ಐವತ್ತಕ್ಕೂ ಹೆಚ್ಚು ವರ್ಷಗಳಿಂದ L&Tಯಲ್ಲಿರುವ ಎಎಂ ನಾಯ್ಕ್ ಛೇರ್ಮನ್ ಸ್ಥಾನದಿಂದ ಹೊರಕ್ಕೆ; ಸುಬ್ರಹ್ಮಣ್ಯಂ ಹೊಸ ಛೇರ್ಮನ್
L&T Chairman AS Naik Steps Down: ಲಾರ್ಸನ್ ಅಂಡ್ ಟೌಬ್ರೋ ಗ್ರೂಪ್ನಲ್ಲಿ 20 ವರ್ಷಗಳಿಂದ ಛೇರ್ಮನ್ ಆಗಿದ್ದ ಎ.ಎಂ. ನಾಯ್ಕ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮೇ ತಿಂಗಳಲ್ಲಿ ಅವರು ನಾನ್-ಎಕ್ಸಿಕ್ಯೂಟಿವ್ ಛೇರ್ಮನ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಸ್ ಎನ್ ಸುಬ್ರಹ್ಮಣ್ಯನ್ ಅವರಿಗೆ ಅಧಿಕಾರ ವಹಿಸುವುದಾಗಿ ಹೇಳಿದ್ದರು. ಅದರಂತೆ, ಇದೀಗ ಸೆಪ್ಟೆಂಬರ್ 30ರಂದು ಎಎಂ ನಾಯ್ಕ್ ತಮ್ಮ ಛೇರ್ಮನ್ ಸ್ಥಾನದಿಂದ ಕೆಳಗಿಳಿದಿದ್ದಾರೆ. 81 ವರ್ಷದ ಎಎಸ್ ನಾಯ್ಕ್ ಅವರು ಹೆಚ್ಚೂಕಡಿಮೆ 60 ವರ್ಷಗಳಿಂದ ಎಲ್ ಅಂಡ್ ಟಿ ಸಂಸ್ಥೆಯೊಂದಿಗೆ ಇದ್ದಾರೆ. 1965ರಲ್ಲಿ ಅವರು ಜೂನಿಯರ್ ಎಂಜಿನಿಯರ್ ಆಗಿ ಎಲ್ ಅಂಡ್ ಟಿ ಸೇರಿದ್ದರು.
ನವದೆಹಲಿ, ಅಕ್ಟೋಬರ್ 1: ವಿಶ್ವದ ಪ್ರಮುಖ ಎಂಜನಿಯರಿಂಗ್ ಕಂಪನಿಗಳಲ್ಲೊಂದಾದ ಲಾರ್ಸನ್ ಅಂಡ್ ಟೌಬ್ರೋ ಗ್ರೂಪ್ನಲ್ಲಿ (L&T Group) 20 ವರ್ಷಗಳಿಂದ ಛೇರ್ಮನ್ ಆಗಿದ್ದ ಎ.ಎಂ. ನಾಯ್ಕ್ (A M Naik) ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮೇ ತಿಂಗಳಲ್ಲಿ ಅವರು ನಾನ್-ಎಕ್ಸಿಕ್ಯೂಟಿವ್ ಛೇರ್ಮನ್ ಸ್ಥಾನಕ್ಕೆ ರಾಜೀನಾಮೆ ನೀಡಿ, ಎಸ್ ಎನ್ ಸುಬ್ರಹ್ಮಣ್ಯನ್ ಅವರಿಗೆ ಅಧಿಕಾರ ವಹಿಸುವುದಾಗಿ ಹೇಳಿದ್ದರು. ಅದರಂತೆ, ಇದೀಗ ಸೆಪ್ಟೆಂಬರ್ 30ರಂದು ಎಎಂ ನಾಯ್ಕ್ ತಮ್ಮ ಛೇರ್ಮನ್ ಸ್ಥಾನದಿಂದ ಕೆಳಗಿಳಿದಿದ್ದಾರೆ. ಎಲ್ ಅಂಡ್ ಟಿ ಸಂಸ್ಥೆಯ ಸಿಇಒ ಮತ್ತು ಎಂಡಿ ಆಗಿರುವ ಸುಬ್ರಹ್ಮಣ್ಯನ್ ಅವರು ಇಂದು ಭಾನುವಾರ, ಅಕ್ಟೋಬರ್ 1ರಂದು ಛೇರ್ಮನ್ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಾರೆ.
81 ವರ್ಷದ ಎಎಸ್ ನಾಯ್ಕ್ ಅವರು ಹೆಚ್ಚೂಕಡಿಮೆ 60 ವರ್ಷಗಳಿಂದ ಎಲ್ ಅಂಡ್ ಟಿ ಸಂಸ್ಥೆಯೊಂದಿಗೆ ಇದ್ದಾರೆ. 1965ರಲ್ಲಿ ಅವರು ಜೂನಿಯರ್ ಎಂಜಿನಿಯರ್ ಆಗಿ ಎಲ್ ಅಂಡ್ ಟಿ ಸೇರಿದ್ದರು. 1999ರಲ್ಲಿ ಎಂಡಿ ಮತ್ತು ಸಿಇಒ ಆದರು. 2003ರಲ್ಲಿ ಛೇರ್ಮನ್ ಪದವಿಗೆ ಏರಿದ್ದರು.
ಇದನ್ನೂ ಓದಿ: ವೇದಾಂತವನ್ನು 6 ಕಂಪನಿಗಳಾಗಿ ವಿಭಜನೆ ಮಾಡಲು ನಿರ್ಧಾರ; ಇದರ ಕ್ರಮ ಹೇಗೆ?
ಈಗ ಎಲ್ ಅಂಡ್ ಟಿ ಗ್ರೂಪ್ನ ಛರ್ಮನ್ ಸ್ಥಾನ ತ್ಯಜಿಸಿರುವ ಎಎಂ ನಾಯ್ಕ್ ಅವರು ಎಲ್ ಅಂಡ್ ಟಿ ಎಂಪ್ಲಾಯೀ ಟ್ರಸ್ಟ್ನ (ಎಲ್ಟಿಇಟಿ) ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ. 2003ರಲ್ಲಿ ಆರಂಭವಾದ ಈ ಟ್ರಸ್ಟ್ ಎಲ್ ಅಂಡ್ ಟಿಯ ಅತಿದೊಡ್ಡ ಪಾಲುದಾರ ಎನಿಸಿದೆ. ಇದರ ಸ್ಥಾಪನೆ ಹಿಂದೆ ನಾಯ್ಕ್ ಅವರ ಪಾತ್ರ ಬಹಳ ಪ್ರಮುಖವಾದುದು. ಆಗ ಎಲ್ ಅಂಡ್ ಟಿ ಛೇರ್ಮನ್ ಆಗಿದ್ದು ಇವರೆಯೇ.
ಇದನ್ನೂ ಓದಿ: ಆಟೋ ಚಾಲಕನ ಖಾತೆಗೆ 9,000 ಕೋಟಿ ರೂ ಹಾಕಿದ್ದಕ್ಕೆ ತಮಿಳುನಾಡು ಬ್ಯಾಂಕಿನ ಸಿಇಒ ರಾಜೀನಾಮೆ ಕೊಟ್ಟರಾ?
ಎಎಂ ನಾಯ್ಕ್ ಅವರು ಎಲ್ ಅಂಡ್ ಟಿ ಎಂಪ್ಲಾಯೀ ಟ್ರಸ್ಟ್ ಮಾತ್ರವಲ್ಲ, ತಮ್ಮ ವೈಯಕ್ತಿಕವಾದ ನಾಯ್ಕ್ ಚಾರಿಟಬಲ್ ಟ್ರಸ್ಟ್ ಮತ್ತು ನಿರಲಿ ಮೆಮೋರಿಯಲ್ ಮೆಡಿಕಲ್ ಟ್ರಸ್ಟ್ ಮೂಲಕವೂ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಇದೀಗ ಎಲ್ ಅಂಡ್ ಟಿ ಗ್ರೂಪ್ನ ಉನ್ನತ ಹುದ್ದೆ ತ್ಯಜಿಸಿದ ಬಳಿಕ ಅವರು ಪೂರ್ಣಪ್ರಮಾಣದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ