Sign In

By signing in or creating an account, you agree with Associated Broadcasting Company's Terms & Conditions and Privacy Policy.

ಷೇರು, ಚಿನ್ನ, ಬಾಂಡ್, ತೈಲ, ಕ್ರಿಪ್ಟೋ ಬೆಲೆಗಳಲ್ಲಿ ವ್ಯತ್ಯಯ ಏನನ್ನು ಸೂಚಿಸುತ್ತಿವೆ?

Markets Trend: ವಿವಿಧ ಮಾರುಕಟ್ಟೆಯ ಪ್ರವೃತ್ತಿಗಳು ವಿಭಿನ್ನ ಸೂಚನೆಗಳನ್ನು ನೀಡುತ್ತವೆ. ಚಿನ್ನದ ಬೆಲೆ ಹೆಚ್ಚಾದರೆ ಅದಿನ್ನೇನೋ ಸೂಚಿಸುತ್ತದೆ. ಷೇರುಬೆಲೆ ಹೆಚ್ಚಳಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ಇವತ್ತಿನ ದಿನಗಳಲ್ಲಿ ಷೇರು, ಚಿನ್ನ, ತೈಲ ಇತ್ಯಾದಿ ಬೆಲೆಗಳು ಏನನ್ನು ಸೂಚಿಸುತ್ತಿರಬಹುದು ಎಂಬುದನ್ನು ಸಿಎನ್​ಬಿಸಿ ಟಿವಿ18ನ ನಿಗೆಲ್ ಡಿಸೋಜಾ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಷೇರು, ಚಿನ್ನ, ಬಾಂಡ್, ತೈಲ, ಕ್ರಿಪ್ಟೋ ಬೆಲೆಗಳಲ್ಲಿ ವ್ಯತ್ಯಯ ಏನನ್ನು ಸೂಚಿಸುತ್ತಿವೆ?
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 08, 2024 | 12:59 PM

ನವದೆಹಲಿ, ಏಪ್ರಿಲ್ 8: ಇವತ್ತಿನ ಜಾಗತೀಕರಣದ ದಿನಗಳಲ್ಲಿ ಎಲ್ಲೋ ಒಂದು ಕಡೆ ನಡೆಯುವ ಒಂದು ಘಟನೆ ಜಾಗತಿಕವಾಗಿ ಪರಿಣಾಮ (global effects) ಬೀರಬಹುದು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಶೀತವಾಗಬಹುದು. ಈ ವಿಶ್ವದ ಯಾವ ದೇಶ ಕೂಡ ಬಾಹ್ಯ ಪರಿಣಾಮದಿಂದ ಹೊರತಾಗಿರುವುದಿಲ್ಲ. ವ್ಯಾಪಾರ, ವಹಿವಾಟು, ಹವಾಮಾನ ಹೀಗೆ ಜಗತ್ತಿನ ದೇಶಗಳು ಪರಸ್ಪರ ಒಂದಿಲ್ಲೊಂದು ರೀತಿಯಲ್ಲಿ ಅವಲಂಬಿತವಾಗಿರುತ್ತವೆ. ಒಂದು ದೇಶದ ಆರ್ಥಿಕತೆಯ ಬೆಳವಣಿಗೆಯು ಅಲ್ಲಿಯ ವಿವಿಧ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುತ್ತದೆ. ವಿಶ್ವದ ದೊಡ್ಡಣ್ಣನಾದ ಅಮೆರಿಕದಲ್ಲಿ ಆಗುವ ಬದಲಾವಣೆಗಳು ಜಗತ್ತಿನ ಹಲವು ದೇಶಗಳ ಮಾರುಕಟ್ಟೆಯನ್ನು ಪ್ರಭಾವಿಸುತ್ತವೆ.

ಹೀಗೊಂದು ಇಂಟ್ರೆಸ್ಟಿಂಗ್ ಪ್ರಭಾವಗಳು…

ಸಿಎನ್​ಬಿಸಿ ಟಿವಿ18 ವಾಹಿನಿಯ ನಿಗೆಲ್ ಡಿಸೋಜಾ ಅವರು ಮೊನ್ನೆ ಈ ಮಾರುಕಟ್ಟೆ ಟ್ರೆಂಡ್ ಬಗ್ಗೆ ಮಾಡಿದ ಒಂದು ಟ್ವೀಟ್ ಕೆಲ ಇಂಟರೆಸ್ಟಿಂಗ್ ಸಂಗತಿಯನ್ನು ಎತ್ತಿ ತೋರಿಸಿದೆ. ಯಾವ್ಯಾವ ಮಾರುಕಟ್ಟೆ ಚಲನೆಗಳು ಯಾವ್ಯಾವ ಕಥೆ ಹೇಳುತ್ತವೆ ಎಂಬುದನ್ನು ಚಿಕ್ಕದಾಗಿ ಮತ್ತು ಚೊಕ್ಕವಾಗಿ ತಿಳಿಸಿದ್ದಾರೆ.

  • ಬಡ್ಡಿದರ ಕಡಿಮೆ ಆಗಬಹುದು ಎಂಬ ನಿರೀಕ್ಷೆಯಲ್ಲಿ ಷೇರುಬೆಲೆ ಹೆಚ್ಚುತ್ತಿದೆ. ಅದು ಆರ್ಥಿಕತೆ ಬಗ್ಗೆ ಆಶಾಭಾವನೆ ಇರುವುದನ್ನು ವ್ಯಕ್ತಪಡಿಸುತ್ತಿದೆ.
  • ಆರ್ಥಿಕ ಅನಿಶ್ಚಿತತೆಯ ಮಧ್ಯೆ ಚಿನ್ನ ಮತ್ತು ಬೆಳ್ಳಿ ಮಿಂಚುತ್ತಿದೆ. ಹೂಡಿಕೆದಾರರಿಗೆ ಇವು ಸುರಕ್ಷಿತ ಹೂಡಿಕೆಗಳೆನಿಸಿವೆ.
  • ಬಾಂಡ್​ಗಳು ಕುಸಿಯುತ್ತಿದ್ದು ಬಡ್ಡಿದರ ಹೆಚ್ಚುವ ಭಯವನ್ನು ಇದು ಸೂಚಿಸುತ್ತಿದೆ.
  • ತೈಲ ಬೆಲೆ ಹೆಚ್ಚುತ್ತಿದ್ದು, ಬೇಡಿಕೆ ಮತ್ತು ಪೂರೈಕೆಯಲ್ಲಿ ಆಗಿರುವ ಸಂಕುಚಿತತೆಯನ್ನು ಇದು ಸೂಚಿಸುತ್ತದೆ.
  • ಕ್ರಿಪ್ಟೋ ಮಾರುಕಟ್ಟೆಯ ವ್ಯತ್ಯಯಕ್ಕೆ ಯಾವ ಸಹಜ ತರ್ಕವೂ ಕಾಣುತ್ತಿಲ್ಲ.

ಇವೆಲ್ಲ ಸೂಚನೆಗಳು ನಮ್ಮನ್ನು ತಲೆ ಕೆರೆದುಕೊಳ್ಳುವಂತೆ ಮಾಡಿವೆ ಎಂದು ನಿಗೆಲ್ ಡಿಸೋಜಾ ಹೇಳುತ್ತಾರೆ.

ಇದನ್ನೂ ಓದಿ: ಡಾಲರ್​ಗೂ ಚಿನ್ನಕ್ಕೂ ಎಣ್ಣೆ ಶೀಗೆಕಾಯಿ ಸಂಬಂಧ; ಆದರೂ ಡಾಲರ್ ಜೊತೆಜೊತೆಗೆ ಚಿನ್ನದ ಬೆಲೆಯೂ ಏರುತ್ತಿರೋದ್ಯಾಕೆ?

ಮಾರುಕಟ್ಟೆ ತಜ್ಞರು ಸಾಮಾನ್ಯವಾಗಿ ವಿವಿಧ ವಿದ್ಯಮಾನಗಳ ಮೂಲಕ ಟ್ರೆಂಡ್ ಅನ್ನು ಅಂದಾಜು ಮಾಡುತ್ತಾರೆ. ಕೆಲವೊಮ್ಮೆ ಸಹಜ ಪ್ರವೃತ್ತಿಗೆ ವಿರುದ್ಧವಾಗಿ ಮಾರುಕಟ್ಟೆ ವರ್ತಿಸಬಹುದು. ಅಂಥ ಒಂದು ಮಿಶ್ರ ಸಂದರ್ಭ ಈಗ ಇದ್ದಂತಿದೆ. ಮಾರುಕಟ್ಟೆ ಹೀಗೇ ವರ್ತಿಸುತ್ತದೆ, ಇವೇ ಪರಿಣಾಮ ಬೀರುತ್ತವೆ ಎಂದು ಸ್ಪಷ್ಟವಾಗಿ ಊಹಿಸಲು ಕಷ್ಟವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Mon, 8 April 24

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್