AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nvidia: ಕೇವಲ ಒಂದು ಲಕ್ಷ ಇನ್ವೆಸ್ಟ್​​ಮೆಂಟ್​ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್​ವಿಡಿಯಾ ಮ್ಯಾಜಿಕ್

American Semiconductor Company's share magic: ಅಮೆರಿಕದ ಚಿಪ್ ಸಂಸ್ಥೆ ಎನ್​ವಿಡಿಯಾ ಪಕ್ಕಾ ಮಲ್ಟಿಬ್ಯಾಗರ್ ಷೇರನ್ನು ಹೂಡಿಕೆದಾರರಿಗೆ ನೀಡಿದೆ. 1999ರಲ್ಲಿ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದ ಎನ್​ವಿಡಿಯಾ 25 ವರ್ಷದಲ್ಲಿ ಸಿಕ್ಕಾಪಟ್ಟೆ ಲಾಭ ತಂದುಕೊಟ್ಟಿದೆ. ಅಂದು 1,000 ಡಾಲರ್ ಹಣವನ್ನು ಹೂಡಿಕೆ ಮಾಡಿದ್ದರೆ ಇವತ್ತು ಅವರ ಎನ್​ವಿಡಿಯಾ ಷೇರುಸಂಪತ್ತು 24.61 ಲಕ್ಷ ಡಾಲರ್ ಆಗಿರುತ್ತಿತ್ತು. ಅಂದರೆ, ಒಂದು ಲಕ್ಷ ರೂ ಹಣ ಕನಿಷ್ಠ 35 ಕೋಟಿ ರೂ ಆದರೂ ಆಗಿರುತ್ತಿತ್ತು.

Nvidia: ಕೇವಲ ಒಂದು ಲಕ್ಷ ಇನ್ವೆಸ್ಟ್​​ಮೆಂಟ್​ಗೆ 35 ಕೋಟಿ ಲಾಭ ಸಿಗುತ್ತಿತ್ತು; ಇದು ಎನ್​ವಿಡಿಯಾ ಮ್ಯಾಜಿಕ್
ಷೇರು ಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 20, 2024 | 3:27 PM

Share

ನವದೆಹಲಿ, ಮಾರ್ಚ್ 20: ಅಮೆರಿಕದ ಎನ್​ವಿಡಿಯಾ (Nvidia) ಬಗ್ಗೆ ಭಾರತೀಯರು ಈಗೀಗ ಹೆಚ್ಚು ಕೇಳಲು ಆರಂಭಿಸಿದ್ದಾರೆ. ಹಲವು ದಶಕಗಳ ಹಿಂದೆ ಅಸ್ತಿತ್ವಕ್ಕೆ ಬಂದ ಹಳೆಯ ಕಂಪನಿ. ಸೆಮಿಕಂಡಕ್ಟರ್ ಕ್ಷೇತ್ರದ ಈ ಕಂಪನಿ 1999ರಲ್ಲೇ ಷೇರು ಮಾರುಕಟ್ಟೆಗೆ ಪ್ರವೇಶ ಮಾಡಿದೆ. ಈಕ್ವಿಟಿ ಲೋಕದಲ್ಲಿ ಅಚ್ಚರಿಗಳ ಮೇಲೆ ಅಚ್ಚರಿ ಹುಟ್ಟಿಸಿದ ಕಂಪನಿ ಇದು. ಇದರ ಮಾರುಕಟ್ಟೆ ಬಂಡವಾಳ (market capitalization) 2.25 ಟ್ರಿಲಿಯನ್ ಡಾಲರ್ ಇದೆ. ಅತಿಹೆಚ್ಚು ಮಾರ್ಕೆಟ್ ಕ್ಯಾಪ್ ಹೊಂದಿರುವ ಕಂಪನಿಗಳ ಸಾಲಿನಲ್ಲಿದೆ. ಭಾರತದ ಸೆಮಿಕಂಡಕ್ಟರ್ ಬೆಳವಣಿಗೆಯಲ್ಲಿ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಲಿರುವ ಕಂಪನಿಯೂ ಇದು. ಅತಿಶಕ್ತಿಶಾಲಿ ಚಿಪ್​ಗಳನ್ನು ತಯಾರಿಸುವ ಎನ್​ವಿಡಿಯಾ ಎಚ್100 ಚಿಪ್​ಗಳನ್ನು ಮುಂಬೈನ ಯೋಟ್ಟಾ ಡಾಟಾ ಸರ್ವಿಸಸ್ ಸಂಸ್ಥೆಗೆ ಕಳುಹಿಸಿದೆ. ಎಐ ಟೆಕ್ನಾಲಜಿ ಅಭಿವೃದ್ಧಿಗೆ ಈ ಚಿಪ್​ಗಳು ಬಹಳ ಅಗತ್ಯ.

ಎನ್​ವಿಡಿಯಾ ಭಾರತದಲ್ಲಿ ಹೂಡಿಕೆ ಮಾಡಲು ಆಲೋಚನೆ ಮಾಡಿದೆ. ಸೆಮಿಕಂಡಕ್ಟರ್ ಮತ್ತು ಎಐ ಕಂಪನಿಗಳಿಗೆ ಭಾರತ ಹುಲುಸಾದ ಮಾರುಕಟ್ಟೆ ಅವಕಾಶ ಒದಗಿಸುತ್ತದೆ. ಅಂತೆಯೇ, ಎನ್​ವಿಡಿಯಾ ಕೂಡ ಹೂಡಿಕೆದಾರರ ಸ್ವರ್ಗವಾಗಿ ಪರಿಣಮಿಸಿದೆ. ಅಮೆರಿಕದ ಎಸ್ ಅಂಡ್ ಪಿಯಲ್ಲಿ ಲಿಸ್ಟ್ ಆಗಿರುವ ಎನ್​ವಿಡಿಯಾದ ಷೇರು ಊಹೆಗೂ ನಿಲುಕದಷ್ಟು ಅಗಾಧವಾಗಿ ಬೆಳೆದಿದೆ.

1999ರಲ್ಲಿ ಇದರ ಐಪಿಒ ಬೆಲೆ ಒಂದು ಷೇರಿಗೆ 12 ಡಾಲರ್ ಇತ್ತು. ಇವತ್ತು ಅದರ ಬೆಲೆ 893 ಡಾಲರ್ ಆಗಿದೆ. ಐದು ಬಾರಿ ಇದರ ವಿವಿಧ ಮಟ್ಟದಲ್ಲಿ ವಿಭಜನೆಗಳಾಗಿವೆ. ಅವೆಲ್ಲವನ್ನೂ ಪರಿಗಣಿಸಿದರೆ ಒಂದು ಷೇರುಬೆಲೆ 25 ಸೆಂಟ್ ಆಗಿದ್ದು ಈಗ 893 ಡಾಲರ್ ಆಗಿ ಬೆಳೆದಿದೆ. ಅಂದರೆ, 3,500 ಪಟ್ಟು ಬೆಳೆದಿದೆ. ಆಗ ಇದರ ಮೇಲೆ 1,000 ಡಾಲರ್​ನಷ್ಟು ಹೂಡಿಕೆ ಮಾಡಿದ್ದರೆ ಇವತ್ತು ಅವರ ಹಣ 34,61,616 ಡಾಲರ್ ಆಗಿರುತ್ತಿತ್ತು.

ಇದನ್ನೂ ಓದಿ: ಇವತ್ತಿನ ಯುವಕರು ಉದ್ಯೋಗಾಕಾಂಕ್ಷಿಯಲ್ಲ, ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಾರೆ: ಸ್ಟಾರ್ಟಪ್ ಮಹಾಕುಂಭದಲ್ಲಿ ಪಿಎಂ ಮೋದಿ ಹೇಳಿಕೆ

ರುಪಾಯಿ ಲೆಕ್ಕದಲ್ಲಿ ನೋಡುವುದಾದರೆ 1999ರಲ್ಲಿ ಒಂದು ಲಕ್ಷ ರೂ ಹಣವನ್ನು ಎನ್​ವಿಡಿಯಾ ಷೇರಿನ ಮೇಲೆ ಹೂಡಿಕೆ ಮಾಡಿದ್ದರೆ, ಈ 25 ವರ್ಷದ ಬಳಿಕ ಹಣ 38 ಕೋಟಿ ರೂಗೂ ಹೆಚ್ಚಾಗಿರುತ್ತಿತ್ತು.

ಎನ್​ವಿಡಿಯಾ ಷೇರು ಬೆಳವಣಿಗೆ ಲೆಕ್ಕಾಚಾರ

ಎನ್​ವಿಡಿಯಾ ಮೂಲ ಐಪಿಒ ಬೆಲೆ 1999ರಲ್ಲಿ: 12 ಡಾಲರ್

ಐದು ಬಾರಿ ಈ ಷೇರು ವಿಭಜನೆ ಆಗಿದೆ. 2000ರಲ್ಲಿ ಒಂದು ಷೇರು ಎರಡಾಗಿದೆ. 2001 ಮತ್ತು 2006ರಲ್ಲೂ ಒಂದು ಷೇರು ಎರಡಾಗಿ ವಿಭಜನೆಯಾಗಿದೆ. 2007ರಲ್ಲಿ ಎರಡು ಷೇರು ಮೂರಾಗಿ ವಿಭಜನೆ; 2021ರಲ್ಲಿ ಒಂದು ಷೇರು ನಾಲ್ಕಾಗಿ ವಿಭಜನೆ ಆಗಿದೆ.

ಮೂಲದಲ್ಲಿ 10 ಷೇರುಗಳನ್ನು ನೀವು ಖರೀದಿಸಿದ್ದರೆ ಐದು ಬಾರಿ ವಿಭಜನೆ ಬಳಿಕ ಎಷ್ಟು ಹೆಚ್ಚಾಗುತ್ತದೆ ನೋಡಿ…

  • 2000ರಲ್ಲಿ: 10+10= 20
  • 2001ರಲ್ಲಿ: 20+20= 40
  • 2006ರಲ್ಲಿ: 40+40: 80
  • 2007ರಲ್ಲಿ: 120
  • 2021ರಲ್ಲಿ: 480

ಇದನ್ನೂ ಓದಿ: ಟಾಟಾ ಸನ್ಸ್​ನಿಂದ ಷೇರು ಮಾರಾಟ; ಟಿಸಿಎಸ್ ಷೇರುಕುಸಿತ; ಇದು ಖರೀದಿಸುವ ಸಮಯವಾ?

ಅಂದರೆ 10 ಷೇರುಗಳನ್ನು ಖರೀದಿಸಿದ್ದರೆ ಇವತ್ತು ಅವರ ಷೇರು ಸಂಖ್ಯೆ 480ಕ್ಕೆ ಏರುತ್ತಿತ್ತು. ಒಂದು ಷೇರಿನ ಮೂಲ ಬೆಲೆ 12 ಡಾಲರ್​ನಿಂದ 0.25 ಡಾಲರ್ ಎಂದು ಪರಿಗಣಿಸಬಹುದು. ಅದರಂತೆ ಇವತ್ತು ಎನ್​ವಿಡಿಯಾದ ನಿಷ್ಠಾವಂತ ಹೂಡಿಕೆದಾರರು ಸಿಕ್ಕಾಪಟ್ಟೆ ಲಾಭ ಮಾಡಿದ್ದಾರೆ.

ಭಾರತದ ಕೆಲ ಮ್ಯೂಚುವಲ್ ಫಂಡ್​ಗಳು ಅಮೆರಿಕದ ಮಾರುಕಟ್ಟೆಯಲ್ಲಿ ಎನ್​ವಿಡಿಯಾ ಷೇರುಗಳ ಮೇಲೆ ಹೂಡಿಕೆ ಮಾಡಿವೆ. ಒಂದು ವರದಿ ಪ್ರಕಾರ 1,699 ಕೋಟಿ ರೂ ಮೊತ್ತದ ಭಾರತೀಯರ ಹೂಡಿಕೆಗಳು ಮ್ಯೂಚುವಲ್ ಫಂಡ್ ಮೂಲಕ ಎನ್​ವಿಡಿಯಾ ಷೇರುಗಳ ಮೇಲಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ