ಅಪೋಲೋ ಹಿಂದಿಕ್ಕಿ ಭಾರತದ ಅತಿದೊಡ್ಡ ಹಾಸ್ಪಿಟಲ್ ಚೈನ್ ಆಗುವತ್ತ ಮಣಿಪಾಲ್ ಹಾಸ್ಪಿಟಲ್ಸ್

India's biggest hospital chain: ಮಣಿಪಾಲ್ ಹಾಸ್ಪಿಟಲ್ಸ್ ಇದೀಗ ದೇಶದ ಅತಿದೊಡ್ಡ ಹಾಸ್ಪಿಟಲ್ ಚೈನ್ ಎನಿಸಿಕೊಳ್ಳುವ ಕಾಲ ಬಹಳ ಸನಿಹದಲ್ಲಿದೆ. ಪಶ್ಚಿಮ ಬಂಗಾಳದಲ್ಲಿ ಹೆಚ್ಚು ಅಸ್ತಿತ್ವದಲ್ಲಿರುವ ಮೆಡಿಕಾ ಸಿನರ್ಜಿ ಮಣಿಪಾಲ್​ನ ತೆಕ್ಕೆಗೆ ಸೇರುತ್ತಿದೆ. ಡೀಲ್ ಪೂರ್ಣಗೊಳ್ಳಲು ಅಂತಿಮ ಹಂತದಲ್ಲಿದೆ. ಈ ವಿಲೀನ ಒಪ್ಪಂದದ ಬಳಿಕ ಮಣಿಪಾಲ್ ಹಾಸ್ಪಿಟಲ್ಸ್ ದೇಶಾದ್ಯಂತ ಹೊಂದಿರುವ ಆಸ್ಪತ್ರೆ ಬೆಡ್​ಗಳ ಸಂಖ್ಯೆ 10,700ಕ್ಕೆ ಏರಲಿದೆ. 10,103 ಬೆಡ್ ಹೊಂದಿರುವ ಅಪೋಲೋ ಹಾಸ್ಪಿಟಲ್ಸ್​ಗಿಂತಲೂ ಮಣಿಪಾಲ್ ದೊಡ್ಡದಾಗಲಿದೆ.

ಅಪೋಲೋ ಹಿಂದಿಕ್ಕಿ ಭಾರತದ ಅತಿದೊಡ್ಡ ಹಾಸ್ಪಿಟಲ್ ಚೈನ್ ಆಗುವತ್ತ ಮಣಿಪಾಲ್ ಹಾಸ್ಪಿಟಲ್ಸ್
ಮಣಿಪಾಲ್ ಹಾಸ್ಪಿಟಲ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2024 | 10:57 AM

ಬೆಂಗಳೂರು, ಏಪ್ರಿಲ್ 9: ದಕ್ಷಿಣ ಕನ್ನಡ ಜಿಲ್ಲೆಯ ಮಣಿಪಾಲ ಜಾಗತಿಕವಾಗಿ ಖ್ಯಾತವಾಗಿರುವ ಬ್ರ್ಯಾಂಡ್. ಶಿಕ್ಷಣ ಕೇಂದ್ರವಾಗಿ ಹೆಸರುವಾಸಿಯಾಗಿದೆ. ಭಾರತದ ಮೊದಲ ಬ್ಯಾಂಕುಗಳೂ ಕೂಡ ಇಲ್ಲಿಯೇ ಶುರುವಾಗಿದ್ದು. ಇಲ್ಲಿಯ ಆಸ್ಪತ್ರೆ ಇವತ್ತು ಭಾರತದ ಅತಿದೊಡ್ಡ ಹಾಸ್ಪಿಟಲ್ ಚೈನ್ ಎನಿಸುವ ಮಟ್ಟಕ್ಕೆ ಬೆಳೆಯುತ್ತಿದೆ. ಮಣಿಪಾಲ ಹೆಲ್ತ್ ಎಂಟರ್ಪ್ರೈಸಸ್ (Manipal Health Enterprises) ಮತ್ತು ಮೆಡಿಕಾ ಸಿನರ್ಜೀ ಸಂಸ್ಥೆಗಳು ವಿಲೀನಗೊಳ್ಳುವ ಪ್ರಕ್ರಿಯೆ ಬಹುತೇಕ ಮುಕ್ತಾಯಗೊಂಡಿದೆ. ವಿಲೀನವಾದ ಬಳಿಕ ಮಣಿಪಾಲ್ ಹಾಸ್ಪಿಟಲ್ಸ್ ದೇಶಾದ್ಯಂತ 10,700 ಬೆಡ್​ಗಳನ್ನು ಹೊಂದಿರಲಿದೆ. ಇದೊಂದಿಗೆ ದೇಶದ ಅತಿದೊಡ್ಡ ಹಾಸ್ಪಿಟಲ್ ಚೈನ್ ಎನಿಸಲಿದೆ.

ಸದ್ಯ ಅಪೋಲೋ ಹಾಸ್ಪಿಟಲ್ಸ್ ಸದ್ಯ ದೇಶದ ಅತಿದೊಡ್ಡ ಹಾಸ್ಪಿಟಲ್ ಚೈನ್ ಆಗಿದೆ. ಇದು ಹೊಂದಿರುವ ಬೆಡ್​ಗಳ ಸಂಖ್ಯೆ 10,103 ಇದೆ. ಮಣಿಪಾಲ್ ಹಾಸ್ಪಿಟಲ್ಸ್ ಬಳಿ ಸದ್ಯ 33 ಆಸ್ಪತ್ರೆಗಳಿಂದ 9,500 ಬೆಡ್​ಗಳಿವೆ. ಈಗ ಮೆಡಿಕಾ ಬಳಿ 1,200 ಬೆಡ್​ಗಳಿವೆ. ಇದರೊಂದಿಗೆ ಮಣಿಪಾಲ್ ಆಸ್ಪತ್ರೆ ಹೊಂದಿರುವ ಬೆಡ್ ಸಂಖ್ಯೆ 10,700 ಆಗಲಿದೆ. ಮೆಡಿಕಾ ಸಿನರ್ಜಿ ಸಂಸ್ಥೆ ಕೋಲ್ಕತಾ, ಸಿಲಿಗುರಿ ಮತ್ತು ರಾಂಚಿಯಲ್ಲಿ ಆಸ್ಪತ್ರೆಗಳನ್ನು ಹೊಂದಿದೆ. ಕೋಲ್ಕತಾದಲ್ಲಿ 600 ಬೆಡ್​ಗಳಿರುವ ಆಸ್ಪತ್ರೆ ಇದೆ. ಪಶ್ಚಿಮ ಬಂಗಾಳದ ಅಸಾನ್ಸೋಲ್​ನಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸುತ್ತಿದೆ.

ಇದನ್ನೂ ಓದಿ: ಡಾಲರ್​ಗೂ ಚಿನ್ನಕ್ಕೂ ಎಣ್ಣೆ ಶೀಗೆಕಾಯಿ ಸಂಬಂಧ; ಆದರೂ ಡಾಲರ್ ಜೊತೆಜೊತೆಗೆ ಚಿನ್ನದ ಬೆಲೆಯೂ ಏರುತ್ತಿರೋದ್ಯಾಕೆ?

ಸಿಂಗಾಪುರದ ಟೆಮಾಸೆಕ್ ಕಂಪನಿ ಈ ಎರಡೂ ಸಂಸ್ಥೆಗಳ ಹೆಚ್ಚಿನ ಪಾಲು ಹೊಂದಿದೆ. ಹೀಗಾಗಿ, ಮಣಿಪಾಲ್ ಮತ್ತು ಮೆಡಿಕಾ ವಿಲೀನ ಪ್ರಕ್ರಿಯೆ ಸುಗಮವಾಗಿದೆ. ಟೆಮಾಸೆಕ್ ಒಂದು ವರ್ಷದ ಹಿಂದೆ ಮಣಿಪಾಲ್ ಹಾಸ್ಪಿಟಲ್​ನಲ್ಲಿ ಬಹುಪಾಲು ಷೇರನ್ನು ಖರೀದಿಸಿತ್ತು. ಶೇ. 18ರಷ್ಟಿದ್ದ ಅದರ ಷೇರುಪಾಲು ಶೇ. 59ಕ್ಕೆ ಏರಿತು. ಇದಾದ ಬಳಿಕ ಬೆಂಗಳೂರಿನ ವಿಕ್ರಮ್ ಹಾಸ್ಟಿಟಲ್, ಇಮಾಮಿ ಗ್ರೂಪ್ ಮಾಲಿಕತ್ವದ ಎಎಂಆರ್​ಐ ಹಾಸ್ಪಿಟಲ್ಸ್ ಅನ್ನು ಮಣಿಪಾಲ್ ಆಸ್ಪತ್ರೆ ಖರೀದಿಸಿತ್ತು. ಎಎಂಆರ್​ಐ ಹಾಸ್ಪಿಟಲ್ಸ್ 1,200 ಬೆಡ್​ಗಳನ್ನು ಹೊಂದಿದ್ದು, 2,300 ಕೋಟಿ ರೂಗೆ ಖರೀದಿಸಲಾಯಿತು. 2021ರಲ್ಲಿ ಕೊಲಂಬಿಯಾ ಏಷ್ಯಾದ 11 ಆಸ್ಪತ್ರೆಗಳನ್ನು ಖರೀದಿಸಿತ್ತು.

ಮಣಿಪಾಲ್ ಹಾಸ್ಪಿಟಲ್ಸ್ ಬೆಂಗಳೂರಿನಲ್ಲಿ ಮೂರು ಆಸ್ಪತ್ರೆಗಳನ್ನು ನಿರ್ಮಿಸುತ್ತಿದ್ದು ಒಟ್ಟು ಬೆಡ್ ಸಂಖ್ಯೆ 750 ಇರಲಿದೆ. ಛತ್ತೀಸ್​ಗಡದ ರಾಯಪುರ್​ನಲ್ಲಿ 350 ಹಾಸಿಗೆಗಳ ಒಂದು ಆಸ್ಪತ್ರೆ ನಿರ್ಮಿಸುತ್ತಿದೆ.

ಇದನ್ನೂ ಓದಿ: ಚೀನಾ, ವಿಯೆಟ್ನಾಂದಲ್ಲಿಯಂತೆ ಭಾರತದಲ್ಲೂ ಉದ್ಯೋಗಿಗಳಿಗೆ ಮನೆ ಕಟ್ಟಿಕೊಡಲಿದೆ ಆ್ಯಪಲ್

ಏಳು ದಶಕಗಳ ಇತಿಹಾಸ ಇರುವ ಮಣಿಪಾಲ್ ಹಾಸ್ಟಿಟಲ್ಸ್

ಮಣಪಾಲ್ ಆಸ್ಪತ್ರೆ ಶುರುವಾಗಿದ್ದು 1953ರಲ್ಲಿ. ವೈದ್ಯರಾಗಿದ್ದ ತೋನ್ಸೆ ಮಾಧವ ಅನಂತ ಪೈ ಅಥವಾ ಟಿಎಂಎ ಪೈ ಈ ಆಸ್ಪತ್ರೆ ಸಂಸ್ಥಾಪಕರು. ಇದು ಮೂಲತಃ ಕಸ್ತೂರಬಾ ಮೆಡಿಕಲ್ ಕಾಲೇಜಾಗಿತ್ತು. ಇವತ್ತು ಮಣಿಪಾಲ ಹಾಸ್ಪಿಟಲ್ಸ್ ಸಂಸ್ಥೆ ಅಗಾಧವಾಗಿ ಬೆಳೆಯಲು ಕಾರಣವಾಗಿರುವುದು ರಂಜನ್ ಪೈ. ಇವರು ಮಣಿಪಾಲ್ ಗ್ರೂಪ್ ಛೇರ್ಮನ್ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ