AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆ ಜುಲೈನಲ್ಲಿ ಶೇ. 5.4; ಈ ವರ್ಷ ಭರ್ಜರಿ ಓಟ

India's core infrastructure sectors see good growth in 2026 July: ಭಾರತದ ಐಐಪಿ ಸೂಚ್ಯಂಕದಲ್ಲಿ ಶೇ. 40ರಷ್ಟು ತೂಕ ಇರುವ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳು ಜುಲೈನಲ್ಲಿ ಶೇ. 5.4ರಷ್ಟು ಬೆಳೆದಿವೆ. ಪೆಟ್ರೋಲಿಯಂ ರಿಫೈನರಿ, ವಿದ್ಯುತ್, ಉಕ್ಕು, ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಿಮೆಂಟ್, ರಸಗೊಬ್ಬರ, ಇವು ಪ್ರಮುಖ ಮೂಲಸೌಕರ್ಯ ವಲಯಗಳೆನಿಸಿವೆ. ಈ ವರ್ಷ (ಏಪ್ರಿಲ್​ನಿಂದ ಜುಲೈವರೆಗೆ) ಈ ಸೆಕ್ಟರ್​ಗಳು ಶೇ 4.3 ಇದೆ.

ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆ ಜುಲೈನಲ್ಲಿ ಶೇ. 5.4; ಈ ವರ್ಷ ಭರ್ಜರಿ ಓಟ
ಮೂಲಸೌಕರ್ಯImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 20, 2026 | 6:21 PM

Share

ನವದೆಹಲಿ, ಆಗಸ್ಟ್ 20: ಭಾರತದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ (Core Sector) ಬೆಳವಣಿಗೆಯ ದರವು 2026ರ ಜುಲೈ ತಿಂಗಳಲ್ಲಿ ಉತ್ತಮವಾದ 5.4% ಬೆಳವಣಿಗೆ ದಾಖಲಿಸಿದೆ. ಆದರೆ, ಹಿಂದಿನ ತಿಂಗಳಲ್ಲಿ (ಜೂನ್) ಇದು 6% ಇತ್ತು. ಅದಕ್ಕೆ ಹೋಲಿಸಿದರೆ ಜುಲೈನಲ್ಲಿ ಪ್ರಮುಖ ಇನ್​ಫ್ರಾಸ್ಟ್ರಕ್ಚರ್ ಸೆಕ್ಟರ್​ಗಳ ಬೆಳವಣಿಗೆ ತುಸು ಮಂದಗೊಂಡಿದೆ. ಆದರೆ, ಈ ಹಣಕಾಸು ವರ್ಷದಲ್ಲಿ ಈವರೆಗೆ ಸಾಧಿಸಿರುವ ಪ್ರಗತಿಯು ಹಿಂದಿನ ವರ್ಷದ ಇದೇ ಅವಧಿಗೆ ತುಲನೆ ಮಾಡಿದರೆ ಬಹಳ ಹೆಚ್ಚಿನ ಮಟ್ಟದಲ್ಲಿದೆ.

2026-27ರ ಹಣಕಾಸು ವರ್ಷದಲ್ಲಿ ಏಪ್ರಿಲ್​ನಿಂದ ಜುಲೈವರೆಗಿನ ಅವಧಿಯಲ್ಲಿ ಎಂಟು ಕೋರ್ ಸೆಕ್ಟರ್​ಗಳ ಬೆಳವಣಿಗೆ ದರ 4.3% ಇದೆ. ಹಿಂದಿನ ವರ್ಷದಲ್ಲಿ ಇದು 1.5% ಮಾತ್ರವೇ ಇತ್ತು. ಇನ್ನು, 2025ರ ಜುಲೈನಲ್ಲಿ ಇದು 3.2% ಇತ್ತು. ಹೀಗಾಗಿ, ಈಗ ಈ ಮೂಲಸೌಕರ್ಯ ವಲಯಗಳಲ್ಲಿ ಆಗುತ್ತಿರುವ ಪ್ರಗತಿ ಗಮನಾರ್ಹವೆನಿಸಿದೆ.

ಇದನ್ನೂ ಓದಿ: ಭಾರತದಲ್ಲಿ ಜೆನ್ 2 ಸೆಟಿಲೈಟ್ ಸೇವೆ ಅನುಮತಿಗಾಗಿ ಸ್ಟಾರ್​ಲಿಂಕ್ ಮತ್ತೊಮ್ಮೆ ಅರ್ಜಿ

ಎಂಟು ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳು ಯಾವುವು?

  1. ಪೆಟ್ರೋಲಿಯಂ ರಿಫೈನರಿ ಉತ್ಪನ್ನಗಳು
  2. ವಿದ್ಯುತ್
  3. ಉಕ್ಕು
  4. ಕಲ್ಲಿದ್ದಲು
  5. ಕಚ್ಚಾ ತೈಲ
  6. ನೈಸರ್ಗಿಕ ಅನಿಲ
  7. ಸಿಮೆಂಟ್
  8. ರಸಗೊಬ್ಬರ

ಈ ಮೇಲಿನ ಉದ್ಯಮಗಳನ್ನು ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳೆಂದು ಪರಿಗಣಿಸಲಾಗಿದೆ. ಭಾರತದ ಕೈಗಾರಿಕೆಗಳ ಉತ್ಪನ್ನಗಳ ಸೂಚ್ಯಂಕದಲ್ಲಿ ಈ ಎಂಟು ಉದ್ಯಮಗಳಿಗೆ ನೀಡಲಾಗಿರುವ ಒಟ್ಟು ತೂಕ 40.27% ಎನ್ನಲಾಗಿದೆ. ಹೀಗಾಗಿ, ಐಐಪಿ ಇಂಡೆಕ್ಸ್​ನಲ್ಲಿ ಈ ಪ್ರಮುಖ ಇನ್​ಫ್ರಾಸ್ಟ್ರಕ್ಚರ್ ಸೆಕ್ಟರ್​ಗಳು ಪ್ರಮುಖ ಪಾತ್ರ ವಹಿಸುತ್ತವೆ.

ಇದನ್ನೂ ಓದಿ: ಹೊಸ ಮೈಲಿಗಲ್ಲು ಮುಟ್ಟಿದ ಅಮೆರಿಕದ ಸಾಲ; ಹತ್ತು ವರ್ಷದಲ್ಲಿ ಸಾಲದ ಹೊರೆ ಎರಡು ಪಟ್ಟು ಏರಿಕೆ

ಮುಂಚೂಣಿಯಲ್ಲಿರುವ ಕ್ಷೇತ್ರಗಳು: ಈ ಮೂಲಸೌಕರ್ಯ ಸೆಕ್ಟರ್​ಗಳ ಬೆಳವಣಿಗೆಗೆ ಮುಖ್ಯವಾಗಿ ಕಬ್ಬಿಣದ ಅದಿರು (Iron ore) ಮತ್ತು ಸಿಮೆಂಟ್ (Cement) ಕ್ಷೇತ್ರಗಳ ಉತ್ತಮ ಪ್ರದರ್ಶನ ಕಾರಣವಾಗಿದೆ. ಕಲ್ಲಿದ್ದಲು, ಸಿಮೆಂಟ್, ವಿದ್ಯುತ್, ಕಬ್ಬಿಣ ಅದಿರು, ರಿಫೈನರಿ ಉತ್ಪನ್ನಗಳ ಉತ್ಪಾದನೆ ಹೆಚ್ಚಿದ್ದರಿಂದ ಜುಲೈನಲ್ಲಿ ಈ ಕೋರ್ ಸೆಕ್ಟರ್​ಗಳು ಉತ್ತಮ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು