AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ

Scientists show that discarded smartphones can be used as data center: ಹಳೆಯ ನಿರುಪಯುಕ್ತ ಸ್ಮಾರ್ಟ್​ಫೋನ್​ಗಳನ್ನು ಬಳಸಿ ವಿಜ್ಞಾನಿಗಳು ಡೇಟಾ ಸೆಂಟರ್ ನಿರ್ಮಿಸುತ್ತಿದ್ದಾರೆ. ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಸಂಶೋಧಕರು ಇದರ ಪ್ರಯೋಗದಲ್ಲಿದ್ದಾರೆ. ಈ ಪ್ರಯೋಗದಲ್ಲಿ 2,000 ಗೂಗಲ್ ಪಿಕ್ಸೆಲ್ ಫೋನ್ ಮದರ್​ಬೋರ್ಡ್​ಗಳ ನೆಟ್ವರ್ಕ್ ಮಾಡಿ ಮಿನಿ ಡೇಟಾ ಸೆಂಟರ್ ನಿರ್ಮಿಸಲಾಗುತ್ತದೆ.

ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ
ಡೇಟಾ ಸೆಂಟರ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 01, 2026 | 3:57 PM

Share

ಮುಖ್ಯಾಂಶಗಳು

  • ಹಳೆಯ ನಿರುಪಯುಕ್ತ ಸ್ಮಾರ್ಟ್​ಫೋನ್​ಗಳನ್ನು ಬಳಸಿ ವಿಜ್ಞಾನಿಗಳು ಡೇಟಾ ಸೆಂಟರ್ ನಿರ್ಮಿಸುತ್ತಿದ್ದಾರೆ.
  • ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿ ಸಂಶೋಧಕರು ಇದರ ಪ್ರಯೋಗದಲ್ಲಿದ್ದಾರೆ.
  • ಈ ಪ್ರಯೋಗದಲ್ಲಿ 2,000 ಪಿಕ್ಸೆಲ್ ಮದರ್​ಬೋರ್ಡ್​ಗಳ ಮಿನಿ ಡೇಟಾ ಸೆಂಟರ್ ನಿರ್ಮಿಸಲಾಗುತ್ತದೆ.

ನವದೆಹಲಿ, ಜುಲೈ 1: ಈಗ ಹೊಸ ಸ್ಮಾರ್ಟ್​ಫೋನ್​ಗಳು ಅಗ್ಗದ ಬೆಲೆ ಸಿಗುವುದರಿಂದ ಅಸಂಖ್ಯಾತ ಹಳೆಯ ಫೋನ್​ಗಳು ತ್ಯಾಜ್ಯಗಳಾಗಿ ಮಾರ್ಪಡುತ್ತಿವೆ. ನಿತ್ಯವೂ ಟನ್​ಗಟ್ಟಲೆ ಎಲೆಕ್ಟ್ರಾನಿಕ್ಸ್ ತ್ಯಾಜ್ಯವು (eWaste) ಭೂಮಿಯ ನೆಲವನ್ನು ಕಲುಷಿತಗೊಳಿಸುತ್ತಿದೆ. ಹೆಚ್ಚಿನ ಎಲೆಕ್ಟ್ರಾನಿಕ್ ವಸ್ತುಗಳು ರೀಸೈಕಲ್ ಆಗುವುದಿಲ್ಲ. ಇದೇ ವೇಳೆ, ಸಮಾಧಾನಕರ ಬೆಳವಣಿಗೆಯೊಂದರಲ್ಲಿ, ಕಂಪ್ಯೂಟರ್ ವಿಜ್ಞಾನಿಗಳು ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್ ತಯಾರಿಸುವ ಕಾರ್ಯಕ್ಕೆ ಕೈಹಾಕಿದ್ದಾರೆ. ಗೂಗಲ್ (Google) ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಸೇರಿ ಹಳೆಯ ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಮಿನಿ ಡೇಟಾ ಸೆಂಟರ್ (Mini Data Centre) ನಿರ್ಮಿಸುವ ಹೊಸ ಪ್ರಯೋಗದಲ್ಲಿ ತೊಡಗಿದ್ದಾರೆ. ಗೂಗಲ್ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ತನ್ನ ಒಂದು ಬ್ಲಾಗ್ ಪೋಸ್ಟ್​ನಲ್ಲಿ ಇದರ ಮಾಹಿತಿ ನೀಡಿದೆ.

ಫೋನ್ ಕ್ಲಸ್ಟರ್ ಕಂಪ್ಯೂಟಿಂಗ್

ನಾವು ಮನೆಯ ಮೂಲೆಗಳಲ್ಲಿ ಎಸೆದಿಡುವ ಹಳೆಯ ಸ್ಮಾರ್ಟ್‌ಫೋನ್‌ಗಳ ಮದರ್‌ಬೋರ್ಡ್‌ಗಳನ್ನು ಒಂದಕ್ಕೊಂದು ಜೋಡಿಸಿ ಒಂದು ನೆಟ್‌ವರ್ಕ್ ಸೃಷ್ಟಿಸಲಾಗುತ್ತದೆ. ಇದನ್ನು ‘ಫೋನ್ ಕ್ಲಸ್ಟರ್ ಕಂಪ್ಯೂಟಿಂಗ್’ (Phone Cluster Computing) ಎಂದು ಕರೆಯಲಾಗುತ್ತದೆ. ಇದರ ಮೂಲಕ ಹಳೆಯ ಫೋನ್‌ಗಳ ಹಾರ್ಡ್‌ವೇರ್ ಸಾಮರ್ಥ್ಯವನ್ನು ಬಳಸಿಕೊಂಡು ಕ್ಲೌಡ್ ಕಂಪ್ಯೂಟಿಂಗ್ ಅಥವಾ ಡೇಟಾ ಸೆಂಟರ್‌ನಂತಹ ಕೆಲಸಗಳನ್ನು ಮಾಡಬಹುದು.

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

2,000 ಪಿಕ್ಸೆಲ್ ಫೋನ್‌ಗಳ ಬಳಕೆ

ಗೂಗಲ್ ಬೆಂಬಲದೊಂದಿಗೆ ಆರಂಭದಲ್ಲಿ 2,000 ಹಳೆಯ ಪಿಕ್ಸೆಲ್ (Google Pixel) ಸ್ಮಾರ್ಟ್‌ಫೋನ್‌ಗಳನ್ನು ಬಳಸಿ ಈ ಡೇಟಾ ಸೆಂಟರ್ ನಿರ್ಮಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಕಡಿಮೆ ವೆಚ್ಚದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಸೌಲಭ್ಯ ಒದಗಿಸಲಿದೆ.

ಕೇವಲ 20 ಹಳೆಯ ಫೋನ್‌ಗಳ ನೆಟ್‌ವರ್ಕ್, 75 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಒಂದು ಇಡೀ ಕಾಲೇಜು ಕೋರ್ಸ್‌ನ ಲೋಡ್ ಅನ್ನು ಯಶಸ್ವಿಯಾಗಿ ನಿಭಾಯಿಸಬಲ್ಲುದು. ಅಷ್ಟೇ ಅಲ್ಲ, ಇದು ಅಮೆಜಾನ್‌ನ AWS ಗಿಂತಲೂ ವೇಗವಾಗಿ ಫಲಿತಾಂಶ ನೀಡಿದೆ ಎಂದು ಸಂಶೋಧನೆ ತಿಳಿಸಿದೆ. ಇನ್ನು, 2,000 ಪಿಕ್ಸೆಲ್ ಫೋನ್​ಗಳನ್ನು ಬಳಸಿ ನೆಟ್ವರ್ಕ್ ನಿರ್ಮಿಸಿದರೆ ಇಂಥ ನೂರಾರು ತರಗತಿಗಳನ್ನು ಬೆಂಬಲಿಸಬಹುದು.

ಇದು ಗೂಗಲ್ ಅಥವಾ ಅಮೆಜಾನ್‌ನಂತಹ ದೈತ್ಯ ಎಐ (AI) ಡೇಟಾ ಸೆಂಟರ್‌ಗಳಿಗೆ ಪರ್ಯಾಯವಲ್ಲ. ಬದಲಾಗಿ ಸಣ್ಣ ಸಂಶೋಧನೆಗಳು, ಶೈಕ್ಷಣಿಕ ಕಂಪ್ಯೂಟಿಂಗ್ ಮತ್ತು ಸಣ್ಣ ಮಟ್ಟದ ಡೇಟಾ ಪ್ರೊಸೆಸಿಂಗ್‌ಗೆ ಇದು ಅತ್ಯಂತ ಕಡಿಮೆ ವೆಚ್ಚದ ಮಾರ್ಗವಾಗಿದೆ. ಇದು ಇನ್ನೂ ಪ್ರಯೋಗ ಹಂತದಲ್ಲಿರುವುದರಿಂದ, ವಾಸ್ತವಿಕವಾಗಿ ಇದನ್ನು ಅಳವಡಿಸುವಾಗ ಯಾವ್ಯಾವ ಸವಾಲುಗಳು ಎದುರಾಗಬಹುದು ಎನ್ನುವುದು ಖಾತ್ರಿ ಇಲ್ಲ.

ಇದನ್ನೂ ಓದಿ: ವಾಣಿಜ್ಯ ಸಿಲಿಂಡರ್ ದರದಲ್ಲಿ 183.50 ರೂ ಇಳಿಕೆ! ಹೋಟೆಲ್ ಮಾಲೀಕರಿಗೆ ಬಿಗ್ ರಿಲೀಫ್

ಕ್ಲಸ್ಟರ್ ಫೋನ್ ಕಂಪ್ಯೂಟಿಂಗ್ ತಂತ್ರಜ್ಞಾನ ಏಕೆ ಮುಖ್ಯ?

  • ಇ-ತ್ಯಾಜ್ಯ (E-Waste) ನಿಯಂತ್ರಣ: ಪ್ರತಿ ವರ್ಷ ಲಕ್ಷಾಂತರ ಹಳೆಯ ಫೋನ್‌ಗಳು ಕಸದ ಬುಟ್ಟಿ ಸೇರಿ ಪರಿಸರ ಮಾಲಿನ್ಯ ಉಂಟುಮಾಡುತ್ತಿವೆ. ಈ ಯೋಜನೆ ಫೋನ್‌ಗಳಿಗೆ ಎರಡನೇ ಜೀವನ ನೀಡುತ್ತದೆ.
  • ಕಾರ್ಬನ್ ಹೊರಸೂಸುವಿಕೆ ಇಳಿಕೆ: ಹೊಸ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯ ತಪ್ಪುವುದರಿಂದ ಪರಿಸರಕ್ಕೆ ಆಗುವ ಹಾನಿ ಮತ್ತು ಕಾರ್ಬನ್ ಹೊರಸೂಸುವಿಕೆ (Carbon footprint) ಕಡಿಮೆಯಾಗುತ್ತದೆ.

ಈ ಸಂಪೂರ್ಣ ವ್ಯವಸ್ಥೆಯು 2026 ರ ಅಂತ್ಯದ ವೇಳೆಗೆ ಅಧಿಕೃತವಾಗಿ ಲಾಂಚ್ ಆಗುವ ಸಾಧ್ಯತೆ ಇದೆ ಎಂದು ಗೂಗಲ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:44 pm, Wed, 1 July 26

Follow Us
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ
ನಿರ್ಮಾಪಕಿ ಬಳಿಕ ಈಗ ಹಿನ್ನೆಲೆ ಗಾಯಕಿಯಾದ ಗಣೇಶ್ ಪತ್ನಿ ಶಿಲ್ಪಾ