Multibagger: ಮಲ್ಟಿಬ್ಯಾಗರ್ ಆದ ಜೆಎಸ್​ಡಬ್ಲ್ಯೂ ಎನರ್ಜಿ ಷೇರು; 3 ವರ್ಷದಲ್ಲಿ ಸೂಪರ್ ಜಿಗಿತ; 1 ಲಕ್ಷಕ್ಕೆ 8 ಲಕ್ಷ ಲಾಭ; ಇನ್ನೂ ಏರುತ್ತಂತೆ ಬೆಲೆ

JSW Energy Share Price: ಜೆಎಸ್​ಡಬ್ಲ್ಯು ಎನರ್ಜಿ ಸಂಸ್ಥೆಯ ಷೇರು 2020ರ ಮೇ ತಿಂಗಳಲ್ಲಿ 39 ರೂ ಇದ್ದದ್ದು ಇದೀಗ 307 ರೂ ಬೆಲೆಯ ಮಟ್ಟಕ್ಕೆ ಬೆಳೆದಿದೆ. 3 ವರ್ಷಗಳಿಂದ ಇದು ಪಕ್ಕಾ ಮಲ್ಟಿಬ್ಯಾಗರ್ ಎನಿಸಿದೆ.

Multibagger: ಮಲ್ಟಿಬ್ಯಾಗರ್ ಆದ ಜೆಎಸ್​ಡಬ್ಲ್ಯೂ ಎನರ್ಜಿ ಷೇರು; 3 ವರ್ಷದಲ್ಲಿ ಸೂಪರ್ ಜಿಗಿತ; 1 ಲಕ್ಷಕ್ಕೆ 8 ಲಕ್ಷ ಲಾಭ; ಇನ್ನೂ ಏರುತ್ತಂತೆ ಬೆಲೆ
ಷೇರುಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 06, 2023 | 1:16 PM

ನವದೆಹಲಿ: ವಿದ್ಯುತ್ ಉತ್ಪಾದನಾ ಕ್ಷೇತ್ರದ ಜೆಎಸ್​ಡಬ್ಲ್ಯೂ ಎನರ್ಜಿ ಸಂಸ್ಥೆ (JSW Energy) ಕಳೆದ 3 ವರ್ಷಗಳಿಂದ ಅಪ್ಪಟ ಮಲ್ಟಿಬ್ಯಾಗರ್ (Multibagger) ಆಗಿ ಪರಿಣಮಿಸಿದೆ. ಫೆಬ್ರುವರಿ ಕೊನೆಯ ವಾರದಲ್ಲಿ 211 ರೂ ಇದ್ದ ಅದರ ಷೇರುಬೆಲೆ ನಾಲ್ಕೈದು ತಿಂಗಳಲ್ಲಿ ಶೇ. 50ರಷ್ಟು ಬೆಳೆದಿದೆ. ಜುಲೈ 5ರಂದು ಅದರ ಬೆಲೆ 300 ರೂ ದಾಟಿತ್ತು. ಇವತ್ತು (ಜುಲೈ 6) ಜೆಎಸ್​ಡಬ್ಲ್ಯೂ ಎನರ್ಜಿ ಸಂಸ್ಥೆಯ ಷೇರುಬೆಲೆ 307 ರೂಗೆ ಹೋಗಿದೆ. ಕಳೆದ 7 ತಿಂಗಳಲ್ಲಿ ಮೊದಲ ಬಾರಿಗೆ ಅದರ ಬೆಲೆ 300 ರೂ ಗಡಿ ದಾಟಿದೆ.

ಕಳೆದ 3 ವರ್ಷಗಳಿಂದ ಜೆಎಸ್​ಡಬ್ಲ್ಯು ಎನರ್ಜಿ ಸಂಸ್ಥೆ ಅಪೂರ್ವಾಗಿ ಬೆಳೆದಿದೆ. 2020ರ ಮೇ ತಿಂಗಳಲ್ಲಿ ಅದರ ಬೆಲೆ 39 ರೂನಷ್ಟು ಇತ್ತು. ಅಲ್ಲಿಂದೀಚೆ ಮೂರು ಹಂತಗಳಲ್ಲಿ ಷೇರುಬೆಲೆ ಹೈಜಂಪ್ ಮಾಡಿದೆ.

2020 ಮೇ ತಿಂಗಳಿಂದ 2021 ಅಕ್ಟೋಬರ್​ವರೆಗೆ ಜೆಎಸ್​ಡಬ್ಲ್ಯೂ ಎನರ್ಜಿ ಷೇರುಬೆಲೆ ಭರ್ಜರಿ ಜಿಗಿತ ಕಂಡಿತ್ತು. 39 ರೂ ಇದ್ದ ಅದರ ಬೆಲೆ 2022ರ ಅಕ್ಟೋಬರ್ 14ಕ್ಕೆ 394 ರೂಪಾಯಿಗೆ ಜಿಗಿದಿತ್ತು. 16 ತಿಂಗಳಲ್ಲಿ ಅದರ ಬೆಲೆ 10 ಪಟ್ಟು ಹೆಚ್ಚಾಗಿತ್ತು.

ಇದನ್ನೂ ಓದಿMultibagger: 1 ಲಕ್ಷ ಹಣಕ್ಕೆ 20 ವರ್ಷದಲ್ಲಿ 36 ಕೋಟಿ ಲಾಭ; ಕಜಾರಿಯಾ ಎಂಬ ವಂಡರ್ ಷೇರ್

2021ರ ಅಕ್ಟೋಬರ್​ನಿಂದ 2022ರ ಜುಲೈವರೆಗೂ ಜೆಎಸ್​ಡಬ್ಲ್ಯೂ ಎನರ್ಜಿಯ ಷೇರುಬೆಲೆ 210ಕ್ಕೆ ಕುಸಿದಿತ್ತು. ಆದರೆ 2022ರ ಜೂನ್ 17ರಿಂದ ಸೆಪ್ಟೆಂಬರ್ 2ರವರೆಗೆ ಮತ್ತೆ ಗಣನೀಯವಾಗಿ ಬೆಳೆದು ಷೇರುಬೆಲೆ 348ರುಪಾಯಿಗೆ ಏರಿತು. ನಂತರ 2022ರ ಫೆಬ್ರುವರಿ 24ರವರೆಗೆ ಕುಸಿತದ ಹಾದಿ ಹಿಡಿಯಿತು. ಷೇರುಬೆಲೆ 211 ರೂಗೆ ಇಳಿಯಿತು. ಈಗ ಮತ್ತೆ ಏರಿಕೆ ಹಾದಿಯಲ್ಲಿದೆ. ಈ ಏರಿಕೆ ಇನ್ನೂ ಗರಿಷ್ಠ ಹಂತ ಮುಟ್ಟಿಲ್ಲ ಎಂದು ತಜ್ಞರು ಹೇಳುತ್ತಾರೆ. ಇವರ ಪ್ರಕಾರ ಇನ್ನೊಂದು ತಿಂಗಳಲ್ಲಿ ಜೆಎಸ್​ಡಬ್ಲ್ಯು ಎನರ್ಜಿ ಷೇರುಬೆಲೆ 330 ರೂವರೆಗೂ ಬೆಳೆಯುವ ಸಾಧ್ಯತೆ ಇದೆ.

ಜೆಎಸ್​ಡಬ್ಲ್ಯೂ ಷೇರುಬೆಲೆ ಇತಿಹಾಸ

ಜೆಎಸ್​ಡಬ್ಲ್ಯೂ ಎನರ್ಜಿ ಲಿ ಸಂಸ್ಥೆಯ ಷೇರುಬೆಲೆ 2010 ಜನವರಿ 8ರಂದು 113.10 ರೂ ಇತ್ತು. ಆಗ ಇದರ ಷೇರಿನ ಮೇಲೆ ಯಾರಾದರೂ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 2,71,441 ರೂ ಆಗುತ್ತಿತ್ತು.

2020ರ ಮೇ ತಿಂಗಳಲ್ಲಿ ಇದರ ಷೇರುಬೆಲೆ 39 ರೂ ಇದ್ದಾಗ 1 ಲಕ್ಷ ರೂ ಹೂಡಿಕೆ ಮಾಡಿದವರಿದ್ದರೆ ಅವರ ಷೇರುಸಂಪತ್ತು ಇವತ್ತು 7.87 ಲಕ್ಷ ರೂ ಆಗುತ್ತಿತ್ತು. ಅಂದರೆ 3 ವರ್ಷದಲ್ಲಿ ಷೇರುಸಂಪತ್ತು ಹೆಚ್ಚುಕಡಿಮೆ 8 ಪಟ್ಟು ವೃದ್ದಿಸುತ್ತಿತ್ತು.

ಇದನ್ನೂ ಓದಿMultibagger Stock: ಮಿಂಚಿನಂತೆ ಏರುತ್ತಿರುವ ಡಿದೇವ್ ಪ್ಲಾಸ್ಟಿಕ್ಸ್ ಷೇರು; 1 ವರ್ಷದಲ್ಲಿ 4 ಪಟ್ಟು ಬೆಳೆದಿದೆ ಮಲ್ಟಿಬ್ಯಾಗರ್

ಜೆಎಸ್​ಡಬ್ಲ್ಯೂ ಎನರ್ಜಿ ಸಂಸ್ಥೆಯ ಷೇರನ್ನು ತಾಂತ್ರಿಕವಾಗಿ ನೋಡುವುದಾದರೆ, ಅದರ ಆರ್​ಎಸ್​ಐ (ರಿಲೇಟಿವ್ ಸ್ಟ್ರೆಂತ್ ಇಂಡೆಕ್ಸ್) 66.9ರಲ್ಲಿ ಇದೆ. ಅಂದರೆ ಸರಿ ಮಟ್ಟದಲ್ಲಿ ಅದರ ವಹಿವಾಟು ನಡೆಯುತ್ತಿರುವುದರ ಸಂಕೇತ ಅದು. ಷೇರುಮಾರುಕಟ್ಟೆ ತಜ್ಞರು ಮತ್ತು ಏಜೆನ್ಸಿಗಳ ಪ್ರಕಾರ ಇದರ ಬೆಲೆ 330 ರೂವರೆಗೂ ಹೋಗಬಹುದು.

(ಗಮನಿಸಿ: ಈ ಸುದ್ದಿಯಲ್ಲಿ ಯಾರಿಗೂ ಕೂಡ ಷೇರುಖರೀದಿಯ ಶಿಫಾರಸು ಮಾಡಲಾಗಿಲ್ಲ. ಷೇರುಬೆಲೆ ಏರಿಕೆ, ಇಳಿಕೆ, ತಜ್ಞರ ಶಿಫಾರಸನ್ನು ಮಾತ್ರ ತಿಳಿಸಲಾಗಿದೆ. ನೀವು ಹೂಡಿಕೆ ಮಾಡುವುದಿದ್ದರೆ ಷೇರು ಸಲಹೆಗಾರರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರಿಸಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ