
ನವದೆಹಲಿ, ಆಗಸ್ಟ್ 26: ನಿಮ್ಮ ಎಲ್ಐಸಿ ಪಾಲಿಸಿಯು ಪ್ರೀಮಿಯಮ್ ಕಟ್ಟದೆಯೇ ಲ್ಯಾಪ್ಸ್ ಆಗಿದೆಯಾ? ಲೇಟ್ ಫೀ ಕಟ್ಟಿ ಅದನ್ನು ರಿವೈವ್ ಮಾಡಬೇಕಾಗುತ್ತದೆ. ಲೈಫ್ ಇನ್ಷೂರೆನ್ಸ್ ಕಾರ್ಪೊರೇಶನ್ ಸಂಸ್ಥೆಯು ಈ ರೀತಿ ಲ್ಯಾಪ್ಸ್ ಆದ ಇನ್ಷೂರೆನ್ಸ ಪಾಲಿಸಿಗಳನ್ನು (Insurance policy) ರಿವೈವ್ ಮಾಡಲು ಕೆಂಪೇನ್ ಆರಂಭಿಸಿದೆ. ಆಗಸ್ಟ್ 18ರಿಂದಲೇ ಶುರುವಾಗಿರುವ ಈ ಅಭಿಯಾನವು ಅಕ್ಟೋಬರ್ 17ರವರೆಗೂ ಇರುತ್ತದೆ. ಈ ಕೆಂಪೇನ್ ಅವಧಿಯಲ್ಲಿ ಸ್ಪೆಷಲ್ ಆಫರ್ ಇರುತ್ತದೆ. ಲ್ಯಾಪ್ಸ್ ಆದ ಇನ್ಷೂರೆನ್ಸ್ ಪಾಲಿಸಿಗಳಿಗೆ ತಡ ಪಾವತಿ ಶುಲ್ಕದಲ್ಲಿ ರಿಯಾಯಿತಿ ಅವಕಾಶವನ್ನು ನೀಡಲಾಗಿದೆ.
ಈ ಕೆಂಪೇನ್ ಅವಧಿಯಲ್ಲಿ ಎಲ್ಐಸಿಯ ಪಾಲಿಸಿ ಪುನಶ್ಚೇತನಕ್ಕೆ ವಿಧಿಸಲಾಗುವ ತಡ ಪಾವತಿ ಶುಲ್ಕದಲ್ಲಿ ಶೇ. 30ರವರೆಗೆ, ಸುಮಾರು 5,000 ರೂವರೆಗೆ ರಿಯಾಯಿತಿ ಕೊಡಲಾಗುತ್ತದೆ. ಮೈಕ್ರೋ ಇನ್ಷೂರೆನ್ಸ್ ಪ್ಲಾನ್ಗಳಲ್ಲಿ ಲೇಟ್ ಫೀನಲ್ಲಿ ನೂರಕ್ಕೆ ನೂರು ವಿನಾಯಿತಿ ಕೊಡಲಾಗುತ್ತದೆ. ಈ ಅವಕಾಶ ಅಕ್ಟೋಬರ್ 17ರವರೆಗೂ ಇರುತ್ತದೆ.
ಇನ್ಷೂರೆನ್ಸ್ ಪಾಲಿಸಿಯ ಪ್ರೀಮಿಯಮ್ ಪಾವತಿಸಲು ಗಡುವು ನೀಡಲಾಗಿರುತ್ತದೆ. ಆ ಗಡುವಿನೊಳಗೆ ಕಟ್ಟದಿದ್ದರೆ ಸುಮಾರು 15ರಿಂದ 30 ದಿನಗಳವರೆಗೆ ಗ್ರೇಸ್ ಪೀರಿಯಡ್ ನೀಡಲಾಗುತ್ತದೆ. ಈ ಗ್ರೇಸ್ ಅವಧಿಯಲ್ಲೂ ಪ್ರೀಮಿಯಮ್ ಕಟ್ಟಡದಿದ್ದಾಗ ಪಾಲಿಸಿ ಲ್ಯಾಪ್ಸ್ ಆಗುತ್ತದೆ.
ಇದನ್ನೂ ಓದಿ: ಈ ಟೆಕ್ನಿಕ್ ಉಪಯೋಗಿಸಿ, ಇನ್ಷೂರೆನ್ಸ್ ಪ್ರೀಮಿಯಮ್ ಉಚಿತಗೊಳಿಸಿ
ಎಲ್ಐಸಿ ಪಾಲಿಸಿ ನಿಷ್ಕ್ರಿಯಗೊಂಡಿದ್ದರೆ ಅದನ್ನು ರಿವೈವ್ ಮಾಡಲು ಕೆಲ ಮಾರ್ಗೋಪಾಯಗಳಿವೆ. ಎಲ್ಐಸಿ ಏಜೆಂಟ್ ಮುಖಾಂತರವೋ, ಅಥವಾ ಎಲ್ಐಸಿ ಶಾಖೆಯೊಂದನ್ನು ಭೇಟಿ ಮಾಡಿಯೋ ಅಥವಾ ಕಸ್ಟಮರ್ ಸರ್ವಿಸ್ ವಿಭಾಗ ಸಂಪರ್ಕ ಮಾಡುವ ಮೂಲಕವೋ ಪಾಲಿಸಿ ರಿವೈವಲ್ ಮಾಡುವ ಪ್ರಕ್ರಿಯೆ ಆರಂಭಿಸಬಹುದು.
ಅಗತ್ಯ ಬಿದ್ದರೆ ವೈದ್ಯಕೀಯ ಅಥವಾ ಇತರ ದಾಖಲೆಗಳನ್ನು ಪಾಲಿಸಿದಾರರು ಸಲ್ಲಿಸಬೇಕಾಗಬಹುದು. ಬಾಕಿ ಉಳಿಸಿಕೊಂಡಿರುವ ಪ್ರೀಮಿಯಮ್ ಹಣ ಹಾಗು ಅದಕ್ಕೆ ಬಡ್ಡಿ ಹಾಗೂ ತಡ ಪಾವತಿ ಶುಲ್ಕವನ್ನು ಸೇರಿಸಿ ಒಟ್ಟಿಗೆ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ಇನ್ಷೂರೆನ್ಸ್ ಕ್ಷೇತ್ರಕ್ಕೆ ಜಿಎಸ್ಟಿ ವಿನಾಯಿತಿಯ ಧಮಾಕ; ಸರ್ಕಾರದ ಮುಂದಿದೆ ಮಹತ್ವದ ಪ್ರಸ್ತಾಪ
ಪಾಲಿಸಿ ಲ್ಯಾಪ್ಸ್ ಆದ ದಿನದಿಂದ ಐದು ವರ್ಷದೊಳಗೆ ಅದರ ರಿವೈವಲ್ಗೆ ಅವಕಾಶ ಇರುತ್ತದೆ. ಹಾಗೆಯೇ, ಪಾಲಿಸಿಯ ಪ್ರೀಮಿಯಮ್ ಪಾವತಿ ಅವಧಿ ಮುಗಿದಿರಬಾರದು. ಪಾಲಿಸಿ ಮೆಚ್ಯೂರಿಟಿಗೆ ಬಂದಿರಬಾರದು. ಈ ಮೂರು ಅಂಶಗಳು ತಾಳೆಯಾದರೆ ಮಾತ್ರ ಪಾಲಿಸಿ ರಿವೈವಲ್ಗೆ ಅವಕಾಶ ಇರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ