
ನವದೆಹಲಿ, ಜೂನ್ 27: ಕನ್ಸೂಮರ್ ಎಲೆಕ್ಟ್ರಾನಿಕ್ಸ್ ವಲಯದ ಜಪಾನೀ ಕಂಪನಿ ಪ್ಯಾನಸನಿಕ್ ಭಾರತದಲ್ಲಿ ಕೆಲ ಬ್ಯುಸಿನೆಸ್ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ವರದಿ ಪ್ರಕಾರ, ಭಾರತದಲ್ಲಿ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ವ್ಯವಹಾರಗಳಿಂದ ಪ್ಯಾನಸನಿಕ್ ಹೊರಬಿದ್ದಿದೆ. ಪ್ಯಾನಸನಿಕ್ನ ಹೊಸ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳು ಇನ್ಮುಂದೆ ಭಾರತದಲ್ಲಿ ಬಿಡುಗಡೆ ಆಗುವುದಿಲ್ಲ. ಆದರೆ, ಕಂಪನಿಯ ಇತರ ಉತ್ಪನ್ನಗಳು ಮುಂದುವರಿಯಲಿವೆ.
ಪ್ಯಾನಸನಿಕ್ನ ಈ ನಿರ್ಧಾರ ಭಾರತಕ್ಕೆ ಮಾತ್ರವೇ ಸದ್ಯ ಸೀಮಿತವಾಗಿದೆ. ಜಪಾನ್ ದೇಶದ ಈ ದೈತ್ಯ ಕಂಪನಿಯ ಇತರ ಉತ್ಪನ್ನಗಳಾದ ಏರ್ ಕಂಡೀಷನರ್ಸ್, ಟಿವಿ ಯಥಾಪ್ರಕಾರ ಲಭ್ಯ ಇರಲಿದೆ. ಪರ್ಸನಲ್ ಕೇರ್ ವಸ್ತುಗಳು, ಎನರ್ಜಿ ಸಲ್ಯೂಶನ್ಸ್, ಬಿ2ಬಿ ಸರ್ವಿಸ್ ಮೊದಲಾದವು ಮುಂದುವರಿಯಲಿವೆ.
ಇದನ್ನೂ ಓದಿ: ಅದಾನಿ-ಅಂಬಾನಿ ಡೀಲ್; ಗ್ಯಾಸ್ ಸ್ಟೇಷನ್ನಲ್ಲಿ ಪೆಟ್ರೋಲ್ ಸಿಗುತ್ತೆ, ಪೆಟ್ರೋಲ್ ಸ್ಟೇಷನ್ನಲ್ಲಿ ಗ್ಯಾಸ್ ಸಿಗುತ್ತೆ
ಪ್ಯಾನಸನಿಕ್ ಕಂಪನಿಯು ಹರ್ಯಾಣದ ಝಾಜ್ಜರ್ನಲ್ಲಿ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳ ತಯಾರಿಕೆಗೆ ಒಂದು ಘಟಕ ಹೊಂದಿದೆ. ಇದನ್ನು ಕಂಪನಿ ಮುಚ್ಚುತ್ತಿದೆ ಎನ್ನುವಂತಹ ಸುದ್ದಿ ಇತ್ತು. ಬಹುತೇಕ ಅದು ನಿಜ ಆಗಿದೆ. ಆದರೆ, ಈ ಘಟಕವನ್ನು ಪ್ಯಾನಸನಿಕ್ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಇತರ ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ ವಾಷಿಂಗ್ ಮೆಷೀನ್ ಮತ್ತು ಫ್ರಿಡ್ಜ್ ಉತ್ಪನ್ನಗಳನ್ನು ಈ ಘಟಕದಲ್ಲಿ ತಯಾರಿಸುವ ಸಾಧ್ಯತೆ ಇದೆ.
ಈಗಾಗಲೇ ಮಾರಾಟವಾಗಿರುವ ಪ್ಯಾನಸನಿಕ್ನ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳಿಗೆ ಸರ್ವಿಸ್ ಮುಂದುವರಿಯಲಿದೆ. ಹೊಸ ಉತ್ಪನ್ನಗಳು ಮಾತ್ರ ಬಿಡುಗಡೆ ಆಗುವುದಿಲ್ಲ.
ಪ್ಯಾನಸನಿಕ್ ಸಂಸ್ಥೆಯು ಭವಿಷ್ಯದಲ್ಲಿ ಬೆಳೆಯಬಹುದಾದ ಉತ್ಪನ್ನಗಳತ್ತ ಗಮನ ಕೇಂದ್ರೀಕರಿಸುತ್ತಿದೆ. ಹೋಮ್ ಆಟೊಮೇಶನ್, ಹೀಟಿಂಗ್ ವೆಂಟಿಲೇಶನ್, ಎಸಿ, ಬಿ2ಬಿ ಸಲ್ಯೂಶನ್ಸ್, ಎಲೆಕ್ಟ್ರಿಕಲ್ ಸಲ್ಯೂಶನ್ಸ್, ಎನರ್ಜಿ ಸಲ್ಯೂಶನ್ಸ್ ಇತ್ಯಾದಿ ಸೆಕ್ಟರ್ಗಳನ್ನು ಅದು ಟಾರ್ಗೆಟ್ ಮಾಡಿದೆ.
ಇದನ್ನೂ ಓದಿ: ಭಾರತ ಮತ್ತು ಅಮೆರಿಕ ಮಧ್ಯೆ ದೊಡ್ಡ ವ್ಯಾಪಾರ ಒಪ್ಪಂದ? ಸುಳಿವು ನೀಡಿದ ಡೊನಾಲ್ಡ್ ಟ್ರಂಪ್
ಜಾಗತಿಕವಾಗಿಯೂ ಪ್ಯಾನಸನಿಕ್ ಇದೇ ಬದಲಾವಣೆ ಮಾಡುವಂತಿದೆ. ಅಧಿಕ ಲಾಭದ ಮಾರ್ಜಿನ್ ಇರುವ ಇವಿ ಬ್ಯಾಟರಿ, ಹೋಮ್ ಆಟೊಮೇಶನ್ ಇತ್ಯಾದಿ ಕ್ಷೇತ್ರಗಳಲ್ಲಿ ಗಮನ ಹರಿಸುತ್ತಿದೆ. ಕಳೆದ ತಿಂಗಳಲ್ಲಿ (2025ರ ಮೇ) ಈ ಕಂಪನಿ ಜಾಗತಿಕವಾಗಿ 10,000 ಮಂದಿಯ ಲೇ ಆಫ್ ಮಾಡಿತ್ತು.
2021ರಲ್ಲಿ ಪ್ಯಾನಸನಿಕ್ ಸಿಂಗಾಪುರದಲ್ಲಿದ್ದ ತನ್ನ ಕಂಪ್ರೆಸರ್ ಘಟಕವನ್ನು ಮುಚ್ಚಿ, ಮಲೇಷ್ಯಾ ಮತ್ತು ಚೀನಾದಲ್ಲಿ ಅದನ್ನು ಸ್ಥಾಪಿಸಿದೆ. ಅದೇ ವರ್ಷ ಥಾಯ್ಲೆಂಡ್ನಲ್ಲಿದ್ದ ಫ್ಯಾಕ್ಟರಿಯೊಂದನ್ನು ವಿಯೆಟ್ನಾಂಗೆ ವರ್ಗಾಯಿಸಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ