Sign In

By signing in or creating an account, you agree with Associated Broadcasting Company's Terms & Conditions and Privacy Policy.

What If: ಒಂದು ಕಂಪನಿ ದಿಢೀರನೇ ಮುಚ್ಚಿದಾಗ ಅದರ ಷೇರುದಾರರ ಗತಿ ಏನು? ಹೂಡಿಕೆ ಮಾಡಿದ ಹಣ ಮರಳುತ್ತದಾ?

What Happens To Shareholders If Company Closes: ನೀವು ಷೇರುಹೂಡಿಕೆ ಮಾಡಿದ ಕಂಪನಿ ದಿಢೀರನೇ ಮುಚ್ಚಿಹೋದಾಗ ಷೇರುಪೇಟೆಯಿಂದ ಡೀಲಿಸ್ಟ್ ಆಗುತ್ತದೆ. ಷೇರಿಗೆ ಯಾವುದೇ ಬೆಲೆ ಇರುವುದಿಲ್ಲ. ಎಷ್ಟೇ ಕೋಟಿ ರೂ ಮೌಲ್ಯದ ಷೇರುಗಳಿದ್ದರೂ ಅದೆಲ್ಲವೂ ಶೂನ್ಯವಾಗುತ್ತದೆ.

What If: ಒಂದು ಕಂಪನಿ ದಿಢೀರನೇ ಮುಚ್ಚಿದಾಗ ಅದರ ಷೇರುದಾರರ ಗತಿ ಏನು? ಹೂಡಿಕೆ ಮಾಡಿದ ಹಣ ಮರಳುತ್ತದಾ?
ಕಂಪನಿ ಮುಚ್ಚಿಹೋದರೆ ಪರಿಣಾಮಗಳೇನು?
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 06, 2023 | 3:43 PM

ನಮ್ಮ ವಾಣಿಜ್ಯ ಲೋಕದಲ್ಲಿ ಬಹಳ ರಸವತ್ತಾದ ಮತ್ತು ಆಳಕ್ಕೆ ಹೋದಷ್ಟೂ ಬಗೆಬಗೆದು ಹಾಕುವಷ್ಟು ಕುತೂಹಲದ ಸಂಗತಿಗಳಿವೆ. ಅದರಲ್ಲೂ ಷೇರುಪೇಟೆ (Stock Market) ಎಂಬುದು ಬಹಳ ಸಂಕೀರ್ಣವಾದ ಮತ್ತು ಕಲರ್ ಕಲರ್ ಕನಸುಗಳನ್ನು ಕಟ್ಟಿಕೊಡುವ ಲೋಕ. ಷೇರುಪೇಟೆ ಬಹಳ ಮಂದಿಯಿಂದ ಬಹಳ ಮಂದಿ ಲಕ್ಷಾಧಿಪತಿಗಳಾಗಿದ್ದಾರೆ. ಲಕ್ಷಾಧಿಪತಿಗಳಾದವರು ಕೋಟ್ಯಾಧಿಪತಿಗಳಾಗಿದ್ದಾರೆ. ದಿವಂಗತ ರಮೇಶ್ ಜುಂಝುನವಾಲ ಅವರಂಥವರು ಸಾವಿರಾರು ಕೋಟಿ ರೂ ಷೇರುಸಂಪತ್ತು ಗಳಿಸಿದ್ದಾರೆ. ಈ ಸಾಧಕರ ಯಶಸ್ಸಿನ ಮಧ್ಯೆ ಷೇರುಗಳಿಂದ ನಷ್ಟಹೊಂದಿ ಬೀದಿಗೆ ಬಿದ್ದವರು ಎಲೆಮರೆಕಾಯಿಯಾಗಿ ಹೋಗಿರುತ್ತಾರೆ. ಮಲ್ಟಿಬ್ಯಾಗರ್ ಷೇರು ಎಂದು ಭಾವಿಸಿ ಹೂಡಿಕೆ ಮಾಡಿ ಕೈಸುಟ್ಟುಕೊಂಡವರು ಹಲವರು. ಒಂದು ವೇಳೆ ನಾವು ಷೇರಿನಲ್ಲಿ ಹೂಡಿಕೆ ಮಾಡಿದ ಕಂಪನಿ ದಿಢೀರನೇ ಮುಚ್ಚಿಹೋದರೆ, ಅಥವಾ ದಿವಾಳಿ ಅರ್ಜಿ (Filing Bankruptcy) ಹಾಕಿದರೆ ಏನಾಗುತ್ತದೆ? ಇಂಥ ರೀತಿಯ ಪ್ರಶ್ನೆ ಮತ್ತು ಸಂದೇಹಗಳನ್ನು ಗೂಗಲ್ ಸರ್ಚ್​ನಲ್ಲಿ ಹೇರಳವಾಗಿ ಕೇಳಲಾಗುತ್ತಿರುವುದು ಬಹಳ ಕುತೂಹಲ.

ಕಂಪನಿ ಮುಚ್ಚಿಹೋದರೆ ಷೇರುದಾರರಿಗೆ ಏನಾಗುತ್ತದೆ?

ನಾವು ಷೇರು ಹೂಡಿಕೆ ಮಾಡಿರುವ ಕಂಪನಿ ದಿಢೀರನೇ ಮುಚ್ಚಿಹೋದರೆ ಆ ಕಂಪನಿ ಷೇರುಪೇಟೆಯಿಂದ ಡೀಲಿಸ್ಟ್ ಆಗುತ್ತದೆ. ಅದರ ಷೇರುಗಳಿಗೆ ಯಾವ ಮೌಲ್ಯವೂ ಇರುವುದಿಲ್ಲ. ಅದರ ಬೆಲೆ ಶೂನ್ಯವಾಗುತ್ತದೆ.

ಮುಚ್ಚಿಹೋದ ಆ ಕಂಪನಿಯ ಆಸ್ತಿಪಾಸ್ತಿಗಳನ್ನು ಸರ್ಕಾರ ಜಫ್ತಿ ಮಾಡಿ ಹರಾಜಿನ ಮೂಲಕ ಮಾರುತ್ತದೆ. ಅದರಿಂದ ಬಂದ ಹಣವನ್ನು ಸಾಲಗಾರರಿಗೆ ಹಂಚಲಾಗುತ್ತದೆ. ಆ ಕಂಪನಿಗೆ ಸಾಲ ಕೊಟ್ಟ ಬ್ಯಾಂಕ್ ಮೊದಲಾದ ಸಂಸ್ಥೆಗಳಿಗೆ ಈ ಹಣದಲ್ಲಿ ಆದ್ಯತೆ ಸಿಗುತ್ತದೆ. ಕಂಪನಿಯ ಪ್ರೊಮೋಟರುಗಳ ವಾರಸುದಾರರಿಗೆ ಒಂದಷ್ಟು ಹಣ ಹೋಗುತ್ತದೆ. ಇದು ಬಿಟ್ಟು ಇನ್ನಷ್ಟು ಹಣ ಉಳಿದಿದ್ದರೆ ಅದನ್ನು ಷೇರುದಾರರಿಗೆ ಸಮಾನವಾಗಿ ಹಂಚಲಾಗುತ್ತದೆ. ಆದರೆ, ಸಾಮಾನ್ಯವಾಗಿ ಷೇರುದಾರರಿಗೆ ಶೇ. 10ರಷ್ಟು ಹಣ ಸಿಗುವುದೂ ಕಷ್ಟವೇ.

ಇದನ್ನೂ ಓದಿSuccess Story: ಕೃಷಿ ಮಾಡ್ತೀನಿ ಅಂತ ನಿಂತ ಮಗ; ಹೊರಗೆ ಹೋಗಿ ಸಂಪಾದಿಸು ಎಂದ ಅಪ್ಪ-ಅಮ್ಮ; ಇವತ್ತು ಆ ಮಗ ಸಿಇಒ; ಇದು ಬಾಲಸುಬ್ರಮಣಿಯನ್ ಕಥೆ

ಕಂಪನಿ ಬ್ಯಾಂಕ್ರಪ್ಸಿ ನೆರವಿಗೆ ಅರ್ಜಿ ಹಾಕಿದರೆ ಷೇರುದಾರರಿಗೆ ಏನಾಗುತ್ತದೆ?

ಒಂದು ಕಂಪನಿಯು ಸಾಲಗಾರರ ಕಾಟ ತಾಳಲಾಗದೇ ಪ್ರಾಧಿಕಾರದ ಬಳಿ ಬ್ಯಾಂಕ್ರಪ್ಸಿ ಅರ್ಜಿ ಸಲ್ಲಿಸುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಷೇರುಬೆಲೆ ತೀರಾ ಪ್ರಪಾತಕ್ಕೆ ಬೀಳುವುದು ಸಹಜ. ಬ್ಯಾಂಕ್ರಪ್ಸಿ ಅರ್ಜಿ ಅಂದರೆ ತಾನು ಸಾಲ ತೀರಿಸುವಷ್ಟು ಹಣಕಾಸು ಬಲ ಸದ್ಯಕ್ಕೆ ಹೊಂದಿಲ್ಲ. ಸಮಯಾವಕಾಶ ಕೊಟ್ಟರೆ ಹಂತ ಹಂತವಾಗಿ ಸಾಲ ತೀರಿಸುತ್ತೇನೆ ಎಂಬಿತ್ಯಾದಿ ಕೋರಿಕೆ ಮಾಡಲಾಗುತ್ತದೆ. ಇದಕ್ಕೆ ಪ್ರಾಧಿಕಾರ ಒಪ್ಪಿದರೆ ಆ ಕಂಪನಿ ಮತ್ತೆ ಚೇತರಿಸಿಕೊಳ್ಳಲು ಯತ್ನಿಸಬಹುದು.

ಇಂತಹ ಸಂದರ್ಭದಲ್ಲಿ ಕೆಲ ಕಂಪನಿಗಳು ಹಳೆಯ ಷೇರುಗಳನ್ನು ರದ್ದು ಮಾಡಿ ಹೊಸ ಷೇರು ಬಿಡುಗಡೆ ಮಾಡಬಹುದು. ಆಗ ಹಳೆದ ಷೇರುಗಳನ್ನು ಖರೀದಿಸಿದ್ದವರಿಗೆ ಏನೂ ದೊರಕುವುದಿಲ್ಲ.

ಇದನ್ನೂ ಓದಿRBI: ಮೊಬೈಲ್​ಗಿದ್ದ ಪೋರ್ಟಬಿಲಿಟಿ ಕ್ರೆಡಿಟ್ ಕಾರ್ಡ್​ಗೂ ಬರಲಿದೆಯಾ? ಆರ್​ಬಿಐ ಹೊರಡಿಸಿದ ಕರಡು ಅಧಿಸೂಚನೆಯಲ್ಲೇನಿದೆ?

ಇನ್ನೂ ಕೆಲ ಕಂಪನಿಗಳು ದಿವಾಳಿತನದಿಂದ ಚೇತರಿಸಿಕೊಳ್ಳುವಾಗ ಷೇರುಗಳನ್ನು ಹಾಗೇ ಮುಂದುವರಿಸಬಹುದು. ಆಗ ಷೇರುಬೆಲೆ ಕ್ರಮೇಣವಾಗಿ ಮೇಲೇರಿ ಷೇರುದಾರರಿಗೆ ನಿರಾಳತೆ ತರಲೂಬಹುದು.

ಷೇರುಪೇಟೆಯಿಂದ ಡೀಲಿಸ್ಟ್ ಆದ ಕಂಪನಿಗಳ ಷೇರುದಾರರಿಗೆ ಏನು ಸಿಗುತ್ತೆ?

ಬೇರೆ ಬೇರೆ ಕಾರಣಗಳಿಗೆ ಕೆಲ ಕಂಪನಿಗಳು ಷೇರುಪೇಟೆಯಿಂದ ಡೀಲಿಸ್ಟ್ ಆಗಬಹುದು. ಸ್ಟಾಕ್ ಮಾರ್ಕೆಟ್​ನಿಂದ ಡೀಲಿಸ್ಟ್ ಆಗುವ ಷೇರಿಗೆ ಯಾವುದೇ ಮೌಲ್ಯ ಇರುವುದಿಲ್ಲ. ಈ ಸಂದರ್ಭದಲ್ಲಿ ಷೇರುದಾರರು ತಮ್ಮ ಪಾಲಿನ ಷೇರುಗಳನ್ನು ಕಂಪನಿಗೆ ಮಾರಲು ಪ್ರಯತ್ನಿಸಬಹುದು. ಅದೂ ಕಂಪನಿ ಅದನ್ನು ಖರೀದಿಸಲು ಒಪ್ಪಿದರೆ ಷೇರುದಾರರ ಅದೃಷ್ಟ.

ಷೇರುಗಳ ಮೇಲೆ ಹೂಡಿಕೆ ಮಾಡುವಾಗ ಮಾರುಕಟ್ಟೆ, ಕಂಪನಿ ವಿಶ್ಲೇಷಣೆ ಮುಖ್ಯ

ಯಾವುದೇ ಕಂಪನಿಯ ಷೇರಿನ ಮೇಲೆ ಹಣ ಹೂಡಿಕೆ ಮಾಡುವ ಮೊದಲು ಆ ಕಂಪನಿಯ ವ್ಯವಹಾರ ಎಷ್ಟಿದೆ, ಅದು ಇರುವ ಕ್ಷೇತ್ರದ ಭವಿಷ್ಯ ಹೇಗಿದೆ, ಕಂಪನಿಯ ಆಡಳಿತವರ್ಗ ಯಾವುದು ಇವೇ ಮುಂತಾದ ಅಂಶಗಳನ್ನು ಗಮನಿಸುವುದು ಬಹಳ ಉತ್ತಮ ಎನ್ನುತ್ತಾರೆ ಹೂಡಿಕೆತಜ್ಞರು. ಇಂಥವನ್ನು ಅವಲೋಕಿಸಲೆಂದೇ ಏಜೆನ್ಸಿಗಳಿರುತ್ತವೆ. ಇವುಗಳ ಸಹಾಯ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:40 pm, Thu, 6 July 23

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು