Menstrual Leave: ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆ ಆಗಿಬಿಟ್ರೆ..? ಮುಟ್ಟು ರಜೆ ಕಡ್ಡಾಯಗೊಳಿಸಲು ಸುಪ್ರೀಂ ಹಿಂದೇಟು

Menstrual leave, Supreme court directs govt to form a policy: ಮಹಿಳೆಯರಿಗೆ ಮುಟ್ಟಿನ ದಿನಗಳು ಒಂದು ರೀತಿಯಲ್ಲಿ ಯಾತನೆಯ ಅನುಭವ ನೀಡುತ್ತವೆ. ಕೆಲಸದ ಕಡೆ ಗಮನ ಕೊಡಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಷ್ಟವಾಗುತ್ತದೆ. ಅಂಥ ದಿನಗಳಲ್ಲಿ ಮಹಿಳೆಯರಿಗೆ ರಜೆ ನೀಡಬೇಕು ಎನ್ನುವ ಒತ್ತಾಯ ಸಾಕಷ್ಟು ವರ್ಷಗಳಿಂದಲೂ ಇದೆ. ಕೋರ್ಟ್​ನಲ್ಲಿ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತಗೊಂಡಿದೆ. ಆದರೆ, ಸರ್ಕಾರ ಈ ಬಗ್ಗೆ ಒಂದು ನೀತಿ ರೂಪಿಸಬೇಕು ಎಂದು ಸುಪ್ರೀಂ ನ್ಯಾಯಪೀಠ ಆದೇಶಿಸಿದೆ.

Menstrual Leave: ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆ ಆಗಿಬಿಟ್ರೆ..? ಮುಟ್ಟು ರಜೆ ಕಡ್ಡಾಯಗೊಳಿಸಲು ಸುಪ್ರೀಂ ಹಿಂದೇಟು
ಋತುಸ್ರಾವದ ದಿನಗಳು...
Follow us
|

Updated on:Jul 08, 2024 | 3:10 PM

ನವದೆಹಲಿ, ಜುಲೈ 8: ಮಹಿಳೆಯರು ಕೆಲಸ ಮಾಡುವ ಕಂಪನಿಯಲ್ಲಿ ಮೆನ್ಸ್​ಟ್ರುಯಲ್ ಅಥವಾ ಋತುಸ್ರಾವ (ಮುಟ್ಟು – Menstrual leave) ರಜೆ ಅವಕಾಶವನ್ನು ಕಡ್ಡಾಯಪಡಿಸಿ ಆದೇಶ ಹೊರಡಿಸಲು ಸರ್ವೋಚ್ಚ ನ್ಯಾಯಾಲಯ ಹಿಂದೇಟು ಹಾಕಿದೆ. ಕೋರ್ಟ್​ನಿಂದ ಈ ಆದೇಶ ಹೊರಟರೆ ಚೆನ್ನಾಗಿರೋಲ್ಲ. ಕಂಪನಿಗಳಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ ಕಡಿಮೆ ಆಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯಗೊಳಿಸುವ ಸಂಬಂಧ ವಿವಿಧ ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಿ ಒಂದು ನೀತಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರಲ್ಲದೇ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರೂ ಈ ನ್ಯಾಯಪೀಠದಲ್ಲಿದ್ದಾರೆ. ಮುಟ್ಟು ರಜೆಯನ್ನು ಕಡ್ಡಾಯಗೊಳಿಸುವಂತೆ ಸಲ್ಲಿಸಲಾದ ಅರ್ಜಿಯನ್ನು ಈ ವೇಳೆ ಕೋರ್ಟ್ ತಿರಸ್ಕರಿಸಿತು. ಕೇಂದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರನ್ನು ಸಂಪರ್ಕಿಸುವಂತೆ ಅರ್ಜಿದಾರರ ಪರ ವಕೀಲ ರಾಕೇಶ್ ಖನ್ನ ಅವರಿಗೆ ಕೋರ್ಟ್ ಸೂಚನೆ ನೀಡಿತು.

ಇದನ್ನೂ ಓದಿ: ಆಯುಷ್ಮಾನ್ ಭಾರತ್ ಸ್ಕೀಮ್: ಇನ್ಷೂರೆನ್ಸ್ ಮೊತ್ತ ಹೆಚ್ಚಿಸಲು ಮತ್ತು ಹೆಚ್ಚು ಜನರಿಗೆ ತಲುಪಿಸಲು ಯತ್ನ ಸಾಧ್ಯತೆ

ಮುಟ್ಟು ರಜೆ ಕೊಟ್ಟರೆ ಮಹಿಳೆಯರಿಗೆ ಉತ್ತೇಜನ ಸಿಗುತ್ತಾ?

ಮುಟ್ಟು ರಜೆ ಅಥವಾ ಋತುಸ್ರಾವ ದಿನಗಳ ರಜೆ ಕೊಟ್ಟರೆ ಮಹಿಳೆಯರಿಗೆ ಕೆಲಸಕ್ಕೆ ಸೇರಲು ಉತ್ತೇಜನ ಹೇಗೆ ಸಿಗುತ್ತದೆ ಎಂದು ಕೇಳಿದ ನ್ಯಾಯಪೀಠ, ಒಂದು ವೇಳೆ ಈ ರೀತಿಯ ರಜೆಯನ್ನು ಕೋರ್ಟ್ ಕಡ್ಡಾಯಗೊಳಿಸಿದರೆ ಕಂಪನಿಗಳು ಮಹಿಳೆಯರನ್ನು ನೇಮಕ ಮಾಡಲು ಹಿಂದೇಟು ಹಾಕಬಹುದು. ಇದರಿಂದ ಮಹಿಳೆಯರಿಗೆಯೇ ಅನ್ಯಾಯ ಆಗಬಹುದು ಎಂದು ಶಂಕೆ ವ್ಯಕ್ತಪಡಿಸಿತು.

ಈ ವಿಚಾರದಲ್ಲಿ ಕೋರ್ಟ್ ತೀರ್ಮಾನ ಮಾಡುವುದು ಸಮಂಜಸವಲ್ಲ. ವಾಸ್ತವದಲ್ಲಿ ಇದು ಸರ್ಕಾರಿ ನೀತಿಗೆ ಸೇರಿದ್ದಾಗಿದೆ ಎಂದು ಸಿಜೆಐ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: 1 ಕಿಮೀ ವೆಚ್ಚ ಪೆಟ್ರೋಲ್ ಬೈಕ್ 2.25 ರೂ, ಸಿಎನ್​ಜಿ ಬೈಕ್ 1 ರೂ; ಬಜಾಜ್ ಫ್ರೀಡಂ ವಿಶ್ವದ ಮೊದಲ ಸಿಎನ್​ಜಿ ಬೈಕ್

ಮುಟ್ಟಿನ ರಜೆ ಕೊಡುವ ಕಂಪನಿಗಳಿವೆ…

ಭಾರತದಲ್ಲಿ ಕೆಲವಾರು ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ರಜೆ ಕೊಡುವ ನೀತಿ ಹೊಂದಿವೆ. ವರ್ಷಕ್ಕೆ 10ರಿಂದ 24 ದಿನಗಳವರೆಗೆ ಪೀರಿಯಡ್ ಲೀವ್ ಅನ್ನು ಈ ಕಂಪನಿಗಳು ನೀಡುತ್ತವೆ. ಇಂಥ ಕೆಲ ಕಂಪನಿಗಳ ಪಟ್ಟಿ ಇಲ್ಲಿದೆ:

  1. ಜೊಮಾಟೊ
  2. ಬೈಜುಸ್
  3. ಸ್ವಿಗ್ಗಿ
  4. ಮ್ಯಾಗ್ಸ್​ಟರ್
  5. ಓರಿಯಂಟ್ ಎಲೆಕ್ಟ್ರಿಕ್
  6. ಕಲ್ಚರ್ ಮೆಷೀನ್
  7. ಗೋಜೂಪ್ ಆನ್ಲೈನ್ ಪ್ರೈ ಲಿ
  8. ಐವಿಪನನ್
  9. ಇಂಡಸ್ಟ್ರಿ ಎಆರ್​ಸಿ
  10. ವೆಟ್ ಅಂಡ್ ಡ್ರೈ ಪರ್ಸನಲ್ ಕೇರ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Mon, 8 July 24

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್