Closing Bell: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ನಾಲ್ಕನೇ ದಿನ ಇಳಿಜಾರಿನ ಹಾದಿಯಲ್ಲಿ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ನಾಲ್ಕನೇ ದಿನವಾದ ಅಕ್ಟೋಬರ್ 1ನೇ ತಾರೀಕಿನ ಶುಕ್ರವಾರ ಕೂಡ ಇಳಿಕೆ ಹಾದಿಯನ್ನು ಮುಂದುವರಿಸಿದೆ.

Closing Bell: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸತತ ನಾಲ್ಕನೇ ದಿನ ಇಳಿಜಾರಿನ ಹಾದಿಯಲ್ಲಿ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Oct 01, 2021 | 5:53 PM

ಸತತ ನಾಲ್ಕನೇ ದಿನವಾದ ಶುಕ್ರವಾರ, ಅಂದರೆ ಅಕ್ಟೋಬರ್ 1, 2021ರಂದು ಸಹ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಇಳಿಕೆ ಕಂಡವು. ಈ ದಿನದ ಅಂತ್ಯಕ್ಕೆ ಬೆಂಚ್​ಮಾರ್ಕ್ ಸೂಚ್ಯಂಕವಾದ ಬಿಎಸ್​ಇ ಸೆನ್ಸೆಕ್ಸ್ 360.78 ಪಾಯಿಂಟ್ ಅಥವಾ ಶೇ 0.61ರಷ್ಟು ಇಳಿಕೆ ಕಂಡು 59 ಸಾವಿರ ಪಾಯಿಂಟ್ಸ್​ಗಿಂತಲೂ ಕೆಳಗೆ, ಅಂದರೆ 58,765.58ಕ್ಕೆ ವಹಿವಾಟನ್ನು ಮುಗಿಸಿತು. ಇನ್ನು ಎನ್ಎಸ್ಇ ನಿಫ್ಟಿ 86.10 ಪಾಯಿಂಟ್ ಅಥವಾ ಶೇ 0.49ರಷ್ಟು ಕೆಳಗೆ ಇಳಿದು, 17,532.05 ವ್ಯವಹಾರವನ್ನು ಚುಕ್ತಾ ಮಾಡಿದೆ. ಒಟ್ಟು 1716 ಕಂಪೆನಿಯ ಷೇರುಗಳು ಇಂದಿನ ವಹಿವಾಟಿನಲ್ಲಿ ಏರಿಕೆಯನ್ನು ದಾಖಲಿಸಿದರೆ, 1373 ಕಂಪೆನಿಯ ಷೇರುಗಳು ಇಳಿಕೆ ಕಂಡವು. 150 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಎನ್‌ಎಸ್‌ಇಯಲ್ಲಿ ಹೆಚ್ಚಿನ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ಕೊನೆಗೊಂಡವು. ಹಣಕಾಸು, ಐಟಿ ಮತ್ತು ರಿಯಾಲ್ಟಿ ಕೌಂಟರ್‌ಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು. ಆದರೆ ಫಾರ್ಮಾ, ಲೋಹಗಳು ಮತ್ತು ಪಿಎಸ್​ಯು ಬ್ಯಾಂಕ್‌ಗಳಲ್ಲಿ ಖರೀದಿ ಕಂಡುಬಂದವು. ನಿಫ್ಟಿ ಫಾರ್ಮಾ ಶೇ 0.84 ಗಳಿಕೆ ಕಂಡಿದ್ದರೆ, ನಿಫ್ಟಿ ಮೀಡಿಯಾ, ನಿಫ್ಟಿ ಪಿಎಸ್​ಯು ಬ್ಯಾಂಕ್ ಮತ್ತು ನಿಫ್ಟಿ ಲೋಹದ ವಲಯಗಳು ನಂತರದ ಗಳಿಕೆಯ ಸ್ಥಾನದಲ್ಲಿದೆ. ಮತ್ತೊಂದೆಡೆ, ನಿಫ್ಟಿ ರಿಯಾಲ್ಟಿ ಶೇ 1.5ರಷ್ಟು ಕುಸಿದಿದ್ದರೆ, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಸುಮಾರು ಶೇ 1ರಷ್ಟು ಕುಸಿದಿದೆ ಮತ್ತು ನಿಫ್ಟಿ ಐಟಿ ಶೇ 0.7ರಷ್ಟು ಇಳಿಕೆಯಾಗಿದೆ. ಏಷ್ಯಾದಲ್ಲಿ ಟೋಕಿಯೊ ಮತ್ತು ಸಿಯೋಲ್‌ನಲ್ಲಿನ ಷೇರು ವಿನಿಮಯವು ನಷ್ಟದೊಂದಿಗೆ ಕೊನೆಗೊಂಡವು. ಶಾಂಘೈ ಮತ್ತು ಹಾಂಕಾಂಗ್‌ನಲ್ಲಿನ ಮಾರುಕಟ್ಟೆಗಳು ಸಾರ್ವಜನಿಕ ರಜಾದಿನದ ಕಾರಣ ಮುಚ್ಚಿದ್ದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳಿವು ಮತ್ತು ಶೇಕಡಾವಾರು ಪ್ರಮಾಣ
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 3.09
ಕೋಲ್ ಇಂಡಿಯಾ ಶೇ 1.94
ಐಒಸಿ ಶೇ 1.68
ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 1.54
ಒಎನ್​ಜಿಸಿ ಶೇ 1.21

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳಿವು ಮತ್ತು ಶೇಕಡಾವಾರು ಪ್ರಮಾಣ
ಬಜಾಜ್ ಫಿನ್​ಸರ್ವ್ ಶೇ -3.42
ಮಾರುತಿ ಸುಜುಕಿ ಶೇ -2.40
ಏಷ್ಯನ್ ಪೇಂಟ್ಸ್ ಶೇ-2.06
ಬಜಾಜ್ ಫೈನಾನ್ಸ್ ಶೇ -1.90
ಭಾರ್ತಿ ಏರ್​ಟೆಲ್ ಶೇ -1.80

ಇದನ್ನೂ ಓದಿ: Paras Defence and Space Technologies Listing: ಪರಸ್ ಡಿಫೆನ್ಸ್ ಷೇರು ಶೇ 171ರಷ್ಟು ಪ್ರೀಮಿಯಂನೊಂದಿಗೆ ಲಿಸ್ಟಿಂಗ್