AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Infinix Hot 30i: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಿದೆ ಹೊಸ ಸ್ಮಾರ್ಟ್​ಫೋನ್: ದಂಗಾದ ಶವೋಮಿ, ರಿಯಲ್ ಮಿ

ಇನ್ಫಿನಿಕ್ಸ್ ಇದೀಗ ಹೊಸ ಇನ್ಫಿನಿಕ್ಸ್‌ ಹಾಟ್‌ 30ಐ (Infinix Hot 30i) ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ ಶವೋಮಿಯ ರೆಡ್ಮಿ, ರಿಯಲ್ ಮಿ ಫೋನ್​ಗಳಿಗೆ ಸೆಡ್ಡು ಹೊಡೆಯುತ್ತಿದೆ. ಇನ್ಫಿನಿಕ್ಸ್ ಇದೀಗ ಹೊಸ ಇನ್ಫಿನಿಕ್ಸ್‌ ಹಾಟ್‌ 30ಐ (Infinix Hot 30i) ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ ಶವೋಮಿಯ ರೆಡ್ಮಿ, ರಿಯಲ್ ಮಿ ಫೋನ್​ಗಳಿಗೆ ಸೆಡ್ಡು ಹೊಡೆಯುತ್ತಿದೆ.

Infinix Hot 30i: ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ರಿಲೀಸ್ ಆಗಿದೆ ಹೊಸ ಸ್ಮಾರ್ಟ್​ಫೋನ್: ದಂಗಾದ ಶವೋಮಿ, ರಿಯಲ್ ಮಿ
infinix hot 30i
Vinay Bhat
| Edited By: |

Updated on:Oct 14, 2026 | 5:11 PM

Share

ಮುಖ್ಯಾಂಶಗಳು

  • ಹೊಸ ಇನ್ಫಿನಿಕ್ಸ್‌ ಹಾಟ್‌ 30i ಸ್ಮಾರ್ಟ್​ಫೋನನ್ನು ಅನಾವರಣಗೊಂಡಿದೆ
  • ಭಾರತದಲ್ಲಿ ಈ ಸ್ಮಾರ್ಟ್​ಫೋನ್ ಅತಿ ಕಡಿಮೆ ಬೆಲೆಗೆ ಲಭ್ಯವಿದೆ.
  • ದೀರ್ಘ ಸಮಯ ಬಾಳಕೆ ಬರುವ ಬ್ಯಾಟರಿ ಸಾಮರ್ಥ್ಯ ನೀಡಲಾಗಿದೆ.

ಭಾರತದ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಹೆಚ್ಚಾಗಿ ಶವೋಮಿ ಮತ್ತು ರಿಯಲ್ ಮಿ ಕಂಪನಿಗಳು ಬಜೆಟ್ ಬೆಲೆಗೆ ಸ್ಮಾರ್ಟ್​ಫೋನ್​ಗಳನ್ನು ರಿಲೀಸ್ ಮಾಡುತ್ತಿರುತ್ತದೆ. ಇದೀಗ ಇವುಗಳಿಗೆ ಪೈಪೋಟಿ ನೀಡಲು ಇನ್ಫಿನಿಕ್ಸ್‌ (Infinix) ಕಂಪನಿ ಬಂದಿದೆ. ಕಡಿಮೆ ಬೆಲೆಗೆ ಆಕರ್ಷಕ ಫೋನ್​ಗಳನ್ನು ಬಿಡುಗಡೆ ಮಾಡುವುದಕ್ಕೆ ಹೆಸರುವಾಸಿ ಆಗಿರುವ ಇನ್ಫಿನಿಕ್ಸ್ ಇದೀಗ ಹೊಸ ಇನ್ಫಿನಿಕ್ಸ್‌ ಹಾಟ್‌ 30ಐ (Infinix Hot 30i) ಸ್ಮಾರ್ಟ್​ಫೋನನ್ನು ಅನಾವರಣ ಮಾಡಿದೆ. ಅತಿ ಕಡಿಮೆ ಬೆಲೆಗೆ ಲಭ್ಯವಿರುವ ಈ ಫೋನ್ ಶವೋಮಿಯ ರೆಡ್ಮಿ, ರಿಯಲ್ ಮಿ ಫೋನ್​ಗಳಿಗೆ ಸೆಡ್ಡು ಹೊಡೆಯುತ್ತಿದೆ. ಈ ಫೋನ್ ದೀರ್ಘ ಸಮಯ ಬಾಳಿಕೆ ಬರುವ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಆಕರ್ಷಕ ಕ್ಯಾಮೆರಾ, ಡಿಸ್ ಪ್ಲೇ ನೀಡಲಾಗಿದೆ. ಹಾಗಾದರೆ ಈ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇದೆ? ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಭಾರತದಲ್ಲಿ ಇನ್ಫಿನಿಕ್ಸ್‌ ಹಾಟ್‌ 30i ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಒಂದು ಮಾದರಿಯಲ್ಲಷ್ಟೆ ರಿಲೀಸ್ ಆಗಿದೆ. ಇದರ 8GB RAM + 128GB ಸ್ಟೋರೇಜ್ ಆವೃತ್ತಿಗೆ ಕೇವಲ 8,999 ರೂ. ನಿಗದಿ ಮಾಡಲಾಗಿದೆ. ಇದು ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್‌ ಮೂಲಕ ಮುಂದಿನ ತಿಂಗಳು ಎಪ್ರಿಲ್ 3 ರಂದು ಮಧ್ಯಾಹ್ನ 12 ಗಂಟೆಯಿಂದ ಸೇಲ್ ಕಾಣಲಿದೆ. ಈ ಫೋನನ್ನು ನೀವು ಡೈಮಂಡ್ ವೈಡ್, ಗ್ಲಾಸಿಯರ್ ಬ್ಲೂ ಮತ್ತು ಮಿರರ್​ ಬ್ಲಾಕ್ ಬಣ್ಣಗಳಲ್ಲಿ ಖರೀದಿಸಬಹುದು.

ಫೀಚರ್ಸ್ ಏನು?:

ಇನ್ಫಿನಿಕ್ಸ್‌ ಹಾಟ್‌ 30ಐ ಸ್ಮಾರ್ಟ್‌ಫೋನ್‌ 6.6 ಇಂಚಿನ ಫುಲ್ HD+ ಡಿಸ್‌ ಪ್ಲೇಯನ್ನು ಹೊಂದಿದೆ. 500 ನಿಟ್ಸ್ ಬ್ರೈಟ್‌ನೆಸ್ ಮತ್ತು 90Hz ರಿಫ್ರೆಶ್​ರೇಟ್ ಹೊಂದಿರುವ ಈ ಫೋನಿನ ಡಿಸ್ ಪ್ಲೇ ಅದ್ಭುತವಾಗಿದೆ. ಮೀಡಿಯಾಟೆಕ್‌ ಹಿಲಿಯೋ G37 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 XOS 12 ಬೆಂಬಲವನ್ನು ಪಡೆದುಕೊಂಡಿದೆ.

ಡ್ಯುಯೆಲ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇಯದು AI ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ ಮುಂಭಾಗದಲ್ಲಿ ವಿಡಿಯೋ ಮತ್ತು ಸೆಲ್ಫಿಗಾಗಿ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಪಡೆದುಕೊಂಡಿದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಕ್ಯಾಮೆರಾಗಳು ಎಲ್​ಇಡಿ ಫ್ಲ್ಯಾಸ್ ಒಳಗೊಂಡಿದೆ. ಈ ಫೋನಿನಲ್ಲಿ ನೀವು 1TB ವರೆಗೆ ಮೆಮೋರಿಯನ್ನು ವಿಸ್ತರಿಸಬಹುದಾದ ಆಯ್ಕೆ ಕೂಡ ಇದೆ.

ಇನ್ಫಿನಿಕ್ಸ್‌ ಹಾಟ್‌ 30i ಸ್ಮಾರ್ಟ್‌ಫೋನ್‌ ಬಲಿಷ್ಠವಾದ 5000mAh ಸಾಮರ್ಥ್ಯದ ಬಿಗ್‌ ಬ್ಯಾಟರಿಯನ್ನು ಹೊಂದಿದೆ. ಇದು 10W ಫಾಸ್ಟ್ ಚಾರ್ಜರ್ ಅನ್ನು ಬೆಂಬಲಿಸಲಿದೆ. ಒಂದು ಚಾರ್ಜ್​ನಲ್ಲಿ 25 ದಿನಗಳ ಕಾಲಿಂಗ್ ಟೈಮ್ ಮತ್ತು 30 ದಿನಗಳ ಸ್ಟ್ಯಾಂಡ್ ಬೈ ಟೈಮ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5ಜಿ ಬೆಂಬಲ ಪಡೆದುಕೊಂಡಿಲ್ಲ. ಬದಲಾಗಿ 4G LTE, Wi-Fi, ಬ್ಲೂಟೂತ್, GPS/ A-GPS, ಮತ್ತು USB ಟೈಪ್-C ನೀಡಲಾಗಿದೆ. ಸೈಡ್- ಮೌಂಟೆಡ್ ಫಿಂಗರ್​ಪ್ರಿಂಟ್ ಸ್ಕ್ಯಾನ್ ಅಳವಡಿಸಲಾಗಿದೆ.

Published On - 3:00 pm, Mon, 27 March 23

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಶಿಡ್ಲಘಟ್ಟ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ: ಆಗಿದ್ದೇನು?
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ಬೆಂಗಳೂರಿನಲ್ಲಿ ವಕೀಲನ ಕೊಲೆ: ಸಂಬಂಧಿಕರ ಶಾಕಿಂಗ್ ರಿಯಾಕ್ಷನ್!
ದೆಹಲಿ-ಪಂಜಾಬ್ ನೆಟ್‌ವರ್ಕ್, ಬಿಷ್ಣೋಯ್ ಗ್ಯಾಂಗ್ ಕೈವಾಡದ ಬಗ್ಗೆ ತನಿಖೆ
ದೆಹಲಿ-ಪಂಜಾಬ್ ನೆಟ್‌ವರ್ಕ್, ಬಿಷ್ಣೋಯ್ ಗ್ಯಾಂಗ್ ಕೈವಾಡದ ಬಗ್ಗೆ ತನಿಖೆ
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಕಿಮ್ಸ್ ಅವ್ಯವಸ್ಥೆ: ವ್ಹೀಲ್‌ಚೇರ್ ಇಲ್ಲದೆ ರೋಗಿಯ ಹೊತ್ತೊಯ್ದ ಸಂಬಂಧಿಕರು!
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಮೈಸೂರು ದಸರಾಗೆ ದೀಪಾಲಂಕಾರದ ಮೆರಗು: ಈ ಬಾರಿಯ ವಿಶೇಷತೆ ಏನು?
ಟಿವಿ9 ಫೆಸ್ಟಿವಲ್​ ಆಫ್​ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ಟಿವಿ9 ಫೆಸ್ಟಿವಲ್​ ಆಫ್​ ಇಂಡಿಯಾ ವೈಭವ: ನೇರಪ್ರಸಾರ ಇಲ್ಲಿದೆ
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ
ಖರೀದಿಗೆ ಮುಗಿಬಿದ್ದ ಜನ: ಕೆಆರ್ ಮಾರುಕಟ್ಟೆಯಲ್ಲಿ ಫುಲ್ ರಷ್, ಟ್ರಾಫಿಕ್ ಜಾಂ
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ
ಕಬ್ಬು ಬೆಳೆಗಾರರ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸಭೆ ಯಶಸ್ವಿ
ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ
ರಾಮ್‌ಪುರದಲ್ಲಿ ಓವೈಸಿ ಗುಡುಗು: ಮುಸ್ಲಿಂ ಯುವಶಕ್ತಿಗೆ ಎಐಎಂಐಎಂ ಹೊಸ ವೇದಿಕೆ