
ನವದೆಹಲಿ, ಮೇ 13: ಪಾಕಿಸ್ತಾನ ವಿರುದ್ಧದ ಆಪರೇಷನ್ ಸಿಂದೂರದಲ್ಲಿ ಭಾರತಕ್ಕೆ ಸ್ಪಷ್ಟ ಮೇಲುಗೈ ತಂದುಕೊಟ್ಟ ಅಸ್ತ್ರಗಳಲ್ಲಿ ಬ್ರಹ್ಮೋಸ್ ಎನ್ನುವ ಕ್ರ್ಯೂಸ್ ಮಿಸೈಲ್ ಒಂದು. ಪಾಕಿಸ್ತಾನದ ಕೆಲ ಸ್ಥಳಗಳ ಮೇಲೆ ಈ ಕ್ಷಿಪಣಿಗಳಿಂದ ಬಹಳ ಕರಾರುವಾಕ್ ದಾಳಿ ಮಾಡಲಾಗಿತ್ತೆನ್ನಲಾಗಿದೆ. ಇದು ಯಾವ ರಾಡಾರ್ ಮತ್ತು ರಕ್ಷಣಾ ಕಣ್ಗಾವಲಿಗೂ ನಿಲುಕದಂತೆ ವೇಗವಾಗಿ ಹಾಯ್ದು ನಿಗದಿತ ಗುರಿಗೆ ಹೊಡೆದೇ ಹೊಡೆಯುವಂಥ ಕ್ಷಿಪಣಿ. ಇದೆಂಥ ಮಹತ್ವದ್ದು ಎಂಬುದು ಆಪರೇಷನ್ ಸಿಂದೂರದಲ್ಲಿ ರುಜುವಾತಾಗಿದೆ. ಈ ಕ್ಷಿಪಣಿ ಖರೀದಿಸಲು ಆಸಕ್ತಿ ತೋರುತ್ತಿರುವ ದೇಶಗಳ ಸಂಖ್ಯೆ ಈಗ ಹೆಚ್ಚಾಗತೊಡಗಿದೆ. ವರದಿಯೊಂದರ ಪ್ರಕಾರ 17 ದೇಶಗಳು ಈಗ ಬ್ರಹ್ಮೋಸ್ ಖರೀದಿಗೆ ಸಾಲುಗಟ್ಟಿವೆಯಂತೆ.
ಬ್ರಹ್ಮೋಸ್ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಸೂಪರ್ಸೋನಿಕ್ ವೇಗ, ಕರಾರುವಾಕ್ ದಾಳಿ, ಮತ್ತು ವಿವಿಧ ವಾತಾವರಣಗಳಿಗೆ ತಾಳೆಯಾಗಬಲ್ಲಂತಹದ್ದು ಇದು ಬ್ರಹ್ಮೋಸ್ ಮೇಲೆ ಆಸಕ್ತಿ ಹೆಚ್ಚಲು ಕಾರಣ. ನೆಲ, ವಾಯು ಮತ್ತು ಸಮುದ್ರದಿಂದ ಇವುಗಳನ್ನು ಪ್ರಯೋಗಿಸಬಹುದು.
ಇದನ್ನೂ ಓದಿ: ಮಾರುಕಟ್ಟೆ ಏರುಪೇರು, ಚೀನಾದ ಸುಳ್ಳು ಸುದ್ದಿ ತಂತ್ರ; ರಫೇಲ್ ಮತ್ತು ಚೆಂಗ್ಡು ಅಸಲಿ ಷೇರು ಆಟ
ಸದ್ಯ ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಸಲು ಒಪ್ಪಂದಕ್ಕೆ ಸಹಿಹಾಕಿರುವುದು ಫಿಲಿಪ್ಪೈನ್ಸ್ ಮಾತ್ರವೇ. 2022ರಲ್ಲಿ ಆ ದೇಶದ ಕರಾವಳಿ ಪಡೆಗೆ ಮೂರು ಡಿಫೆನ್ಸ್ ಬ್ಯಾಟರಿಗಳನ್ನು ಸರಬರಾಜು ಮಾಡಲು ಗುತ್ತಿಗೆ ಪಡೆಯಲಾಗಿತ್ತು. ಒಂದೊಂದು ಬ್ಯಾಟರಿಯಲ್ಲೂ ಹತ್ತಾರು ಕ್ಷಿಪಣಿಗಳಿರುತ್ತವೆ. ಈಗಾಗಲೇ ಒಂದು ಡಿಫೆನ್ಸ್ ಬ್ಯಾಟರಿಯನ್ನು ಭಾರತವು ಫಿಲಿಪ್ಪೈನ್ಸ್ಗೆ ನೀಡಿದೆ.
ಈಗ ಮತ್ತಷ್ಟು ದೇಶಗಳು ಬ್ರಹ್ಮೋಸ್ ಕ್ಷಿಪಣಿ ಮೇಲೆ ಆಸಕ್ತಿ ತೋರಿವೆ. ಅವುಗಳ ಪಟ್ಟಿ ಇಲ್ಲಿದೆ:
ಈ ಮೇಲಿನ ಪಟ್ಟಿಯಲ್ಲಿ ಹೆಚ್ಚಿನವರು ಅಮೆರಿಕ ಮತ್ತು ಚೀನಾದ ಸಮೀಪ ಇರುವಂಥ ದೇಶಗಳಾಗಿರುವುದು ಕುತೂಹಲದ ಸಂಗತಿ. ವಿಯೆಟ್ನಾಂ ದೇಶವು ತನ್ನ ಭೂಸೇನೆ ಮತ್ತು ನೌಕಾಸೇನೆಗೆ ಬ್ರಹ್ಮೋಸ್ ಕ್ಷಿಪಣಿ ಪಡೆಯಲು 700 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳುತ್ತಿದೆ.
ಇದನ್ನೂ ಓದಿ: ಭಾರತವು ಬಹಳ ಬೇಗ ಚೀನಾವನ್ನು ಮೀರಿಸಿ ಬೆಳೆಯಬಹುದು: ಜಿಮ್ ರೋಜರ್ಸ್ ಭವಿಷ್ಯ
ಮಲೇಷ್ಯಾ ಬಳಿಕ ರಷ್ಯಾ ನಿರ್ಮಿತ ಸುಖೋಯ್ ಎಸ್ಯು-30 ಎಂಕೆಎಂ ಫೈಟರ್ ಜೆಟ್ಗಳಿದ್ದು, ಅವುಗಳೊಂದಿಗೆ ಬ್ರಹ್ಮೋಸ್ ಕ್ಷಿಪಣಿ ಸೇರಿಸಲು ಆಸಕ್ತಿ ತೋರಿದೆ. ಇನ್ನು, ಇಂಡೋನೇಷ್ಯಾ ದೇಶವು ಹೊಸ ಆವೃತ್ತಿಯ ಬ್ರಹ್ಮೋಸ್ ಕ್ಷಿಪಣಿಗಾಗಿ 300 ಮಿಲಿಯನ್ ಡಾಲರ್ ಡೀಲ್ ಕುದುರಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ