AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cryptocurrency: ಈ ಕ್ರಿಪ್ಟೋಕರೆನ್ಸಿಯಲ್ಲಿ 1000 ರೂ. ಹೂಡಿದ್ದರೆ ಕೆಲ ಗಂಟೆಯಲ್ಲಿ 2.93 ಕೋಟಿ ರೂಪಾಯಿ

ಈ ಕ್ರಿಪ್ಟೋಕರೆನ್ಸಿಯಲ್ಲಿ ಮಾಡಿದ ರೂ. 1000 ಹೂಡಿಕೆ ಕೆಲ ಗಂಟೆಯಲ್ಲಿ 2.93 ಕೋಟಿ ರೂಪಾಯಿ ಆಗಿದೆ. ಆದರೆ ಇಂಥದ್ದಕ್ಕೆಲ್ಲ ಭಾರತದಲ್ಲಿ ಕಾನೂನು ಮಾನ್ಯತೆ ಇಲ್ಲ ಎಂಬುದು ಗಮನಿಸಬೇಕಾದ ಅಂಶ.

Cryptocurrency: ಈ ಕ್ರಿಪ್ಟೋಕರೆನ್ಸಿಯಲ್ಲಿ 1000 ರೂ. ಹೂಡಿದ್ದರೆ ಕೆಲ ಗಂಟೆಯಲ್ಲಿ 2.93 ಕೋಟಿ ರೂಪಾಯಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Nov 18, 2021 | 8:37 AM

ಕ್ರಿಪ್ಟೋಕರೆನ್ಸಿಗಳ ಏರಿಳಿತದ ವೇಗ ಹೇಗಿರುತ್ತದೆ ಎಂದು ತಿಳಿಸುವುದಕ್ಕೆ ನಿಮ್ಮೆದುರು ಇನ್ನೊಂದು ಉದಾಹರಣೆ ಇಡಲಾಗುತ್ತಿದೆ. ನೆನಪಿನಲ್ಲಿ ಇಡಬೇಕಾದ ಸಂಗತಿ ಏನೆಂದರೆ, ಈ ಮೂಲಕ ಅವುಗಳನ್ನು ಖರೀದಿಸಲು ಶಿಫಾರಸು ಮಾಡುವುದು ಈ ಲೇಖನದ ಉದ್ದೇಶ ಅಲ್ಲ. ಏರಿಳಿತಗಳು ಎಷ್ಟು ಅಪಾಯಕಾರಿ ಹಾಗೂ ಆಸೆ ಹುಟ್ಟಿಸುವಂತೆ ಇರುತ್ತವೆ ಎಂದು ತಿಳಿಸಬೇಕು ಎಂಬ ಗುರಿ ಈ ಲೇಖನದ್ದು. ಈ ಕ್ರಿಪ್ಟೋಕರೆನ್ಸಿಯ ಹೆಸರು ARC Governance (ARCX). ಇದು ಕೇವಲ ಗಂಟೆಗಳಲ್ಲಿ 28,00,000 ಪರ್ಸೆಂಟ್​ನಷ್ಟು ಗಳಿಕೆ ಕಂಡಿದೆ. 0.34 ಯುಎಸ್​ಡಿಯಿಂದ (ಭಾರತದ ರೂಪಾಯಿ ಲೆಕ್ಕದಲ್ಲಿ 25.28ರಿಂದ) 9,991.70 ಯುಎಸ್​ಡಿಗೆ ಅಂದರೆ (ಭಾರತದ ರೂಪಾಯಿ ಲೆಕ್ಕದಲ್ಲಿ 7,42,849.42 -7.43 ಲಕ್ಷ) ಆಗಿದೆ. ಒಂದು ವೇಳೆ ಈ ಕ್ರಿಪ್ಟೋದಲ್ಲಿ ಕೇವಲ 1000 ರೂಪಾಯಿಯನ್ನು ಏರಿಕೆಗೆ ಮುನ್ನ ಹೂಡಿಕೆ ಮಾಡಿದ್ದರೂ ಅಂತಿಟ್ಟುಕೊಳ್ಳಿ, ಈ ಹೆಚ್ಚಳದ ನಂತರ ಅದರ ಮೌಲ್ಯ ಎಷ್ಟು ಗೊತ್ತಾ? 2,93,84,866 ರೂಪಾಯಿ. ಹೌದು ನೀವು ಸರಿಯಾಗಿ ಓದುತ್ತಿದ್ದೀರಿ 2 ಕೋಟಿಯ 93 ಲಕ್ಷದ 84 ಸಾವಿರ ರೂಪಾಯಿ. ಈ ಟೋಕನ್ 24 ಗಂಟೆಗಳಲ್ಲಿ ವಹಿವಾಟು ಮಾಡಿರುವ ಪ್ರಮಾಣ 2,64,815 ಅಮೆರಿಕನ್ ಡಾಲರ್.

ಈಚೆಗೆ SQUID ಕಾಯಿನ್, ಕೋಕೋಸ್ವಾಪ್, ಎಥೆರಮ್ ಮೆಟಾ ಕೂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಪರ್ಸೆಂಟ್ ಗಳಿಕೆ ಕಂಡಿತ್ತು. ಎಥೆರಂ ಮೆಟಾ 2,13,000 ಪರ್ಸೆಂಟ್, ಕೋಕೋಸ್ವಾಪ್ 71,000 ಪರ್ಸೆಂಟ್ ಏರಿಕೆ ಕಂಡಿತ್ತು. ಈ ಹಿಂದೆಂದೂ ಕಾಣದಂಥ ಬೆಲೆ ಏರಿಕೆಗಳು ಕ್ರಿಪ್ಟೋಕರೆನ್ಸಿಯಲ್ಲಿ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಕ್ರಿಪ್ಟೋ- ಆಧಾರಿತವಾದ ವಹಿವಾಟಿನಲ್ಲಿ ಇರುವ ಭಾರೀ ಏರಿಳಿತ ಮತ್ತು ಅಪಾಯಗಳನ್ನು ಸಹ ಇದು ಸೂಚಿಸುತ್ತದೆ.

ಭಾರತದಲ್ಲಿ ಈ ಕ್ರಿಪ್ಟೋಕರೆನ್ಸಿಗಳಿಗೆ ಕಾನೂನು ಮಾನ್ಯತೆ ಇಲ್ಲ. ಇವುಗಳ ಮೂಲಕ ಏನನ್ನೂ ಖರೀದಿಸಲು ಅಥವಾ ಇದರ ಮೂಲಕ ಏನನ್ನಾದರೂ ಪಾವತಿಸಲು ಸಾಧ್ಯವಿಲ್ಲ. ಆದರೆ ಕ್ರಿಪ್ಟೋಕರೆನ್ಸಿಗಳಿಗೆ ಆಸ್ತಿ ಅಥವಾ ಚಿನ್ನದ ರೀತಿಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.

ಇದನ್ನೂ ಓದಿ: Cryptocurrency: ಈ ಕ್ರಿಪ್ಟೋದಲ್ಲಿ 24 ಗಂಟೇಲಿ ಆದ ಏರಿಕೆ ಕಾಣಲು ಬ್ಯಾಂಕ್​ಗಳ ಎಫ್​ಡಿಗೆ ಕನಿಷ್ಠ 25 ಸಾವಿರ ವರ್ಷ ಬೇಕು

ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
Dewald Brevis: ಚೊಚ್ಚಲ ಪಂದ್ಯದಲ್ಲೇ ಡೆವಾಲ್ಡ್ ಬ್ರೆವಿಸ್ ಆರ್ಭಟ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
ಸುಳಿವು ನೀಡಿದ ಕಳ್ಳರ ಕಾರು,  ಚೇಸ್ ಮಾಡಿದಾಗ ಪೊಲೀಸರ ಮೇಲೆ ಹಲ್ಲೆ
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
VIDEO: ಕಮಿಂದು ಕಮಾಲ್... ವಾಟ್ ಎ ಕ್ಯಾಚ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
ಹೀಗೂ ಉಂಟೆ... ಅಳತೆ ಮೀರಿದ ಬ್ಯಾಟ್ ಬಳಸಲು ರವೀಂದ್ರ ಜಡೇಜಾ ಸರ್ಕಸ್
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?
Daily Devotional: ಮಂಗಳವಾರ ಹಾಗೂ ಶುಕ್ರವಾರ ಹಣವನ್ನು ಕೊಡಬಹುದಾ?