Gold Rate Today: ನಿಮ್ಮೂರಿನಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ವಿವರ ಇಲ್ಲಿದೆ

Gold Rate Today: ನಿಮ್ಮೂರಿನಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ

Gold Silver Price in Bangalore: ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ಗಮನಿಸಿದಾಗ ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,610 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,670 ರೂಪಾಯಿ ಇದೆ.

shruti hegde

| Edited By: Apurva Kumar Balegere

May 11, 2021 | 10:22 AM

ಬೆಂಗಳೂರು: ಇಂದಿನ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ಗಮನಿಸಿದಾಗ ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,610 ರೂಪಾಯಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,670 ರೂಪಾಯಿ ಆಗಿದೆ. ಅದೇ ರೀತಿ ವಿವಿಧ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದನ್ನು ನೋಡೋಣ. ಕೊರೊನಾ ಸೋಂಕು ಹರಡುವಿಕೆಯಿಂದಾಗಿ ವಿವಿಧ ರಾಜ್ಯಗಳು ಲಾಕ್​ಡೌನ್​ ಮೊರೆ ಹೋಗಿದೆ. ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸುವುದರ ಮೂಲಕವಾಗಿ ಕೊರೊನಾ ತಡೆಯಲು ಹೋರಾಟ ನಡೆಯುತ್ತಿದೆ.

ಹೀಗೀರುವಾಗ ಅಗತ್ಯವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ರಸ್ತೆಯಲ್ಲಿ ಅನಗತ್ಯವಾಗಿ ಓಡಾಡಲು ನಿರ್ಬಂಧ ಹೇರಲಾಗಿದೆ. ಚಿನ್ನ, ಬೆಳ್ಳಿ ಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರವಿದ್ದರೂ ಕೊರೊನಾ ನಿಯಂತ್ರಿಸಲು ಇದು ಅನಿವಾರ್ಯ ಎಂಬುದು ಸಾರ್ವಜನಿಕರ ಅಭಿಪ್ರಾಯ.

ದೆಹಲಿಯಲ್ಲಿ ಇಂದು ಚಿನ್ನದ ದರ ಏರಿಕೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,100 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 50,100 ರೂಪಾಯಿ ಅಗಿದೆ. ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,700 ರೂಪಾಯಿಗೆ ಏರಿದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,770 ರೂಪಾಯಿ ಆಗಿದೆ.

ಕೇರಳದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,700 ರೂಪಾಯಿ ಆಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 48,770 ರೂಪಾಯಿ ಆಗಿದೆ. ಇನ್ನು, ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,910 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,910 ರೂಪಾಯಿ ಇದೆ. ಪಾಟ್ನಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 44,910 ರೂಪಾಯಿ ಇದೆ. ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,910 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ ಬೆಳ್ಳಿ ದರ ಮಾಹಿತಿ ಇಂದು ನಗರದಲ್ಲಿ ಬೆಳ್ಳಿ ದರ ಕೊಂಚ ಏರಿಕೆಯಾಗಿದ್ದು, 1 ಗ್ರಾಂ ಬೆಳ್ಳಿ ದರ ಇಂದು 71.60 ರೂಪಾಯಿ ಇದೆ. ಹಾಗೂ 8 ಗ್ರಾಂ ಬೆಳ್ಳಿ ದರ 527.80 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ 716 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಬೆಳ್ಳಿ ದರ 7,160 ರೂಪಾಯಿಗೆ ಏರಿಕೆಯಾಗಿದೆ. 1ಕೆಜಿ ಬೆಳ್ಳಿ ದರ ಇಂದು 100 ರೂಪಾಯಿ ಏರಿಕೆಯ ಬಳಿಕ 71,600 ರೂಪಾಯಿ ಆಗಿದೆ.

ಇದನ್ನೂ ಓದಿ: Gold Rate Today: ಗ್ರಾಹಕರಿಗೆ ಖುಷಿಯ ವಿಚಾರ; ಕುಸಿತ ಕಾಣುತ್ತಿರುವ ಚಿನ್ನದ ದರ

Gold Price Today: ಈ ವರ್ಷದಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಚಿನ್ನದ ದರ ಇಳಿಕೆ

Follow us on

Related Stories

Most Read Stories

Click on your DTH Provider to Add TV9 Kannada