LIC Jeevan Akshay Policy: ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿ, ತಿಂಗಳಿಗೆ 36,000 ರೂ. ಗಳಿಸಿ!
ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿ ಒಂದು ಬಾರಿಯ ಹೂಡಿಕೆ ಯೋಜನೆಯಾಗಿದೆ. ಈ ಪಾಲಿಸಿ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಅಂದಾಜು 36,000 ರೂ. ಗಳಿಸಬಹುದಾಗಿದೆ.
ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್ಐಸಿ (LIC) ಜೀವನ್ ಅಕ್ಷಯ್ ಪಾಲಿಸಿ (Jeevan Akshay Policy) ಒಂದು ಬಾರಿಯ ಹೂಡಿಕೆ ಯೋಜನೆಯಾಗಿದೆ. ಈ ಪಾಲಿಸಿ ಮಾಡಿಕೊಳ್ಳುವ ಮೂಲಕ ಪ್ರತಿ ತಿಂಗಳು ಅಂದಾಜು 36,000 ರೂ. ಗಳಿಸಬಹುದಾಗಿದೆ. ಈ ಪಾಲಿಸಿಯ ಮೂಲಕ ಪ್ರತಿ ತಿಂಗಳು ಲಾಭ ಪಡೆಯುವ ಅಕಾಶವನ್ನು ಹೂಡಿಕೆದಾರರಿಗೆ ಎಲ್ಐಸಿ ಒದಗಿಸಿಕೊಟ್ಟಿದೆ. ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡುವ ಮೂಲಕ ಜೀವನದುದ್ದಕ್ಕೂ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಪಾಲಿಸಿಯ ಪ್ರೀಮಿಯಂ ಹಾಗೂ ಇತರ ವಿವರಗಳು ಇಲ್ಲಿವೆ.
ಜೀವನ್ ಅಕ್ಷಯ್ ಪಾಲಿಸಿ
ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿ ಮೂಲಕ ಪ್ರತಿ ತಿಂಗಳು 36,000 ರೂ. ಪಡೆಯಬೇಕಾದರೆ ಯೂನಿಫಾರ್ಮ್ ರೇಟ್ ಆಯ್ಕೆಯ ಆ್ಯನುಯಿಟಿ ಪೇಯೇಬಲ್ ಫಾರ್ ಲೈಫ್ಟೈಮ್ ಆಪ್ಷನನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು. ಇದರ ಅಡಿಯಲ್ಲಿ ನೀವು ಪ್ರತಿ ತಿಂಗಳು ದೊಡ್ಡ ಮೊತ್ತದ ಪಿಂಚಣಿ ಪಡೆಯಬಹುದು. ನೀವು 45 ವರ್ಷ ವಯಸ್ಸಿನವರಾಗಿದ್ದು, ಈ ಪಾಲಿಸಿಯ ಪ್ರಯೋಜನ ಪಡೆಯಬೇಕೆಂದಿದ್ದಲ್ಲಿ ಒಂದು ಬಾರಿಗೆ 71,26,000 ರೂ. ಪ್ರೀಮಿಯಂ ಪಾವತಿ ಮಾಡಬೇಕಾಗುತ್ತದೆ. ಬಳಿಕ ಪ್ರತಿ ತಿಂಗಳು 36429 ರೂ. ಪಡೆಯಬಹುದು. ಪಾಲಿಸಿದಾರ ಮೃತಪಟ್ಟರೆ ಈ ಪಿಂಚಣಿ ಸ್ಥಗಿತಗೊಳ್ಳುತ್ತದೆ.
ಯಾವ ವಯಸ್ಸಿನವರು ಪಾಲಿಸಿ ಪ್ರಯೋಜನ ಪಡೆಯಬಹುದು?
35 ರಿಂದ 85 ವರ್ಷ ವಯಸ್ಸಿನವರೆಗಿನವರು ಈ ಪಾಲಿಸಿಯ ಪ್ರಯೋಜನ ಪಡೆದುಕೊಳ್ಳಬಹುದು. ಅಲ್ಲದೆ, ಅಂಗವಿಕಲರೂ ಈ ಪಾಲಿಸಿಯಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿಯಲ್ಲಿ ಪಿಂಚಣಿ ಸ್ವೀಕರಿಸಲು ಅನೇಕ ಆಯ್ಕೆಗಳಿವೆ.
ಪಿಂಚಣಿ ಆಯ್ಕೆಗಳು…
ನೀವು 75 ವರ್ಷ ವಯಸ್ಸಿನವರು ಎಂದಿದ್ದರೆ, ಒಂದು ಬಾರಿಗೆ 6,10,800 ರೂ. ಒಂದು ಬಾರಿಯ ಪ್ರೀಮಿಯಂ ಪಾವತಿಸಬೇಕು. ಬಳಿಕ ವಾರ್ಷಿಕ 76,650 ರೂ. ಪಿಂಚಣಿ ಪಡೆಯಬಹುದು. ಅರ್ಧವಾರ್ಷಿಕವಾದರೆ 35-37 ಸಾವಿರ ರೂ. ಹಾಗೂ ತ್ರೈಮಾಸಿಕ ಅವಧಿಗೆ ಪಿಂಚಣಿ ಪಡೆಯುವುದಾದರೆ 18,225 ರೂ. ನಂತೆ ಪಡೆಯಬಹುದು. ಪ್ರತಿ ತಿಂಗಳಿಗೆ ಆದರೆ 6,000 ರೂ.ನಂತೆ ಪಿಂಚಣಿ ಪಡೆಯಬಹುದು.
ಕಡಿಮೆ ಮೊತ್ತದ ಹೂಡಿಕೆ ಆಯ್ಕೆ
ಕಡಿಮೆ ಮೊತ್ತದ ಪ್ರೀಮಿಯಂ ಆಯ್ಕೆಯೂ ಜೀವನ್ ಅಕ್ಷಯ್ ಪಾಲಿಸಿಯಡಿ ಲಭ್ಯವಿದೆ. 1 ಲಕ್ಷ ರೂ. ಹೂಡಿಕೆ ಮಾಡುವ ಮೂಲಕ 12,000 ರೂ. ವಾರ್ಷಿಕ ಪಿಂಚಣಿಯನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ: LIC Shares: ಎಲ್ಐಸಿ ಷೇರುಮೌಲ್ಯದಲ್ಲಿ ಜಿಗಿತ; ಈಗ ಖರೀದಿ ಸೂಕ್ತವೇ? ತಜ್ಞರ ಅಭಿಪ್ರಾಯ ಇಲ್ಲಿದೆ