Credit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್​ ಕಾರ್ಡ್​ ಬಳಕೆ ಮಾಡುತ್ತಿರುವವರು ಗಮನಿಸಬೇಕಾದ 5 ಅಂಶಗಳಿವು

ಒಂದಕ್ಕಿಂತ ಹೆಚ್ಚು ಕ್ರೆಡಿಟ್​ ಕಾರ್ಡ್​ಗಳನ್ನು ಬಳಸುತ್ತಿರುವವರು ಕಡ್ಡಾಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ 5 ಅಂಶಗಳನ್ನು ಇಲ್ಲಿ ಮಾಹಿತಿ ಸಹಿತ ವಿವರಿಸಲಾಗಿದೆ.

Credit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್​ ಕಾರ್ಡ್​ ಬಳಕೆ ಮಾಡುತ್ತಿರುವವರು ಗಮನಿಸಬೇಕಾದ 5 ಅಂಶಗಳಿವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Nov 17, 2021 | 1:23 PM

ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅದರಲ್ಲೂ ಕೊವಿಡ್ ಬಿಕ್ಕಟ್ಟಿನ ನಂತರ ಬಳಕೆ ಮತ್ತೂ ಹೆಚ್ಚಾಗಿದೆ. ಕ್ರೆಡಿಟ್​ ಕಾರ್ಡ್​ ತಕ್ಷಣದ ಮತ್ತು ಬಡ್ಡಿ ಇಲ್ಲದಂತೆ ಅಲ್ಪಾವಧಿಯ ಸಾಲ ದೊರೆಯುತ್ತದೆ. ಈಚಿನ ದಿನಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಡ್​ಗಳನ್ನು ತಮ್ಮ ಅನುಕೂಲಕ್ಕೆ ಬಳಸುವುದು ಈಚಿನ ದಿನಗಳಲ್ಲಿ ತುಂಬ ಸಾಮಾನ್ಯವಾದ ಸಂಗತಿ. ಆದರೆ ಹೀಗೆ ಬಳಕೆ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಹಾಗೂ ಜವಾಬ್ದಾರಿಯುತವಾಗಿ ವರ್ತಿಸಬೇಕು. ಆದ್ದರಿಂದ ಗಮನಿಸಬೇಕಾದ ಸಂಗತಿ ಏನೆಂದರೆ, ಪ್ರತಿ ಸಲ ಕ್ರೆಡಿಟ್ ಕಾರ್ಡ್ ಬಳಸುವಾಗಲೂ ಅದು ಸಾಲ ಇದ್ದಂತೆ. ಮತ್ತೊಂದು ರೀತಿಯಲ್ಲಿ ಹೇಳಬೇಕು ಅಂದರೆ, ನಿರ್ದಿಷ್ಟವಾದ ಅವಧಿಯೊಳಗೆ ಕ್ರೆಡಿಟ್​ ಕಾರ್ಡ್ ಪಡೆದ ಸಂಸ್ಥೆಗೆ ಹಣವನ್ನು ಮರುಪಾವತಿಸಬೇಕಾಗುತ್ತದೆ. ಒಂದು ವೇಳೆ ಹಾಗೆ ಹಿಂತಿರುಗಿಸುವುದಕ್ಕೆ ಆಗದಿದ್ದಲ್ಲಿ ಬಡ್ಡಿ ಬೀಳುತ್ತದೆ. ಕ್ರೆಡಿಟ್​ ಸ್ಕೋರ್​ ಮೇಲೆ ನೆಗೆಟಿವ್ ಪರಿಣಾಮ ಬೀರುತ್ತದೆ. ಹಲವು ಕಾರ್ಡ್​ಗಳನ್ನು ಬಳಸುವಾಗ ಅಪಾಯ ಹೆಚ್ಚಾಗುತ್ತದೆ. ಆದರೆ ಅದನ್ನು ಸ್ವಲ್ಪ ಹೆಚ್ಚು ಗಮನ ನೀಡಿ, ಶಿಸ್ತು ಪಾಲಿಸಿದರೆ ಸುಲಭವಾಗಿ ನಿರ್ವಹಣೆ ಮಾಡಬಹುದು.

ಒಂದಕ್ಕಿಂತ ಹೆಚ್ಚು ಕ್ರೆಡಿಟ್​ ಕಾರ್ಡ್​ಗಳನ್ನು ಬಳಸುವಾಗ ಗಮನಿಸಬೇಕಾದ 5 ಅಂಶಗಳಿವು: 1. ಬಿಲ್ಲಿಂಗ್ ಸೈಕಲ್​ಗಳನ್ನು ನೆನಪಿನಲ್ಲಿ ಇಡಬೇಕು ಎರಡು ಕಾರ್ಡ್​ಗಳು ಒಂದೇ ಬಿಲ್ಲಿಂಗ್​ ಸೈಕಲ್ ಇರಬೇಕು ಅಂತೇನಿಲ್ಲ. ಪ್ರತಿ ಕಾರ್ಡ್​​ಗೆ ಪ್ರತ್ಯೇಕ ದಿನಾಂಕಗಳು ಇರುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಆ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು, ಬಾಕಿ ಪಾವತಿಸಿದರೆ ದಂಡ ಪಾವತಿಯಿಂದ ತಪ್ಪಿಸಿಕೊಳ್ಳಬಹುದು. ಕ್ರೆಡಿಟ್​ ಕಾರ್ಡ್ ಬಾಕಿ ಪಾವತಿ ಬಗ್ಗೆ ಸಂದೇಶ ಬರುತ್ತದೆ. ಆ ಕಾರಣಕ್ಕೆ ಎಸ್ಸೆಮ್ಮೆಸ್ ಮೇಲೆ ಕಣ್ಣಿಟ್ಟಿರಬೇಕು. ಬಾಕಿ ಪಾವತಿಗೆ ದಿನಾಂಕ ಹತ್ತಿರ ಆಗುತ್ತಿದ್ದಂತೆ ಎಸ್ಸೆಮ್ಮೆಸ್ ಬರುತ್ತದೆ. ಇದಕ್ಕೆ ಪರ್ಯಾಯವಾಗಿ ಮೊಬೈಲ್​ ಫೋನ್​ನಲ್ಲೇ ಕ್ರೆಡಿಟ್ ಕಾರ್ಡ್ ಬಿಲ್​ ಪಾವತಿ ದಿನಾಂಕವನ್ನು ಟ್ರ್ಯಾಕ್ ಮಾಡುವುದಕ್ಕೆ ಆ್ಯಪ್ ಬರುತ್ತದೆ. ವಿವಿಧ ಬಿಲ್ಲಿಂಗ್ ಸೈಕಲ್​ಗಳು ಇದ್ದಾಗ ಹೆಚ್ಚಿನ ಅವಧಿ ದೊರೆಯುವಂತೆ ಕ್ರೆಡಿಟ್​ ಕಾರ್ಡ್ ಬಳಸಿ ಖರೀದಿ ಮಾಡಬಹುದು. ಇಂಥ ಲೆಕ್ಕಾಚಾರದ ಬಳಕೆಯಿಂದ ಬಾಕಿ ಪಾವತಿ ಹೊರೆ ಆಗಲ್ಲ.

2. ಒಂದೇ ಕಾರ್ಡ್ ಬಳಸುವ ಬದಲಿಗೆ ಎಲ್ಲವನ್ನೂ ಬಳಸಿ ಹಲವರ ಸ್ವಭಾವ ಹೇಗಿರುತ್ತದೆ ಅಂದರೆ, ಕ್ರೆಡಿಟ್​ ಕಾರ್ಡ್​ ಒಂದಕ್ಕಿಂತ ಹೆಚ್ಚಿಗೆ ಇದ್ದರೂ ಒಂದನ್ನೇ ಹೆಚ್ಚು ಬಳಕೆ ಮಾಡುತ್ತಾರೆ. ಇದರಿಂದಾಗಿ ಉಳಿದವುಗಳ ಬಳಕೆ ಕನಿಷ್ಠ ಅಥವಾ ಇಲ್ಲವೇ ಇಲ್ಲದಂತಾಗುತ್ತದೆ. ಹಲವು ಕ್ರೆಡಿಟ್​ ಕಾರ್ಡ್​ಗಳ ನಿಯಮ ಏನೆಂದರೆ, ವರ್ಷದಲ್ಲಿ ಇಂತಿಷ್ಟು ಎಂದು ಕನಿಷ್ಠ ಪ್ರಮಾಣದ ವೆಚ್ಚವನ್ನು ಆ ಕಾರ್ಡ್​ನಿಂದ ಮಾಡದಿದ್ದಲ್ಲಿ ವಾರ್ಷಿಕ ಶುಲ್ಕ ಹಾಕಲಾಗುತ್ತದೆ. ಮತ್ತು ವಿವಿಧ ಕ್ರೆಡಿಟ್​ ಕಾರ್ಡ್​ಗೆ ವೆಚ್ಚ ಹಂಚಿಕೆ ಆಗುವುದು ಪರಿಣಾಮಕಾರಿ ಬಳಕೆಯ ಸೂಚಕ ಆಗುತ್ತದೆ.

3. ಆಲೋಚಿಸಿ ಕಾರ್ಡ್ ಬಳಸಿ ಪ್ರತಿ ಕಾರ್ಡ್​ಗೆ ವಿಶಿಷ್ಟ ಅನುಕೂಲ ಇರುತ್ತದೆ. ಅದನ್ನು ಗಮನಿಸಿ, ಆಯಾ ಸಂದರ್ಭಕ್ಕೆ ಹಾಗೂ ಸನ್ನಿವೇಶಕ್ಕೆ ತಕ್ಕಂತೆ ಆಲೋಚಿಸಿ, ಬಳಕೆ ಮಾಡಬೇಕು. ನಿರ್ದಿಷ್ಟ ರೀಟೇಲ್ ಮಳಿಗೆಯಲ್ಲಿ ನೀವು ಬಳಸುವ ಯಾವುದಾದರೂ ಒಂದು ನಿರ್ದಿಷ್ಟ ಕಾರ್ಡ್​ಗೆ ರಿಯಾಯಿತಿ/ಅನುಕೂಲ ದೊರೆಯುತ್ತದೆ ಅಂದಾಗ ಅದನ್ನು ಬಳಸುವುದು ಉತ್ತಮ. ಅದೇ ರೀತಿ ಮಾರ್ಕೆಟ್​ಪ್ಲೇಸ್​ಗಳು, ಮರ್ಚೆಂಟ್​ಗಳು ಮತ್ತು ವಿತರಕರು ನೀಡುವ ಆಫರ್​ಗಳ ಮೇಲೆ ಯಾವ ಕ್ರೆಡಿಟ್​ ಕಾರ್ಡ್ ಬಳಸಬೇಕು ಎಂದು ನಿರ್ಧರಿಸಬೇಕು. ಆಗ ವಿಶೇಷ ಆಫರ್​ಗಳು, ರಿಯಾಯಿತಿಗಳು ಮತ್ತು ರಿವಾರ್ಡ್​ ಪಾಯಿಂಟ್​ಗಳು ದೊರೆಯುತ್ತವೆ.

4. ಎಲ್ಲ ಕ್ರೆಡಿಟ್​ ಕಾರ್ಡ್​ಗಳನ್ನು ಒಂದೆಡೆ ಇಡಬಾರದು ಒಂದೇ ವ್ಯಾಲೆಟ್ ಅಥವಾ ಬ್ಯಾಗ್​ನಲ್ಲಿ ಎಲ್ಲ ಕ್ರೆಡಿಟ್​ ಕಾರ್ಡ್​ಗಳನ್ನು ಇಡುವುದು ಅಭ್ಯಾಸ. ಆದರೆ ಸುರಕ್ಷತೆ ದೃಷ್ಟಿಯಿಂದ ಹಾಗೆ ಒಂದೆಡೆ ಇಡಬಾರದು. ಒಂದು ವೇಳೆ ಕಳುವಾದಲ್ಲಿ ಏಕ್​ದಂ ಎಲ್ಲ ಕ್ರೆಡಿಟ್​ ಕಾರ್ಡ್​ಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಕಾರ್ಡ್​ಗಳನ್ನು ಬ್ಲಾಕ್​ ಮಾಡಿಸುವುದು ಹಾಗೂ ಮರು ವಿತರಣೆ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ನಗದು ಲಭ್ಯತೆ ಹಾಗೂ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಆ ನಂತರದಲ್ಲಿ ಹಳೇ ಕಾರ್ಡ್​ ಜಾಗದಲ್ಲಿ ಹೊಸದನ್ನು ಬದಲಿಯಾಗಿ ಮಾಡುತ್ತಾ ಹೋಗುವುದು ಬಹಳ ರೇಜಿಗೆ ಕೆಲಸ. ಆದ್ದರಿಂದ ಸಾಧ್ಯವಾದಷ್ಟೂ ಯಾವ ಕಾರ್ಡ್ ಅಗತ್ಯವೋ ಅದನ್ನು ಮಾತ್ರ ತೆಗೆದುಕೊಂಡು ಹೋಗುವುದು ಉತ್ತಮ.

5. ಎಲ್ಲ ಕಾರ್ಡ್​ಗೂ ಒಂದೇ ಪಾಸ್​ವರ್ಡ್​ ತಪ್ಪಿಸಿ ಬಹಳ ಮಂದಿ ಹೇಗೆಂದರೆ, ಎಲ್ಲ ಕ್ರೆಡಿಟ್​ ಕಾರ್ಡ್​ಗೆ ಬಳಸುವ ವಹಿವಾಟಿನ ಕೋಡ್ ಒಂದೇ ಇಟ್ಟುಕೊಂಡಿರುತ್ತಾರೆ. ಇದು ಡೆಬಿಟ್​ ಕಾರ್ಡ್​ಗೂ ಅನ್ವಯ ಆಗುತ್ತದೆ. ನೆನಪಿಟ್ಟುಕೊಳ್ಳುವುದು ಇದರಿಂದ ಸುಲಭ ಎಂಬುದು ಅವರ ಉದ್ದೇಶ. ಹಾಗೆ ಮಾಡಬೇಡು. ಸುರಕ್ಷತೆ ದೃಷ್ಟಿಯಿಂದ ಬೇರೆ ಬೇರೆ ಪಾಸ್​ವರ್ಡ್​ ಇರುವುದು ಉತ್ತಮ. ಹಣಕಾಸಿನ ವಂಚನೆ ತಡೆಯುವುದಕ್ಕೆ ಇದು ಸಹಾಯಕಾರಿ. ಕ್ರೆಡಿಟ್​ ಕಾರ್ಡ್ ಬಳಕೆದಾರರ ಅನುಕೂಲಕ್ಕೆ ಅಂತಲೇ ಇದೆ. ಆದರೆ ಅದನ್ನು ಹೇಗೆ ಬಳಸುತ್ತಿರು ಎಂಬುದು ಮುಖ್ಯವಾಗುತ್ತದೆ. ಈಗಾಗಲೇ ತಿಳಿಸಿರುವ ಹಾಗೆ, ಒಂದಕ್ಕಿಂತ ಹೆಚ್ಚು ಕಾರ್ಡ್​ ಬಳಸುವವರು ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು

Credit Card: ಕ್ರೆಡಿಟ್ ಕಾರ್ಡ್ ಮಿತಿ ಜಾಸ್ತಿ ಇರುವುದರಿಂದ ಆಗುವ ಲಾಭಗಳೇನು? ಇಲ್ಲಿದೆ ಮಾಹಿತಿ

Published On - 1:22 pm, Wed, 17 November 21

ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ