IPOs in January: ಈ ಜನವರಿ ತಿಂಗಳಲ್ಲಿ ಮೆಡಿ ಅಸಿಸ್ಟ್ ಸೇರಿದಂತೆ 5 ಸಂಸ್ಥೆಗಳಿಂದ ಐಪಿಒ ಬಿಡುಗಡೆ ಸಾಧ್ಯತೆ

|

Updated on: Jan 05, 2024 | 6:15 PM

Primary Capital Market: 2024ರ ಜನವರಿ ತಿಂಗಳಲ್ಲಿ ಐದು ಸಂಸ್ಥೆಗಳ ಐಪಿಒ ಬಿಡುಗಡೆ ಆಗಲಿದೆ. ಜ್ಯೋತಿ ಸಿಎನ್​ಸಿ ಆಟೊಮೇಶನ್ ಐಪಿಒ ದಿನಾಂಕ ಮಾತ್ರ ಖಚಿತವಾಗಿದೆ. ಮೆಡಿ ಅಸಿಸ್ಟ್ ಹೆಲ್ತ್​ಕೇರ್, ಮುಕ್ಕ ಪ್ರೋಟೀನ್ಸ್, ಎಸ್​ಪಿಸಿ ಲೈಫ್ ಸೈನ್ಸಸ್, ಅಲೈಡ್ ಬ್ಲೆಂಡರ್ಸ್ ಸಂಸ್ಥೆಗಳ ಐಪಿಒ ಜನವರಿಯಲ್ಲೇ ಇರಬಹುದು. ಐಪಿಒದಲ್ಲಿ ಷೇರು ಹಂಚಿಕೆ ಆದ ಬಳಿಕ ಆ ಷೇರುಗಳನ್ನು ಬಿಎಸ್​ಇ ಅಥವಾ ಎನ್​ಎಸ್​ಇಗಳಲ್ಲಿ ಲಿಸ್ಟ್ ಮಾಡಲಾಗುತ್ತದೆ. ಅಲ್ಲಿ ಆ ಷೇರುಗಳ ವಹಿವಾಟು ನಡೆಸಲು ಅವಕಾಶ ಇರುತ್ತದೆ.

IPOs in January: ಈ ಜನವರಿ ತಿಂಗಳಲ್ಲಿ ಮೆಡಿ ಅಸಿಸ್ಟ್ ಸೇರಿದಂತೆ 5 ಸಂಸ್ಥೆಗಳಿಂದ ಐಪಿಒ ಬಿಡುಗಡೆ ಸಾಧ್ಯತೆ
ಐಪಿಒ
Follow us on

ನವದೆಹಲಿ, ಜನವರಿ 5: ಕಳೆದ ವರ್ಷ (2023) ಐಪಿಒಗಳ ಸುಗ್ಗಿ ಆಗಿತ್ತು. ಅತಿಹೆಚ್ಚು ಐಪಿಒಗಳ ಆಫರ್ ಇತ್ತು. ಅನೇಕ ಐಪಿಒಗಳು ಸಮಾಧಾನಕರ ರೀತಿಯಲ್ಲಿ ಯಶಸ್ಸೂ ಕೂಡ ಪಡೆದವು. ಈ ವರ್ಷವೂ ಸಾಲು ಸಾಲು ಐಪಿಒಗಳನ್ನು ನಿರೀಕ್ಷಿಸಬಹುದು. ಬಹಳಷ್ಟು ಸಂಸ್ಥೆಗಳು ಬಂಡವಾಳ ಸಂಗ್ರಹಣೆಗೆ ಸಾರ್ವಜನಿಕರಿಗೆ ಷೇರು ಮಾರಾಟ ಮಾಡಲು ಸರದಿಯಲ್ಲಿವೆ. ಈ ವರ್ಷದ ಮೊದಲ ತಿಂಗಳು ಐದು ಕಂಪನಿಗಳ ಐಪಿಒ (IPO- Initial Public Offering) ಬಿಡುಗಡೆ ಆಗುವ ಸಾಧ್ಯತೆ ಇದೆ. ಜ್ಯೋತಿ ಸಿಎನ್​ಸಿ ಆಟೊಮೇಶನ್ ಸಂಸ್ಥೆಯ ಐಪಿಒ ದೃಢಪಟ್ಟಿದೆ. ಹಾಗೆಯೇ, ಮೆಡಿ ಅಸಿಸ್ಟ್ ಸೇರಿದಂತೆ ಇನ್ನೂ ನಾಲ್ಕು ಸಂಸ್ಥೆಗಳ ಐಪಿಒ ರಿಲೀಸ್ ಆಗಬಹುದು ಎನ್ನಲಾಗಿದೆ.

ಜ್ಯೋತಿ ಸಿಎನ್​ಸಿ ಆಟೊಮೇಶನ್ ಐಪಿಒ

ಜ್ಯೋತಿ ಸಿಎನ್​ಸಿ ಆಟೊಮೇಶನ್ ಸಂಸ್ಥೆಯ (Jyoti CNC Automation) ಆರಂಭಿಕ ಸಾರ್ವಜನಿಕ ಕೊಡುಗೆ ಜನವರಿ 9ರಿಂದ 11ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ. ಅದರ ಬೆಲೆ ಪ್ರತೀ ಷೇರಿಗೆ 315-331 ರೂ ಎಂದು ನಿಗದಿ ಮಾಡಲಾಗಿದೆ. ಕನಿಷ್ಠ ಖರೀದಿ 45 ಷೇರುಗಳಾಗಿರುತ್ತದೆ. ಇದರ ಷೇರು ಖರೀದಿಸಲು ಬೇಕಾದ ಕನಿಷ್ಠ ಹೂಡಿಕೆ 14,895 ರೂ ಆಗಿರುತ್ತದೆ.

ಮೆಡಿ ಅಸಿಸ್ಟ್ ಹೆಲ್ತ್​ಕೇರ್ ಐಪಿಒ

ಜನವರಿ ಎರಡನೇ ವಾರದಲ್ಲಿ ಇದರ (Medi Assist Healthcare) ಐಪಿಒ ಆಫರ್ ಬರಬಹುದು. 2.8 ಕೋಟಿ ಷೇರುಗಳನ್ನು ಸಾರ್ವಜನಿಕರಿಗೆ ಹಂಚಬಹುದು. ಆದರೆ, ಅದರ ಬೆಲೆಯನ್ನು ಇನ್ನೂ ಬಹಿರಂಗಗೊಳಿಸಲಾಗಿಲ್ಲ.

ಇದನ್ನೂ ಓದಿ: 100-Age Rule: 40 ವರ್ಷ ಆದ ಬಳಿಕ ಎಲ್ಲಿ ಎಷ್ಟು ಹೂಡಿಕೆ ಮಾಡಬೇಕು? ಯಾವ್ಯಾವ ವಯಸ್ಸಿಗೆ ಹೂಡಿಕೆ ಹೇಗಿರಬೇಕು? ನಿಯಮ 100 ತಿಳಿಯಿರಿ

ಮುಕ್ಕ ಪ್ರೋಟೀನ್ಸ್ ಐಪಿಒ

ಮುಕ್ಕ ಪ್ರೋಟೀನ್ಸ್ ಸಂಸ್ಥೆ (Mukka Proteins) ಕಳೆದ ವರ್ಷ ನವೆಂಬರ್​ನಲ್ಲೇ ಐಪಿಒಗಾಗಿ ಸೆಬಿ ಅನುಮತಿ ಪಡೆದಿದೆ. ಜನವರಿ ಕೊನೆಯ ವಾರದಲ್ಲಿ ಇದು ನಡೆಯಬಹುದು. 8 ಕೋಟಿ ಷೇರುಗಳನ್ನು ಹಂಚಲಾಗುತ್ತದೆ. ಇದರ ಬೆಲೆ ಇನ್ನೂ ನಿರ್ಧಾರವಾಗಿಲ್ಲ.

ಎಸ್​ಪಿಸಿ ಲೈಫ್ ಸೈನ್ಸಸ್ ಐಪಿಒ

ಎಸ್​ಪಿಸಿ ಲೈಫ್ ಸೈನ್ಸಸ್ (SPC Life Sciences) ಫಾರ್ಮಾ ಕಂಪನಿಯಾಗಿದ್ದು, ಇದೂ ಕೂಡ ಜನವರಿ ಕೊನೆಯ ವಾರದಲ್ಲಿ ಐಪಿಒ ಬಿಡುಗಡೆ ಮಾಡಬಹುದು. ಒಟ್ಟು 300 ಕೋಟಿ ರೂ ಮೊತ್ತದ 89.39 ಲಕ್ಷ ಷೇರುಗಳನ್ನು ಈ ವೇಳೆ ಸಾರ್ವಜನಿಕರಿಗೆ ಮಾರಲಾಗುತ್ತದೆ.

ಅಲೈಡ್ ಬ್ಲೆಂಡರ್ಸ್ ಐಪಿಒ

ಅಲೈಡ್ ಬ್ಲೆಂಡರ್ಸ್ ಸಂಸ್ಥೆ (Allied Blenders) ಐಪಿಒ ಮೂಲಕ ಸಾರ್ವಜನಿಕವಾಗಿ 1,000 ಕೋಟಿ ರೂ ಬಂಡವಾಳ ಸಂಗ್ರಹಣೆಯ ಗುರಿ ಹೊಂದಿದೆ. ಜನವರಿ ತಿಂಗಳಲ್ಲೇ ಇದರ ಐಪಿಒ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: LPG Users: ಎಲ್​ಪಿಜಿ ಗ್ರಾಹಕರಿಗೆ ಉಚಿತ 50 ಲಕ್ಷ ವಿಮೆ; ಕ್ಲೈಮ್ ಮಾಡುವುದು ಹೇಗೆ?

ಐಪಿಒ ಬಿಡುಗಡೆ ಬಳಿಕ ಏನು?

ಸಾರ್ವನಿಕವಾಗಿ ಬಂಡವಾಳ ಸಂಗ್ರಹಿಸಲು ಕಂಪನಿಗಳು ತಮ್ಮ ಷೇರುಪಾಲನ್ನು ಸಾರ್ವಜನಿಕರಿಗೆ ಮಾರುತ್ತವೆ. ಹೀಗೆ ಮಾರಲಾದ ಷೇರುಗಳನ್ನು ವಹಿವಾಟು ನಡೆಸಲು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುತ್ತದೆ. ಐಪಿಒ ಆಗಿ ಕೆಲ ದಿನಗಳ ಬಳಿಕ ಬಿಎಸ್​ಇ ಅಥವಾ ಎನ್​ಎಸ್​ಇನಲ್ಲಿ ಷೇರು ಲಿಸ್ಟ್ ಆಗುತ್ತದೆ. ಯಾರು ಬೇಕಾದರೂ ಈ ವಿನಿಮಯ ಕೇಂದ್ರದಲ್ಲಿ ಷೇರು ಮಾರಾಟ ಅಥವಾ ಖರೀದಿ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ