2024-25ರಲ್ಲಿ ಭಾರತದ ರಫ್ತು ದಾಖಲೆ; 820 ಬಿಲಿಯನ್ ಡಾಲರ್ ದಾಟಿದ ಸರಕು ಮತ್ತು ಸೇವಾ ರಫ್ತು

Piyush Goyal speaks with exports industry: ಭಾರತ ಮೊದಲ ಬಾರಿಗೆ ವರ್ಷವೊಂದರಲ್ಲಿ 820 ಬಿಲಿಯನ್ ಡಾಲರ್​​ಗೂ ಹೆಚ್ಚು ರಫ್ತು ಮಾಡಿದೆ. 2024-25ರ ಹಣಕಾಸು ವರ್ಷದಲ್ಲಿ ಈ ಮೈಲಿಗಲ್ಲು ಮುಟ್ಟಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ರಫ್ತು ಪ್ರಮಾಣ ಶೇ. 6ರಷ್ಟು ಹೆಚ್ಚಾಗಿದೆ. ಕೇಂದ್ರ ವಾಣಿಜ್ಯ ಸಚಿವಾಲಯ ಈ ಮಾಹಿತಿ ನೀಡಿದ್ದು, ಸದ್ಯದಲ್ಲೇ ಪೂರ್ಣವಿವರ ಬಿಡುಗಡೆ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

2024-25ರಲ್ಲಿ ಭಾರತದ ರಫ್ತು ದಾಖಲೆ; 820 ಬಿಲಿಯನ್ ಡಾಲರ್ ದಾಟಿದ ಸರಕು ಮತ್ತು ಸೇವಾ ರಫ್ತು
ಪೀಯೂಶ್ ಗೋಯಲ್

Updated on: Apr 10, 2025 | 5:30 PM

ನವದೆಹಲಿ, ಏಪ್ರಿಲ್ 10: ಕಳೆದ ಹಣಕಾಸು ವರ್ಷದಲ್ಲಿ ಭಾರತದ ಸರಕು ಮತ್ತು ಸೇವೆಗಳ ಒಟ್ಟಾರೆ ರಫ್ತು (India’s goods and service exports) 820 ಬಿಲಿಯನ್ ಡಾಲರ್ ದಾಟಿದೆ. ಜಾಗತಿಕ ಆರ್ಥಿಕ ಸಮಸ್ಯೆ ಮತ್ತು ಜಂಜಾಟಗಳ ಮಧ್ಯೆ 2024-25ರಲ್ಲಿ ಭಾರತದ ರಫ್ತು 820 ಬಿಲಿಯನ್ ಡಾಲರ್​ಗಿಂತ ಹೆಚ್ಚಿದೆ. ಹಿಂದಿನ ವರ್ಷದಲ್ಲಿ (2023-24) ಆದ ರಫತು 778 ಬಿಲಿಯನ್ ಡಾಲರ್​​ನಷ್ಟಿತ್ತು. ಅದಕ್ಕೆ ಹೋಲಿಸಿದರೆ ರಫ್ತು ಶೇ. 6ರಷ್ಟು ಹೆಚ್ಚಾಗಿದೆ ಎಂದು ವಾಣಿಜ್ಯ ಸಚಿವಾಲಯವು ಮಾಹಿತಿ ನೀಡಿದೆ.

2024-25ರ ಹಣಕಾಸು ವರ್ಷದ್ಲಲಿ ಏಪ್ರಿಲ್​​ನಿಂದ ಫೆಬ್ರುವರಿಗೆ ಸರಕು ರಫ್ತು 395.63 ಬಿಲಿಯನ್ ಡಾಲರ್ ಇತ್ತು. ಸರ್ವಿಸ್ ಸೆಕ್ಟರ್​​ ಇಂದ ರಫ್ತು ಇದೇ ಅವಧಿಯಲ್ಲಿ 354.90 ಬಿಲಿಯನ್ ಡಾಲರ್​ನಷ್ಟಿತ್ತು. ಮಾರ್ಚ್ ತಿಂಗಳದ್ದೂ ಸೇರಿ 2024-25ರಲ್ಲಿ ಒಟ್ಟು ರಫ್ತು 820 ಬಿಲಿಯನ್ ಡಾಲರ್ ದಾಟಿದೆ. ಇದರಲ್ಲಿ ಸರಕು ರಫ್ತು ಎಷ್ಟು, ಸೇವಾ ರಫ್ತು ಎಷ್ಟು ಎನ್ನುವ ವಿವರವನ್ನು ಏಪ್ರಿಲ್ 15ರಂದು ಬಿಡುಗಡೆ ಮಾಡಲಾಗುತ್ತದೆ.

ಇದನ್ನೂ ಓದಿ: ಗಮನಿಸಿ, ನೀವು ಒಡವೆ ಇಟ್ಟರೆ ಶೇ. 90 ಅಲ್ಲ, ಶೇ. 75 ಸಾಲ ಸಿಗುವುದೂ ಕಷ್ಟವಾಗಬಹುದು

ಇದನ್ನೂ ಓದಿ
ಭಾರತದ ಇಂಡಿಗೋ, ವಿಶ್ವದ ಅತಿಹೆಚ್ಚು ಮೌಲ್ಯದ ಏರ್​​ಲೈನ್ಸ್
ಹೊಸ ಆಧಾರ್ ಕಾನೂನು ತಯಾರಿಕೆಗೆ ಸರ್ಕಾರ ಮುಂದು
ಭಾರತದಿಂದ 2 ಲಕ್ಷ ಕೋಟಿ ರೂ ಸ್ಮಾರ್ಟ್​​ಫೋನ್ ರಫ್ತು
ಶೇ. 37 ಸಣ್ಣ ಉದ್ದಿಮೆಗಳು ಸಾಮರ್ಥ್ಯ ಹೆಚ್ಚಳಕ್ಕೆ ಮುಂದು: ಸಿಡ್ಬಿ ವರದಿ

ಭಾರತದಲ್ಲಿ ಸರಕು ಮತ್ತು ಸೇವಾ ರಫ್ತು ಒಂದು ವರ್ಷದಲ್ಲಿ 820 ಬಿಲಿಯನ್ ಡಾಲರ್ ದಾಟಿದ್ದು ಇದೇ ಮೊದಲು. ಆ ಮಟ್ಟಿಗೆ ಭಾರತ ಹೊಸ ರಫ್ತು ಮೈಲಿಗಲ್ಲು ಮುಟ್ಟಿದೆ. ರೆಡ್ ಸೀ, ಇಸ್ರೇಲ್ ಹಮಾಸ್ ಸಂಘರ್ಷ, ರಷ್ಯಾ ಉಕ್ರೇನ್ ಯುದ್ಧ ಇತ್ಯಾದಿ ಬಿಕ್ಕಟ್ಟುಗಳಿಂದ ಉದ್ಭವವಾದ ಜಾಗತಕ ಅನಿಶ್ಚಿತ ಸ್ಥಿತಿಯ ನಡುವೆ ಭಾರತ ಈ ಪರಿ ರಫ್ತು ಹೆಚ್ಚಳ ಕಂಡಿದ್ದು ಗಮನಾರ್ಹ ಸಂಗತಿ.

ಉದ್ಯಮ ಸಂಘಟನೆಗಳ ಜೊತೆ ಸಚಿವರ ಮಾತುಕತೆ

ಕೇಂದ್ರ ವಾಣಿಜ್ಯ ಸಚಿವ ಪೀಯೂಶ್ ಗೋಯಲ್ ಅವರು ರಫ್ತು ಕ್ಷೇತ್ರದ ಉದ್ಯಮ ಸಂಘಟನೆಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜಾಗತಿಕ ಟ್ಯಾರಿಫ್ ಸಮರದಿಂದ ಉದ್ಭಸಿರುವ ಅನಿಶ್ಚಿತ ಸನ್ನಿವೇಶವನ್ನು ಎದುರಿಸಲು ಸರ್ಕಾರ ಯಾವ ಕ್ರಮ ತೆಗೆದುಕೊಳ್ಳುತ್ತಿದೆ ಎಂಬುದನ್ನು ಸಚಿವರು ಈ ಸಭೆಯಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ವಿಶ್ವದ ಅತಿಮೌಲ್ಯಯುತ ಏರ್​ಲೈನ್ಸ್ ಕಂಪನಿ ಎನಿಸಿದ ಭಾರತದ ಇಂಡಿಗೋ

ಈ ಸಭೆಯಲ್ಲಿ ವಿವಿಧ ಸೆಕ್ಟರ್​​ಗಳಿಗೆ ಸೇರಿರುವ ರಫ್ತು ಉತ್ತೇಜನ ಮಂಡಳಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಜಾಗತಿಕ ವ್ಯಾಪಾರ ವಿಚಾರದಲ್ಲಿ ಉದ್ಭವಿಸಲಿರುವ ಸವಾಲುಗಳನ್ನು ಎದುರಿಸುವ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು, ದುಗುಡ ದುಮ್ಮಾನಗಳನ್ನು ಹಂಚಿಕೊಂಡರು. ಈ ಸವಾಲಿನ ಸಂದರ್ಭದಲ್ಲಿ ರಫ್ತು ಉದ್ಯಮಕ್ಕೆ ಸರ್ಕಾರವೇ ಮುಂದೆ ನಿಂತ ನೆರವಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದೂ ಅವರು ಮನವಿ ಮಾಡಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Thu, 10 April 25