Today Cryptocurrency Prices: ಏರಿಕೆ ಹಾದಿಯಲ್ಲಿ ಕ್ರಿಪ್ಟೋಕರೆನ್ಸಿಗಳು; ಯಾವುದರ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ

ಪ್ರಮುಖ- ಟಾಪ್ 10 ಕ್ರಿಪ್ಟೋಕರೆನ್ಸಿಗಳ ದರದ ಮಾಹಿತಿ ಇಲ್ಲಿದೆ. ಬಿಟ್​ಕಾಯಿನ್ ಸೇರಿದಂತೆ ಇತರ ಡಿಜಿಟಲ್ ಕರೆನ್ಸಿಗಳ ಸದ್ಯದ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

Today Cryptocurrency Prices: ಏರಿಕೆ ಹಾದಿಯಲ್ಲಿ ಕ್ರಿಪ್ಟೋಕರೆನ್ಸಿಗಳು; ಯಾವುದರ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 31, 2021 | 11:10 AM

ಸರಿಯೋ ತಪ್ಪೋ, ಹೂಡಿಕೆ ಸುರಕ್ಷಿತ ಹೌದೋ ಅಲ್ಲವೋ ಕ್ರಿಪ್ಟೋ ಕರೆನ್ಸಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯಂತೂ ಹೆಚ್ಚಾಗುತ್ತಿದೆ. ಅದರಲ್ಲೂ ಯುವ ಜನರಿಗೆ ಆ ಕಡೆಗೆ ಆಕರ್ಷಣೆ ಹೆಚ್ಚಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಏನೆಂದರೆ, ಜಗತ್ತಿನ ಪ್ರಮುಖ ಉದ್ಯಮಿಗಳು ಈ ಡಿಜಿಟಲ್ ಕರೆನ್ಸಿ ಪರವಾಗಿ ಮಾತನಾಡಲಾರಂಭಿದ್ದಾರೆ. ಅಷ್ಟೇ ಅಲ್ಲ, ತಮ್ಮ ಕಂಪೆನಿ ಕಡೆಯಿಂದ ಹೂಡಿಕೆ ಕೂಡ ಮಾಡುತ್ತಿದ್ದಾರೆ. ಆದ್ದರಿಂದಲೇ ಈಗ ಹೇಗೆ ಷೇರು ಮಾರುಕಟ್ಟೆಯಲ್ಲಿ ಷೇರಿನ ದರಗಳನ್ನು ನೋಡಲಾಗುತ್ತದೆಯೋ ಅದೇ ರೀತಿ ಕ್ರಿಪ್ಟೋಕರೆನ್ಸಿಗಳ ರಿಯಲ್ ಟೈಮ್ ದರವನ್ನು ಸಹ ನೋಡಲಾಗುತ್ತಿದೆ. ಇನ್ನು ಇದರ ಏರಿಳಿತಗಳೋ ಅಬ್ಬಾ ಭಾರೀ ಆತಂಕ ಹಾಗೂ ಕುತೂಹಲ ಹುಟ್ಟಿಸುತ್ತವೆ. ಕೆಲವು ಮಾರುಕಟ್ಟೆ ವಿಶ್ಲೇಷಕರು ಈ ಕ್ರಿಪ್ಟೋಕರೆನ್ಸಿ ಹೂಡಿಕೆ ಬಗ್ಗೆ ಎಚ್ಚರಿಸುತ್ತಲೇ ಇದ್ದಾರೆ. ಆದರೆ ಆ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡವರು ಎಷ್ಟು ಮಂದಿಯೋ ತಿಳಿಯುತ್ತಿಲ್ಲ. ಇರಲಿ, ಜುಲೈ 31ನೇ ತಾರೀಕಿನಂದು ಜಾಗತಿಕ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೇಲ್ಮುಖದ ಹಾದಿಯಲ್ಲಿದೆ. ಮಾರುಕಟ್ಟೆ ಬಂಡವಾಳ 1.63 ಲಕ್ಷ ಕೋಟಿ ಡಾಲರ್ ಆಗಿದೆ. (ಭಾರತದ ರೂಪಾಯಿ ಲೆಕ್ಕದಲ್ಲಿ ಬರೀ ಒಂದು ಡಾಲರ್​ಗೆ 74.38 ಅಂದುಕೊಳ್ಳಿ. ಇಲ್ಲಿರುವುದು 1.63 ಲಕ್ಷ ಕೋಟಿ). ಒಂದು ದಿನದಲ್ಲಿ ಶೇ 3.23ರಷ್ಟು ಹೆಚ್ಚಳ ಆಗಿದೆ.

ಒಟ್ಟಾರೆ ಕ್ರಿಪ್ಟೋ ಪ್ರಮಾಣವು 89.99 ಬಿಲಿಯನ್ ಡಾಲರ್ (ಒಂದು ಬಿಲಿಯನ್​ ಅಂದರೆ ನೂರು ಕೋಟಿ)ಗೂ ಹೆಚ್ಚಾಗಿದೆ. ಇದು ಶೇ 19.38ರಷ್ಟು ಹೆಚ್ಚಳ ಆಗುವಂತೆ ಮಾಡುತ್ತದೆ. ಸ್ಥಿರವಾದ ಎಲ್ಲ ನಾಣ್ಯಗಳ ಪ್ರಮಾಣ ಸೇರಿ ಈಗ 69.23 ಬಿಲಿಯನ್ ಯುಎಸ್​ಡಿ ಆಗುತ್ತದೆ. ಕಳೆದ 24 ಗಂಟೆಯಲ್ಲಿ ಇದು ಒಟ್ಟಾರೆ ಕ್ರಿಪ್ಟೋ ಮಾರುಕಟ್ಟೆಯ ಶೇ 76393ರಷ್ಟಾಗುತ್ತದೆ. ಅಂದಹಾಗೆ ಜುಲೈ 25ಕ್ಕೆ ಬಿಟ್​ಕಾಯಿನ್ 41,930.58 ಯುಎಸ್​ಡಿ ದರದೊಂದಿಗೆ ಶೇ 48.36ರಷ್ಟು ಪಾರಮ್ಯ ಹೊಂದಿತ್ತು. ಒಂದು ದಿನದಲ್ಲಿ ಶೇ 0.74ರಷ್ಟು ಏರಿಕೆ ಕಂಡಿದೆ.

ಟಾಪ್ 10 ಕ್ರಿಪ್ಟೋಕರೆನ್ಸಿಗಳ ದರದ ಮಾಹಿತಿ ಇಲ್ಲಿದೆ: 1. ಬಿಟ್​ಕಾಯಿನ್ (BTC)- 41,797.50 ಯುಎಸ್​ಡಿ 2. ಎಥೆರಿಯಂ ETH- 2448.51 ಯುಎಸ್​ಡಿ 3. ಟೆಥರ್ USDT- 1 ಯುಎಸ್​ಡಿ 4. ಬಿನಾನ್ಸ್ ಕಾಯಿನ್ BNB- 322.25 ಯುಎಸ್​ಡಿ 5. ಕಾರ್ಡನೊ ADA- 1.33 ಯುಎಸ್​ಡಿ 6. XRP XRP- 0.77 ಯುಎಸ್​ಡಿ 7. ಯುಎಸ್​ಡಿ ಕಾಯಿನ್ USDC- 1.01 ಯುಎಸ್​ಡಿ 8. ಡೋಜೆಕಾಯಿನ್ DOGE- 0.21 ಯುಎಸ್​ಡಿ 9. ಪೊಲ್ಕಡಾಟ್ DOT- 14.72 ಯುಎಸ್​ಡಿ 10. ಬಿನಾನ್ಸ್ USD BUSD – 1 ಯುಎಸ್​ಡಿ

CoinDesk ಹಾಗೂ Coinbase ಇವೆರಡರಲ್ಲೂ ಕ್ರಿಪ್ಟೋಕರೆನ್ಸಿ ದರಗಳು ಗೊತ್ತಾಗುತ್ತವೆ.

ಇದನ್ನೂ ಓದಿ: Cryptocurrency Bit Coin: ಬಿಟ್​ಕಾಯಿನ್​ಗೆ ಕಾನೂನು ಮಾನ್ಯತೆ ನೀಡುವ ಮೊದಲ ದೇಶವಾಗಲಿದೆ ಎಲ್​ ಸಲ್ವಡಾರ್

ಇದನ್ನೂ ಓದಿ: ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ ಬಗ್ಗೆ ಸುಳಿವು ನೀಡಿದ ಹಣಕಾಸು ಸಚಿವೆ

(Major Cryptocurrencies Today Price Bitcoin And Other Currencies Gain In 24 Hours)

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ