪರ್ಕಿಸಲಾಗಿತ್ತು. ಅಂತಿಮ ನಿಯಮಾವಳಿಗಳು ಈಗಾಗಲೇ ಭಾರತ ಸರ್ಕಾರದ ವಿರುದ್ಧ ಕೇರ್ನ್ ಎನರ್ಜಿ ಹಾಗೂ ವೊಡಾಫೋನ್ ಹೂಡಿರುವ ಕಾನೂನು ಸಮರವನ್ನು ಇತ್ಯರ್ಥಗೊಳಿಸಲು ವೇದಿಕೆ ಸಿದ್ಧಪಡಿಸುತ್ತವೆ. ಅಂದಹಾಗೆ ಕೇರ್ನ್​ ಎನರ್ಜಿ ಹಾಗೂ ವೊಡಾಫೋನ್​ಗೆ ಈ ಸಂಬಂಧವಾಗಿ ಕಳುಹಿಸಿದ ಇಮೇಲ್​ಗೆ ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಮಾಧ್ಯಮ ಸಂಸ್ಥೆಯೊಂದು ಶನಿವಾರ ವರದಿ ಮಾಡಿದೆ. ಕೇರ್ನ್ ಎನರ್ಜಿಯು ಸೆಪ್ಟೆಂಬರ್​ನಲ್ಲಿ ತಿಳಿಸಿದಂತೆ, ಪೂರ್ವಾನ್ವಯ ತೆರಿಗೆಗೆ ಸಂಬಂಧಿಸಿದಂತೆ ಕಾನೂನುಬದ್ಧವಾಗಿ ಒಪ್ಪಂದ ಮಾಡಿಕೊಳ್ಳುವುದಾಗಿ ಹೇಳಿತ್ತು. ಇದರಿಂದಾಗಿ ಬ್ರಿಟಿಷ್​ ಮೂಲದ ಕೇರ್ನ್ ಎನರ್ಜಿಗೆ 7900 ಕೋಟಿ ರೂಪಾಯಿ ಅಥವಾ 106 ಕೋಟಿ ಅಮೆರಿಕನ್ ಡಾಲರ್ ಬರುತ್ತದೆ.

ಈ ಪ್ರಸ್ತಾವಿತ ತೆರಿಗೆ ಇತ್ಯರ್ಥವನ್ನು ಕೇರ್ನ್ ಕಂಪೆನಿಯು 2021ರ ಬಾಹ್ಯನೋಟದ ಪ್ರಮುಖಾಂಶವಾಗಿ ಕಂಡುಕೊಂಡಿತ್ತು. ಆಸ್ತಿಯ ಮೂಲ ಹೆಚ್ಚಿಸಿಕೊಳ್ಳುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಇದರ ಜತೆಗೆ ಷೇರುದಾರರಿಗೆ ಡಿವಿಡೆಂಡ್​ ಹಾಗೂ ಬೈಬ್ಯಾಕ್ ರೂಪದಲ್ಲಿ ಹಿಂತಿರುಗಿಸಲು ಸಹಾಯ ಆಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: Cairn energy: ಭಾರತದ ವಿರುದ್ಧ ಎಲ್ಲ ವ್ಯಾಜ್ಯಗಳನ್ನು ಕೈಬಿಡಲು ಕೇರ್ನ್ ಎನರ್ಜಿ ಒಪ್ಪಿಗೆ

Published On - 7:03 pm, Sat, 2 October 21

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ