ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ- 50 ಗುರುವಾರ (ಜುಲೈ 22, 2021) ಭರ್ಜರಿ ಏರಿಕೆ ದಾಖಲಿಸಿವೆ. ಈ ವರದಿ ಆಗುವ ಹೊತ್ತಿಗೆ ಬಿಎಸ್ಇ ಸೆನ್ಸೆಕ್ಸ್ 623.31 ಪಾಯಿಂಟ್ಗಳಷ್ಟು ಮೇಲೇರಿ 52,821.82 ಪಾಯಿಂಟ್ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ- 50 ಸೂಚ್ಯಂಕವು 180.85 ಪಾಯಿಂಟ್ಗಳಷ್ಟು ಏರಿಕೆ ಆಗಿ, 15,812.95 ಪಾಯಿಂಟ್ನಲ್ಲಿ ವ್ಯವಹಾರ ನಡೆಸಿತು. ಸೆನ್ಸೆಕ್ಸ್ ಸೂಚ್ಯಂಕವು ದಿನದ ಆರಂಭ ಶುರು ಮಾಡಿದ್ದು 52,494.56 ಪಾಯಿಂಟ್ನೊಂದಿಗೆ. ಈ ಹಿಂದಿನ ದಿನಾಂತ್ಯ 52,198.51 ಪಾಯಿಂಟ್ನೊಂದಿಗೆ ಕಂಡಿತ್ತು. ದಿನದ ಗರಿಷ್ಠ ಮೊತ್ತ 52,864.82 ಪಾಯಿಂಟ್ ಮುಟ್ಟಿತ್ತು. ನಿಫ್ಟಿ- 50 ಸೂಚ್ಯಂಕವು ಹಿಂದಿನ ದಿನ 15,632.10 ಪಾಯಿಂಟ್ನೊಂದಿಗೆ ಕೊನೆಯಾಗಿತ್ತು. 15,736.60 ಪಾಯಿಂಟ್ನೊಂದಿಗೆ ಗುರುವಾರ ದಿನದ ಆರಂಭ ಶುರು ಮಾಡಿತು. ಗರಿಷ್ಠ ಮಟ್ಟ 15,825 ತಲುಪಿತು.
ಭಾರತೀಯ ರೂಪಾಯಿ ಆರಂಭದ ಗಳಿಕೆ ಕಂಡಿತು. ದಿನದ ಗರಿಷ್ಠ ಮಟ್ಟ ಅಮೆರಿಕ ಡಾಲರ್ ವಿರುದ್ಧ 74.34 ತಲುಪಿತು. ಈ ದಿನದ ಆರಂಭ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 18 ಪೈಸೆ ಏರಿಕೆಯೊಂದಿಗೆ ಶುರುವಾಯಿತು. ಬಿಎಸ್ಇಯಲ್ಲಿ ಪವರ್ ಸೂಚ್ಯಂಕ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಏರಿಕೆ ಆಗಿದೆ. ನಿಫ್ಟಿಯಲ್ಲಿ ಎಲ್ಲ ವಲಯದ ಸೂಚ್ಯಂಕವೂ ಏರಿಕೆ ದಾಖಲಿಸಿದೆ.ನಮಧ್ಯಾಹ್ನದ ಹೊತ್ತಿಗೆ ನಿಫ್ಟಿಯಲ್ಲಿ ಟಾಪ್ ಗೇಯ್ನರ್ಸ್ ಮತ್ತು ಇಳಿಕೆ ಕಂಡ ಪ್ರಮುಖ 5 ಷೇರುಗಳ ವಿವರ ಇಲ್ಲಿದೆ.
ನಿಫ್ಟಿಯಲ್ಲಿ ಗಳಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಬಜಾಜ್ ಫೈನಾನ್ಸ್ ಶೇ 4.75
ಟೆಕ್ ಮಹೀಂದ್ರಾ ಶೇ 3.79
ಜೆಎಸ್ಡಬ್ಲ್ಯು ಸ್ಟೀಲ್ ಶೇ 3.71
ಬಜಾಜ್ ಫಿನ್ಸರ್ವ್ ಶೇ 3.08
ಹಿಂಡಾಲ್ಕೋ ಶೇ 2.87
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಏಷ್ಯನ್ ಪೇಂಟ್ಸ್ ಶೇ -1.38
ಹೀರೋ ಮೋಟೋಕಾರ್ಪ್ ಶೇ -0.54
ಐಷರ್ ಮೋಟಾರ್ಸ್ ಶೇ -0.51
ಸಿಪ್ಲಾ ಶೇ -0.47
ನೆಸ್ಟ್ಲೆ ಶೇ -0.37
ಇದನ್ನೂ ಓದಿ: Multibagger stock 2021: ಒಂದು ವರ್ಷದಲ್ಲಿ ರೂ.7.82ರ ಸುಬೆಕ್ಸ್ ಷೇರು 72.75ಕ್ಕೆ ಜಿಗಿತ; ವರ್ಷದಲ್ಲಿ ಶೇ 837ರಷ್ಟು ಲಾಭ
(Indian Stock Market Indices Sensex And Nifty Gain Bajaj Finance Top Gainer)