Nirmala Sitharaman: ಆಮದು ವಸ್ತುಗಳ ಮೇಲಿನ ಅವಲಂಬನೆ ಕಡಿಮೆಯಾಗಿ, ಸ್ವಾವಲಂಬಿಗಳಾಗಲು ಸಚಿವೆ ನಿರ್ಮಲಾ ಕರೆ
ಆಮದು ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಆಗಬೇಕು ಹಾಗೂ ಸ್ವಾವಲಂಬನೆ ಜಾಸ್ತಿ ಆಗಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಿಐಐ ಸಮಾವೇಶದಲ್ಲಿ ಕರೆ ಸಲಹೆ ನೀಡಿದ್ದಾರೆ.
ಆಮದು ವಸ್ತುಗಳು, ಅದರಲ್ಲೂ ವಿಶೇಷವಾಗಿ ಅಗತ್ಯ ವಸ್ತುಗಳಿಗಾಗಿ ಆಮದು ವಸ್ತುಗಳ ಮೇಲಿನ ಅವಲಂಬನೆ ಕಡಿಮೆ ಆಗಬೇಕು ಹಾಗೂ ಹೆಚ್ಚು ಸ್ವಾವಲಂಬಿಗಳಾಗಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒತ್ತಿ ಹೇಳಿದ್ದಾರೆ. ಕೊರೊನಾ ಬಿಕ್ಕಟ್ಟಿನಿಂದ ಪೂರೈಕೆಗೆ ಸಮಸ್ಯೆ ಆದ ಮೇಲೆ ಇದು ಹೆಚ್ಚಾಗಿದೆ. ಸಿಐಐ ಬುಧವಾರದಂದು ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ನಿರ್ಮಲಾ, ದೇಶವು ಜಾಗತಿಕ ಮೌಲ್ಯದ ಸರಣಿಯ ಜತೆಗೆ ಜೋಡಣೆ ಆಗಲು ಬಯಸುತ್ತಿದ್ದರೂ ಅವುಗಳಿಂದ ಎದುರಾಗುವ ಅಪಾಯವನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.
ಆರ್ಥಿಕತೆ ಬಗ್ಗೆ ಮಾತನಾಡಿದ ಸಚಿವೆ, ಕೊರೊನಾ ಬಿಕ್ಕಟ್ಟಿನಿಂದ ಅದು ತೀಕ್ಷ್ಣವಾಗಿ ಚೇತರಿಕೆ ಕಂಡಿರುವುದರಿಂದಲೇ ಪಾರಮ್ಯವನ್ನು ಅಂದಾಜು ಮಾಡಬಹುದು ಎಂದಿದ್ದಾರೆ. ಕೊರೊನಾ ಬಿಕ್ಕಟ್ಟಿನ ಹೊರತಾಗಿಯೂ ಈಗಲೂ ಭಾರತದ ಆರ್ಥಿಕತೆಯು ಜಾಗತಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಆಗಿದೆ ಎಂದು ಹೇಳಿದ್ದಾರೆ. ಬೆಳೆಯುತ್ತಿರುವ ಆರ್ಥಿಕ ಚಟುವಟಿಕೆಗೆ ವಾಹನಗಳ ಮಾರಾಟ ಸಹ ಒಂದು ಪ್ರಮುಖ ಸೂಚಕ. ಅದು ಇಳಿಕೆಯಲ್ಲಿ ಇದ್ದರೂ ಅದಕ್ಕೆ ಕಾರಣ ಸೆಮಿಕಂಡಕ್ಟರ್ನ ಕೊರತೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
“ಸೆಮಿಕಂಡಕ್ಟರ್ ಕೊರತೆ ಮತ್ತು ಶಿಪ್ಪಿಂಗ್ ಕಂಟೇನರ್ ಕೊರತೆ ಇರದಿದ್ದಲ್ಲಿ ಭಾರತದಲ್ಲಿ ವಾಹನ ಮಾರಾಟವು ಉತ್ತಮವಾಗಿರುತ್ತಿತ್ತು,” ಎಂದು ನಿರ್ಮಲಾ ಹೇಳಿದ್ದಾರೆ. ಇನ್ನೂ ಮುಂದುವರಿದು ಮಾತನಾಡಿರುವ ಸಚಿವೆ, ಮೂಲಸೌಕರ್ಯದ ಮೇಲಿನ ಖರ್ಚು ಪ್ರಮುಖ ವಿಚಾರ ಆಗಿದ್ದು, ಸರ್ಕಾರದ ಎಲ್ಲ ಇಲಾಖೆಗಳು ಆ ಬಗ್ಗೆ ಗಮನ ಹರಿಸುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: Nirmala Sitharaman In US: ಭಾರತದಲ್ಲಿ ಹೂಡಿಕೆ ಮಾಡಲು ಅಮೆರಿಕದ ಸಿಇಒಗಳಿಗೆ ನಿರ್ಮಲಾ ಸೀತಾರಾಮನ್ ಆಹ್ವಾನ
Published On - 8:31 pm, Wed, 17 November 21