ನವದೆಹಲಿ: ಜನವರಿ (January) ತಿಂಗಳಲ್ಲಿ ಬ್ಯಾಂಕ್ಗಳಿಗೆ (Bank Holidays) 11 ದಿನ ರಜೆ ಇರಲಿದೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಸೇರಿದೆ. ಕೆಲವೊಂದು ಹಬ್ಬಗಳ ರಜೆ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಅಂಥ ಸಂದರ್ಭದಲ್ಲಿ ದೇಶದ ಎಲ್ಲ ಬ್ಯಾಂಕ್ಗಳಿಗೂ ರಜೆ ಇರುವುದಿಲ್ಲ. ಆರ್ಬಿಐ (RBI) ಪ್ರತಿ ತಿಂಗಳು ಬ್ಯಾಂಕ್ಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ನೆಗೊಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆ್ಯಕ್ಟ್, ಹಾಲಿಡೇ, ರಿಯಲ್ ಟೈಂ ಗ್ರೋಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್ಸ್ ಕ್ಲೋಸಿಂಗ್ ಆಫ್ ಅಕೌಂಟ್ಸ್ ನಿಯಮದಡಿ ಬ್ಯಾಂಕ್ಗಳ ರಜೆ ಪಟ್ಟಿ ಪ್ರಕಟಿಸಲಾಗುತ್ತದೆ. ಆರ್ಬಿಐ ವೇಳಾ ಪಟ್ಟಿ ಪ್ರಕಾರ ಜನವರಿಯಲ್ಲಿ ಬ್ಯಾಂಕ್ಗಳಿಗೆ 11 ದಿನ ರಜೆ ಇರಲಿದ್ದು ಇದು ಖಾಸಗಿ, ಸರ್ಕಾರಿ ಸ್ವಾಮ್ಯದ, ವಿದೇಶಿ, ಸಹಕಾರಿ ಹಾಗೂ ಪ್ರದೇಶಿಕ ಬ್ಯಾಂಕ್ಗಳಿಗೂ ಅನ್ವಯವಾಗಲಿದೆ. ನಾಲ್ಕು ಪ್ರಾದೇಶಿಕ ಹಾಗೂ ರಾಷ್ಟ್ರೀಯ ರಜೆಗಳು ಇರಲಿವೆ. ಇದಕ್ಕನುಗುಣವಾಗಿ ಗ್ರಾಹಕರು ಬ್ಯಾಂಕಿಂಗ್ ಕೆಲಸಗಳ ಯೋಜನೆ ರೂಪಿಸಿಕೊಳ್ಳಬೇಕು ಎಂದು ಆರ್ಬಿಐ ಮನವಿ ಮಾಡಿದೆ. ಆದಾಗ್ಯೂ, ಯುಪಿಐ, ನೆಟ್ ಬ್ಯಾಂಕಿಂಗ್, ಎಟಿಎಂ ಸೇವೆ ಲಭ್ಯವಿರಲಿದೆ ಎಂದು ತಿಳಿಸಿದೆ.
Published On - 4:56 pm, Mon, 26 December 22