AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಳಿಯಿಂದ ನೀರು ತಯಾರಿಸುವ ಬೆಂಗಳೂರಿನ ಉರವು ಲ್ಯಾಬ್ಸ್; ನೀರಿನ ಸಮಸ್ಯೆಗೆ ಸ್ಟಾರ್ಟಪ್ ಪರಿಹಾರ

Uravu Labs From Air to Water: ಬೆಂಗಳೂರು ಮಾತ್ರವಲ್ಲ ಜಾಗತಿಕವಾಗಿ ನೀರಿನ ಸಮಸ್ಯೆ ಇದೆ. ನೀರಿನ ಮೂಲ ಬಹುತೇಕ ನದಿ, ಮಳೆ, ಸಾಗರ. ಹಾಗೆಯೇ, ಭೂಮಿಯ ವಾಯುಮಂಡಲದಲ್ಲೂ ಹೇರಳ ಜಲಸಂಪತ್ತು ಇದೆ. ಈ ಗಾಳಿಯಿಂದ ನೀರನ್ನು ಹೊರತೆಗೆಯುವ ತಂತ್ರಜ್ಞಾನ ವಿಶ್ವದ ಕೆಲವೆಡೆ ಬಳಕೆ ಆಗುತ್ತಿದೆ. ಬೆಂಗಳೂರಿನಲ್ಲಿ ಉರವು ಲ್ಯಾಬ್ಸ್ ಎಂಬ ಸ್ಟಾರ್ಟಪ್ ಈ ತಂತ್ರಜ್ಞಾನ ಬಳಸಿ ನೀರನ್ನು ತೆಗೆದು ಮಾರಾಟ ಮಾಡುತ್ತಿದೆ. ಕಳೆದ 8 ತಿಂಗಳಲ್ಲಿ ಬೆಂಗಳೂರಿನಲ್ಲಿ ಮೂರೂವರೆ ಲಕ್ಷ ಲೀಟರ್ ನೀರನ್ನು ಅದು ಮಾರಿದೆ.

ಗಾಳಿಯಿಂದ ನೀರು ತಯಾರಿಸುವ ಬೆಂಗಳೂರಿನ ಉರವು ಲ್ಯಾಬ್ಸ್; ನೀರಿನ ಸಮಸ್ಯೆಗೆ ಸ್ಟಾರ್ಟಪ್ ಪರಿಹಾರ
ಉರವು ಲ್ಯಾಬ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 09, 2024 | 12:54 PM

ಬೆಂಗಳೂರು, ಏಪ್ರಿಲ್ 9: ಜಲಕ್ಷಾಮ ಬೆಂಗಳೂರಿನಲ್ಲಿ ಮಾತ್ರವೇ ಅಲ್ಲ ತಲೆದೋರಿರುವುದು. ಇದು ಭಾರತದಾದ್ಯಂತ, ಅಷ್ಟೇ ಏಕೆ ಇಡೀ ವಿಶ್ವದಲ್ಲೇ ಪ್ರಮುಖವಾಗಿ ಸುಳಿದಾಡುತ್ತಿರುವ ಸಮಸ್ಯೆ. ನೀರಿನ ಮೂಲ ಕಡಿಮೆ ಆಗುತ್ತಲೇ ಹೋಗುತ್ತಿದೆ. ಇದೇ ವೇಳೆ ಗಾಳಿಯಿಂದ ನೀರು ತಯಾರಿಸುವ (From Air to Water) ತಂತ್ರಜ್ಞಾನ ಸದ್ದಿಲ್ಲದೇ ಬೆಳೆಯುತ್ತಿದೆ. ಬೆಂಗಳೂರಿನ ಸ್ಟಾರ್ಟಪ್ ಆಗಿರುವ ಉರವು ಲ್ಯಾಬ್ಸ್ (Uravu Labs) ಗಾಳಿಯಿಂದ ನೀರನ್ನು ತಯಾರಿಸುತ್ತಿದೆ. ಈಗಾಗಲೇ ಕೆಲ ಹೋಟೆಲ್​ಗಳಲ್ಲಿ ಇದರ ನೀರಿನ ಬಾಟಲ್​ಗಳು ಬಳಕೆ ಆಗುತ್ತಿವೆ. ಉರವು ಲ್ಯಾಬ್ಸ್​ನ ಸಹ-ಸಂಸ್ಥಾಪಕ ಸ್ವಪ್ನಿಲ್ ಶ್ರೀವಾಸ್ತವ್ ಅವರು ಈ ಬಗ್ಗೆ ನ್ಯೂಸ್18 ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ.

ಕ್ಯಾಲ್ಷಿಯಂ ಆಕ್ಸೈಡ್, ಕ್ಯಾಲ್ಷಿಯಮ್ ಕ್ಲೋರೈಡ್ ಇತ್ಯಾದಿ ತೇವ ಹೀರುವ ವಸ್ತುಗಳ ಗುಣಗಳನ್ನು ಆಧರಿಸಿ ಗಾಳಿಯಿಂದ ನೀರು ತೆಗೆಯುವ ತಂತ್ರಜ್ಞಾನವನ್ನು ಉರವು ಅಭಿವೃದ್ಧಿಪಡಿಸಿದೆ. ಈ ವಸ್ತುಗಳ ಮೂಲಕ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಳ್ಳಲಾಗುತ್ತದೆ. ಬಳಿಕ ಅದನ್ನು ಬಿಸಿ ಮಾಡಿ ಆವಿ ಹೊರಬರಿಸಲಾಗುತ್ತದೆ. ನಿಯಂತ್ರಿತ ರೀತಿಯಲ್ಲಿ ಬಿಸಿ ಮಾಡುವುದು ಮತ್ತು ತಣ್ಣಗಾಗಿಸುವುದು ಈ ಪ್ರಕ್ರಿಯೆಗಳ ಮೂಲಕ ಈ ಆವಿಯನ್ನು ಕುಡಿಯುವ ನೀರಾಗಿ ಪರಿವರ್ತಿಸಲಾಗುತ್ತದೆ ಎಂದು ಉರವು ಲ್ಯಾಬ್ಸ್ ಸಿಇಒ ಹೇಳಿದ್ದಾರೆ.

ಇದನ್ನೂ ಓದಿ: ಅಪೋಲೋ ಹಿಂದಿಕ್ಕಿ ಭಾರತದ ಅತಿದೊಡ್ಡ ಹಾಸ್ಪಿಟಲ್ ಚೈನ್ ಆಗುವತ್ತ ಮಣಿಪಾಲ್ ಹಾಸ್ಪಿಟಲ್ಸ್

ಬೆಂಗಳೂರಿನಲ್ಲಿ ಒಂದು ತಯಾರಕಾ ಘಟಕವನ್ನು ಉರವು ಲ್ಯಾಬ್ಸ್ ಹೊಂದಿದೆ. ಕಳೆದ ಒಂದು ವರ್ಷದಿಂದಲೂ ನೀರಿನ ತಯಾರಿಕೆ ಮಾಡುತ್ತಿದೆ. ವಿಶೇಷವೆಂದರೆ ಉರವು ಲ್ಯಾಬ್ಸ್​ನ ನೀರಿನ ಬಾಟಲ್​ಗಳು ಪ್ಲಾಸ್ಟಿಕ್ ಅಲ್ಲ, ಬದಲಾಗಿ ಗಾಜಿನ ಬಾಟಲ್ ಬಳಸುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಉದ್ದೇಶಪೂರ್ವಕವಾಗಿ ತಪ್ಪಿಸುತ್ತಿದೆ. ಹಿಂದೆ ಪೆಪ್ಸಿ, ಕೋಕಕೋಲಾ ಇತ್ಯಾದಿ ಕೂಲ್ ಡ್ರಿಂಕ್ಸ್​ಗಳು ಗಾಜಿನ ಬಾಟಲಿಯಲ್ಲಿ ಬರುತ್ತಿದ್ದವು. ಕುಡಿದ ಬಳಿಕ ಬಾಟಲಿಯನ್ನು ವಾಪಸ್ ನೀಡಬಹುದಿತ್ತು. ಅದೇ ರೀತಿಯಲ್ಲಿ ಉರವು ಲ್ಯಾಬ್ಸ್ ತನ್ನ ‘ಫ್ರಂ ಏರ್’ ನೀರಿನ ಬಾಟಲಿಗಳಿಗೆ ಪ್ರಯೋಗ ಮಾಡುತ್ತಿದೆ.

ಬೆಂಗಳೂರಿನಲ್ಲಿ ಸಂಸ್ಥೆ ಕಳೆದ 8 ತಿಂಗಳಲ್ಲಿ 3.5 ಲಕ್ಷ ಬಾಟಲ್ ನೀರನ್ನು ಮಾರಾಟ ಮಾಡಿದೆ. ತಮ್ಮ ಉತ್ಪನ್ನದ ಬಗ್ಗೆ ವಿಶ್ವಾಸ ಇರುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಸಿಇಒ ಸ್ವಪ್ನಿಲ್ ಶ್ರೀವಾಸ್ತವ ಹೇಳುತ್ತಾರೆ.

ಉರವು ಲ್ಯಾಬ್ಸ್​ನ ನೀರಿನ ಬಾಟಲ್​ನಲ್ಲಿ ‘ಫ್ರಂ ಏರ್’ ಟ್ರೇಡ್​ಮಾರ್ಕ್ ಗಮನಿಸಬಹುದು. ಕಾರ್ಪೊರೇಟ್ ಕಂಪನಿಗಳು ಸಾಕಷ್ಟು ಬಾರಿ ತಮ್ಮದೇ ಬ್ರ್ಯಾಂಡ್ ಅನ್ನು ಹಾಕಿಸುತ್ತವಾದರೂ ‘ಫ್ರಂ ಏರ್’, ಮತ್ತು ‘ಕ್ರಾಫ್ಟೆಡ್ ಬೈ ಉರವು’ ಎಂಬುದು ಬಾಟಲ್​ನಲ್ಲಿ ನಮೂದಾಗಿರುತ್ತದೆ.

ಇದನ್ನೂ ಓದಿ: ಪ್ರಮುಖ ವೈಮಾನಿಕ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಏರ್ ಇಂಡಿಯಾ-ಬಿಐಎಎಲ್ ಒಪ್ಪಂದ

ಉರವು ಲ್ಯಾಬ್ಸ್ ಬೆಂಗಳೂರಿನಲ್ಲಿ ಒಂದು ತಯಾರಿಕಾ ಘಟಕ ಹೊಂದಿದೆ. ಇದರಲ್ಲಿ 70 ಉದ್ಯೋಗಿಗಳಿದದಾರೆ. ಇದರ ತಂತ್ರಜ್ಞಾನ ಆಧರಿಸಿದ ಹಲವು ಅಪ್ಲಿಕೇಶನ್​ಗಳಿವೆ. ಅಬುಧಾಬಿಯಲ್ಲಿ ಮರಗಿಡಗಳಿಗೆ ಗಾಳಿಯಿಂದ ನೀರು ಒದಗಿಸುವ ಹೈಡ್ರೋಪೋನಿಕ್ಸ್ ಪ್ರಾಜೆಕ್ಟ್ ಅನ್ನು ಉರವು ಲ್ಯಾಬ್ಸ್ ನಡೆಸುತ್ತಿದೆ.

ಉರವು ಲ್ಯಾಬ್ಸ್​ನ ಒಂದು ಹಿನ್ನಡೆ ಎಂದರೆ ಇದರ ನೀರು ತಯಾರಿಕಾ ವೆಚ್ಚ. ಒಂದು ಲೀಟರ್ ನೀರು ತೆಗೆಯಲು 4ರಿಂದ 5 ರೂ ಆಗುತ್ತದಂತೆ. ಆದರೆ, ನೀರಿನ ಕೊರತೆ ಇನ್ನಷ್ಟು ತೀವ್ರವಾದಾಗ ಈ ತಂತ್ರಜ್ಞಾನ ಸಹಾಯಕ್ಕೆ ಬರುತ್ತದೆ. ಉರವು ಲ್ಯಾಬ್ಸ್ ಸಿಇಒ ಪ್ರಕಾರ, 2030ರಷ್ಟರಲ್ಲಿ ನೀರಿನ ತಯಾರಿಕಾ ವೆಚ್ಚವನ್ನು ಲೀಟರ್​​ಗೆ 50 ಪೈಸೆಗೆ ಇಳಿಸುವ ಗುರಿ ಇದೆಯಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ