Stock market: 4 ಟ್ರೇಡಿಂಗ್​ ಸೆಷನ್​ನಲ್ಲಿ ಹೂಡಿಕೆದಾರರ ಸಂಪತ್ತು 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳ

|

Updated on: May 10, 2021 | 10:08 PM

ಭಾರತದ ಷೇರು ಮಾರುಕಟ್ಟೆಯಲ್ಲಿ ಕಳೆದ ನಾಲ್ಕು ಟ್ರೇಡಿಂಗ್ ಸೆಷನ್​ನಲ್ಲಿ ಹೂಡಿಕೆದಾರರ ಸಂಪತ್ತು 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ.

Stock market: 4 ಟ್ರೇಡಿಂಗ್​ ಸೆಷನ್​ನಲ್ಲಿ ಹೂಡಿಕೆದಾರರ ಸಂಪತ್ತು 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಮುಂಬೈ: ಕಳೆದ ನಾಲ್ಕು ಟ್ರೇಡಿಂಗ್ ಸೆಷನ್​ಗಳಲ್ಲಿ ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು 6,44,760.45 ಕೋಟಿ, ಅರ್ಥಾತ್ 6.45 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿವೆ. ಕಳೆದ ನಾಲ್ಕು ಟ್ರೇಡಿಂಗ್ ಸೆಷನ್​ನಲ್ಲಿ 30 ಷೇರುಗಳ ಗುಚ್ಛವಾದ ಬಿಎಸ್​ಇ ಸೆನ್ಸೆಕ್ಸ್ 1,248.90 ಪಾಯಿಂಟ್​ ಅಥವಾ ಶೇ 2.58ರಷ್ಟು ಏರಿಕೆ ಕಂಡಿದೆ. ಸೋಮವಾರದಂದು (ಮೇ 10, 2021) ಬಿಎಸ್​ಇ 295.94 ಪಾಯಿಂಟ್​ ಮೇಲೇರಿ, 49,502.41 ಪಾಯಿಂಟ್​ನೊಂದಿಗೆ ದಿನಾಂತ್ಯದ ವಹಿವಾಟನ್ನು ಮುಗಿಸಿತು. ಬಿಎಸ್​ಇ ಲಿಸ್ಟೆಡ್ ಕಂಪೆನಿಗಳ ಮಾರುಕಟ್ಟೆ ಬಂಡವಾಳವು ಕಳೆದ ನಾಲ್ಕು ಟ್ರೇಡಿಂಗ್​ ಸೆಷನ್​ನಲ್ಲಿ, ಅಂದರೆ ಮೇ 5ನೇ ತಾರೀಕಿನಿಂದ ಈಚೆಗೆ 6,44,760.45 ಕೋಟಿ ರೂಪಾಯಿ ಹೆಚ್ಚಳವಾಗಿ, 213,28,658.05 ಕೋಟಿ ರೂಪಾಯಿಯನ್ನು ಮುಟ್ಟಿದೆ.

ಕೋವಿಡ್- 19 ಪ್ರಕರಣಗಳ ನಿರಂತರ ಹೆಚ್ಚಳ ಮತ್ತು ಹಲವು ರಾಜ್ಯಗಳಲ್ಲಿ ಸಂಚಾರಕ್ಕೆ ನಿರ್ಬಂಧಗಳನ್ನು ಹೇರಿರುವುದರ ಹೊರತಾಗಿಯೂ ದೇಶೀಯ ಈಕ್ವಿಟಿಗಳು ಆ ಎಲ್ಲ ಆತಂಕಗಳನ್ನು ಮೀರಿ, ಉತ್ತಮವಾದ ಗಳಿಕೆ ಕಂಡಿವೆ. ಜಾಗತಿಕವಾಗಿ ಅನಕೂಲಕರ ಅಂಶಗಳು, ಸ್ಥಿರವಾದ ಮಾರ್ಚ್ ತ್ರೈಮಾಸಿಕ ಗಳಿಕೆ ಹಾಗೂ ಜತೆಗೆ ಉತ್ತಮ ಅಭಿಪ್ರಾಯಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಘೋಷಣೆ ಮಾಡಿದ ನಗದು ಬೆಂಬಲ ಮತ್ತು ದೇಶದಾದ್ಯಂತ ಹೇರದ ಲಾಕ್​ಡೌನ್ ಈ ಎಲ್ಲ ಕಾರಣಗಳಿಂದಾಗಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆಯೂ ದೇಶೀಯ ಈಕ್ವಿಟಿಗಳಿಗೆ ಬಲ ಬಂದಿದೆ ಎಂದು ರಿಲಯನ್ಸ್ ಸೆಕ್ಯೂರಿಟೀಸ್​ನ ಬಿನೋದ್ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಮತ್ತೆ ಮುಂದುವರಿದು ಹೇಳುವಂತೆ, ಪ್ರತಿ ದಿನವೂ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪಾಸಿಟಿವ್ ರೇಟ್ ಮತ್ತು ಕೋವಿಡ್​-19 ಪ್ರಕರಣಗಳು ಹೂಡಿಕೆದಾರರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಾರುಕಟ್ಟೆಯು ನಿರ್ಣಾಯಕ ಎತ್ತರಕ್ಕೆ ಏರುವುದನ್ನು ತಡೆಯುತ್ತದೆ. ಅಂದಹಾಗೆ ಸೋಮವಾರದಂದು ಲಾರ್ಸನ್ ಅಂಡ್ ಟೂಬ್ರೋ ಟಾಪ್ ಗೇಯ್ನರ್ ಆಗಿ, ಶೇ 4ರಷ್ಟು ಏರಿಕೆ ಕಂಡಿದೆ. ಆ ನಂತರದ ಸ್ಥಾನದಲ್ಲಿ ಡಾ. ರೆಡ್ಡೀಸ್, ಸನ್ ಫಾರ್ಮಾ ಮತ್ತು ಎನ್​ಟಿಪಿಸಿ ಗಳಿಕೆ ಕಂಡಿವೆ.

ಇದನ್ನೂ ಓದಿ: Kotak Mahindra Bank: ಖಾಸಗಿ ಬ್ಯಾಂಕ್ ಷೇರಿನ 10,000 ರೂಪಾಯಿ 20 ವರ್ಷದಲ್ಲಿ 64 ಲಕ್ಷ ರೂ.

(Indian stock market investors wealth increased by Rs 6.45 lakh crore in 4 trading sessions)