Accenture Layoffs: ಅಕ್ಸೆಂಚರ್​ನಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ 19,000 ಮಂದಿ; ಪರಿಹಾರಕ್ಕಾಗಿ 10,000 ಕೋಟಿ ಎತ್ತಿಟ್ಟ ಕಂಪನಿ

Accenture To Layoff 19,000 Employees: ಐರ್ಲೆಂಡ್ ಮತ್ತು ಅಮೆರಿಕ ಮೂಲದ ಐಟಿ ದೈತ್ಯ ಅಕ್ಸೆಂಚರ್ 19,000 ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದೆ. ಇವರ ಪರಿಹಾರಕ್ಕಾಗಿ 10,000 ಕೋಟಿ ರೂ ಹಣವನ್ನು ಎತ್ತಿಟ್ಟಿರುವುದಾಗಿ ಕಂಪನಿ ಹೇಳಿದೆ.

Accenture Layoffs: ಅಕ್ಸೆಂಚರ್​ನಲ್ಲಿ ಕೆಲಸ ಕಳೆದುಕೊಳ್ಳಲಿದ್ದಾರೆ 19,000 ಮಂದಿ; ಪರಿಹಾರಕ್ಕಾಗಿ 10,000 ಕೋಟಿ ಎತ್ತಿಟ್ಟ ಕಂಪನಿ
ಅಕ್ಸೆಂಚರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 23, 2023 | 7:02 PM

ನವದೆಹಲಿ: ಭಾರತದಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿರುವ ಜಾಗತಿಕ ಐಟಿ ಕಂಪನಿಗಳಲ್ಲಿ ಒಂದಾದ ಅಕ್ಸೆಂಚರ್ (IT company Accenture) ಕೂಡ ಲೇ ಆಫ್ ಭರಾಟೆಗೆ ಇಳಿದಿದೆ. 7 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಅಕ್ಸೆಂಚರ್ ಸುಮಾರು 19,000 ಮಂದಿಯನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಾಗಿ ತಿಳಿಸಿದೆ. ಅಂದರೆ ಅಕ್ಸೆಂಚರ್​ನಿಂದ ಶೇ. 2.5ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನ ಮಂದಿ ನಾನ್ ಬಿಲ್ಲಬಲ್ ಕಾರ್ಪೊರೇಟ್ ಫಂಕ್ಷನ್​ನಲ್ಲಿರುವ (Non-billable corporate function) ಉದ್ಯೋಗಿಗಳಾಗಿದ್ದಾರೆ. ನಾನ್ ಬಿಲ್ಲಬಲ್ ಎಂದರೆ ಕ್ಲೈಂಟ್ ಪ್ರಾಜೆಟ್​ಗಳಲ್ಲಿ ನೇರವಾಗಿ ಇಲ್ಲದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರು.

ಅಕ್ಸೆಂಚರ್ ಸಂಸ್ಥೆ ತನ್ನ ವೆಚ್ಚವನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳುತ್ತಿದೆ. 19,000 ಮಂದಿಯನ್ನು ಮನೆಗೆ ಕಳುಹಿಸುತ್ತಿದ್ದರೂ ಹೊಸ ನೇಮಕಾತಿ ಪ್ರಕ್ರಿಯೆಯೂ ಚಾಲನೆಯಲ್ಲಿರುತ್ತದೆ. ಇದರಿಂದ ಕಂಪನಿ ಇನ್ನಷ್ಟು ಬಲಯುತಗೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅಕ್ಸೆಂಚರ್ ಸಂಸ್ಥೆಯ ಹೇಳಿಕೆ.

ಹೊರಹೋಗುವ ಉದ್ಯೋಗಿಗಳಿಗೆ ಪರಿಹಾರವಾಗಿ 10,000 ಕೋಟಿ ರೂ ಎತ್ತಿಟ್ಟಿರುವ ಅಕ್ಸೆಂಚರ್

ಐರ್ಲೆಂಡ್ ಮೂಲದ ಅಕ್ಸೆಂಚರ್ ಸಂಸ್ಥೆ ಕೆಲಸದಿಂದ ತೆಗೆದುಹಾಕಲಾಗುತ್ತಿರುವ 19,000 ಉದ್ಯೋಗಿಗಳಿಗೆ ಪರಿಹಾರವಾಗಿ (Severance Package) 1.2 ಬಿಲಿಯನ್ ಡಾಲರ್ (10,000 ಕೋಟಿ ರೂ) ಹಣವನ್ನು ಎತ್ತಿಟ್ಟಿದೆ. ಅಂದರೆ ಸರಾಸರಿ ಒಬ್ಬ ಉದ್ಯೋಗಿಗೆ ಸುಮಾರು 30-70 ಲಕ್ಷ ರೂನಷ್ಟು ಪರಿಹಾರ ಸಿಗಬಹುದೆಂದು ನಿರೀಕ್ಷಿಸಬಹುದು. ಇದೇ ವೇಳೆ ಅಕ್ಸೆಂಚರ್​ನ ಭಾರತೀಯ ವಿಭಾಗದಲ್ಲಿ ಎಷ್ಟು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಮಾಹಿತಿ ಇನ್ನೂ ಬಂದಿಲ್ಲ.

ಇದನ್ನೂ ಓದಿBusinesswomen: ಕಡಿಮೆ ಹಣಕ್ಕೆ ಹೊಸ ಬಿಸಿನೆಸ್; ಉದ್ಯಮಶೀಲ ಮಹಿಳೆಯರನ್ನು ಕೈಬೀಸಿ ಕರೆಯುತ್ತಿದೆ ಫ್ರಾಂಚೈಸಿ ಉದ್ಯಮ

2024ರ ಹಣಕಾಸು ವರ್ಷ ಹಾಗೂ ಮುಂದಿನ ವರ್ಷಗಳಿಗೆ ನಮ್ಮ ವೆಚ್ಚ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೇವೆ. ನಮ್ಮ ವ್ಯವಹಾರಗಳಲ್ಲಿ ಮತ್ತು ನಮ್ಮ ಜನರಲ್ಲಿ ಹೂಡಿಕೆ ಮುಂದುವರಿಸಿ, ಬೆಳವಣಿಗೆಯ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆಎಂದು ಅಕ್ಸೆಂಚ್ ಸಂಸ್ಥೆಯ ಸಿಇಒ ಜೂಲೀ ಸ್ವೀಟ್ ಹೇಳಿದ್ದಾರೆ.

ಕುಂಠಿತಗೊಂಡ ಅಕ್ಸೆಂಚರ್ ಬೆಳವಣಿಗೆ ವೇಗ

ಅಕ್ಸೆಂಚರ್ ಕಂಪನಿ ಈ ಬಾರಿಯ ತನ್ನ ವಾರ್ಷಿಕ ಆದಾಯ ಮತ್ತು ಲಾಭದ ನಿರೀಕ್ಷೆಗಳನ್ನು ತಗ್ಗಿಸಿದೆ. ಶೇ. 11ರವರೆಗೂ ಆದಾಯ ಹೆಚ್ಚಳ ನಿರೀಕ್ಷಿಸಿದ್ದ ಅಕ್ಸೆಂಚರ್ ಇದೀಗ ಅದನ್ನು ಶೇ. 8-10ಕ್ಕೆ ತಗ್ಗಿಸಿದೆ. ಇದು ಈಗಿನ ತ್ರೈಮಾಸಿಕ ಅವಧಿಯ ಆದಾಯದ ಕುರಿತ ಅಂದಾಜು. ಈ ಅವಧಿಯಲ್ಲಿ ಅಕ್ಸೆಂಚರ್ 16.1 ರಿಂದ 16.7 ಬಿಲಿಯನ್ ಡಾಲರ್​ನಷ್ಟು ಆದಾಯವನ್ನು ನಿರೀಕ್ಷಿಸುತ್ತಿದೆ.

ಇದನ್ನೂ ಓದಿAmazon Layoffs: ಅಮೇಜಾನ್​ನಿಂದ ಇನ್ನಷ್ಟು 9,000 ಮಂದಿ ಮನೆಗೆ; ಈ ವರ್ಷ ಕೆಲಸ ಕಳೆದುಕೊಳ್ಳುವವರ ಸಂಖ್ಯೆ 27 ಸಾವಿರ

ಅಕ್ಸೆಂಚರ್​ನ ಪ್ರತೀ ಷೇರಿಗೆ ಬರುವ ಲಾಭದ ನಿರೀಕ್ಷೆಯೂ ಕಡಿಮೆ ಆಗಿದೆ. ಒಂದು ಷೇರಿಗೆ 11.20ಇಂದ 11.52ರಷ್ಟು ಇರಬಹುದೆಂದು ನಿರೀಕ್ಷಿಸಲಾಗಿದ್ದ ಗಳಿಕೆ ಇದೀಗ 10.84ರಿಂದ 11.06 ಡಾಲರ್​ಗೆ ಇಳಿದಿದೆ. ಇನ್ನು, ಅಕ್ಸೆಂಚರ್ ಸಂಸ್ಥೆ ಪ್ರತೀ ಷೇರಿಗೆ 1.12ರಷ್ಟು ತ್ರೈಮಾಸಿಕ ಲಾಭಾಂಶವನ್ನು ಷೇರುದಾರರಿಗೆ ನೀಡುವುದಾಗಿ ಘೋಷಿಸಿದೆ. ಅಮೆರಿಕನ್ ಷೇರುಪೇಟೆಯಲ್ಲಿ ಅಕ್ಸೆಂಚರ್​ನ ಷೇರು ಬೆಲೆ 253.27 ಡಾಲರ್ ಇದೆ.

ಈ ವರ್ಷ ಬಹಳಷ್ಟು ಐಟಿ ಮತ್ತು ಇಕಾಮರ್ಸ್ ಕಂಪನಿಗಳು ಉದ್ಯೋಗ ಕಡಿತದ ಪ್ರಮಾಣ ಹೆಚ್ಚಿಸಿವೆ. ಕಾಮರ್ಸ್ ದೈತ್ಯ ಅಮೇಜಾನ್ ಬರೋಬ್ಬರಿ 27 ಸಾವಿರ ಮಂದಿಗೆ ಗೇಟ್​ಪಾಸ್ ಕೊಡುತ್ತಿದೆ. ಗೂಗಲ್, ಫೇಸ್​ಬುಕ್, ಟ್ವಿಟ್ಟರ್ ಮೊದಲಾದ ಅನೇಕ ಸಂಸ್ಥೆಗಳು ಜಾಬ್ ಕಟ್ ಪ್ರಕ್ರಿಯೆ ನಡೆಸಿವೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ