Nandini Ghee: ನಂದಿನಿ ತುಪ್ಪ ದರ 30 ರೂ ಹೆಚ್ಚಳ, ಹಾಲಿನ ಬೆಲೆ ಏರಿಕೆಗೆ ನಿರ್ಣಯ

ಆಗಸ್ಟ್‌ ತಿಂಗಳಲ್ಲಿ ಒಂದು ಲೀಟರ್‌ ನಂದಿನಿ ತುಪ್ಪದ ದರ ಸುಮಾರು ₹ 450 ಇತ್ತು. ಇದೀಗ ಹೊಸ ಪರಿಷ್ಕರಣೆಯಂತೆ ಪ್ರತಿ ಲೀಟರ್‌ಗೆ ₹ 570 ಮಾಡಲಾಗಿದೆ.

Nandini Ghee: ನಂದಿನಿ ತುಪ್ಪ ದರ  30 ರೂ ಹೆಚ್ಚಳ, ಹಾಲಿನ ಬೆಲೆ ಏರಿಕೆಗೆ ನಿರ್ಣಯ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 12, 2022 | 7:28 AM

ಬೆಂಗಳೂರು: ‘ನಂದಿನಿ’ ಬ್ರಾಂಡ್​ನ ಅಡಿಯಲ್ಲಿ ಹಲವು ಉತ್ಪನ್ನಗಳನ್ನು ಮಾರಾಟ ಮಾಡುವ ‘ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ ’ವು (Karnataka Milk Federation – KMF) ತುಪ್ಪದ ಬೆಲೆಯನ್ನು ಹೆಚ್ಚಿಸಿದೆ. ಒಂದು ಲೀಟರ್ ತುಪ್ಪದ ಬೆಲೆಯು ₹ 570 ಆಗಿದೆ. ಹಾಲಿನ ಬೆಲೆ ಹೆಚ್ಚಿಸಲು ಕೆಎಂಎಫ್​ನ 14  ಜಿಲ್ಲೆಗಳ ಹಾಲು ಒಕ್ಕೂಟಗಳು ಬೆಲೆ ಹೆಚ್ಚಿಸಲು ನಿರ್ಣಯ ತೆಗೆದುಕೊಂಡಿವೆ. ಈ ಸಂಬಂಧ ಮುಖ್ಯಮಂತ್ರಿ ಕಚೇರಿಗೆ ಕಡತ ರವಾನಿಸಿದ್ದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಒತ್ತಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಅನುಮೋದನೆ ನೀಡದಿದ್ದರೂ, ತನ್ನ ಅಧಿಕಾರ ಬಳಸಿಕೊಂಡು ಕೆಎಂಎಫ್ ಅಧ್ಯಕ್ಷರು ಹಾಲಿನ ಬೆಲೆ ಎರಿಕೆಯನ್ನೂ ಘೋಷಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ನಂದಿನ ತುಪ್ಪದ ದರ ಹೆಚ್ಚಳ

ನಂದಿನ ತುಪ್ಪದ ದರವು ಸೋಮವಾರದಿಂದ (ಸೆ.12) ಹೆಚ್ಚಾಗಿದೆ. ಕಳೆದ ಸುಮಾರು ಒಂದು ತಿಂಗಳಿನಿಂದ ತುಪ್ಪದ ಬೆಲೆಯನ್ನು ನಂದಿನಿ ನಿರಂತರವಾಗಿ ಹೆಚ್ಚಿಸುತ್ತಿದೆ. ಆಗಸ್ಟ್‌ ತಿಂಗಳಲ್ಲಿ ಒಂದು ಲೀಟರ್‌ ನಂದಿನಿ ತುಪ್ಪದ ದರ ಸುಮಾರು 450 ರೂ. ಇತ್ತು. ಬಳಿಕ ಸೆಪ್ಟೆಂಬರ್‌ 10ರ ವೇಳೆಗೆ ಈ ದರ 518.18 ರೂ. ಗೆ ಏರಿದೆ. ಆದ್ರೆ ಇದೀಗ ಹೊಸ ಪರಿಷ್ಕರಣೆಯಂತೆ ಪ್ರತಿ ಲೀಟರ್‌ಗೆ 570 ರೂ. ಮಾಡಲಾಗಿದೆ. ಕಳೆದ ಒಂದು ತಿಂಗಳಿಂದ ಈಚೆಗೆ ಹಂತಹಂತವಾಗಿ ಬೆಲೆ ಏರಿಕೆಯಾಗಿದ್ದು, ಒಂದು ತಿಂಗಳಲ್ಲಿ ಸುಮಾರು ₹ 100ರಷ್ಟು ಹೆಚ್ಚಾದಂತೆ ಆಗಿದೆ.

200 ಮಿಲೀ ತುಪ್ಪದ ಸ್ಯಾಶೆ ದರವು ₹ 113.64 ರಿಂದ ₹ 125ಕ್ಕೆ, 200 ಎಂಎಲ್‌ ಪೆಟ್‌ ಜಾರ್‌ ದರವು ₹ 122.73 ರಿಂದ ₹ 135ಕ್ಕೆ ಏರಿಕೆಯಾಗಿದೆ. ಅರ್ಧ ಲೀಟರ್‌ ಸ್ಯಾಶೆ ₹ 259.09 ರಿಂದ ₹ 285ಕ್ಕೆ ಹೆಚ್ಚಾಗಿದೆ. ಅರ್ಧ ಲೀಟರ್‌ ಪೆಟ್‌ ಜಾರ್‌ ದರವು ಈ ಹಿಂದೆ ₹ 268 ಇತ್ತು. ಈಗ ₹ 295ಕ್ಕೆ ಹೆಚ್ಚಾಗಿದೆ.

ಒಂದು ಲೀಟರ್‌ ಸ್ಯಾಶೆ ದರ ₹ 518.18 ರಿಂದ ₹ 570ಕ್ಕೆ ಹಾಗೂ  1 ಲೀಟರ್‌ ಪೆಟ್‌ ಜಾರ್‌ ದರವು ₹ 536.36 ರಿಂದ ₹ 590ಕ್ಕೆ ಹೆಚ್ಚಾಗಿದೆ. 5 ಲೀಟರ್‌ ಪೆಟ್‌ ಜಾರ್‌ ದರವು ₹ 2,637.61 ರಿಂದ ₹ 2,875ಕ್ಕೆ ಏರಿಕೆ ಕಂಡಿದೆ. 15 ಕೆಜಿ ತುಪ್ಪದ ಟಿನ್ ದರ ₹ 9,112.15 ಇತ್ತು. ಇನ್ನು ಮುಂದೆ ಇದು ₹ 9,750ಕ್ಕೆ ಮಾರಾಟವಾಗಲಿದೆ. ಇದು ಶೇ 12ರ ಜಿಎಸ್​ಟಿ ಸೇರಿರುವ ಗರಿಷ್ಠ ಮಾರಾಟ ದರವಾಗಿದೆ.

ಹಾಲಿನ ದರ ಹೆಚ್ಚಳಕ್ಕೆ ಮುಂದಾದ ಕೆಎಂಎಫ್

ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿರುವ ಕೆಎಂಎಫ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಅನುಮೋದನೆ ಇಲ್ಲದಿದ್ದರೂ ಹಾಲಿನ ಬೆಲೆಯನ್ನು ಒಂದು ಲೀಟರ್​ಗೆ 3 ರೂಪಾಯಿ ಹೆಚ್ಚಿಸಲು ಮುಂದಾಗಿದೆ. ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿನಿಂದ ಕೆಎಂಎಫ್‌ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದರೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೀಗಾಗಿ ಅಧ್ಯಕ್ಷರು ತಮ್ಮ ಅಧಿಕಾರ ದರ ಏರಿಕೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ಕಳೆದ ಶುಕ್ರವಾರ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆದ ಕೆಎಂಎಫ್‌ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಕೆಎಂಎಫ್‌ನ ಎಲ್ಲ 14 ಜಿಲ್ಲಾ ಹಾಲು ಒಕ್ಕೂಟಗಳು ಹಾಲಿನ ದರ ಹೆಚ್ಚಳ ಮಾಡುವುದಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಲಾಗಿದೆ.

ಕೆಎಂಎಫ್ ಜಾರಿಗೊಳಿಸಿರುವ ಹಲವು ಯೋಜನೆಗಳಿಗೆ ಸರ್ಕಾರದ ಆರ್ಥಿಕ ನೆರವು ಇದೆ. ಹೀಗಾಗಿ ಬೆಲೆ ಹೆಚ್ಚಳ ಸೇರಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ ರಾಜ್ಯ ಸರ್ಕಾರದ ಅನುಮೋದನೆ ಪಡೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಇರುವ ಅಧಿಕಾರವನ್ನು ಬಳಸಿಕೊಂಡು ದರ ಹೆಚ್ಚಳದ ಆದೇಶ ಮಾಡಬೇಕು ಎಂದು ಒಕ್ಕೂಟಗಳು ಅಧ್ಯಕ್ಷರ ಮೇಲೆ ಒತ್ತಡ ಹೇರಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:03 am, Mon, 12 September 22

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ