Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ

| Updated By: Srinivas Mata

Updated on: Dec 01, 2021 | 7:32 PM

ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಮೇಲೆ ಮಾಡಿದ 1 ಲಕ್ಷ ರೂಪಾಯಿ ಹೂಡಿಕೆ ಈ ವರ್ಷದ ಎಂಟೇ ತಿಂಗಳಲ್ಲಿ ಹೂಡಿಕೆದಾರರಿಗೆ 71 ಲಕ್ಷ ಆಗಿದೆ. ಯಾವುದು ಆ ಷೇರು ಎಂಬ ಮಾಹಿತಿ ಇಲ್ಲಿದೆ.​

Multibagger: ಈ ಷೇರಿನ ಮೇಲೆ ಹೂಡಿಕೆ ಮಾಡಿದ್ದ 1 ಲಕ್ಷ ರೂಪಾಯಿ 8 ತಿಂಗಳಲ್ಲಿ 71 ಲಕ್ಷ ರೂಪಾಯಿ
ಪ್ರಾತಿನಿಧಿಕ ಚಿತ್ರ
Follow us on

ಪೆನ್ನಿ ಸ್ಟಾಕ್​ಗಳು ಯಾವಾಗಲೂ ಅಪಾಯಕಾರಿ. ಈ ಷೇರುಗಳಲ್ಲಿನ ಲಿಕ್ವಿಡಿಟಿ ಕಡಿಮೆಯಾದ್ದರಿಂದ ಒಂದೊಂದು ಸಲ ಭಾರೀ ಬೆಲೆ ಏರಿಕೆಗೆ ಕಾರಣ ಆಗಿಬಿಡುತ್ತದೆ. ಕೊವಿಡ್​-19 ಚೇತರಿಕೆ ನಂತರ ಷೇರು ಮಾರುಕಟ್ಟೆಯಲ್ಲಿ ಹಲವು ಪೆನ್ನಿ ಸ್ಟಾಕ್​ಗಳು ಊಹಿಸಲು ಕೂಡ ಸಾಧ್ಯವಿಲ್ಲದಂಥ ಮಲ್ಟಿಬ್ಯಾಗರ್​ ರಿಟರ್ನ್ ಅನ್ನು ಷೇರುದಾರರಿಗೆ ನೀಡಿದೆ. ಅಂಥ ಷೇರುಗಳಲ್ಲಿ ಒಂದು ಗೋಪಾಲ ಪಾಲಿಪ್ಲಾಸ್ಟ್​. ಈ ಕಂಪೆನಿಯ ಷೇರಿನ ಬೆಲೆ ಮಾರ್ಚ್ 31, 2021ರಂದು ಬಿಎಸ್​ಇಯಲ್ಲಿ 9.10 ರೂಪಾಯಿ ಇದ್ದದ್ದು ಎಂಟು ತಿಂಗಳಲ್ಲಿ, ಅಂದರೆ ಡಿಸೆಂಬರ್ 1, 2021ರ ಬೆಳಗ್ಗೆ ಬಿಎಸ್​ಇಯಲ್ಲಿ 650 ರೂಪಾಯಿಗೆ ಚಹಿವಾಟು ನಡೆಸಿತ್ತು. ಆ ಮೂಲಕ ಈ ಅವಧಿಯಲ್ಲಿ ಹತ್ತಿರ ಹತ್ತಿರ 70 ಪಟ್ಟು ರಿಟರ್ನ್ಸ್ ನೀಡಿದೆ.

ಗೋಪಾಲ ಪಾಲಿಪ್ಲಾಸ್ಟ್ ಷೇರು ಬೆಲೆ ಇತಿಹಾಸ
ಗೋಪಾಲ ಪಾಲಿಪ್ಲಾಸ್ಟ್ ಷೇರು ಬೆಲೆ ಇತಿಹಾಸದ ಪ್ರಕಾರ, ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್ ಇತ್ತೀಚಿನ ಟ್ರೇಡ್ ಸೆಷನ್‌ಗಳಲ್ಲಿ ಪ್ರಾಫಿಟ್ ಬುಕಿಂಗ್ ಒತ್ತಡದಲ್ಲಿದೆ. ಈ ಪೆನ್ನಿ ಸ್ಟಾಕ್ ಕಳೆದ ಒಂದು ತಿಂಗಳಲ್ಲಿ ಶೇಕಡಾ 12ರಷ್ಟು ಕುಸಿದಿದೆ. ಆದರೆ ಕಳೆದ 6 ತಿಂಗಳಲ್ಲಿ ರೂ. 27.55ರಿಂದ ರೂ. 650ರ ಮಟ್ಟಕ್ಕೆ ಏರಿದೆ, ಅಂದರೆ ಈ ಅವಧಿಯಲ್ಲಿ ಸುಮಾರು ಶೇ 2260ರಷ್ಟು ಏರಿಕೆಯಾಗಿದೆ. ಈ ಮಲ್ಟಿಬ್ಯಾಗರ್ ಷೇರಿನ ಬೆಲೆಯು ಮಾರ್ಚ್​ ಅಂತ್ಯದ ಹೊತ್ತಿಗೆ ಇದ್ದ ರೂ. 9.10ರಿಂದ ರೂ. 650 ಮಟ್ಟಕ್ಕೆ ಏರಿತು. 2021ರ ಏಪ್ರಿಲ್‌ನಿಂದ ನವೆಂಬರ್ ಅವಧಿಯಲ್ಲಿ ಶೇ 7000ದಷ್ಟು ಹೆಚ್ಚಳವಾಗಿದೆ. ಇನ್ನು ಈ ವರ್ಷದ ಶುರುವಿನಿಂದ ಇಲ್ಲಿಯವರೆಗೆ ಈ ಪೆನ್ನಿ ಸ್ಟಾಕ್ ರೂ. 8.26ರಿಂದ ರೂ. 650ಕ್ಕೆ ಏರಿದೆ. ಸುಮಾರು ಶೇ 7750ರಷ್ಟು ಏರಿಕೆಯಾಗಿದೆ.

ಹೂಡಿಕೆಯ ಮೇಲೆ ಪರಿಣಾಮ
ಗೋಪಾಲ ಪಾಲಿಪ್ಲಾಸ್ಟ್ ಷೇರಿನ ಬೆಲೆ ಇತಿಹಾಸವನ್ನು ಗಮನಿಸಿದರೆ, ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಸ್ಟಾಕ್‌ನಲ್ಲಿ ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ, ಆ 1 ಲಕ್ಷ ಇಂದು ರೂ. 88,000 ಆಗಿರುತ್ತಿತ್ತು. ಹೂಡಿಕೆದಾರರು 6 ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ 1 ಲಕ್ಷ ರೂ. ಹೂಡಿಕೆ ಮಾಡಿದ್ದು ಮತ್ತು ಇಲ್ಲಿಯವರೆಗೆ ಹಾಗೇ ಉಳಿಸಿಕೊಂಡಿದ್ದರೆ ಆ 1 ಲಕ್ಷ ಇಂದು 23.6 ಲಕ್ಷ ರೂಪಾಯಿ ಆಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು ಈ ವರ್ಷದ ಆರಂಭದಲ್ಲಿ 1 ಲಕ್ಷವನ್ನು ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿ, ತಲಾ ರೂ. 8.26ಕ್ಕೆ ಒಂದು ಷೇರಿನಂತೆ ಖರೀದಿಸಿದ್ದರೆ, ಆ 1 ಲಕ್ಷ ಇಂದು 78.50 ಲಕ್ಷ ರೂಪಾಯಿ ತಿರುಗುತ್ತಿತ್ತು. ಇನ್ನು ಹೂಡಿಕೆದಾರರು FY22ರ ಆರಂಭದಲ್ಲಿ, ಅಂದರೆ ಏಪ್ರಿಲ್ 1ರಂದು ಗೋಪಾಲ್ ಪಾಲಿಪ್ಲಾಸ್ಟ್ ಸ್ಟಾಕ್‌ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ, ಆಗ ತಲಾ ಷೇರು ರೂ. 9.10ರ ಮಟ್ಟದಲ್ಲಿ ಇದ್ದಾಗ ಷೇರನ್ನು ಖರೀದಿಸಿದ್ದರೆ ಆ 1 ಲಕ್ಷ ರೂಪಾಯಿ ಇಂದು 71 ಲಕ್ಷ ರೂಪಾಯಿ ಆಗುತ್ತಿತ್ತು.

ಇದನ್ನೂ ಓದಿ:20 ವರ್ಷದ ಹಿಂದೆ ರಾಯಲ್ ಎನ್​ಫೀಲ್ಡ್​ ಬೈಕ್ ಬದಲಿಗೆ ಈ ಕಂಪೆನಿ ಷೇರು ಖರೀದಿಸಿದ್ದರೆ ಇವತ್ತಿಗೆ ಎಷ್ಟು ಕೋಟಿ ಗೊತ್ತೆ?