ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?

Iran US Israel war aggression, know how it affects gold, silver, stock markets this week: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಭೀಕರ ಯುದ್ಧ ನಡೆಯುತ್ತಿರುವುದರ ಪರಿಣಾಮ ವಿವಿಧ ಮಾರುಕಟ್ಟೆಗಳು ತಲ್ಲಣಗೊಳ್ಳಲಿವೆ. ಚಿನ್ನ, ಬೆಳ್ಳಿ ಬೆಲೆಗಳು ಈ ವಾರ ಭರ್ಜರಿ ಏರಿಕೆ ಕಾಣಬಹುದು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಷೇರುಪೇಟೆ ಸೂಚ್ಯಂಕಗಳೂ ಕೂಡ ಹಿನ್ನಡೆ ಕಾಣುವ ನಿರೀಕ್ಷೆ ಇದೆ.

ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?
ಇರಾನ್ ಮೇಲೆ ಇಸ್ರೇಲ್ ಏರ್​ಸ್ಟ್ರೈಕ್

Updated on: Mar 01, 2026 | 2:02 PM

ನವದೆಹಲಿ, ಮಾರ್ಚ್ 1: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿಗಳನ್ನು ಎಸಗಿರುವುದು ಈಗ ಪಶ್ಚಿಮ ಏಷ್ಯಾದಲ್ಲಿ (West Asia crisis) ದೊಡ್ಡ ಸಂಘರ್ಷ ವಾತಾವರಣ ಏರ್ಪಟ್ಟಿದೆ. ಈ ಯುದ್ದ ಅನಿರೀಕ್ಷಿತವಲ್ಲವಾದರೂ, ಮಾರುಕಟ್ಟೆಗಳಿಗೂ ಈ ಸಂದರ್ಭವು ಅನಿರೀಕ್ಷಿತವಲ್ಲವಾದರೂ, ಸಾಕಷ್ಟು ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಸ್ಟ್ರೇಟ್​ಗೆ (Strait of Hormuz) ತಡೆಯಾಗುವ ಸಂಭವ ಇರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಇದೂ ಸೇರಿದಂತೆ ವಿವಿಧ ಕಾರಣಗಳಿಂದ ಜಾಗತಿಕ ಅನಿಶ್ಚಿತ ಸ್ಥಿತಿ ಹೆಚ್ಚಬಹುದು. ಇದು ಮಾರುಕಟ್ಟೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಚಿನ್ನ, ಬೆಳ್ಳಿ ಬೆಲೆ ಏರಿಕೆ ಸಾಧ್ಯತೆ

ಜಾಗತಿಕ ಅನಿಶ್ಚಿತ ಪರಿಸ್ಥಿತಿ ಉದ್ಭವವಾದರೆ ಚಿನ್ನ, ಬೆಳ್ಳಿಯಂತಹ ನೈಜ ಹಾಗೂ ಅಮೂಲ್ಯ ಲೋಹಗಳಿಗೆ ಬೇಡಿಕೆ ಹೆಚ್ಚುತ್ತದೆ. ಹೂಡಿಕೆಗಳು ಅವುಗಳತ್ತ ಹರಿದು ಹೋಗುತ್ತವೆ. ಇರಾನ್ ಅಮೆರಿಕ ಸಂಘರ್ಷ ಸಂದರ್ಭವೂ ಕೂಡ ಹೂಡಿಕೆದಾರರನ್ನು ಚಿನ್ನ, ಬೆಳ್ಳಿಗಳತ್ತ ನೂಕಬಹುದು. ಸೋಮವಾರದಿಂದ ಈ ಎರಡೂ ಲೋಹಗಳ ಬೆಲೆಯಲ್ಲಿ ಗಣನೀಯ ಏರಿಕೆ ನಿರೀಕ್ಷಿಸಬಹುದು. ಅಪರಂಜಿ ಚಿನ್ನದ ಬೆಲೆ 17,000 ರೂ ದಾಟಬಹುದು ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಕಮರ್ಷಿಯಲ್ ಗ್ಯಾಸ್ ಬೆಲೆ ಸತತ ಮೂರನೇ ತಿಂಗಳು ಏರಿಕೆ; ಬೆಂಗಳೂರು ಮೊದಲಾದೆಡೆ ಹೊಸ ಎಲ್​ಪಿಜಿ ದರಗಳಿವು

ನಿಫ್ಟಿ, ಸೆನ್ಸೆಕ್ಸ್ ಕುಸಿತ?

ಭಾರತದ ಷೇರು ಮಾರುಕಟ್ಟೆಯು ಈ ವಾರ ಗಡಗಡ ನಡುಗಬಹುದು. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಆಗಲಿದೆ ಎನ್ನುವ ಸಕಾರಾತ್ಮಕ ಬೆಳವಣಿಗೆಯ ಖುಷಿಯಲ್ಲಿದ್ದ ಹೂಡಿಕೆದಾರರಿಗೆ ಈಗ ಇರಾನ್ ಅಮೆರಿಕ ಸಂಘರ್ಷವು ಭೀತಿ ಮೂಡಿಸಬಹುದು. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಕುಸಿತ ಕಾಣಬಹುದು. ಸೆನ್ಸೆಕ್ಸ್ 25,000 ಅಂಕಗಳ ಕೆಳಗೆ ಇಳಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ತಜ್ಞರು.

ಪೆಟ್ರೋಲ್, ಡೀಸಲ್ ಬೆಲೆ ಏರಿಕೆ?

ಪಶ್ಚಿಮ ಏಷ್ಯಾದಲ್ಲಿರುವ ಹಾರ್ಮುಜ್ ಸಮುದ್ರ ಮಾರ್ಗದಲ್ಲಿ ಜಗತ್ತಿನ ಶೇ. 20ರಷ್ಟು ತೈಲ ಸಾಗಣೆ ನಡೆಯುತ್ತದೆ. ಈ ಮಾರ್ಗಕ್ಕೆ ತಡೆಯಾದರೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಬಹುದು. ಪರಿಣಾಮವಾಗಿ ತೈಲ ಬೆಲೆ ಏರಿಕೆ, ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಆಗಬಹುದು.

ಇದನ್ನೂ ಓದಿ: ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಭಾರತಕ್ಕೆ ಶಾಕ್​​: ಕಚ್ಚಾ ತೈಲ ದರ ಏರಿಕೆ ಸಾಧ್ಯತೆ?

ಇರಾನ್ ಮೇಲೆ ಅಮೆರಿಕದ ಯುದ್ಧ ಯಾಕೆ?

ಬಹುತೇಕ ಗಲ್ಫ್ ರಾಷ್​ಟ್ರಗಳನ್ನು ಹಿಡಿತಕ್ಕೆ ತೆಗೆದುಕೊಂಡಿರುವ ಅಮೆರಿಕಕ್ಕೆ ಇರಾನ್​ನಿಂದ ಹಲವು ದಶಕಗಳ ಕಾಲ ಪ್ರತಿರೋಧ ಇದೆ. ಇರಾನ್ ಪರಮಾಣು ಶಸ್ತ್ರ ತಯಾರಿಸುತ್ತಿರುವುದಕ್ಕೆ ಅಮೆರಿಕ ಆಗಿನಿಂದಲೂ ತಗಾದೆ ಎತ್ತಿದೆ. ಹೀಗಾಗಿಯೇ ಇರಾನ್ ಮೇಲೆ ಹಲವಾರು ವರ್ಷಗಳಿಂದ ಆರ್ಥಿಕ ಮತ್ತು ರಾಜಕೀಯ ದಿಗ್ಬಂಧನ ಹಾಕಿದೆ. ಇರಾನ್​ನಲ್ಲಿ ತನ್ನ ಅಣತಿಯಂತೆ ನಡೆಯುವ ಸರ್ಕಾರ ಸ್ಥಾಪಿಸುವುದು ಅಮೆರಿಕದ ಗುರಿ. ಈಗ ಇರಾನ್ ಮುಖ್ಯಸ್ಥ ಅಯತೊಲ್ಲಾ ಖಮೇನಿ ಅವರನ್ನು ಹತ್ಯೆಗೈದಿರುವ ಅಮೆರಿಕವು ಹೊಸ ನಾಯಕನನ್ನು ಎದಿರುನೋಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us