
ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ಗಳನ್ನು ನೋಡಿದಾಗ, ‘ವ್ಹಾ, ನಮಗೂ ಇಲ್ಲೆಲ್ಲಿಯಾದರೂ ಒಂದು ಅಡಿ ಜಾಗವಾದರೂ ಬರಬಾರದಾ’ ಎಂದು ಜನಸಾಮಾನ್ಯರು ಅಂದುಕೊಳ್ಳಬಹುದು. ಆದರೆ, ಅಲ್ಲೆಲ್ಲಾ ಚದರಡಿಗೆ ಹಲವು ಸಾವಿರ ರೂಗಳೇ ಆಗುತ್ತವೆ. ಒಂದು ಮನೆ ಖರೀದಿಸಲು ಕೋಟಿ ರೂ ಕೊಟ್ಟರೂ ಸಾಲದು. ಅಷ್ಟೆಲ್ಲಾ ಇನ್ವೆಸ್ಟ್ ಮಾಡಲು ಸಾಮಾನ್ಯರ ಇಡೀ ಜೀವಮಾನದ ಸಂಪಾದನೆ ಬೇಕಾಗುತ್ತದೆ. ಆದರೆ, ಕೆಲ ಹೂಡಿಕೆ ಯಂತ್ರಗಳು ಬಹಳ ಸುಲಭವಾಗಿ ರಿಯಲ್ ಎಸ್ಟೇಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ನೀವು ಷೇರು ಖರೀದಿಸಿದಷ್ಟೇ ಸುಲಭವಾ ಮತ್ತು ಸರಳವಾಗಿ ಆಸ್ತಿಯ ಒಂದು ಭಾಗವನ್ನು ಪಡೆಯಬಹುದು. ಈ ಹಣಕಾಸು ಯಂತ್ರಗಳೆಂದರೆ REITs (Real Estate Investment Trusts) ಮತ್ತು InvITs (Infrastructure Investment Trusts). ಇವುಗಳಲ್ಲಿ 10,000 ರೂ ಹೂಡಿಕೆ ಮಾಡಿ ಆಸ್ತಿಯಲ್ಲಿ ಒಂದು ಪಾಲು ಪಡೆಯಬಹುದು.
ಇವು ಮ್ಯೂಚುವಲ್ ಫಂಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ (ಇನ್‌ಫ್ರಾಸ್ಟ್ರಕ್ಚರ್) ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರಸ್ತುತ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (SEBI) ಯಲ್ಲಿ 6 REITs ಮತ್ತು 28 InvITs ನೋಂದಾಯಿಸಲ್ಪಟ್ಟಿವೆ.
ಕಚೇರಿಗಳು, ಮಾಲ್‌ಗಳು, ಐಟಿ ಪಾರ್ಕ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಂತಹ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ REITಗಳು ಹೂಡಿಕೆ ಮಾಡುತ್ತವೆ. ಇನ್ನೊಂದೆಡೆ, InvIT ಗಳು ರಸ್ತೆಗಳು, ಹೆದ್ದಾರಿಗಳು, ವಿದ್ಯುತ್ ತಂತಿಗಳು (ಮಾರ್ಗಗಳು) ಅಥವಾ ಪೈಪ್‌ಲೈನ್ ಪ್ರಾಜೆಕ್ಟ್ಗಳಲ್ಲಿ ಹೂಡಿಕೆ ಮಾಡುತ್ತವೆ.
REIT ಗಳಿಗೆ ಪ್ರಮುಖ ಆದಾಯ ಮೂಲವೆಂದರೆ ಕಟ್ಟಡಗಳಿಂದ ಬರುವ ತಿಂಗಳ ಬಾಡಿಗೆ (Rent) ಅಥವಾ ಗುತ್ತಿಗೆ ಹಣ. InvIT ಗಳ ಆದಾಯ ಮೂಲಗಳು ಹೆದ್ದಾರಿಗಳ ಟೋಲ್ ಸಂಗ್ರಹ, ವಿದ್ಯುತ್ ದರ ಅಥವಾ ಸೇವಾ ಶುಲ್ಕಗಳಾಗಿರುತ್ತವೆ.
ಇದನ್ನೂ ಓದಿ: 6ನೇ ವರ್ಷವೂ ಸಂಬಳ ಬೇಡ ಎಂದ ಮುಕೇಶ್ ಅಂಬಾನಿ; ಏಷ್ಯಾದ ಅತಿ ಶ್ರೀಮಂತ ಉದ್ಯಮಿಗೆ ಆದಾಯ ಎಲ್ಲಿಂದ?
ಮೂರು ಹಂತದ ವ್ಯವಸ್ಥೆ: ಪ್ರವರ್ತಕರು (Sponsors) ಈ ಟ್ರಸ್ಟ್‌ಗಳನ್ನು ಸ್ಥಾಪಿಸುತ್ತಾರೆ ಮತ್ತು ಆಸ್ತಿಗಳನ್ನು ಟ್ರಸ್ಟ್‌ಗೆ ವರ್ಗಾಯಿಸುತ್ತಾರೆ. ಉದ್ಯಮವನ್ನು ನೋಡಿಕೊಳ್ಳಲು ಮ್ಯಾನೇಜ್‌ಮೆಂಟ್ ಕಂಪನಿ ಇರುತ್ತದೆ ಹಾಗೂ ಹೂಡಿಕೆದಾರರ ಹಿತರಕ್ಷಣೆಗಾಗಿ ಟ್ರಸ್ಟಿಗಳು ಇರುತ್ತಾರೆ.
ಸೆಬಿ (SEBI) ನಿಯಮಗಳ ಪ್ರಕಾರ, ಈ ಟ್ರಸ್ಟ್‌ಗಳು ತಮಗೆ ಬರುವ ಒಟ್ಟಾರೆ ತೆರಿಗೆಗೆ ಒಳಪಡುವ ಆದಾಯದಲ್ಲಿ ಕನಿಷ್ಠ ಶೇ. 90 ರಷ್ಟನ್ನು ಕಡ್ಡಾಯವಾಗಿ ಹೂಡಿಕೆದಾರರಿಗೆ ಡಿವಿಡೆಂಡ್ (ಲಾಭಾಂಶ) ರೂಪದಲ್ಲಿ ನಿಯಮಿತವಾಗಿ (ಸಾಮಾನ್ಯವಾಗಿ ಪ್ರತಿ ತ್ರೈಮಾಸಿಕಕ್ಕೊಮ್ಮೆ) ಹಂಚಬೇಕಾಗುತ್ತದೆ.
ಹೂಡಿಕೆದಾರರಿಗೆ ಇದರಿಂದ ಎರಡು ರೀತಿಯಲ್ಲಿ ಲಾಭ ಸಿಗುತ್ತದೆ — ಒಂದು ನಿಯಮಿತವಾಗಿ ಬರುವ ಬಾಡಿಗೆ/ಡಿವಿಡೆಂಡ್ ಆದಾಯ ಮತ್ತು ಎರಡನೆಯದು ಕಾಲಕ್ರಮೇಣ ಆಸ್ತಿಯ ಮೌಲ್ಯ ಹೆಚ್ಚಾದಾಗ ಷೇರು ಬೆಲೆ ಏರಿಕೆಯಾಗುವ ಮೂಲಕ ಸಿಗುವ ಲಾಭ (Capital Appreciation).
ರಿಯಲ್ ಎಸ್ಟೇಟ್‌ನಲ್ಲಿ ನೇರವಾಗಿ ಕೋಟ್ಯಂತರ ರೂಪಾಯಿ ಹೂಡುವ ಬದಲಿಗೆ, ಕೇವಲ ₹10,000 ರಿಂದ ₹15,000 ದೊಂದಿಗೆ ಹೂಡಿಕೆ ಆರಂಭಿಸಬಹುದು. ಇವು ಷೇರು ಮಾರುಕಟ್ಟೆಯಲ್ಲಿ (NSE/BSE) ಲಿಸ್ಟ್ ಆಗಿರುವುದರಿಂದ, ಸಾಮಾನ್ಯ ಶೇರುಗಳಂತೆಯೇ ಇವುಗಳನ್ನು ಸುಲಭವಾಗಿ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಹೆಚ್ಚಿನ ನಗದೀಕರಣ ಅಥವಾ ಲಿಕ್ವಿಡಿಟಿ ಅವಕಾಶ ಇರುತ್ತದೆ. ಭೌತಿಕವಾಗಿ ಜಾಗ ಅಥವಾ ಮನೆ ಮಾರುವುದಕ್ಕಿಂತ ಇದು ತೀರಾ ಸುಲಭ.
ಅನುಭವಿ ಫಂಡ್ ಮ್ಯಾನೇಜರ್‌ಗಳು ಈ ಆಸ್ತಿಗಳನ್ನು ನಿರ್ವಹಿಸುವುದರಿಂದ ಉತ್ತಮ ಆದಾಯದ ಸಾಧ್ಯತೆಯೂ ಹೆಚ್ಚು ಇರುತ್ತದೆ.
ಇದನ್ನೂ ಓದಿ: ಭಾರತದ ನೇತ್ರಸೆಮಿಯಿಂದ ದೇಶೀಯ ವಿನ್ಯಾಸದ ಎಐ ಪ್ರೋಸಸರ್ A2000 ಅನಾವರಣ
REITs ಮತ್ತು InvITs ಗಳನ್ನು ಆದಾಯ ತೆರಿಗೆ ಕಾಯ್ದೆಯಡಿ ‘ಪಾಸ್-ಥ್ರೂ’ (Pass-through) ಘಟಕಗಳಾಗಿ ಪರಿಗಣಿಸಲಾಗುತ್ತದೆ. ಅಂದರೆ ಟ್ರಸ್ಟ್ ಮಟ್ಟದಲ್ಲಿ ತೆರಿಗೆ ಮುರಿಯದೆ ನೇರವಾಗಿ ಹೂಡಿಕೆದಾರರಿಗೆ ಆದಾಯ ವರ್ಗಾವಣೆಯಾಗುತ್ತದೆ. ಹೂಡಿಕೆದಾರರ ಕೈಗೆ ಸಿಗುವ ಆದಾಯದ ಮೇಲೆ ಈ ಕೆಳಗಿನಂತೆ ತೆರಿಗೆ ಅನ್ವಯಿಸುತ್ತದೆ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ