Stock Market Investors: 3 ದಿನದ ಇಳಿಕೆ ನಂತರ ಒಂದು ದಿನದ ಏರಿಕೆಯಲ್ಲಿ 2.93 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತು ಹೆಚ್ಚಳ

| Updated By: Srinivas Mata

Updated on: Jul 22, 2021 | 10:38 PM

ಭಾರತದ ಷೇರು ಮಾರುಕಟ್ಟೆ ಹೂಡಿಕೆದಾರರ ಸಂಪತ್ತು ಗುರುವಾರದಂದು 2.93 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆ ಪ್ರಭಾವ ಮತ್ತಿತರ ಕಾರಣಗಳಿಗೆ ಈ ಬೆಳವಣಿಗೆ ಆಗಿದೆ.

Stock Market Investors: 3 ದಿನದ ಇಳಿಕೆ ನಂತರ ಒಂದು ದಿನದ ಏರಿಕೆಯಲ್ಲಿ 2.93 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತು ಹೆಚ್ಚಳ
ಇವತ್ತಿಗೆ 1.61 ಕೋಟಿ ರೂಪಾಯಿ
Follow us on

ಸತತ ಮೂರು ದಿನಗಳ ಇಳಿಕೆ ಕಂಡು, ಆ ನಂತರ ಏರಿಕೆಯಾದ ಮೇಲೆ ಹೂಡಿಕೆದಾರರ ಸಂಪತ್ತು ಗುರುವಾರದಂದು 2,93,054.25 ಕೋಟಿ ರೂಪಾಯಿ ಏರಿಕೆಯಾಗಿದೆ. 30 ಷೇರುಗಳ ಗುಚ್ಛವಾದ ಬಿಎಸ್​ಇ ಸೆನ್ಸೆಕ್ಸ್ 638.70 ಪಾಯಿಂಟ್ಸ್ ಅಥವಾ ಶೇ 1.22ರಷ್ಟು ಮೇಲೇರಿ 52,837.21 ಪಾಯಿಂಟ್​ ಹತ್ತಿರ ತಲುಪಿದೆ. ಗುರುವಾರದಂದು ಸೆನ್ಸೆಕ್ಸ್ 668.75 ಪಾಯಿಂಟ್ಸ್ ಮೇಲೇರಿ 52,867.26 ಪಾಯಿಂಟ್ಸ್ ತಲುಪಿದೆ. ಏರಿಕೆ ಟ್ರೆಂಡ್ ಅನುಸರಿಸಿ, ಬಿಎಸ್​ಇ- ಲಿಸ್ಟೆಡ್​ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯವು 2,93,054.25 ಕೋಟಿ ಹೆಚ್ಚಳವಾಗಿ, ರೂ. 2,33,94,917.25 ಕೋಟಿ ಆಗಿದೆ. 2021- 22ರ ಮೊದಲನೇ ತ್ರೈಮಾಸಿಕದ ಗಳಿಕೆ ಫಲಿತಾಂಶ ಮತ್ತು ಜಾಗತಿಕ ಭಾವನೆಗಳನ್ನು ಅನುಸರಿಸಿ, ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಬೆಂಬಲ ಸಿಕ್ಕಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಟೆಕ್ ಮಹೀಂದ್ರಾ ಕಂಪೆನಿಯ ಷೇರು 30 ಷೇರುಗಳ ಗುಚ್ಛದಲ್ಲಿ ಶೇ 5.65ರಷ್ಟು ಗಳಿಕೆ ಕಂಡಿದೆ. ಆ ನಂತರದಲ್ಲಿ ಬಜಾಜ್​ ಫೈನಾನ್ಸ್, ಭಾರ್ತಿ ಏರ್​ಟೆಲ್, ಬಜಾಜ್​ ಫಿನ್​ಸರ್ವ್​, ಟಾಟಾ ಸ್ಟೀಲ್ ಹಾಗೂ ಲಾರ್ಸನ್​ ಅಂಡ್​ ಟೂಬ್ರೋ ಟಾಪ್ ಗೇಯ್ನರ್ ಆಗಿತ್ತು. ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್​ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದೆ. ಶೇ 2.27ರಷ್ಟು ಕುಸಿತ ಕಂಡಿದೆ. ಆ ನಂತರ ಏಷ್ಯನ್ ಪೇಂಟ್ಸ್, ಬಜಾಜ್ ಆಟೋ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ಕೂಡ ಕುಸಿತ ಕಂಡಿದೆ. ಬಿಎಸ್​ಇ ಮಿಡ್​ಕ್ಯಾಪ್ ಸೂಚ್ಯಂಕವು ಶೇ 1.52ರ ತನಕ ಮೇಲೇರಿದೆ.

ಬಿಎಸ್​ಇ ಲೋಹ, ಟೆಲಿಕಾಂ, ಕ್ಯಾಪಿಟಲ್ ಗೂಡ್ಸ್ ಇಂಡಸ್ಟ್ರಿಯಲ್ಸ್ ಸೂಚ್ಯಂಕಗಳು ದೊಡ್ಡ ಗಳಿಕೆ ಕಂಡಿವೆ. ಶೇ 3.02ರ ತನಕ ಏರಿಕೆಯಾಗಿದೆ. ಎಫ್​ಎಂಸಿಜಿ ದಿನಾಂತ್ಯಕ್ಕೆ ಇಳಿಕೆ ಕಂಡಿದೆ. “ಕಳೆದ ಮೂರು ಸೆಷನ್​ ಸತತ ಇಳಿಕೆ ಕಂಡ ಮೇಲೆ, ಜಾಗತಿಕ ಮಾರುಕಟ್ಟೆ ಪ್ರಭಾವದ ಕಾರಣಕ್ಕೆ ಗುರುವಾರದಂದು ಬೆಳಗ್ಗೆ ದೊಡ್ಡ ಏರಿಕೆ ಕಂಡಿದೆ. ದಿನದ ಸಮಯ ಕಳೆದಂತೆ ಬಲಗೊಳ್ಳುತ್ತಾ ಹೋಯಿತು. ಮಾರುಕಟ್ಟೆಯು ಪ್ರಬಲವಾಗಿ ಚೇತರಿಕೆ ಕಂಡಿದೆ ಮತ್ತು ಒಂದು ಪರ್ಸೆಂಟ್​ಗೂ ಹೆಚ್ಚಾಗಿದೆ,” ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: Investments In IPO: ಬ್ಯಾಂಕ್​ಗಳಿಂದ ಐಪಿಒಗಳ ಮೇಲಿನ ಹೂಡಿಕೆ 4 ವರ್ಷಗಳ ಗರಿಷ್ಠ ಮಟ್ಟಕ್ಕೆ

(Indian Stock Market Investors Wealth Increased Nearly By Rs 3 Lakh Crore)

Published On - 10:37 pm, Thu, 22 July 21