Agri exports: ಭಾರತದಿಂದ ಅಕ್ಕಿ ರಫ್ತು ಶೇ. 20 ಹೆಚ್ಚಳ; ವಾಣಿಜ್ಯ ಬೆಳೆಗಳ ರಫ್ತು ಶೇ. 17 ಹೆಚ್ಚಳ

India's Agricultural Exports Surge: ಭಾರತದ ಅಕ್ಕಿ ಮತ್ತು ವಾಣಿಜ್ಯ ಬೆಳೆಗಳ ರಫ್ತು 2024-25ರಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ಕಾಫಿ, ಚಹಾ, ತಂಬಾಕು ಮತ್ತು ಮಸಾಲೆಗಳ ರಫ್ತು 9.16 ಬಿಲಿಯನ್ ಡಾಲರ್‌ಗಳಷ್ಟು ತಲುಪಿದೆ. ಅಕ್ಕಿ ರಫ್ತು 20% ಹೆಚ್ಚಳ ಕಂಡಿದೆ. ಆದಾಗ್ಯೂ, ಆಂತರಿಕ ಬೇಡಿಕೆ ಪೂರೈಸಲು ಸರ್ಕಾರ ಎಚ್ಚರಿಕೆ ವಹಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕೃಷಿ ಉತ್ಪನ್ನಗಳ ಒಟ್ಟು ರಫ್ತು 13% ಏರಿಕೆಯಾಗಿದೆ.

Agri exports: ಭಾರತದಿಂದ ಅಕ್ಕಿ ರಫ್ತು ಶೇ. 20 ಹೆಚ್ಚಳ; ವಾಣಿಜ್ಯ ಬೆಳೆಗಳ ರಫ್ತು ಶೇ. 17 ಹೆಚ್ಚಳ
ಅಕ್ಕಿ

Updated on: Apr 17, 2025 | 6:14 PM

ನವದೆಹಲಿ, ಏಪ್ರಿಲ್ 17: ಭಾರತದಲ್ಲಿ ಅಕ್ಕಿ ಹಾಗು ವಾಣಿಜ್ಯ ಬೆಳೆಗಳ (Plantation crops) ರಫ್ತು ಕಳೆದ ಹಣಕಾಸು ವರ್ಷದಲ್ಲಿ ಗಣನೀಯವಾಗಿ ಹೆಚ್ಚಾಗಿದೆ. ರಫ್ತು ಹೆಚ್ಚಳವಾದರೂ ಆಂತರಿಕವಾಗಿ ಈ ಆಹಾರವಸ್ತುಗಳ ಕೊರತೆ ಸೃಷ್ಟಿಯಾಗದಂತೆ ಎಚ್ಚರ ವಹಿಸಲಾಗಿದೆ. ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಕಾಫಿ, ಟೀ, ತಂಬಾಕು, ಸಾಂಬಾರು ಪದಾರ್ಥ ಮುಂತಾದ ಪ್ರಮುಖ ವಾಣಿಜ್ಯ ಬೆಳೆಗಳು 2024-25ರಲ್ಲಿ 9.16 ಬಿಲಿಯನ್ ಡಾಲರ್​​ನಷ್ಟು ರಫ್ತಾಗಿವೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಇವುಗಳ ರಫ್ತಿನಲ್ಲಿ ಶೇ. 17.1ರಷ್ಟು ಏರಿಕೆ ಆಗಿದೆ.

2023-24ರಲ್ಲಿ ಭಾರತದ ಒಟ್ಟು ಕೃಷಿ ಉತ್ಪನ್ನಗಳ ರಫ್ತು 50 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಈ ಪ್ಲಾಂಟೇಶನ್ ಬೆಳೆಗಳ ಪಾಲು ಶೇ. 16ರಷ್ಟಿದೆ. ಆ ವರ್ಷ ಇವುಗಳ ರಫ್ತು 7.82 ಬಿಲಿಯನ್ ಡಾಲರ್ ಇತ್ತು. 2024-25ರಲ್ಲಿ ಇವುಗಳ ರಫ್ತು 9.16 ಬಿಲಿಯನ್ ಡಾಲರ್​​ಗೆ ಏರಿದೆ.

ತಂಬಾಕು ರಫ್ತಿನಲ್ಲಿ ಶೇ. 36.6ರಷ್ಟು ಹೆಚ್ಚಾಗಿದೆ. ಕಾಫಿ ರಫ್ತು ಶೇ. 40, ಚಹಾ ರಫ್ತು ಶೇ. 10.8, ಸಂಬಾರು ಪದಾರ್ಥಗಳ ರಫ್ತು ಶೇ. 4.7ರಷ್ಟು ಏರಿಕೆ ಆಗಿದೆ.

ಇದನ್ನೂ ಓದಿ
ಶಸ್ತ್ರಾಸ್ತ್ರಗಳ ಮಾರಾಟಕ್ಕೆ ಭಾರತದ ಗಂಭೀರ ಹೆಜ್ಜೆ
ಅಮೆರಿಕಕ್ಕೆ ಭಾರತದ ರಫ್ತಿನಲ್ಲಿ ಹೆಚ್ಚಳ
ಮಾರ್ಚ್​​​ನಲ್ಲಿ ರೀಟೇಲ್ ಹಣದುಬ್ಬರ ಶೇ. 3.34ಕ್ಕೆ ಇಳಿಕೆ
ಹೋಲ್​​​ಸೇಲ್ ಹಣದುಬ್ಬರ ಶೇ 2.05ಕ್ಕೆ ಇಳಿಕೆ

ಇದನ್ನೂ ಓದಿ: ಭಾರತಕ್ಕೆ ಐಫೋನ್ ಸಕ್ಸಸ್ ಸ್ಟೋರಿ ಆಯ್ತು, ಈಗ ಮಿಸೈಲ್, ಯುದ್ಧನೌಕೆ, ಹೆಲಿಕಾಪ್ಟರ್​ಗಳ ಸರದಿ

ಅಕ್ಕಿ ರಫ್ತು ಗಣನೀಯ ಹೆಚ್ಚಳ

2024-25ರಲ್ಲಿ ಕೃಷಿ ಹಾಗೂ ಸಂಸ್ಕರಿತ ಆಹಾರ ಪದಾರ್ಥಗಳ ಫ್ತು 25.14 ಬಿಲಿಯನ್ ಡಾಲರ್​​ನಷ್ಟು ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ. 13ರಷ್ಟು ಏರಿಕೆ ಆಗಿದೆ. ಈ ಏರಿಕೆಯಲ್ಲಿ ಅಕ್ಕಿಯ ಪಾಲು ಹೆಚ್ಚಿದೆ. ಭಾರತದಿಂದ ಅಕ್ಕಿ ರಫ್ತು ಶೇ. 20ರಷ್ಟು ಹೆಚ್ಚಾಗಿದೆ.

ಕಳೆದ ಸೀಸನ್​​ನಲ್ಲಿ ಉತ್ತಮ ಫಸಲು ಬಂದ ಹಿನ್ನೆಲೆಯಲ್ಲಿ ಭಾರತದಿಂದ ಕೃಷಿ ಪದಾರ್ಥಗಳ ರಫ್ತು ಸಖತ್ ಹೆಚ್ಚಳ ಕಾಣಲು ಸಾಧ್ಯವಾಗಿದೆ. 2024ರ ಸೆಪ್ಟೆಂಬರ್​​ವರೆಗೂ ಅಕ್ಕಿ ರಫ್ತಿಗೆ ನಿರ್ಬಂಧ ಇತ್ತು. ಸೆಪ್ಟೆಂಬರ್​​​ನಲ್ಲಿ ನಿರ್ಬಂಧ ಸಡಿಲಿಸಿದ ಬಳಿಕ ರಫ್ತು ಹೆಚ್ಚಾಗಿದೆ.

ಇದನ್ನೂ ಓದಿ: ಟಾಟಾ ಮೋಟಾರ್ಸ್ ದಾಖಲೆ; ಒಂದೇ ವರ್ಷದಲ್ಲಿ 250 ಪೇಟೆಂಟ್, 148 ಡಿಸೈನ್ ಅಪ್ಲಿಕೇಶನ್ಸ್ ದಾಖಲು

ಕಳೆದ ಒಂದು ದಶಕದಿಂದಲೂ ಭಾರತವು ವಿಶ್ವದ ಅತಿದೊಡ್ಡ ಅಕ್ಕಿ ರಫ್ತು ದೇಶವಾಗಿದೆ. ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದ ದೇಶಗಳ ಸ್ಪರ್ಧೆ ನಡುವೆ ಭಾರತ ತನ್ನ ಅಗ್ರಪಟ್ಟ ಮುಂದುವರಿಸಿದೆ. ಎಮ್ಮೆಯ ಮಾಂಸ, ಕೋಳಿ ಮಾಂಸ, ಮೊಟ್ಟೆ, ಹಾಲಿನ ಪದಾರ್ಥಗಳ ರಫ್ತು ಕೂಡ ಹೆಚ್ಚಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ