LPG Cylinder Price: ಜನರಿಗೆ ಮತ್ತೆ ಶಾಕ್; ಅಡುಗೆ ಇಂಧನದ ಬೆಲೆ 50 ರೂ ಏರಿಕೆ

|

Updated on: Apr 07, 2025 | 5:15 PM

LPG cylinder price hike: ಗೃಹಬಳಕೆಯ ಎಲ್​​​ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂನಷ್ಟು ಏರಿಕೆ ಮಾಡಲಾಗಿದೆ. 805.50 ರೂ ಇರುವ 14.2 ಕಿಲೋ ಎಲ್​​ಪಿಜಿ ಸಿಲಿಂಡರ್ ಬೆಲೆ 855.50 ರೂಗೆ ಹೆಚ್ಚಳ ಮಾಡಲಾಗಿದೆ. ಸಬ್ಸಿಡಿ ದರದಲ್ಲಿ ಎಲ್​​ಪಿಜಿ ನೀಡಲಾಗುವ ಉಜ್ವಲ ಸ್ಕೀಮ್​ನಲ್ಲೂ ಕೂಡ ಸಿಲಿಂಡರ್ ಬೆಲೆ 50 ರೂನಷ್ಟು ಹೆಚ್ಚಳ ಆಗುತ್ತಿದೆ.

LPG Cylinder Price: ಜನರಿಗೆ ಮತ್ತೆ ಶಾಕ್; ಅಡುಗೆ ಇಂಧನದ ಬೆಲೆ 50 ರೂ ಏರಿಕೆ
ಎಲ್​​​ಪಿಜಿ
Follow us on

ನವದೆಹಲಿ, ಏಪ್ರಿಲ್ 7: ಕಳೆದ ವಾರ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ ಈಗ ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ (Domestic LPG cylinder) ಬೆಲೆಯನ್ನೂ ಏರಿಸಿದೆ. 14.2 ಕಿಲೋ ಎಲ್​​ಪಿಜಿ ಬೆಲೆಯನ್ನು ಸಿಲಿಂಡರ್​​ಗೆ 50 ರೂನಷ್ಟು ಹೆಚ್ಚಳ ಮಾಡಿದೆ. ಸಾಮಾನ್ಯ ಬಳಕೆದಾರರಿಗೆ ಮಾತ್ರವಲ್ಲ, ಉಜ್ವಲ ಸ್ಕೀಮ್ ಫಲಾನುಭವಿಗಳಿಗೂ ಈ ಬೆಲೆ ಏರಿಕೆಯ ಬಿಸಿ ತಾಕಿದೆ. ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಲ್​​ಪಿಜಿ ಬೆಲೆ ಏರಿಕೆ ಮಾಡಿರುವುದನ್ನು ಇಂದು ಸೋಮವಾರ ತಿಳಿಸಿದ್ದಾರೆ.

14.2 ಕಿಲೋ ಎಲ್​​ಪಿಜಿ ಸಿಲಿಂಡರ್ ಬೆಲೆ 803 ರೂ ಇದ್ದದ್ದು 853 ರೂಗೆ ಏರಿಕೆ ಆಗಲಿದೆ. ಉಜ್ವಲ ಸ್ಕೀಮ್​​ನ ಫಲಾನುಭವಿಗಳಿಗೆ ಸಬ್ಸಿಡಿ ದರದಲ್ಲಿ ಎಲ್​​ಪಿಜಿ ಸಿಗುತ್ತದಾದರೂ ಅವರಿಗೂ ಕೂಡ 50 ರೂ ಏರಿಕೆ ಆಗಿದೆ. 503 ರೂ ಇದ್ದ ಬೆಲೆ 553 ರೂಗೆ ಹೆಚ್ಚಳ ಆಗುತ್ತಿದೆ.

ಪೆಟ್ರೋಲ್ ಮತ್ತು ಡೀಸಲ್ ಮೇಲೆ ಕೇಂದ್ರ ಅಬಕಾರಿ ಸುಂಕದಲ್ಲಿ ಎರಡು ರೂ ಏರಿಕೆ ಮಾಡಲಾಗಿರುವ ಸುದ್ದಿ ಬಂದ ಬೆನ್ನಲ್ಲೇ ಜನಸಾಮಾನ್ಯರಿಗೆ ಎಲ್​​ಪಿಜಿ ಶಾಕ್ ಬಂದಿದೆ.

ಇದನ್ನೂ ಓದಿ
ಪೆಟ್ರೋಲ್, ಡೀಸಲ್ ಮೇಲೆ ಅಬಕಾರಿ ಸುಂಕ 2 ರೂ ಹೆಚ್ಚಳ
ಹೊಸ 100 ರೂ, 200 ರೂ ನೋಟುಗಳ ವಿಶೇಷತೆಗಳಿವು
ಜಾಗತಿಕವಾಗಿ ಷೇರುಪೇಟೆಗೆ ಬ್ಲ್ಯಾಕ್ ಮಂಡೇ; ಕಾರಣಗಳೇನು?
ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ

ಇದನ್ನೂ ಓದಿ: ಪೆಟ್ರೋಲ್, ಡೀಸಲ್ ಮೇಲಿನ ಅಬಕಾರಿ ಸುಂಕ 2 ರೂ ಹೆಚ್ಚಳ; ಆದರೆ ಬೆಲೆ ಏರಿಕೆ ಇರಲ್ಲ

ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಅನಿಲದ ಬೆಲೆಯನ್ನು ಇಳಿಸಲಾಗಿತ್ತು. 19 ಕಿಲೋ ಮತ್ತು 47.5 ಕಿಲೋ ಕಮರ್ಷಿಯಲ್ ಸಿಲಿಂಡರ್ ಬೆಲೆ ಇಳಿಕೆ ಆಗಿತ್ತು. ಆದರೆ, ಇವತ್ತು ಎರಡೂ ಕಮರ್ಷಿಯಲ್ ಸಿಲಿಂಡರ್ ಬೆಲೆಗಳು ಹೆಚ್ಚಳಗೊಂಡಿವೆ. 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ ಸಿಲಿಂಡರ್​​ಗೆ 5:50 ರೂ ಹೆಚ್ಚಳ ಆಗಿದೆ. 47.5 ಕಿಲೋ ಸಿಲಿಂಡರ್ ಬೆಲೆ 13.50 ರೂನಷ್ಟು ಏರಿಕೆ ಆಗಿದೆ.

ಹೊಸ ಬೆಲೆ ಏರಿಕೆಯು ನಾಳೆಯಿಂದ (ಏ. 8) ಜಾರಿಗೆ ಬರುತ್ತದೆ. ಬೆಂಗಳೂರಿನಲ್ಲಿ ಇವತ್ತಿನ ಎಲ್​​ಪಿಜಿ ದರಗಳು ಹೀಗಿವೆ:

  • 14.2 ಕಿಲೋ ಎಲ್​​ಪಿಜಿ ಸಿಲಿಂಡರ್ (ಗೃಹ ಬಳಕೆ): 805.50 ರೂ
  • 5 ಕಿಲೋ ಎಲ್​​ಪಿಜಿ ಸಿಲಿಂಡರ್ (ಗೃಹ ಬಳಕೆ): 300.50 ರೂ
  • 19 ಕಿಲೋ ಕಮರ್ಷಿಯಲ್ ಎಲ್​​ಪಿಜಿ: 1,880 ರೂ
  • 47.5 ಕಿಲೋ ಕಮರ್ಷಿಯಲ್ ಎಲ್​​ಪಿಜಿ: 4,696 ರೂ

ಇದರಲ್ಲಿ 14.2 ಕಿಲೋ ಎಲ್​​ಪಿಜಿ ಸಿಲಿಂಡರ್ ಬೆಲೆ 50 ರೂ ಏರಿಕೆ ಆಗುತ್ತಿದೆ. ಗೃಹಬಳಕೆಯ 5 ಕಿಲೋ ಎಲ್​​ಪಿಜಿ ಸಿಲಿಂಡರ್ ಬೆಲೆಯೂ ಏರಿಕೆ ಆಗುತ್ತಿದೆ. ಆದರೆ, ಎಷ್ಟು ಎಂಬುದು ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Commercial Cylinder Price: ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ

ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಸುಂಕದಲ್ಲಿ ಹೆಚ್ಚಳ

ಪೆಟ್ರೋಲ್ ಮತ್ತು ಡೀಸಲ್ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಎರಡು ರೂನಷ್ಟು ಏರಿಸಿದೆ. ಆದರೆ, ರೀಟೇಲ್ ಬೆಲೆಯಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:44 pm, Mon, 7 April 25