Reliance Jio: 100GB ಫ್ರೀ ಡೇಟಾ: ರಿಲಯನ್ಸ್​ ಜಿಯೋದಿಂದ ಹಿಂದೆಂದೂ ನೀಡಿರದ ಬಂಪರ್ ಆಫರ್

ಹೊಸ ಬಳಕೆದಾರರಿಗಾಗಿ ಜಿಯೋ ಈ ಆಯ್ಕೆಯನ್ನು ನೀಡಿದ್ದು ಈ ಹೆಚ್​ಪಿ ಸ್ಮಾರ್ಟ್​​ ಸಿಮ್ ಲ್ಯಾಪ್​ಟಾಪ್ ಖರೀದಿ ಮಾಡಿದರೆ 100GB ಡೇಟಾ ಉಚಿತವಾಗಿ ಸಿಗಲಿದೆ. ಇದು 365 ದಿನಗಳ ವ್ಯಾಲಿಡಿಟಿಯನ್ನು ಕೂಡ ಹೊಂದಿದೆ. ಡೇಟಾ ಖಾಲಿಯಾದ ನಂತರ 64kbps ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುತ್ತದೆ. ಬೇಕಾದಲ್ಲಿ ಮೈಜಿಯೋ ಅಥವಾ ಜಿಯೋ.ಕಾಮ್ ಮೂಲಕ ಮುಂದಿನ ಹಂತಕ್ಕೆ ರಿಚಾರ್ಜ್ ಕೂಡ ಮಾಡಬಹುದು.

Reliance Jio: 100GB ಫ್ರೀ ಡೇಟಾ: ರಿಲಯನ್ಸ್​ ಜಿಯೋದಿಂದ ಹಿಂದೆಂದೂ ನೀಡಿರದ ಬಂಪರ್ ಆಫರ್
Reliance JIO
Edited By:

Updated on: Oct 08, 2026 | 12:20 PM

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ (Reliance JIO) ಈಗಾಗಲೇ ತನ್ನ ಬಳಕೆದಾರರಿಗೆ ಕಡಿಮೆ ಬೆಲೆಗೆ ಆಕರ್ಷಕ ಯೋಜನೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಕೇವಲ ಟೆಲಿಕಾಂ ಕ್ಲೇತ್ರದಿಂದ ಮಾತ್ರವಲ್ಲದೆ ಇತರೆ ವಲಯಗಳ ಮೂಲಕವೂ ಜಿಯೋ ಗ್ರಾಹಕರಿಗೆ ಮತ್ತಷ್ಟು ಹತ್ತಿರುವಾಗುತ್ತಿದೆ. ಇದೀಗ ವಿಶೇಷ ಕೊಡುಗೆಯೊಂದಿಗೆ ಜಿಯೋ ಮತ್ತೆ ಬಂದಿದ್ದು ನಿಮಗೆ ಉಚಿತವಾಗಿ ಬರೋಬ್ಬರಿ 100GB ಡೇಟಾ ನೀಡಲು ಮುಂದಾಗಿದೆ. ಪ್ರಸಿದ್ಧ ಕಂಪನಿ ಹೆಚ್​ಪಿ (HP) ಜೊತೆಗೆ ಸೇರಿರುವ ಜಿಯೋ ಸಂಸ್ಥೆ ಹೆಚ್​ಪಿ ಲ್ಯಾಪ್​ಟಾಪ್ (Laptop) ಖರೀದಿಸುವವರಿಗೆ ಈ ಆಫರ್ ದೊರೆಯಲಿದೆ. ಈ ನೂತನ ಲ್ಯಾಪ್​ಟಾಪ್​ನ ಹೆಸರು ಜಿಯೋ ಹೆಚ್​ಪಿ ಸ್ಮಾರ್ಟ್​​ ಸಿಮ್ ಲ್ಯಾಪ್​ಟಾಪ್.

ಹೊಸ ಬಳಕೆದಾರರಿಗಾಗಿ ಜಿಯೋ ಈ ಆಯ್ಕೆಯನ್ನು ನೀಡಿದ್ದು ಈ ಹೆಚ್​ಪಿ ಸ್ಮಾರ್ಟ್​​ ಸಿಮ್ ಲ್ಯಾಪ್​ಟಾಪ್ ಖರೀದಿ ಮಾಡಿದರೆ 100GB ಡೇಟಾ ಉಚಿತವಾಗಿ ಸಿಗಲಿದೆ. ಇದು 365 ದಿನಗಳ ವ್ಯಾಲಿಡಿಟಿಯನ್ನು ಕೂಡ ಹೊಂದಿದೆ. ಡೇಟಾ ಖಾಲಿಯಾದ ನಂತರ 64kbps ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸುತ್ತದೆ. ಬೇಕಾದಲ್ಲಿ ಮೈಜಿಯೋ ಅಥವಾ ಜಿಯೋ.ಕಾಮ್ ಮೂಲಕ ಮುಂದಿನ ಹಂತಕ್ಕೆ ರಿಚಾರ್ಜ್ ಕೂಡ ಮಾಡಬಹುದು. ಈ ಲ್ಯಾಪ್​ಟಾಪ್ HP 14ef1003tu ಮತ್ತು HP 14ef1002tu ಎಂಬ ಎರಡು ಮಾಡೆಲ್​ಗಳನ್ನು ಹೊಂದಿದೆ. ಇದರ ಬೆಲೆ 44,999 ರೂ. ಆಗಿದೆ.

ಈ ಆಫರ್ ಮತ್ತು ಹೆಚ್​ಪಿ ಸ್ಮಾರ್ಟ್​​ ಸಿಮ್ ಲ್ಯಾಪ್​ಟಾಪ್ ನಿಮಗೆ ಬೇಕು ಎಂದಾದಲ್ಲಿ ರಿಲಯನ್ಸ್ ಡಿಜಿಟಲ್ ಸ್ಟೋರ್​ನಲ್ಲಿ ಆಯ್ದ ಗ್ರಾಹಕರಿಗೆ ಸಿಗಲಿದೆ. ಆನ್​ಲೈನ್​ನಲ್ಲಿ ಖರೀದಿ ಮಾಡಬೇಕು ಎಂದಿದ್ದರೆ ಜಿಯೋಮಾರ್ಟ್​​​.ಕಾಮ್​ ವೆಬ್​ಸೈಟ್​ಗೆ ಬೇಟಿ ನೀಡಬೇಕು.

ಜಿಯೋದ ಆಕರ್ಷಕ ಪ್ಲಾನ್​ಗಳ ವಿವರ:

ದೇಶದ ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ಜಿಯೋದಲ್ಲಿ 151 ರೂ., 333 ರೂ., 583 ರೂ. ಮತ್ತು 783 ರೂ. ಪ್ರಿಪೇಯ್ಡ್ ಯೋಜನೆಗಳು ಆಕರ್ಷಕ ಎನಿಸಿವೆ. ಈ ಯೋಜನೆಗಳು ಮೂರು ತಿಂಗಳ ಡಿಸ್ನಿ + ಹಾಟ್ ಸ್ಟಾರ್ ಚಂದಾದಾರಿಕೆಯನ್ನು ನೀಡುತ್ತವೆ.  151 ರೂ. ಯೋಜನೆಯು ಡೇಟಾ ಮಾತ್ರ ನೀಡುತ್ತಿದ್ದು ಇದು ಬಳಕೆದಾರರಿಗೆ 8ಜಿಬಿ ಡೇಟಾವನ್ನು ಒದಗಿಸುತ್ತದೆ. ಈ ಯೋಜನೆಯ ಲಾಭ ಪಡೆಯಲು, ಬಳಕೆದಾರರಿಗೆ ಸಕ್ರಿಯ ಬೇಸ್ ಪ್ಲಾನ್ ಕೂಡ ಅಗತ್ಯವಿದೆ. ಈ ಯೋಜನೆಯು ಬಳಕೆದಾರರಿಗೆ ಡಿಸ್ನಿ + ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯ ಮೂರು ತಿಂಗಳ ಚಂದಾದಾರಿಕೆಯನ್ನು ಸಹ ನೀಡುತ್ತದೆ.

333 ರೂ. ಪ್ರಿಪೇಯ್ಡ್ ಯೋಜನೆಯೊಂದಿಗೆ ಬಳಕೆದಾರರು ದಿನಕ್ಕೆ 1.5ಜಿಬಿ ಡೇಟಾ ಮತ್ತು 28 ದಿನಗಳವರೆಗೆ 100 ಫ್ರೀ ಎಸ್ ಎಂ ಎಸ್/ದಿನದೊಂದಿಗೆ ಅನಿಯಮಿತ ಧ್ವನಿ ಕರೆಯನ್ನು ಪಡೆಯುತ್ತಾರೆ. ಜಿಯೋ ಅಪ್ಲಿಕೇಶನ್ಗಳನ್ನು ಡಿಸ್ನಿ + ಹಾಟ್ ಸ್ಟಾರ್ ಮೊಬೈಲ್ಗೆ ಮೂರು ತಿಂಗಳ ಚಂದಾದಾರಿಕೆಯೊಂದಿಗೆ ಜೋಡಿಸಲಾಗುತ್ತದೆ. ಇನ್ನು 583 ರೂ. ಪ್ಲಾನ್ ಮತ್ತು 783 ರೂ. ಪ್ರಿಪೇಯ್ಡ್ ಯೋಜನೆಗಳು ಅವುಗಳ ಮಾನ್ಯತೆಯನ್ನು ಹೊರತುಪಡಿಸಿ 333 ರೂ. ಪ್ಲಾನ್ ನಂತೆಯೇ ಇರುತ್ತವೆ. ಜಿಯೋದ ಈ ಯೋಜನೆಯಲ್ಲಿ ಬಳಕೆದಾರರು 56 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ.

Published On - 12:45 pm, Sat, 16 July 22

TV9 Web

TV9 Kannada

Read More
Loading...
Unable to load recommendations.
Follow Us