ಭರ್ಜರಿ ವೀವ್ಸ್ ಕೊಟ್ಟ ಆರ್​​ಸಿಬಿ; ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ; ಬೇರೆ ಕ್ರೀಡೆಗಳಿಗೆ ಇರೋ ವೀಕ್ಷಕರ ಬಳಗ ಎಷ್ಟು?

Comparing IPL viewership with FIFA and FIBA world cups: 18ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ವೀಕ್ಷಿಸಿದವರ ಸಂಖ್ಯೆ 100 ಕೋಟಿ ದಾಟಿದೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ. ಟಿವಿ ಮತ್ತು ಡಿಜಿಟಲ್ ಪ್ಲಾಟ್​​ಫಾರ್ಮ್​​ಗಳಲ್ಲಿ ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆಯನ್ನು ಈ ಟೂರ್ನಿ ಪಡೆದಿದೆ. ಫುಟ್ಬಾಲ್​​ಗೆ ಹೋಲಿಸಿದರೆ ಐಪಿಎಲ್ ಟೂರ್ನಿಗೆ ಕಡಿಮೆ ವೀಕ್ಷಕರಿದ್ದರೂ ಒಂದು ದೇಶಕ್ಕೆ ಸೀಮಿತವಾದ ಟೂರ್ನಿಗೆ ಇಷ್ಟು ದೊಡ್ಡ ವೀಕ್ಷಣೆ ಸಿಕ್ಕಿದ್ದು ಗಮನಾರ್ಹ.

ಭರ್ಜರಿ ವೀವ್ಸ್ ಕೊಟ್ಟ ಆರ್​​ಸಿಬಿ; ಐಪಿಎಲ್ ಇತಿಹಾಸದಲ್ಲೇ ಅತಿಹೆಚ್ಚು ವೀಕ್ಷಣೆ; ಬೇರೆ ಕ್ರೀಡೆಗಳಿಗೆ ಇರೋ ವೀಕ್ಷಕರ ಬಳಗ ಎಷ್ಟು?
ಆರ್​​ಸಿಬಿ

Updated on: Jun 19, 2025 | 7:30 PM

ಬೆಂಗಳೂರು, ಜೂನ್ 19: ಈ ಬಾರಿಯ ಟಾಟಾ ಐಪಿಎಲ್ ಟೂರ್ನಿ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣವನ್ನೇ ನೀಡಿತು. ಐಪಿಎಲ್​​ನ ಎವರ್​​ಗ್ರೀನ್ ಫೇವರಿಟ್ ಟೀಮ್ ಎನಿಸಿದ ಆರ್​​ಸಿಬಿ ಈ ಸಲ ಕಪ್ ಎತ್ತಿ ಹಿಡಿದು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದು ಮರೆಯಲಾಗದ ಸಂಗತಿ. ಈ ಬಾರಿಯ ಐಪಿಎಲ್ ಟೂರ್ನಿ (IPL 2025) ಒಂದು ಬಿಲಿಯನ್ ವೀಕ್ಷಕರನ್ನು (viewership) ಗಳಿಸಿದೆ. ಅಂದರೆ, ನೂರು ಕೋಟಿಗೂ ಅಧಿಕ ಜನರು ಐಪಿಎಲ್ ಪಂದ್ಯಗಳನ್ನು ವೀಕ್ಷಿಸಿದ್ದಾರೆ.

ಅಷ್ಟೇ ಅಲ್ಲ, ಟಿವಿ, ಡಿಜಿಟಲ್ ಇತ್ಯಾದಿ ವಿವಿಧ ಪ್ಲಾಟ್​​ಫಾರ್ಮ್​​ಗಳಲ್ಲಿ ಐಪಿಎಲ್ 2025 ಟೂರ್ನಿಯ ಪಂದ್ಯಗಳು ಒಟ್ಟು 840 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದಿವೆ. ಅಂದರೆ, 84,000 ಕೋಟಿ ನಿಮಿಷ ಅಥವಾ 1,400 ಕೋಟಿ ಗಂಟೆಗಳ ವೀಕ್ಷಣೆ ಪಡೆದಿವೆ. ಇದು ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಎನಿಸಿದೆ.

ಇದನ್ನೂ ಓದಿ: QS World University Rankings: ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್

ಐಪಿಎಲ್ ಪಂದ್ಯಗಳ ಪೈಕಿ ಆರ್​​​ಸಿಬಿ ಮತ್ತು ಪಂಜಾಬ್ ಕಿಂಗ್ಸ್ (RCB Punjab Kings final IPL match) ನಡುವಿನ ಫೈನಲ್ ಪಂದ್ಯ ಅತಿಹೆಚ್ಚು ವೀಕ್ಷಣೆ ಪಡೆದಿದೆ. ಐಪಿಎಲ್ ಮಾತ್ರವಲ್ಲ, ಯಾವುದೇ ಟಿ20 ಪಂದ್ಯಕ್ಕೆ ಸಿಕ್ಕ ಅತಿಹೆಚ್ಚು ವೀಕ್ಷಣೆ. ಆ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್​​ಗಳಲ್ಲಿ 16.9 ಕೋಟಿ ವೀಕ್ಷಕರು ನೋಡಿದ್ದಾರೆ. ಒಟ್ಟು 1,500 ಕೋಟಿ ನಿಮಿಷಗಳಷ್ಟು ವೀಕ್ಷಣೆ ಪಡೆದಿದೆ.

ಐಪಿಎಲ್ 2025 ಟೂರ್ನಿಗೆ ಸಿಕ್ಕ 840 ಬಿಲಿಯನ್ ನಿಮಿಷಗಳ ವೀಕ್ಷಣೆಯಲ್ಲಿ ಟಿವಿ ವಾಹಿನಿಗಳ ಮೂಲಕ 456 ಬಿಲಿಯನ್ ನಿಮಿಷ ಲೈವ್ ವೀಕ್ಷಣೆ ಆಗಿದೆ. ಜಿಯೋಹಾಟ್​ಸ್ಟಾರ್ ಡಿಜಿಟಲ್ ಪ್ಲಾಟ್​​ಫಾರ್ಮ್​​ನಲ್ಲಿ 384.6 ಬಿಲಿಯನ್ ನಿಮಿಷಗಳ ವೀಕ್ಷಣೆ ಆಗಿದೆ.

ಬೇರೆ ಪ್ರಮುಖ ಕ್ರೀಡೆಗಳ ವೀವರ್​​ಶಿಪ್ ದಾಖಲೆ ಎಷ್ಟಿದೆ?

  • ಐಪಿಎಲ್ 2025: 1 ಬಿಲಿಯನ್ ವೀಕ್ಷಕರು; 840 ಬಿಲಿಯನ್ ನಿಮಿಷಗಳ ವೀಕ್ಷಣೆ
  • ಐಸಿಸಿ ವರ್ಲ್ಡ್ ಕಪ್ ಕ್ರಿಕೆಟ್ 2023: 1 ಟ್ರಿಲಿಯನ್ ನಿಮಿಷಗಳಷ್ಟು ವೀಕ್ಷಣೆ.
  • ಫೀಫಾ ಫುಟ್ಬಾಲ್ ವರ್ಲ್ಡ್ ಕಪ್ 2022: ಟಿವಿಯಲ್ಲಿ 3.5 ಬಿಲಿಯನ್ ವೀಕ್ಷಕರು; ಫೈನಲ್ ಪಂದ್ಯವೊಂದಕ್ಕೇ 1.5 ಬಿಲಿಯನ್ ವೀಕ್ಷಕರು ಬಂದಿದ್ದಾರೆ.
  • ಬ್ಯಾಸ್ಕೆಟ್​​ಬಾಲ್ ವರ್ಲ್ಡ್ ಕಪ್ 2019: ಟಿವಿಯಲ್ಲಿ 3 ಬಿಲಿಯನ್ ವೀಕ್ಷಕರು.
  • ರಗ್​​​ಬಿ ವರ್ಲ್ಡ್ ಕಪ್ 2023: 80 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ.

ಇದನ್ನೂ ಓದಿ: ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯ ತಂಡಕ್ಕೆ ಟಿಮ್ ಡೇವಿಡ್ ಎಂಟ್ರಿ..!

ಫುಟ್ಬಾಲ್ ಮತ್ತು ಬ್ಯಾಸ್ಕೆಟ್​​ಬಾಲ್ ಕ್ರೀಡೆಗಳು ಕ್ರಿಕೆಟ್​ಗಿಂತ ಹೆಚ್ಚು ಜನಪ್ರಿಯವಾಗಿವೆ. ಹೆಚ್ಚು ದೇಶಗಳಲ್ಲಿ ಇದನ್ನು ನೋಡುತ್ತಾರೆ. ಆದರೂ ಕೂಡ ಐಪಿಎಲ್ ಟೂರ್ನಿಗೆ ಇಷ್ಟು ಪ್ರಚಂಡ ವೀಕ್ಷಣೆ ಸಿಕ್ಕಿದ್ದು ಸಾಧಾರಣ ವಿಷಯವಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ