ಕ್ಯಾಲಿಫೋರ್ನಿಯಾ, ಮೇ 22: ಅಮೆರಿಕದಲ್ಲಿ ಸಿಇಒಗಳಾಗಬೇಕೆಂದರೆ ಭಾರತೀಯ ಸಮುದಾಯದವರಾಗಿರಬೇಕು ಎನ್ನುವ ಜೋಕ್ ಚಾಲನೆಯಲ್ಲಿದೆ. ಅಂತೆಯೇ ಭಾರತ ಮೂಲದ ಬಹಳಷ್ಟು ವ್ಯಕ್ತಿಗಳು ಅಮೆರಿಕದ ದೈತ್ಯ ಕಂಪನಿಗಳ ಚುಕ್ಕಾಣಿ ಹಿಡಿದಿರುವುದುಂಟು. ಅತ್ಯಧಿಕ ಸಂಬಳ ಪಡೆಯುವ ಸಿಇಒಗಳಲ್ಲಿ ಭಾರತ ಮೂಲದವರಿದ್ದಾರೆ. ವಾಲ್ಸ್ಟ್ರೀಟ್ ಜರ್ನಲ್ (Wall Street Journal) ಪತ್ರಿಕೆ ಪ್ರಕಟಿಸಿರುವ ಪಟ್ಟಿ ಪ್ರಕಾರ ಅಮೆರಿಕ ಕಂಪನಿಗಳ ಪೈಕಿ 2023ರಲ್ಲಿ ಅತಿಹೆಚ್ಚು ಸಂಬಳ ಪಡೆದವರ ಸಾಲಿನಲ್ಲಿ ನಿಕೇಶ್ (Nikesh Arora) ಅವರಿದ್ದಾರೆ. ಈ ಪಟ್ಟಿಯಲ್ಲಿ ಅರೋರಾ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಮೂಲದ ನಿಕೇಶ್ ಅರೋರಾ ಅವರು ಅಮೆರಿಕದ ಪಾಲೋ ಆಲ್ಟೋ ನೆಟ್ವರ್ಕ್ ಸಂಸ್ಥೆಯ ಸಿಇಒ ಆಗಿದ್ದಾರೆ. 2023ರಲ್ಲಿ ಅವರು ಪಡೆದ ಕಾಂಪೆನ್ಸೇಶನ್ 151.43 ಮಿಲಿಯನ್ ಡಾಲರ್. ಅಂದರೆ ಸುಮಾರು 1,260 ಕೋಟಿ ರೂನಷ್ಟು ಸಂಭಾವನೆ ಪಡೆದಿದ್ದಾರೆ.
ಆ್ಯಪಲ್, ಮೆಟಾ, ಗೂಗಲ್ ಇತ್ಯಾದಿ ದೈತ್ಯ ತಂತ್ರಜ್ಞಾನ ಕಂಪನಿಗಳ ಸಿಇಒಗಳಿಗಿಂತಲೂ ಬಹಳ ಅಧಿಕ ಕಾಂಪೆನ್ಸೇಶನ್ ಪಡೆದಿದ್ದಾರೆ ನಿಕೇಶ್ ಅರೋರಾ. ಸೈಬರ್ ಸೆಕ್ಯೂರಿಟಿ ಕಂಪನಿಯ ಸಿಇಒ ಆಗಿರುವ ನಿಕೇಶ್ ಅತ್ಯಧಿಕ ಸಂಬಳ ಪಡೆದ ಅಮೆರಿಕನ್ ಸಿಇಒಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಕೇವಲ 24.40 ಮಿಲಿಯನ್ ಡಾಲರ್ ಸಂಬಳ ಪಡೆದಿದ್ದಾರೆ. ಗೂಗಲ್ ಸಿಇಒ ಸುಂದರ್ ಪಿಚೈ ಅವರಂತೂ ಇನ್ನೂ ಕಡಿಮೆ 8.8 ಮಿಲಿಯನ್ ಸಂಬಳ ಪಡೆದಿದ್ದಾರೆ.
ಇದನ್ನೂ ಓದಿ: ತೈವಾನ್ ಮೇಲೆ ಚೀನಾ ಆಕ್ರಮಣವಾದರೆ ನಿಷ್ಕ್ರಿಯಗೊಳ್ಳಲಿವೆ ಚಿಪ್ ಮೆಷೀನ್ಸ್; ಯಾಕೆ ಹೀಗೆ?
ಇದನ್ನೂ ಓದಿ: ರಷ್ಯಾ ತೈಲಕ್ಕಾಗಿ ಸರ್ಕಾರಿ ಸಂಸ್ಥೆಗಳ ಜೊತೆ ಸೇರಿ ಸಂಧಾನ ನಡೆಸಿ: ರಿಲಾಯನ್ಸ್ಗೆ ಸರ್ಕಾರ ಮನವಿ
ನಿಕೇಶ್ ಅರೋರಾ ಭಾರತ ಸಂಜಾತದವರಾಗಿದ್ದು, ಐಐಟಿಯಲ್ಲಿ ಎಲೆಕ್ಟ್ರಿಕ್ ಎಂಜಿನಿಯರಿಂಗ್ ಮಾಡಿದ್ದಾರೆ. ಗೂಗಲ್, ಸಾಫ್ಟ್ಬ್ಯಾಂಕ್ ಮೊದಲಾದ ಕಂಪನಿಗಳಲ್ಲಿ ಬಹಳ ಅಧಿಕ ಸಂಬಳಕ್ಕೆ ಕೆಲಸಕ್ಕೆ ಸೇರಿ ತಮ್ಮ ಕ್ಷಮತೆ ರೋರಿದವರು. ಸಾಫ್ಟ್ಬ್ಯಾಂಕ್ ಗ್ರೂಪ್ನಲ್ಲಿ ಅವರಿಗಿದ್ದ ಸಂಬಳ ಬರೋಬ್ಬರಿ 135 ಮಿಲಿಯನ್ ಡಾಲರ್. ಜಪಾನ್ ಮಟ್ಟಿಗೆ ಅದು ಹೊಸ ದಾಖಲೆಯಾಗಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ