ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ

India's forex reserves rise to 700 billion USD on April 10th: ಏಪ್ರಿಲ್ 10ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ 900 ಬಿಲಿಯನ್ ಡಾಲರ್ ಮುಟ್ಟಿದೆ. ಏಪ್ರಿಲ್ 3ರಂದು ಅಂತ್ಯಗೊಂಡ ವಾರದಲ್ಲಿ 9 ಬಿಲಿಯನ್ ಡಾಲರ್​ನಷ್ಟು ನಿಧಿ ಏರಿಕೆ ಆಗಿತ್ತು. ಏಪ್ರಿಲ್ 10ರ ವಾರದಲ್ಲಿ 3.825 ಬಿಲಿಯನ್ ಡಾಲರ್ ಹೆಚ್ಚಿದೆ. ವಿಶ್ವದಲ್ಲಿ ಅತಿಹೆಚ್ಚು ವಿದೇಶೀ ವಿನಿಮಯ ಮೀಸಲು ನಿಧಿ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ.

ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ
ಫಾರೆಕ್ಸ್ ರಿಸರ್ವ್ಸ್
Image Credit source: Shutterstock

Updated on: Apr 19, 2026 | 1:27 PM

ನವದೆಹಲಿ, ಏಪ್ರಿಲ್ 19: ಭಾರತದ ಫಾರೆಕ್ಸ್ ರಿಸರ್ವ್ಸ್ (Forex reserves) ಏಪ್ರಿಲ್ 10ರಂದು ಅಂತ್ಯಗೊಂಡ ವಾರದಲ್ಲಿ 3.825 ಬಿಲಿಯನ್ ಡಾಲರ್​ನಷ್ಟು ಏರಿದೆ. ಹಿಂದಿನ ವಾರದಲ್ಲೂ 9.063 ಬಿಲಿಯನ್ ಡಾಲರ್​ನಷ್ಟು ರಿಸರ್ವ್ಸ್ ಹೆಚ್ಚಳ ಆಗಿತ್ತು. ಇದರೊಂದಿಗೆ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ 700.946 ಬಿಲಿಯನ್ ಡಾಲರ್​ಗೆ ಏರಿದೆ. ಆದರೆ, ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ಮೀಸಲು ನಿಧಿಯ ಮಟ್ಟ ಮುಟ್ಟಲು ಇನ್ನೂ 28 ಬಿಲಿಯನ್ ಡಾಲರ್ ಬೇಕಾಗುತ್ತದೆ.

2026ರ ಫೆಬ್ರುವರಿ 27ರಂದು ಭಾರತದ ಫಾರೆಕ್ಸ್ ರಿಸರ್ವ್ಸ್ 728.494 ಬಿಲಿಯನ್ ಡಾಲರ್ ಆಗಿತ್ತು. ಆ ನಂತರದಲ್ಲಿ ಇರಾನ್ ಇತ್ಯಾದಿ ಕಡೆ ಜಾಗತಿಕ ರಾಜಕೀಯ ಸಂಕಷ್ಟಗಳ ಕಾರಣಗಳಿಗೆ ರುಪಾಯಿ ಮೇಲೆ ಒತ್ತಡ ಬಿದ್ದು, ಆರ್​ಬಿಐ ತನ್ನ ರಿಸರ್ವ್ಸ್​ನಲ್ಲಿದ್ದ ಒಂದಿಷ್ಟು ಡಾಲರ್​ಗಳನ್ನು ಮಾರುತ್ತಾ ಹೋಗಬೇಕಾಯಿತು. ಹೀಗಾಗಿ, ಫಾರೆಕ್ಸ್ ರಿಸರ್ವ್ಸ್ ಹಲವು ಬಿಲಿಯನ್ ಡಾಲರ್​ಗಳಷ್ಟು ಕಡಿಮೆಗೊಂಡಿತು.

ಇದನ್ನೂ ಓದಿ: ಅಕ್ಷಯ ತೃತೀಯ ಸ್ಪೆಷಲ್: ಒಡವೆ, ಡಿಜಿಟಲ್ ಗೋಲ್ಡ್, ಇಟಿಎಫ್- ಬಂಗಾರದ ಲಾಭ ಪಡೆಯಲು ಯಾವುದು ಬೆಸ್ಟ್?

ಫಾರೀನ್ ಕರೆನ್ಸಿ ಆಸ್ತಿಯಲ್ಲಿ ಗಣನೀಯ ಹೆಚ್ಚಳ

ಏಪ್ರಿಲ್ 10ರಂದು ಅಂತ್ಯಗೊಂಡ ವಾರದಲ್ಲಿ ಏರಿಕೆಯಾದ 3.285 ಬಿಲಿಯನ್ ಡಾಲರ್ ಫಾರೆಕ್ಸ್ ಮೀಸಲು ನಿಧಿಯಲ್ಲಿ ಬಹುಪಾಲು ಫಾರೀನ್ ಕರೆನ್ಸಿಗಳೇ ಇವೆ. ಬರೋಬ್ಬರಿ 3.127 ಬಿಲಿಯನ್ ಡಾಲರ್ ಮೊತ್ತದ ವಿದೇಶೀ ಕರೆನ್ಸಿ ಆಸ್ತಿಗಳನ್ನು ಆರ್​ಬಿಐ ಹೆಚ್ಚಿಸಿಕೊಂಡಿದೆ.

ಇನ್ನಿತರ ಆಸ್ತಿಗಳ ಪೈಕಿ ಗೋಲ್ಡ್ ರಿಸರ್ವ್ಸ್ 601 ಮಿಲಿಯನ್ ಡಾಲರ್​ನಷ್ಟು ಹೆಚ್ಚಿದೆ. ಎಸ್​ಡಿಆರ್​ಗಳು 56 ಮಿಲಿಯನ್ ಡಾಲರ್, ಹಾಗೂ ಭಾರತದ ಐಎಂಎಫ್ ಮೀಸಲು ಸ್ಥಾನ 56 ಮಿಲಿಯನ್ ಡಾಲರ್ ಏರಿಕೆ ಆಗಿದೆ.

ಇದನ್ನೂ ಓದಿ: ಕಳೆದ 5 ವರ್ಷದಿಂದ ಅಕ್ಷಯ ತೃತೀಯದಂದು ಚಿನ್ನ ಖರೀದಿಸುತ್ತಿದ್ದರೆ ಇವತ್ತಿನ ಮೌಲ್ಯವೆಷ್ಟಿರುತ್ತಿತ್ತು ಗೊತ್ತಾ?

ಏಪ್ರಿಲ್ 10ರಂದು ಭಾರತದ ಫಾರೆಕ್ಸ್ ರಿಸರ್ವ್ಸ್

ಒಟ್ಟು ಫಾರೆಕ್ಸ್ ರಿಸರ್ವ್ಸ್: 700.946 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಅಸೆಟ್: 555.946 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 121.343 ಬಿಲಿಯನ್ ಡಾಲರ್
  • ಎಸ್​ಡಿಆರ್: 18.763 ಬಿಲಿಯನ್ ಡಾಲರ್
  • ಐಎಂಎಫ್ ಮೀಸಲು: 4.857 ಬಿಲಿಯನ್ ಡಾಲರ್

ಅತಿಹೆಚ್ಚು ಫಾರೆಕ್ಸ್ ರಿಸರ್ವ್ಸ್ ಹೊಂದಿರುವ ದೇಶಗಳು

  • ಚೀನಾ: 3.643 ಟ್ರಿಲಿಯನ್ ಡಾಲರ್
  • ಜಪಾನ್: 1.294 ಟ್ರಿಲಿಯನ್ ಡಾಲರ್
  • ಸ್ವಿಟ್ಜರ್​ಲ್ಯಾಂಡ್: 1.077 ಟ್ರಿಲಿಯನ್ ಡಾಲರ್
  • ರಷ್ಯಾ: 755 ಬಿಲಿಯನ್ ಡಾಲರ್
  • ಭಾರತ: 700 ಬಿಲಿಯನ್ ಡಾಲರ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us