
ನವದೆಹಲಿ, ಜುಲೈ 1: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಈ ಹಿಂದೆ ಅಭಿವೃದ್ದಿಪಡಿಸಿದ್ದ mAadhaar ಆಪ್ ಜೂನ್ 30ಕ್ಕೆ ಕೊನೆಗೊಂಡಿದೆ. ಜುಲೈ 1, 2026 ರಿಂದ, ಅಂದರೆ ಇಂದಿನಿಂದ ಎಂಆಧಾರ್ ಆಪ್ ಅಲಭ್ಯ ಇರುತ್ತದೆ. ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಹೊಸ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ‘Aadhaar App’ ಅನ್ನು ಬಳಸುವಂತೆ ಸರ್ಕಾರ ಮನವಿ ಮಾಡಿದೆ. ಯುಐಡಿಎಐ ಈ ಸಂಬಂಧ ನಿನ್ನೆ ಟ್ವೀಟ್ ಮಾಡಿದೆ.
‘mAadhaar ಆಪ್ ನಾಳೆ ಕೊನೆಗೊಳ್ಳುತ್ತಿದೆ. ಹೆಚ್ಚು ಉತ್ತಮ ಅನುಭವಕ್ಕಾಗಿ ಆಧಾರ್ ಆಪ್ ಅನ್ನು ಡೌನ್ಲೋಡ್ ಮಾಡಿ’ ಎಂದು ಆಧಾರ್ ಪ್ರಾಧಿಕಾರವು ತಿಳಿಸಿದೆ.
ಯುಐಡಿಎಐ ಮಾಡಿದ ಟ್ವೀಟ್
ಹಳೆಯ ‘mAadhaar’ ಆ್ಯಪ್ ಸ್ಥಗಿತಗೊಳ್ಳುವುದರಿಂದ ನಿಮ್ಮ ಯಾವುದೇ ಆಧಾರ್ ದಾಖಲೆಗಳು ಅಥವಾ ಡೇಟಾಬೇಸ್ ಡಿಲೀಟ್ ಆಗುವುದಿಲ್ಲ. ಆ್ಯಪ್ ಕೇವಲ ಸೇವೆಗಳನ್ನು ಬಳಸಿಕೊಳ್ಳಲು ಇರುವ ಒಂದು ಡಿಜಿಟಲ್ ಮಾಧ್ಯಮವಷ್ಟೇ ಆಗಿದೆ. ನಿಮ್ಮ ಆಧಾರ್ ಸಂಖ್ಯೆ ಮತ್ತು ವಿವರಗಳು UIDAI ಸರ್ವರ್ನಲ್ಲಿ ಎಂದಿನಂತೆ ಸುರಕ್ಷಿತವಾಗಿರುತ್ತವೆ.
ಇದನ್ನೂ ಓದಿ: ಜೂನ್ ತಿಂಗಳ ಜಿಎಸ್ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್ನಲ್ಲಿ ಕರ್ನಾಟಕ ನಂ. 2
ಹೊಸ ಆ್ಯಪ್ ಬಳಕೆದಾರರಿಗೆ ಹೆಚ್ಚು ಸುರಕ್ಷಿತ ಮತ್ತು ಸುಲಭವಾದ ಅನುಭವ ನೀಡಲು ಹಲವು ಸುಧಾರಿತ ತಂತ್ರಜ್ಞಾನಗಳನ್ನು ಹೊಂದಿದೆ:
ಇದನ್ನೂ ಓದಿ: ಹಳೆಯ ಸ್ಮಾರ್ಟ್ಫೋನ್ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ
ಗಮನಿಸಿ: ಹೊಸ ಆ್ಯಪ್ ಮೂಲಕ ಮೊಬೈಲ್ ಸಂಖ್ಯೆ ಅಥವಾ ವಿಳಾಸ ಬದಲಾವಣೆಯಂತಹ ವಿವರಗಳನ್ನು ನವೀಕರಿಸಿದರೆ (Update), ಅದು ಆ್ಯಪ್ನಲ್ಲಿ ಕಾಣಿಸಿಕೊಳ್ಳಲು 30 ದಿನಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಆದರೆ, ನಿಮ್ಮ ಫೋಟೋ, ಬೆರಳಚ್ಚು ಅಥವಾ ಕಣ್ಣಿನ ಗುರುತಿನಂತಹ (Iris) ಬಯೋಮೆಟ್ರಿಕ್ ವಿವರಗಳನ್ನು ನವೀಕರಿಸಲು ಕಡ್ಡಾಯವಾಗಿ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೇ ಭೇಟಿ ನೀಡಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:51 pm, Wed, 1 July 26