ಭಾರತದ ವಿವಿಧ ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ಒದಗಿಸಲಾಗುತ್ತಿದೆ. ದೇಶಾದ್ಯಂತ ಆರು ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳಲ್ಲಿ ವೈಫೈ ಸರ್ವಿಸ್ ಸಿಗುತ್ತದೆ. ಭಾರತೀಯ ರೈಲ್ವೇಸ್ಗೆ ಸೇರಿದ ರೀಟೇಲ್ ಬ್ರಾಡ್ಬ್ಯಾಂಡ್ ಸೇವೆ ಒದಗಿಸುವ ರೇಲ್ಟೆಲ್ (RailTel) ಎಂಬ ಸಂಸ್ಥೆ ರೇಲ್ವೈರ್ (RailWire) ಎಂಬ ವೈಫೈ ಇಂಟರ್ನೆಟ್ ಸೌಲಭ್ಯ ಒದಗಿಸುತ್ತದೆ. ರೈಲ್ವೆ ನಿಲ್ದಾಣದ ಅಂಗಣದಲ್ಲೊಳಗೆ ಮಾತ್ರವೇ ಈ ವೈಫೈ ಸರ್ವಿಸ್ ಸಿಗುವುದು. ರೈಲಿನಲ್ಲಿ ಪ್ರಯಾಣಿಸುವಾಗ ವೈಫೈ ಬಳಕೆ ಸಾಧ್ಯವಿಲ್ಲ.
ರೈಲ್ವೆ ಸ್ಟೇಷನ್ನೊಳಗೆ ಅರ್ಧಗಂಟೆ ಕಾಲ ವೈಫೈ ಅನ್ನು ಉಚಿತವಾಗಿ ಬಳಸಬಹುದು. ಹೆಚ್ಚಿನ ಇಂಟರ್ನೆಟ್ ಬಳಕೆ ಬೇಕೆಂದರೆ ರೈಲ್ವೈರ್ನ ವಿವಿಧ ಇಂಟರ್ನೆಟ್ ಪ್ಲಾನ್ಗಳನ್ನು ಖರೀದಿಸಬೇಕಾಗುತ್ತದೆ. ಉಚಿತವಾಗಿ ಸಿಗುವ ವೈಫೈ ಇಂಟರ್ನೆಟ್ನ ವೇಗ 1 ಎಂಬಿಪಿಎಸ್ವರೆಗೂ ಇರುತ್ತದೆ. ಹೆಚ್ಚುವರಿ ಡಾಟಾ ಬೇಕೆಂದರೆ 10 ರೂನಿಂದ ಪ್ಯಾಕೇಜ್ ಶುರುವಾಗುತ್ತದೆ. 10 ರೂಗೆ ಬರೋಬ್ಬರಿ 5ಜಿಬಿಯಷ್ಟು ಡಾಟಾ ಸಿಗುತ್ತದೆ. ಇದರ ಇಂಟರ್ನೆಟ್ ವೇಗ 34 ಎಂಬಿಪಿಎಸ್ವರೆಗೂ ಇರುತ್ತದೆ. ರೈಲ್ಟೆಲ್ನ ಬಹುತೇಕ ಪ್ಲಾನ್ಗಳು ಒಂದು ದಿನಕ್ಕೆ ಸೀಮಿತವಾಗಿರುತ್ತದೆ. ಅದರ ಅಧಿಕೃತ ವೆಬ್ಸೈಟ್ಗೆ ಹೋಗಿ ಪ್ಲಾನ್ ಪಡೆಯಬಹುದು. ವೆಬ್ ವಿಳಾಸ ಇಂತಿದೆ: Railwire.co.in
ಈಗ ರೈಲ್ವೈರ್ನ ಉಚಿತ ಇಂಟರ್ನೆಟ್ ಸೇವೆಯನ್ನು ಅರ್ಧ ಗಂಟೆ ಕಾಲ ನೀವು ಪಡೆಯಬಹುದು. ಹೆಚ್ಚಿನ ಇಂಟರ್ನೆಟ್ ಬೇಕೆಂದರೆ ವೆಬ್ಸೈಟ್ನಲ್ಲಿ ಪ್ಯಾಕೇಜ್ಗಳನ್ನು ಖರೀದಿಸಬೇಕು.
ಇದನ್ನೂ ಓದಿ: ಕಾಲಜ್ಞಾನಿ ಗೂಗಲ್; ಯಾವ ಸಮಯದಲ್ಲಿ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಬುಕ್ ಮಾಡಬಹುದು? ಗೂಗಲ್ ಫ್ಲೈಟ್ಸ್ನಲ್ಲಿದೆ ಹೊಸ ಫೀಚರ್
ಕರ್ನಾಟಕದಲ್ಲಿ ಎಂಟು ರೈಲು ನಿಲ್ದಾಣಗಳಲ್ಲಿ ವೈಫೈ ಸೇವೆ ಸದ್ಯಕ್ಕೆ ಸಿಗುತ್ತಿದೆ. ಮಂಗಳೂರು, ಬೆಂಗಳೂರು, ಯಶವಂತಪುರ, ಮೈಸೂರು, ಕೆಂಗೇರಿ, ದಾವಣಗೆರೆ, ಹೊಸಪೇಟೆ, ಹಾಸನ ರೈಲು ನಿಲ್ದಾಣಗಳಲ್ಲಿ ನೀವು ಉಚಿತವಾಗಿ ವೈಫೈ ಬಳಸಬಹುದು.
ರೇಲ್ಟೆಲ್ ಸಂಸ್ಥೆ ಫೈಬರ್ ಮೂಲಕ ನೆಟ್ವರ್ಕ್ ಕನೆಕ್ಟಿವಿಟಿ ವ್ಯವಸ್ಥೆ ಮಾಡಿದೆ. ಗೂಗಲ್ ಸಂಸ್ಥೆ ರೇಡಿಯೋ ಅಕ್ಸೆಸ್ ನೆಟ್ವರ್ಕ್ ಸೇರಿದಂತೆ ತಂತ್ರಜ್ಞಾನ ನೆರವು ಒದಗಿಸುತ್ತಿದೆ.
ಗಮನಿಸಿ…
ಸಾರ್ವಜನಿಕ ವೈಫೈಗಳನ್ನು ಬಳಸುವಾಗ ಎಚ್ಚರ ಇರಲಿ. ಇಂಟರ್ನೆಟ್ ಬ್ಯಾಂಕಿಂಗ್, ಹಣದ ವಹಿವಾಟು ಇತ್ಯಾದಿ ಬಳಸುವುದನ್ನು ಸಾಧ್ಯವಾದಷ್ಟೂ ತಪ್ಪಿಸಿ. ನಿಮ್ಮ ದತ್ತಾಂಶವನ್ನು ಕದಿಯುವ ಅವಕಾಶ ಇರುತ್ತದೆ. ರೈಲ್ವೆ ನಿಲ್ದಾಣಗಳಲ್ಲಿ ಒದಗಿಸುವ ವೈಫೈ ಸುರಕ್ಷಿತ ಎನಿಸಿದರೂ ಸೂಕ್ಷ್ಮ ವಹಿವಾಟುಗಳನ್ನು ಮಾಡದಿರುವುದು ಉತ್ತಮ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ