Westinghouse TV: ಅಮೆರಿಕ ಮೂಲದ ಟಿವಿ ಬ್ರ್ಯಾಂಡ್ ವೆಸ್ಟಿಂಗ್ ಹೌಸ್ ಭಾರತ ಪ್ರವೇಶ, ಬೆಲೆ ಮತ್ತಿತರ ವಿವರ ಇಲ್ಲಿದೆ
ಅಮೆರಿಕ ಮೂಲದ ವೆಸ್ಟಿಂಗ್ಹೌಸ್ ಟಿವಿ ಬ್ರ್ಯಾಂಡ್ ಭಾರತದ ಮಾರುಕಟ್ಟೆಯನ್ನು ಪ್ರವೇಶ ಮಾಡಿದೆ. ಟಿವಿ ಬಗೆಗಿನ ವಿವರಣೆಗಳು ಇಲ್ಲಿವೆ.
ಅಮೆರಿಕನ್ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪೆನಿಯಾದ ವೆಸ್ಟಿಂಗ್ ಹೌಸ್ ಐದು ‘ಮೇಡ್ ಇನ್ ಇಂಡಿಯಾ’ ಟಿವಿ ಮಾದರಿಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಈ ಬ್ರ್ಯಾಂಡ್ ಭಾರತೀಯ ಉತ್ಪಾದಕ ಸೂಪರ್ ಪ್ಲಾಸ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ (SPPL)ನೊಂದಿಗೆ ವಿಶೇಷ ಪರವಾನಗಿ ಒಪ್ಪಂದವನ್ನು ಮಾಡಿಕೊಂಡಿದೆ. ಪರವಾನಗಿ ಒಪ್ಪಂದದ ಪ್ರಕಾರ, ವೆಸ್ಟಿಂಗ್‌ಹೌಸ್‌ನ ತಯಾರಿಕೆ, ಬ್ರ್ಯಾಂಡಿಂಗ್, ವಿನ್ಯಾಸ, ಪ್ಯಾಕೇಜಿಂಗ್ ಮತ್ತು ರೀಟೇಲ್ ಪೂರೈಕೆ ಸರಪಳಿಯನ್ನು ಎಸ್‌ಪಿಪಿಎಲ್ ನಿರ್ವಹಿಸುತ್ತದೆ. ಉತ್ಪನ್ನಗಳು ಅಮೆಜಾನ್‌ನಲ್ಲಿ ಗ್ರಾಹಕರಿಗೆ ಲಭ್ಯವಿರುತ್ತವೆ. ಹೊಸದಾಗಿ ಆರಂಭಿಸಿದ ‘W-Series’ ಬೆಲೆಗಳು 7,999 ರೂಪಾಯಿಯಿಂದ ಆರಂಭವಾಗುತ್ತದೆ. ಈ ಸರಣಿಯು 24 ಇಂಚಿನ ಸ್ಮಾರ್ಟ್-ಅಲ್ಲದ ಎಲ್ಇಡಿ ಟಿವಿ ಮತ್ತು 4 ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಮಾದರಿಗಳನ್ನು ಒಳಗೊಂಡಿದೆ – 32 ಇಂಚಿನ ಎಚ್ಡಿ ರೆಡಿ, 40 ಇಂಚಿನ ಎಫ್ಎಚ್ಡಿ, 43 ಇಂಚಿನ ಎಫ್ಎಚ್ಡಿ, 55 ಇಂಚಿನ ಯುಎಚ್ಡಿ ಸ್ಮಾರ್ಟ್ ಟಿವಿ. 24 ಇಂಚಿನ ಸ್ಮಾರ್ಟ್ ಅಲ್ಲದ ಎಲ್ಇಡಿ ಟಿವಿಯ ಬೆಲೆ ರೂ. 7999, ಇದು 20W ಸ್ಪೀಕರ್ ಔಟ್ಪುಟ್, 2 ಸ್ಪೀಕರ್‌ಗಳು, ಆಡಿಯೋ ಈಕ್ವಲೈಜರ್ ಮತ್ತು ಆಟೋಮ್ಯಾಟಿಕ್ ವಾಲ್ಯೂಮ್ ಲೆವೆಲ್ ಆಡಿಯೋ ಫೀಚರ್ಗಳನ್ನು ಹೊಂದಿದೆ. 1366×768 ರೆಸಲ್ಯೂಷನ್ HD ರೆಡಿ ಡಿಸ್ಪ್ಲೇ ಹೊಂದಿದೆ.
32 ಇಂಚಿನ HD ರೆಡಿ ಮತ್ತು 40 ಇಂಚಿನ FHD ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬೆಲೆ ಕ್ರಮವಾಗಿ 12,999 ರೂಪಾಯಿ ಮತ್ತು 18,499 ರೂಪಾಯಿ ಇದೆ. ಎರಡೂ ಸಾಧನಗಳು ಆಂಡ್ರಾಯ್ಡ್ 9ರಿಂದ ಕೆಲಸ ಮಾಡುತ್ತವೆ. 24W ಸ್ಪೀಕರ್ ಔಟ್ಪುಟ್, HDR, ಸರೌಂಡ್ ಸೌಂಡ್ ಟೆಕ್ನಾಲಜಿ, 400 ನಿಟ್ಸ್ ಬ್ರೈಟ್ನೆಸ್, 2 ಸ್ಪೀಕರ್‌ಗಳು, 1 GB RAM ಮತ್ತು 8 GB ROMನೊಂದಿಗೆ ಬರುತ್ತದೆ. 43 ಇಂಚಿನ FHD ಟಿವಿಯಲ್ಲಿ 30W ಸ್ಪೀಕರ್ ಔಟ್ಪುಟ್ ಅನ್ನು ಒದಗಿಸುತ್ತದೆ, ಇದರ ಬೆಲೆ 20,999 ರೂಪಾಯಿ. ಈ ಮಾದರಿಯು ಎಚ್‌ಡಿಆರ್, 500 ನಿಟ್ಸ್ ಬ್ರೈಟ್ನೆಸ್, ಸರೌಂಡ್ ಸೌಂಡ್ ಟೆಕ್ನಾಲಜಿ, 1 ಜಿಬಿ RAM ಮತ್ತು 8 ಜಿಬಿ ROMನೊಂದಿಗೆ ಬರುತ್ತದೆ. 55-ಇಂಚಿನ ಮಾದರಿಯ ಬೆಲೆ 32,999 ರೂಪಾಯಿ. ಮತ್ತು ಇದು ಕೂಡ ಆಂಡ್ರಾಯ್ಡ್ 9ರಿಂದ ನಡೆಯುತ್ತದೆ. ಇದು 40W ಸ್ಪೀಕರ್ ಔಟ್‌ಪುಟ್‌ನೊಂದಿಗೆ ಬರುತ್ತದೆ. HDR10, 2GB RAM, ಸರೌಂಡ್ ಸೌಂಡ್ ತಂತ್ರಜ್ಞಾನ, 500 ನಿಟ್‌ಗಳ ಬ್ರೈಟ್ನೆಸ್, 8GB ROM ಮತ್ತು 2 ಸ್ಪೀಕರ್‌ಗಳು ಇರುತ್ತವೆ.
ಎಲ್ಲ ಸ್ಮಾರ್ಟ್ ಟಿವಿ ಮಾದರಿಗಳು 5.0 ಬ್ಲೂಟೂತ್, 2 USB ಪೋರ್ಟ್‌ಗಳು, 3 HDMI ಪೋರ್ಟ್‌ಗಳು, ARM ಕಾರ್ಟೆಕ್ಸ್ A53 ಪ್ರೊಸೆಸರ್ ಹೊಂದಿವೆ. 1000+ ಆ್ಯಪ್‌ಗಳನ್ನು ಸಪೋರ್ಟ್ ಮಾಡುವ ಇನ್ಬಿಲ್ಟ್ ಕ್ರೋಮ್‌ಕಾಸ್ಟ್ ಇದೆ. ಏರ್‌ಪ್ಲೇ ಇರಲಿದೆ. ಪ್ರೈಮ್ ವಿಡಿಯೋ, ಹಾಟ್‌ಸ್ಟಾರ್, ಜೀ5, ಸೋನಿ ಎಲ್‌ಐವಿ, ಗೂಗಲ್ ಪ್ಲೇ ಸ್ಟೋರ್‌ನಿಂದ 5,00,000 ಪ್ಲಸ್ ಟಿವಿ ಶೋಗಳನ್ನು ಸಪೋರ್ಟ್ ಮಾಡುತ್ತದೆ. HDFC ಬ್ಯಾಂಕ್ ಕಾರ್ಡ್ ಹೊಂದಿರುವವರು ಎಲ್ಲ ಉತ್ಪನ್ನಗಳ ಮೇಲೆ ಶೇ 10ರಷ್ಟು ತಕ್ಷಣ ರಿಯಾಯಿತಿ ಪಡೆಯಬಹುದು. ಆಸಕ್ತ ಗ್ರಾಹಕರು HDFC ಬ್ಯಾಂಕ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮೇಲೆ ತಕ್ಷಣದ ರಿಯಾಯಿತಿ ಪಡೆಯಬಹುದು. ಹೆಚ್ಚುವರಿಯಾಗಿ ಇಎಂಐ ವಹಿವಾಟುಗಳ ಮೇಲೆ ತಕ್ಷಣದ ರಿಯಾಯಿತಿ ಕೂಡ ಲಭ್ಯ ಇರುತ್ತದೆ.
ಇದನ್ನೂ ಓದಿ: Amazon: ಅಮೆಜಾನ್‌ನಲ್ಲಿ ಹೀಗೊಂದು ಆಫರ್: ಕೇವಲ 20,000 ರೂ. ಒಳಗೆ ಲಭ್ಯವಿದೆ ಈ 5 ಸ್ಮಾರ್ಟ್ ಟಿವಿಗಳು