AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್ ತಿಂಗಳ ಜಿಎಸ್​ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್​ನಲ್ಲಿ ಕರ್ನಾಟಕ ನಂ. 2

GST collections data released for June 2026: ಜೂನ್ 2026ರ ಜಿಎಸ್‌ಟಿ (GST) ಸಂಗ್ರಹಣೆಯ ಅಧಿಕೃತ ವರದಿ ಬಿಡುಗಡೆಯಾಗಿದೆ. ಒಟ್ಟು ಜಿಎಸ್‌ಟಿ ಸಂಗ್ರಹವು ನಿರೀಕ್ಷೆಮೀರಿ ಹೆಚ್ಚಾಗಿ, ₹1.95 ಲಕ್ಷ ಕೋಟಿ ತಲುಪಿದೆ. ಇದು ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಶೇ. 13.9 ರಷ್ಟು ಭಾರಿ ಹೆಚ್ಚಳ ಸಾಧಿಸಿದೆ. ಆದರೆ, ರೀಫಂಡ್ಸ್ ಹೆಚ್ಚಿದ್ದರಿಂದ ನಿವ್ವಳ ಜಿಎಸ್​ಟಿ ಹೆಚ್ಚಳದಲ್ಲಿ ತುಸು ಕೊರತೆ ಬಿದ್ದಿದೆ.

ಜೂನ್ ತಿಂಗಳ ಜಿಎಸ್​ಟಿ ಸಂಗ್ರಹ ಶೇ. 14ರಷ್ಟು ಹೆಚ್ಚಳ; ಅತಿಹೆಚ್ಚು ತೆರಿಗೆ ಕಲೆಕ್ಷನ್​ನಲ್ಲಿ ಕರ್ನಾಟಕ ನಂ. 2
ಜಿಎಸ್‌ಟಿImage Credit source: Abhishek Mehta/Moment/Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 01, 2026 | 5:12 PM

Share

ಮುಖ್ಯಾಂಶಗಳು

  • ಜೂನ್ 2026ರ ಜಿಎಸ್‌ಟಿ (GST) ಸಂಗ್ರಹಣೆಯ ಅಧಿಕೃತ ವರದಿ ಬಿಡುಗಡೆಯಾಗಿದೆ.
  • ಒಟ್ಟು ಜಿಎಸ್‌ಟಿ ಸಂಗ್ರಹವು ನಿರೀಕ್ಷೆಮೀರಿ ಹೆಚ್ಚಾಗಿ, ₹1.95 ಲಕ್ಷ ಕೋಟಿ ತಲುಪಿದೆ.
  • ಇದು ಕಳೆದ ವರ್ಷದ ಜೂನ್ ತಿಂಗಳಿಗೆ ಹೋಲಿಸಿದರೆ ಶೇ. 13.9 ಹೆಚ್ಚಳ ಸಾಧಿಸಿದೆ.

ನವದೆಹಲಿ, ಜುಲೈ 1: ದೇಶದ ಆರ್ಥಿಕ ಚಟುವಟಿಕೆಗಳ ವೇಗ ಹಾಗೂ ಆಮದು ವಹಿವಾಟಿನಲ್ಲಿನ ಭಾರಿ ಪ್ರಗತಿಯಿಂದಾಗಿ 2026ರ ಜೂನ್ ತಿಂಗಳ ಒಟ್ಟು ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹಣೆಯು ₹1,94,812 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ವರ್ಷದ (ಜೂನ್ 2025) ₹1.71 lakh ಕೋಟಿಗೆ ಹೋಲಿಸಿದರೆ ದೇಶದ ಒಟ್ಟಾರೆ ತೆರಿಗೆ ಆದಾಯದಲ್ಲಿ ಶೇ. 13.9 ರಷ್ಟು ಭರ್ಜರಿ ಬೆಳವಣಿಗೆ ಕಂಡುಬಂದಿದೆ. ಕೇಂದ್ರ ಹಣಕಾಸು ಸಚಿವಾಲಯದ ತಾತ್ಕಾಲಿಕ ಅಂಕಿ-ಅಂಶಗಳ ಪ್ರಕಾರ, ಆಮದು ಸುಂಕದ ಆದಾಯವು ಶೇ. 34.6 ರಷ್ಟು ಹೆಚ್ಚಾಗಿ ₹60,038 ಕೋಟಿಗೆ ತಲುಪಿರುವುದು ಈ ದಾಖಲೆಯ ಜಿಗಿತಕ್ಕೆ ಪ್ರಮುಖ ಕಾರಣವಾಗಿದೆ.

ಇನ್ನು, ರೀಫಂಡ್​ಗಳೂ ಕೂಡ ಜೂನ್​ನಲ್ಲಿ ಸಖತ್ ಹೆಚ್ಚಿವೆ. ₹32,436 ಕೋಟಿ ಮೊತ್ತದಷ್ಟು ರೀಫಂಡ್​ಗಳನ್ನು ಸರ್ಕಾರ ನೀಡಿದೆ. ಕಳೆದ ವರ್ಷದಕ್ಕೆ ಹೋಲಿಸಿದರೆ ರೀಫಂಡ್ 29.1% ಹೆಚ್ಚಿದೆ. ಇದರಿಂದಾಗಿ ನಿವ್ವಳ ಜಿಎಸ್​ಟಿ ಸಂಗ್ರಹದ ಹೆಚ್ಚಳವು ಒಟ್ಟಾರೆ ಜಿಎಸ್​ಟಿ ಏರಿಕೆಗಿಂತ ತುಸು ಕಡಿಮೆ ಇದೆ. ದತ್ತಾಂಶದ ಪ್ರಕಾರ, ಜೂನ್ ತಿಂಗಳಲ್ಲಿ ಸರ್ಕಾರದ ನಿವ್ವಳ ಜಿಎಸ್​ಟಿ 11.2% ಏರಿಕೆಯಾಗಿ ₹1.62 ಲಕ್ಷ ಕೋಟಿ ತಲುಪಿದೆ.

ಇದನ್ನೂ ಓದಿ: ಹಳೆಯ ಸ್ಮಾರ್ಟ್​ಫೋನ್​ಗಳನ್ನು ಬಳಸಿ ಡೇಟಾ ಸೆಂಟರ್? ಗೂಗಲ್ ಮತ್ತು ಕ್ಯಾಲಿಫೋರ್ನಿಯಾ ವಿವಿ ಸಂಶೋಧಕರಿಂದ ಹೊಸ ಪ್ರಯೋಗ

ಕರ್ನಾಟಕ ಮತ್ತು ಇತರ ಪ್ರಮುಖ ರಾಜ್ಯಗಳ ಜಿಎಸ್​ಟಿ ಸಂಗ್ರಹ

ದೇಶದ ಪ್ರಮುಖ ಕೈಗಾರಿಕಾ ಮತ್ತು ವಾಣಿಜ್ಯ ರಾಜ್ಯಗಳಲ್ಲಿ ಜಿಎಸ್‌ಟಿ ಸಂಗ್ರಹವು ಅತ್ಯಂತ ಆಶಾದಾಯಕವಾಗಿದೆ. ವಿಶೇಷವಾಗಿ ದಕ್ಷಿಣ ಭಾರತದ ಆರ್ಥಿಕ ಶಕ್ತಿ ಕೇಂದ್ರವಾದ ಕರ್ನಾಟಕವು ಮತ್ತೊಮ್ಮೆ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ.

  • ಕರ್ನಾಟಕ: ರಾಜ್ಯದಲ್ಲಿ ಜಿಎಸ್‌ಟಿ ಸಂಗ್ರಹಣೆಯು ಭಾರಿ ಸದ್ದು ಮಾಡಿದ್ದು, ಜೂನ್ ತಿಂಗಳಿನಲ್ಲಿ ₹12,937 ಕೋಟಿ ಆದಾಯ ಗಳಿಸಿದೆ. ಕರ್ನಾಟಕವು ಎರಡಂಕಿ (Double-digit) ಪ್ರಗತಿ ದರವನ್ನು ಕಾಯ್ದುಕೊಳ್ಳುವ ಮೂಲಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿದ ಎರಡನೇ ದೊಡ್ಡ ರಾಜ್ಯವಾಗಿ ಹೊರಹೊಮ್ಮಿದೆ.
  • ಮಹಾರಾಷ್ಟ್ರ: ದೇಶದಲ್ಲೇ ಎಂದಿನಂತೆ ಮೊದಲ ಸ್ಥಾನ ಕಾಯ್ದುಕೊಂಡಿರುವ ಮಹಾರಾಷ್ಟ್ರ, ಶೇ. 9 ರಷ್ಟು ಪ್ರಗತಿಯೊಂದಿಗೆ ₹30,714 ಕೋಟಿ ಜಿಎಸ್‌ಟಿ ಸಂಗ್ರಹಿಸಿದೆ. ಇದಕ್ಕೆ ಬೇಕಾಗಿರುವ
  • ಗುಜರಾತ್: ಮೂರನೇ ಸ್ಥಾನದಲ್ಲಿರುವ ಗುಜರಾತ್ ರಾಜ್ಯವು ಭರ್ಜರಿ ಆರ್ಥಿಕ ಪ್ರಗತಿ ದಾಖಲಿಸಿ ₹11,743 ಕೋಟಿ ತೆರಿಗೆ ಗಳಿಸಿದೆ.
  • ಉತ್ತರ ಪ್ರದೇಶ (UP): ಉತ್ತರ ಪ್ರದೇಶವು ಪ್ರಮುಖ ದೊಡ್ಡ ರಾಜ್ಯಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ದಾಖಲಿಸಿದೆ. ಯುಪಿ ಶೇ. 19 ರಷ್ಟು ಭಾರಿ ಜಿಗಿತದೊಂದಿಗೆ ಒಟ್ಟು ₹9,165 ಕೋಟಿ ಜಿಎಸ್‌ಟಿ ಸಂಗ್ರಹಿಸಿದೆ.
  • ತಮಿಳುನಾಡು: ಆದರೆ, ತಮಿಳುನಾಡಿನಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 2 ರಷ್ಟು ಸಣ್ಣ ಕುಸಿತ ಕಂಡುಬಂದಿದ್ದು, ಗಳಿಕೆ ₹9,776 ಕೋಟಿಗೆ ಸೀಮಿತವಾಗಿದೆ.

ಜೂನ್ 2026 ರ ಜಿಎಸ್‌ಟಿ ಗಳಿಕೆಯ ವಿವರಗಳು

ಒಟ್ಟು ಜಿಎಸ್​ಟಿ ಸಂಗ್ರಹ: ₹1,94,812 ಕೋಟಿ (13.9% ಏರಿಕೆ)

  1. ಮಹಾರಾಷ್ಟ್ರ: ₹30,714 ಕೋಟಿ (9% ಏರಿಕೆ)
  2. ಕರ್ನಾಟಕ: ₹12,937 ಕೋಟಿ
  3. ಗುಜರಾತ್: ₹11,743 ಕೋಟಿ
  4. ತಮಿಳುನಾಡು: ₹9,776 ಕೋಟಿ (2% ಇಳಿಕೆ)
  5. ಉತ್ತರ ಪ್ರದೇಶ: ₹9,165 ಕೋಟಿ (19% ಏರಿಕೆ)

ಇದನ್ನೂ ಓದಿ: ಹೊಸ ಉದ್ಯೋಗ ಖಾತ್ರಿ ಸ್ಕೀಮ್; ಮನ್ರೇಗಾ ಬದಲು ವಿ ಬಿ ಜಿ ರಾಮ್ ಜಿ ಇಂದಿನಿಂದ ಅಧಿಕೃತ ಜಾರಿ

ಹಿನ್ನಡೆ ಅನುಭವಿಸಿದ ರಾಜ್ಯಗಳು: ದೇಶದ ಒಟ್ಟಾರೆ ಆರ್ಥಿಕತೆ ಮುನ್ನಡೆ ಸಾಧಿಸಿದ್ದರೂ, ಕೆಲವು ರಾಜ್ಯಗಳು ತೀವ್ರ ಹಿನ್ನಡೆ ಅನುಭವಿಸಿವೆ. ಸಿಕ್ಕಿಂ ರಾಜ್ಯದ ತೆರಿಗೆ ಸಂಗ್ರಹ ಶೇ. 53 ರಷ್ಟು ಕುಸಿದು ₹170 ಕೋಟಿಗೆ ತಲುಪಿದ್ದರೆ, ಪುದುಚೇರಿ ಶೇ. 28 ರಷ್ಟು ಹಾಗೂ ಹಿಮಾಚಲ ಪ್ರದೇಶ ಶೇ. 26 ರಷ್ಟು ನಷ್ಟ ಅನುಭವಿಸಿವೆ.

ಹಣಕಾಸು ತಜ್ಞರ ಪ್ರಕಾರ, ಜಾಗತಿಕ ಮಟ್ಟದ ಏರಿಳಿತಗಳು ಹಾಗೂ ಪಶ್ಚಿಮ ಏಷ್ಯಾದ ಆರ್ಥಿಕ ಸಂಕಷ್ಟಗಳ ನಡುವೆಯೂ ಭಾರತದ ಆಂತರಿಕ ಮಾರುಕಟ್ಟೆ ಮತ್ತು ಗ್ರಾಹಕರ ಬೇಡಿಕೆ ಅತ್ಯಂತ ಸದೃಢವಾಗಿದೆ ಎಂಬುದಕ್ಕೆ ಈ ಜಿಎಸ್‌ಟಿ ದಾಖಲೆಯೇ ಸಾಕ್ಷಿಯಾಗಿದೆ. ಮುಂಬರುವ ತಿಂಗಳುಗಳಲ್ಲಿ ಮಾಸಿಕ ₹2 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗುವುದು ಸಾಮಾನ್ಯವಾಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಸಿ.ಟಿ. ರವಿ ತನ್ನ ಬಾಸ್​​ ಎಂದ ಉಪರಾಷ್ಟ್ರಪತಿ​​: ವಿಡಿಯೋ ವೈರಲ್
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಆಪರೇಷನ್ ಫುಟ್​​ಪಾತ್ ಬಗ್ಗೆ ಸಚಿವ ಕೃಷ್ಣಭೈರೇಗೌಡ ಖಡಕ್ ಮಾತು
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಹತ್ತಿ ಬರೋರಿಗೆ ಹಾಲು ಬಿಸ್ಕೆಟ್ ವ್ಯವಸ್ಥೆ!
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ರಾಮಮಂದಿರ ದೇಣಿಗೆ ಕಳ್ಳತನ ಕೇಸ್​: ಅನಧಿಕೃತ ಕಾಣಿಕೆ ಹುಂಡಿಗಳು ಪತ್ತೆ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ಸಾಲದ ಗೋಳು ಹೇಳಿಕೊಂಡ ಮಾಜಿ ಬಿಗ್​​ಬಾಸ್ ಸ್ಪರ್ಧಿ ಸೋನು ಗೌಡ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ವೈದ್ಯಕೀಯ ಪರೀಕ್ಷೆಗೆ ಕರೆತಂದ ವೇಳೆ ಶಂಕಿತ ಉಗ್ರ ಸುಹೇಲ್ ಉದ್ದಟತನ
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಆಷಾಢದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರ ಗಮನಕ್ಕೆ ಬಿಗ್ ಅಪ್​ಡೇಟ್
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಬಸ್ ಪ್ರಯಾಣ ದರ ಹೆಚ್ಚಳದ ಬಗ್ಗೆ ಸಚಿವ ಭೈರತಿ ಸುರೇಶ್ ಹೇಳಿದ್ದೇನು?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಮೆಡಿಕಲ್ ಗಾರ್ಬೇಜ್ ತಾಣವಾಗ್ತಿದೆಯಾ ನೆಲಮಂಗಲ?
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ಫುಟ್​ಪಾತ್ ತೆರವು ಕಾರ್ಯಾಚರಣೆಗೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ