ಕ್ರಿಪ್ಟೋಕರೆನ್ಸಿಗಳ ಏರಿಳಿತದ ವೇಗ ಹೇಗಿರುತ್ತದೆ ಎಂದು ತಿಳಿಸುವುದಕ್ಕೆ ನಿಮ್ಮೆದುರು ಇನ್ನೊಂದು ಉದಾಹರಣೆ ಇಡಲಾಗುತ್ತಿದೆ. ನೆನಪಿನಲ್ಲಿ ಇಡಬೇಕಾದ ಸಂಗತಿ ಏನೆಂದರೆ, ಈ ಮೂಲಕ ಅವುಗಳನ್ನು ಖರೀದಿಸಲು ಶಿಫಾರಸು ಮಾಡುವುದು ಈ ಲೇಖನದ ಉದ್ದೇಶ ಅಲ್ಲ. ಏರಿಳಿತಗಳು ಎಷ್ಟು ಅಪಾಯಕಾರಿ ಹಾಗೂ ಆಸೆ ಹುಟ್ಟಿಸುವಂತೆ ಇರುತ್ತವೆ ಎಂದು ತಿಳಿಸಬೇಕು ಎಂಬ ಗುರಿ ಈ ಲೇಖನದ್ದು. ಈ ಕ್ರಿಪ್ಟೋಕರೆನ್ಸಿಯ ಹೆಸರು ARC Governance (ARCX). ಇದು ಕೇವಲ ಗಂಟೆಗಳಲ್ಲಿ 28,00,000 ಪರ್ಸೆಂಟ್ನಷ್ಟು ಗಳಿಕೆ ಕಂಡಿದೆ. 0.34 ಯುಎಸ್ಡಿಯಿಂದ (ಭಾರತದ ರೂಪಾಯಿ ಲೆಕ್ಕದಲ್ಲಿ 25.28ರಿಂದ) 9,991.70 ಯುಎಸ್ಡಿಗೆ ಅಂದರೆ (ಭಾರತದ ರೂಪಾಯಿ ಲೆಕ್ಕದಲ್ಲಿ 7,42,849.42 -7.43 ಲಕ್ಷ) ಆಗಿದೆ. ಒಂದು ವೇಳೆ ಈ ಕ್ರಿಪ್ಟೋದಲ್ಲಿ ಕೇವಲ 1000 ರೂಪಾಯಿಯನ್ನು ಏರಿಕೆಗೆ ಮುನ್ನ ಹೂಡಿಕೆ ಮಾಡಿದ್ದರೂ ಅಂತಿಟ್ಟುಕೊಳ್ಳಿ, ಈ ಹೆಚ್ಚಳದ ನಂತರ ಅದರ ಮೌಲ್ಯ ಎಷ್ಟು ಗೊತ್ತಾ? 2,93,84,866 ರೂಪಾಯಿ. ಹೌದು ನೀವು ಸರಿಯಾಗಿ ಓದುತ್ತಿದ್ದೀರಿ 2 ಕೋಟಿಯ 93 ಲಕ್ಷದ 84 ಸಾವಿರ ರೂಪಾಯಿ. ಈ ಟೋಕನ್ 24 ಗಂಟೆಗಳಲ್ಲಿ ವಹಿವಾಟು ಮಾಡಿರುವ ಪ್ರಮಾಣ 2,64,815 ಅಮೆರಿಕನ್ ಡಾಲರ್.
ಈಚೆಗೆ SQUID ಕಾಯಿನ್, ಕೋಕೋಸ್ವಾಪ್, ಎಥೆರಮ್ ಮೆಟಾ ಕೂಡ ಕೆಲವೇ ಗಂಟೆಗಳಲ್ಲಿ ಸಾವಿರಾರು ಪರ್ಸೆಂಟ್ ಗಳಿಕೆ ಕಂಡಿತ್ತು. ಎಥೆರಂ ಮೆಟಾ 2,13,000 ಪರ್ಸೆಂಟ್, ಕೋಕೋಸ್ವಾಪ್ 71,000 ಪರ್ಸೆಂಟ್ ಏರಿಕೆ ಕಂಡಿತ್ತು. ಈ ಹಿಂದೆಂದೂ ಕಾಣದಂಥ ಬೆಲೆ ಏರಿಕೆಗಳು ಕ್ರಿಪ್ಟೋಕರೆನ್ಸಿಯಲ್ಲಿ ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಕ್ರಿಪ್ಟೋ- ಆಧಾರಿತವಾದ ವಹಿವಾಟಿನಲ್ಲಿ ಇರುವ ಭಾರೀ ಏರಿಳಿತ ಮತ್ತು ಅಪಾಯಗಳನ್ನು ಸಹ ಇದು ಸೂಚಿಸುತ್ತದೆ.
ಭಾರತದಲ್ಲಿ ಈ ಕ್ರಿಪ್ಟೋಕರೆನ್ಸಿಗಳಿಗೆ ಕಾನೂನು ಮಾನ್ಯತೆ ಇಲ್ಲ. ಇವುಗಳ ಮೂಲಕ ಏನನ್ನೂ ಖರೀದಿಸಲು ಅಥವಾ ಇದರ ಮೂಲಕ ಏನನ್ನಾದರೂ ಪಾವತಿಸಲು ಸಾಧ್ಯವಿಲ್ಲ. ಆದರೆ ಕ್ರಿಪ್ಟೋಕರೆನ್ಸಿಗಳಿಗೆ ಆಸ್ತಿ ಅಥವಾ ಚಿನ್ನದ ರೀತಿಯ ಸ್ಥಾನಮಾನ ನೀಡಬೇಕು ಎಂದು ಒತ್ತಾಯ ಕೇಳಿಬರುತ್ತಿದೆ.
ಇದನ್ನೂ ಓದಿ: Cryptocurrency: ಈ ಕ್ರಿಪ್ಟೋದಲ್ಲಿ 24 ಗಂಟೇಲಿ ಆದ ಏರಿಕೆ ಕಾಣಲು ಬ್ಯಾಂಕ್ಗಳ ಎಫ್ಡಿಗೆ ಕನಿಷ್ಠ 25 ಸಾವಿರ ವರ್ಷ ಬೇಕು