AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Real Estate: ಚದರಡಿಗೆ 77,777 ರೂ.ನಂತೆ ದೆಹಲಿಯಲ್ಲಿ 18 ಸಾವಿರ ಚದರಡಿ ಆಸ್ತಿ ಖರೀದಿಸಿದ ಕೆಇಐ ಇಂಡಸ್ಟ್ರೀಸ್ ಪ್ರಮೋಟರ್

ಕೆಇಐ ಇಂಡಸ್ಟ್ರೀಸ್​ ಪ್ರವರ್ತಕರು ದೆಹಲಿಯ ಶಾಂತಿನಿಕೇತನ ಪ್ರದೇಶದಲ್ಲಿ 18 ಸಾವಿರ ಚದರಡಿ ವ್ಯಾಪ್ತಿಯಲ್ಲಿನ ಆಸ್ತಿಯನ್ನು 140 ಖೋಟಿ ರೂಪಾಯಿಗೆ ಖರೀದಿಸಿದ್ದಾರೆ.

Real Estate: ಚದರಡಿಗೆ 77,777 ರೂ.ನಂತೆ ದೆಹಲಿಯಲ್ಲಿ 18 ಸಾವಿರ ಚದರಡಿ ಆಸ್ತಿ ಖರೀದಿಸಿದ ಕೆಇಐ ಇಂಡಸ್ಟ್ರೀಸ್ ಪ್ರಮೋಟರ್
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 17, 2021 | 9:29 AM

Share

ಕೆಇಐ ಇಂಡಸ್ಟ್ರೀಸ್ ಲಿಮಿಟೆಡ್​ (KEI Industries Limited) ಪ್ರವರ್ತಕ, ಹೌಸಿಂಗ್ ವೈರ್ ಮತ್ತು ಕೇಬಲ್ ತಯಾರಕರಾದ ಅನಿಲ್ ಗುಪ್ತಾ ಅವರು ದೆಹಲಿಯ ಐಷಾರಾಮಿ ಶಾಂತಿ ನಿಕೇತನ ಪ್ರದೇಶದಲ್ಲಿ 18000 ಚದರಡಿ (2,000 ಚದರ ಗಜಗಳಷ್ಟು) ವಿಸ್ತಾರವಾದ ಆಸ್ತಿಯನ್ನು 140 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದಾರೆ ಎಂದು Zapkey.comಗೆ ದೊರಕಿರುವ ದಾಖಲೆಗಳ ಮೂಲಕ ತಿಳಿದುಬಂದಿದೆ. ಕ್ರಮಪತ್ರವನ್ನು ಅಕ್ಟೋಬರ್ 8, 2021ರಂದು ಮಾಡಲಾಗಿದೆ. ಖರೀದಿದಾರರು ಒಪ್ಪಂದದ ಮೇಲೆ 8.40 ಕೋಟಿ ರೂಪಾಯಿಗಳ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆ ಎಂದು ದಾಖಲೆಗಳಲ್ಲಿವೆ. ಆಸ್ತಿಯನ್ನು ಸುಮಂತ್ ಧಮಿಜಾ ಮತ್ತು ದಿನೇಶ್ ಧಮಿಜಾ ಅವರಿಂದ ಖರೀದಿಸಲಾಗಿದೆ. ಈ ಆಸ್ತಿಯನ್ನು 1968ರಲ್ಲಿ ಜಗನ್ ನಾಥ್ ಧಮಿಜಾ ಅವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಯಿತು ಮತ್ತು 2000ನೇ ಇಸವಿಯಲ್ಲಿ ಫ್ರೀಹೋಲ್ಡ್ ಆಗಿ ಪರಿವರ್ತಿಸಲಾಯಿತು ಎಂದು ತಿಳಿದುಬರುತ್ತದೆ.

ಅನಿಲ್ ಗುಪ್ತಾ ಅವರು ವಾಣಿಜ್ಯ ಮಾಧ್ಯಮವೊಂದಕ್ಕೆ ಈ ವ್ಯವಹಾರವನ್ನು ಖಚಿತಪಡಿಸಿದ್ದಾರೆ ಮತ್ತು ಅದನ್ನು ತಮ್ಮ ಪ್ರಾಥಮಿಕ ನಿವಾಸವಾಗಿ ಬಳಸಲು ಯೋಜಿಸಿದ್ದಾರೆ ಎಂದು ಹೇಳಿದ್ದಾರೆ. ಧಮಿಜಾ ಅವರ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕೂಡ ತಿಳಿಸಲಾಗಿದೆ. ಕೃಷ್ಣಾ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಹೆಸರಿನಲ್ಲಿ ಪಾಲುದಾರಿಕೆ ಸಂಸ್ಥೆಯಾಗಿ 1968ರಲ್ಲಿ ಸ್ಥಾಪನೆಯಾಯಿತು. ಈ ಕಂಪೆನಿಯನ್ನು 1992ರಲ್ಲಿ ಸಾರ್ವಜನಿಕ ಲಿಮಿಟೆಡ್ ಕಂಪೆನಿಯಾಗಿ ಪರಿವರ್ತಿಸಲಾಯಿತು ಮತ್ತು 1995ರಲ್ಲಿ ಷೇರು ವಿನಿಮಯ ಕೇಂದ್ರಗಳಲ್ಲಿ ಲಿಸ್ಟಿಂಗ್ ಮಾಡಲಾಯಿತು. ಭಿವಾಡಿ, ಚೋಪಾಂಕಿ, ಪತ್ರೆಡಿ ಮತ್ತು ಸಿಲ್ವಾಸ್ಸಾದಲ್ಲಿನ ಅದರ ಉತ್ಪಾದನಾ ಘಟಕಗಳಲ್ಲಿ ಸಂಸ್ಥೆಯು ವಿವಿಧ ರೀತಿಯ ಕೇಬಲ್‌ಗಳು, ಹೌಸ್ ವೈರ್‌ಗಳು ಮತ್ತು ಸ್ಟೇನ್‌ಲೆಸ್ ಸ್ಟೀಲ್ ವೈರ್‌ಗಳನ್ನು ತಯಾರಿಸುತ್ತದೆ.

ಕೆಇಐ ಕೈಗಾರಿಕೆಗಳ ಮಾರುಕಟ್ಟೆ ಮೌಲ್ಯ 9,300 ಕೋಟಿ ರೂಪಾಯಿ. ಇದು ವಿದ್ಯುತ್ ವಿತರಣಾ ಜಾಗದಲ್ಲಿ ಎಂಜಿನಿಯರಿಂಗ್, ಸಂಗ್ರಹಣೆ, ನಿರ್ಮಾಣ (ಇಪಿಸಿ) ಕೆಲಸದಲ್ಲಿ ತೊಡಗಿಸಿಕೊಂಡಿದೆ. ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ, ಟಾಟಾ ಪವರ್ ಲಿಮಿಟೆಡ್, ಎನ್‌ಟಿಪಿಸಿ ಲಿಮಿಟೆಡ್, ಲಾರ್ಸನ್ ಮತ್ತು ಟೂಬ್ರೊ ಲಿಮಿಟೆಡ್, ಸುಜ್ಲಾನ್ ಎನರ್ಜಿ ಲಿಮಿಟೆಡ್, ಮಹೀಂದ್ರಾ ಸೋಲಾರ್, ಹಿಂಡಾಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್, ಸ್ವೀಡನ್‌ನ ಎಬಿಬಿ ಗ್ರೂಪ್ ಮತ್ತು ಇಂಡಿಯನ್ ರೈಲ್ವೇಸ್ ಅದರ ಕೆಲವು ಪ್ರಮುಖ ಗ್ರಾಹಕರು.

ದಿನೇಶ್ ಧಮಿಜಾ ಒಬ್ಬ ಬ್ರಿಟಿಷ್ ಭಾರತೀಯ ಉದ್ಯಮಿ ಮತ್ತು ರಾಜಕಾರಣಿ. ಅವರು ಆನ್‌ಲೈನ್ ಟ್ರಾವೆಲ್ ಸಂಸ್ಥೆ ಇಬುಕರ್ಸ್‌ನ ಸಂಸ್ಥಾಪಕರಾಗಿದ್ದಾರೆ. ಲಂಡನ್ ಪ್ರದೇಶದಿಂದ ಯುರೋಪಿಯನ್ ಪಾರ್ಲಿಮೆಂಟ್‌ನ ಸದಸ್ಯರಾಗಿದ್ದರು. ಇನ್ನು ಸುಮಂತ್ ಧಮಿಜಾ ಹಲವಾರು ಕಂಪೆನಿಗಳ ಮಂಡಳಿಯಲ್ಲಿ ನಿರ್ದೇಶಕರಾಗಿದ್ದಾರೆ.

Zapkey.com ಸಹ-ಸಂಸ್ಥಾಪಕರಾದ ಸಂದೀಪ್ ರೆಡ್ಡಿ ಅವರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಬಿಲಿಯನೇರ್‌ಗಳ ಸಂಪತ್ತು ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ ಮತ್ತು ಅದರಲ್ಲಿ ಕೆಲವು ರಿಯಲ್ ಎಸ್ಟೇಟ್‌ಗೆ ಹರಡುತ್ತಿದೆ. ಈ ಕಾರಣಕ್ಕೆ ಐಷಾರಾಮಿ ಆಸ್ತಿಗಳ ಖರೀದಿಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ.

Southdelhiprime.comನ ರೋಹಿತ್ ಚೋಪ್ರಾ ಮಾತನಾಡಿ, ಶಾಂತಿ ನಿಕೇತನದಲ್ಲಿರುವ ಈ ಆಸ್ತಿಗೆ ಪ್ರತಿ ಚದರ ಅಡಿಗೆ 77,777 ರೂಪಾಯಿಯಂತೆ ಮಾರಾಟ ಆಗಿರುವುದು ದೆಹಲಿಯ ಐಷಾರಾಮಿ ಪ್ರದೇಶಗಳಲ್ಲಿನ ಆಸ್ತಿ ಮಾರುಕಟ್ಟೆಯು ವೇಗ ಪಡೆಯುತ್ತಿದೆ ಎಂಬುದರ ಸಂಕೇತವಾಗಿದೆ ಎನ್ನುತ್ತಾರೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್​ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ