ಮೇಕ್ ಮೈ ಟ್ರಿಪ್​ನಲ್ಲಿ ಪ್ರವಾಸ ಬುಕ್ ಮಾಡಿದರೆ ನೀವೆಲ್ಲೇ ಇದ್ದರೂ ಸಿಗುತ್ತೆ 24 ಗಂಟೆ ವೈದ್ಯಕೀಯ ಸೇವೆ

|

Updated on: Mar 20, 2024 | 6:29 PM

Meradoc and MakeMyTrip Partnership: ಆನ್ಲೈನ್ ವೈದ್ಯಕೀಯ ಸೇವೆ ಒದಗಿಸುವ ಮೇರಾ ಡಾಕ್ ಎಂಬ ಹೆಲ್ತ್ ಸ್ಟಾರ್ಟಪ್ ಜೊತೆ ಮೇಕ್ ಮೈ ಟ್ರಿಪ್ ಒಪ್ಪಂದ ಮಾಡಿಕೊಂಡಿದೆ. ಪ್ರವಾಸಿಗರು ಭಾರತದಲ್ಲಿ ಎಲ್ಲೇ ಇದ್ದರೂ 24 ಗಂಟೆ ವೈದ್ಯಕೀಯ ಸಮಾಲೋಚನೆ ಪಡೆಯಬಹುದು. ನಿಗದಿತ ಔಷಧವನ್ನು ಎರಡು ಗಂಟೆಯ ಒಳಗಾಗಿ ಅವರಿರುವ ಸ್ಥಳದಲ್ಲೇ ಪಡೆಯಬಹುದು. ಮೇರಾ ಡಾಕ್ ಭಾರತದಾದ್ಯಂತ 35 ಸಾವಿರಕ್ಕೂ ಹೆಚ್ಚು ಔಷಧ ಅಂಗಡಿಗಳು, ಸಾವಿರಾರು ವೈದ್ಯರು ಮತ್ತಿತರರ ಜಾಲವನ್ನು ಹೊಂದಿದ್ದು ತನ್ನ ಗ್ರಾಹಕರಿಗೆ ಫ್ಯಾಮಿಲಿ ಡಾಕ್ಟರ್​ನ ಸೇವೆ ಒದಗಿಸುತ್ತದೆ.

ಮೇಕ್ ಮೈ ಟ್ರಿಪ್​ನಲ್ಲಿ ಪ್ರವಾಸ ಬುಕ್ ಮಾಡಿದರೆ ನೀವೆಲ್ಲೇ ಇದ್ದರೂ ಸಿಗುತ್ತೆ 24 ಗಂಟೆ ವೈದ್ಯಕೀಯ ಸೇವೆ
ಪ್ರವಾಸಿಗರು
Follow us on

ನವದೆಹಲಿ, ಮಾರ್ಚ್ 20: ಮೇರಾ ಡಾಕ್ (Meradoc) ಎಂಬ ಹೆಲ್ತ್ ಟೆಕ್ ಸ್ಟಾರ್ಟಪ್ ಜೊತೆ ಮೇಕ್ ಮೈ ಟ್ರಿಪ್ (MakeMyTrip) ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಇದು ಮೇಕ್ ಮೈ ಟ್ರಿಪ್​ನ ಗ್ರಾಹಕರಿಗೆ 24 ಗಂಟೆ ವೈದ್ಯಕೀಯ ಸೇವೆಯ ಅವಕಾಶ ಒದಗಿಸುತ್ತದೆ. ರಿಯಲ್ ಟೈಮ್​ನಲ್ಲಿ ಪ್ರವಾಸಿಗರು ವೈದ್ಯಕೀಯ ಸೇವೆ ಪಡೆಯಬಹುದು. ಮೇರಾ ಡಾಕ್​ನ ವೈದ್ಯರು ಆಡಿಯೋ ಮತ್ತು ವಿಡಿಯೋ ಮೂಲಕ 24 ಗಂಟೆಯೂ ಸಮಾಲೋಚನೆಗೆ ಲಭ್ಯ ಇರುತ್ತದೆ. ಔಷಧಗಳನ್ನೂ ಕೂಡ ಗ್ರಾಹಕರು ಇರುವ ಸ್ಥಳಕ್ಕೆ ತಲುಪಿಸಲಾಗುತ್ತದೆ.

‘ಈ ಹೊಂದಾಣಿಕೆಯ ಮೂಲಕ ಮೇರಾ ಡಾಕ್​ನ ಡಿಜಿಟಲ್ ಹೆಲ್ತ್ ಪ್ಲಾಟ್​ಫಾರ್ಮ್ ಮತ್ತದರ ಸೇವೆಗಳು ಈಗ ಮೇಕ್ ಮೈ ಟ್ರಿಪ್​ನ ಗ್ರಾಹಕರಿಗೆ ಭಾರತದಾದ್ಯಂತ 24 ಗಂಟೆ ಲಭ್ಯ ಇರುತ್ತದೆ. ಮೇರಾ ಡಾಕ್​ನ ತಜ್ಞ ವೈದ್ಯರ ತಂಡವು ಮೇಕ್ ಮೈ ಟ್ರಿಪ್​ನ ಗ್ರಾಹಕರಿಗೆ ಆಡಿಯೋ ಮತ್ತು ವಿಡಿಯೋ ಮೂಲಕ ಸಮಾಲೋಚನೆ ಸೇವೆ ಒದಗಿಸುತ್ತದೆ,’ ಎಂದು ಮೇರಾ ಡಾಕ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮೈಕ್ರೋಸಾಫ್ಟ್​ನ ಎಐ ವಿಭಾಗಕ್ಕೆ ಟ್ಯಾಕ್ಸಿ ಚಾಲಕನ ಮಗ ಮುಸ್ತಫಾ ಸಿಇಒ; ಎಐ ತಂತ್ರಜ್ಞಾನದ ನಿಪುಣ ಈತ

ಮೇಕ್ ಮೈ ಟ್ರಿಪ್​ನಲ್ಲಿ ಪ್ರವಾಸ ಬುಕ್ ಮಾಡಿದಂದಿನಿಂದ ಹಿಡಿದು ಮುಕ್ತಾಯದವರೆಗೆ ಗ್ರಾಹಕರು ಯಾವ ಸ್ಥಳದಲ್ಲೇ ಇದ್ದರೂ ವೈದ್ಯರು ಪ್ರಿಸ್​ಕ್ರೈಬ್ ಮಾಡಿದ ಔಷಧಗಳನ್ನು ಎರಡು ಗಂಟೆಯೊಳಗೆ ತಲುಪಿಸಲಾಗುತ್ತದೆ ಎಂದು ಮೇರಾ ಡಾಕ್ ಸಂಸ್ಥೆ ಹೇಳಿಕೊಂಡಿದೆ.

ಮೇರಾ ಡಾಕ್ ಸಂಸ್ಥೆ 2021ರಲ್ಲಿ ಆರಂಭವಾಗಿದೆ. ಐಡಿಯಾ ಸೆಲೂಲಾರ್​ನ ಮಾಜಿ ಸಿಎಫ್​ಒ ಮತ್ತು ಕೇರ್ನ್ ಇಂಡಿಯಾದ ಮಾಜಿ ಸಿಇಒ ಸುಧೀರ್ ಮಾಥುರ್, ಖ್ಯಾತ ವೈದ್ಯ ಅದಿತ್ ಮಾಥುರ್, ಉದ್ಯಮಿ ಎಹ್ಸಾನ್ ಸಿಂಗ್ ಅವರು ಸೇರಿ ಸ್ಥಾಪಿಸಿದ ಮೇರಾ ಡಾಕ್ ಸಂಸ್ಥೆ ಕೋಟ್ಯಂತರ ಭಾರತೀಯರಿಗೆ ವೈದ್ಯಕೀಯ ಸೇವೆ ತಲುಪಿಸುವ ಉದ್ದೇಶ ಹೊಂದಿದೆ. ಫ್ಯಾಮಿಲಿ ಡಾಕ್ಟರ್ ತತ್ವವನ್ನು ಮೂಲವಾಗಿಟ್ಟುಕೊಂಡು ಈ ಸಂಸ್ಥೆ ಹೆಜ್ಜೆ ಇಡುತ್ತಿದೆ.

ಇದನ್ನೂ ಓದಿ: ಕೇವಲ ಒಂದು ಲಕ್ಷ ಇನ್ವೆಸ್ಟ್​​ಮೆಂಟ್​ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್​ವಿಡಿಯಾ ಮ್ಯಾಜಿಕ್

ಮೇರಾ ಡಾಕ್ ತನ್ನ ಸಬ್ಸ್​ಕ್ರೈಬರ್​ಗಳಿಗೆ 24 ಗಂಟೆ ಫ್ಯಾಮಿಲಿ ಡಾಕ್ಟರ್ ಸೇವೆ ಲಭ್ಯ ಇರಿಸುತ್ತದೆ. 35,000ಕ್ಕೂ ಹೆಚ್ಚು ಔಷಧ ಮಳಿಗೆ, 1,200ಕ್ಕೂ ಹೆಚ್ಚು ಲ್ಯಾಬ್, 100ಕ್ಕೂ ಹೆಚ್ಚು ವೈದ್ಯಕೀಯ ತಜ್ಞರು, ಆಂಬುಲೆನ್ಸ್, ತುರ್ತು ಸಹಾಯ, ಆಸ್ಪತ್ರೆ ನೆರವು ಇತ್ಯಾದಿ ಪೂರ್ಣ ಜಾಲವನ್ನು ಮೇರಾ ಡಾಕ್ ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ