Kurlon Limited: ಕರ್ನಾಟಕದ ಪ್ರತಿಸ್ಪರ್ಧಿ ಕಂಪನಿ ಕರ್ಲಾನ್ ಖರೀದಿಗೆ ಮುಂದಾದ ಶೀಲಾ ಫೋಮ್; 2000 ಕೋಟಿ ರೂ. ಡೀಲ್

ಕರ್ನಾಟಕದಲ್ಲಿ 1962ರಲ್ಲಿ ಆರಂಭವಾಗಿದ್ದ ಕರ್ಲಾನ್ ಲಿಮಿಟೆಡ್ ಕರ್ಲಾನ್ ಬ್ರ್ಯಾಂಡ್​​ನಲ್ಲಿ ಹಾಸಿಗೆಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ದೇಶದಾದ್ಯಂತ 9 ಘಟಕಗಳು ಹಾಗೂ 72 ಶಾಖೆಗಳನ್ನು ಒಳಗೊಂಡಿದೆ.

Kurlon Limited: ಕರ್ನಾಟಕದ ಪ್ರತಿಸ್ಪರ್ಧಿ ಕಂಪನಿ ಕರ್ಲಾನ್ ಖರೀದಿಗೆ ಮುಂದಾದ ಶೀಲಾ ಫೋಮ್; 2000 ಕೋಟಿ ರೂ. ಡೀಲ್
ಸಾಂದರ್ಭಿಕ ಚಿತ್ರImage Credit source: pixabay
Follow us
TV9 Web
| Updated By: Ganapathi Sharma

Updated on:Dec 30, 2022 | 12:00 PM

ಬೆಂಗಳೂರು: ದೇಶದ ಅತಿದೊಡ್ಡ ಹಾಸಿಗೆ ತಯಾರಿಕಾ ಕಂಪನಿ ಶಿಲಾ ಫೋಮ್ (Sheela Foam) ಲಿಮಿಟೆಡ್ ಈಗ ಪ್ರತಿಸ್ಪರ್ಧಿ ಕಂಪನಿ ಕರ್ನಾಟಕ ಮೂಲದ ಕರ್ಲಾನ್ (Kurlon Limited) ಖರೀದಿಗೆ ಮುಂದಾಗಿದೆ. ಸುಮಾರು 2,000 ಕೋಟಿ ರೂ.ಗೆ ಖರೀದಿ ಮಾಡಲಿದೆ ಎಂದು ವರದಿಯಾಗಿದೆ. ಒಪ್ಪಂದ ಪೂರ್ಣಗೊಂಡಲ್ಲಿ ಹಾಸಿಗೆ ಮಾರಾಟ ಕ್ಷೇತ್ರದಲ್ಲಿ ಶೀಲಾ ಫೋಮ್ ಶೇಕಡಾ 35ರಿಂದ 40ರಷ್ಟು ಮಾರುಕಟ್ಟೆ ಪಾಲನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಖಚಿತ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮವೊಂದು ವರದಿ ಮಾಡಿದೆ. ಈ ವಿಚಾರವಾಗಿ ಶೀಲಾ ಫೋಮ್ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಹಾಸಿಗೆ ತಯಾರಿ ಮತ್ತು ಮಾರಾಟ ಕ್ಷೇತ್ರದಲ್ಲಿ ಹೆಸರುವಾಸಿಯಾಗಿರುವ ಶೀಲಾ ಫೋಮ್ ‘ಸ್ಲೀಫ್ ವೆಲ್’ ಬ್ರ್ಯಾಂಡ್​​ನಲ್ಲಿ ಹಾಸಿಗೆ ಮಾರಾಟ ಮಾಡುತ್ತಿದೆ. ಗಾಜಿಯಾಬಾದ್ ಮೂಲದ ಈ ಕಂಪನಿ ಸದ್ಯ ಹಾಸಿಗೆ ಮಾರಾಟ ಕ್ಷೇತ್ರದಲ್ಲಿ ಶೇಕಡಾ 25ರಷ್ಟು ಮಾರುಕಟ್ಟೆ ಪಾಲು ಹೊಂದಿದೆ ಎಂದು ‘ಐಸಿಐಸಿಐ ಸೆಕ್ಯುರಿಟೀಸ್’ ತಿಳಿಸಿದೆ. ಕರ್ಲಾನ್ ಖರೀದಿ ಒಪ್ಪಂದ ಕುರಿತ ವರದಿ ಪ್ರಕಟಗೊಂಡ ಬೆನ್ನಲ್ಲೇ ಶೀಲಾ ಫೋಮ್ ಷೇರು ಮೌಲ್ಯದಲ್ಲಿ ಶೇಕಡಾ 5ರ ವೃದ್ಧಿ ದಾಖಲಾಗಿದೆ.

ಇದನ್ನೂ ಓದಿ: Budget 2023: ಕೇಂದ್ರ ಬಜೆಟ್​​ನಲ್ಲಿ ತೆರಿಗೆದಾರರು ನಿರೀಕ್ಷಿಸಬಹುದಾದ್ದು ಏನು? ಇಲ್ಲಿದೆ ವಿವರ

ಕರ್ಲಾನ್ ಅಧಿಕಾರ ಹಸ್ತಾಂತರಕ್ಕೆ ಎದುರು ನೋಡುತ್ತಿರುವುದಾಗಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುಧಾಕರ್ ಪೈ ಇತ್ತೀಚೆಗೆ ಸುಳಿವು ನೀಡಿದ್ದರು. ಇದರ ಬೆನ್ನಲ್ಲೇ ಶೀಲಾ ಫೋಮ್ ಖರೀದಿ ಮಾಡಲಿದೆ ಎಂಬ ವರದಿಯಾಗಿದೆ. 2020ನೇ ಹಣಕಾಸು ವರ್ಷದಲ್ಲಿ ಕರ್ಲಾನ್ 760.9 ದಶಲಕ್ಷ ರೂಪಾಯಿ ಲಾಭ ಗಳಿಸಿತ್ತು. 2022ರಲ್ಲಿ ಲಾಭದ ಪ್ರಮಾಣ 179.7 ದಶಲಕ್ಷ ರೂಪಾಯಿಗೆ ಕುಸಿದಿದೆ. ಕರ್ನಾಟಕದಲ್ಲಿ 1962ರಲ್ಲಿ ಆರಂಭವಾಗಿದ್ದ ಕರ್ಲಾನ್ ಲಿಮಿಟೆಟಡ್ ಕರ್ಲಾನ್ ಬ್ರ್ಯಾಂಡ್​​ನಲ್ಲಿ ಹಾಸಿಗೆಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ದೇಶದಾದ್ಯಂತ 9 ಘಟಕಗಳು ಹಾಗೂ 72 ಶಾಖೆಗಳನ್ನು ಒಳಗೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:54 am, Fri, 30 December 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ