ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಹಸಿರು ನಿಶಾನೆ: ಉತ್ತರ ಕರ್ನಾಟಕ ಜನರಿಗೆ ಮೋದಿ ನೀಡಿದ ಕೊಡುಗೆ ಎಂದ ಬೊಮ್ಮಾಯಿ

ಇದು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಾಗಲೇ ಈ ಸುದ್ದಿ ಬಂದಿರೋದು ಮತ್ತೊಂದು ದೊಡ್ಡ ಖುಷಿ ತಂದಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. 

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಹಸಿರು ನಿಶಾನೆ: ಉತ್ತರ ಕರ್ನಾಟಕ ಜನರಿಗೆ ಮೋದಿ ನೀಡಿದ ಕೊಡುಗೆ ಎಂದ ಬೊಮ್ಮಾಯಿ
ಸಿಎಂ ಬಸವರಾಜ್ ಬೊಮ್ಮಾಯಿImage Credit source: Network18
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 29, 2022 | 4:18 PM

ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಕಳಸಾ ಬಂಡೂರಿ ನಾಲಾ ಯೋಜನೆ (Kalasa Banduri Water Project) ಯ ವಿಸ್ತೃತ ಯೋಜನಾ ವರದಿ ತಯಾರಿಕೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಕುರಿತಾಗಿ ಸಿಎಂ ಬಸವರಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಇದು ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸುವಾಗಲೇ ಈ ಸುದ್ದಿ ಬಂದಿರೋದು ಮತ್ತೊಂದು ದೊಡ್ಡ ಖುಷಿ ತಂದಿದೆ. ಬಹಳ ವರ್ಷದ ಕನಸು ನನಸಾಗಿದೆ. ಇಡೀ ಕರ್ನಾಟಕ ಭಾಗದ ಜನತೆ ಹಾಗೂ ಎಲ್ಲಾ ಸದಸ್ಯರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದರು. ಉತ್ತರ ಕರ್ನಾಟಕ ಭಾಗದ ಮಹತ್ವದ ಯೋಜನೆ ಕಳಸಾ ಬಂಡೂರಿ ಯೋಜನೆ. ನಮ್ಮ ತಂದೆಯವರು ಸಿಎಂ ಇದ್ದಾಗ 1988ರಲ್ಲಿ ಒಂದು ಒಪ್ಪಂದ ಮಾಡಿಕೊಳ್ಳಲು ಸಭೆ ನಡೆದಿತ್ತು. ರಾಣೆಯವರು ಮಹಾರಾಷ್ಟ್ರದಲ್ಲಿ ಸಿಎಂ ಇದ್ರು. ಕಳಸ ಡ್ಯಾಮ್ ಕಟ್ಟಿ ನಮಗೆ ನೀರು ಕೊಡೋದು, ನಾವು ಅವರಿಗೆ ವಿದ್ಯುತ್ ಕೊಡೋದು ಅಂತ ನಿರ್ಧರಿಸಲಾಗಿತ್ತು. ಆದರೆ ಮುಂದಿನ ಸರ್ಕಾರ ಒಪ್ಪಲಿಲ್ಲ. ನಮ್ಮ ಸರ್ಕಾರ ಮಹದಾಯಿ ಯೋಜನೆ ಮಾಡಲು 2002ರಿಂದ ಕಳಸಾದಿಂದ ಡೈವರ್ಟ್ ಮಾಡಲು ಚರ್ಚಿಸಲಾಯಿತು. ಆದರೆ ಗೋವಾ ತಗಾದೆ ತೆಗೆಯಿತು ಎಂದು ಹೇಳಿದರು.

ಡೈವರ್ಷನ್ ಮಾಡಲು ಅನುಮತಿ 

ಬಹಳಷ್ಟು ಒತ್ತಾಯ ಮಾಡಿ, ಟ್ರಿಬ್ಯೂನಲ್ ಅಧ್ಯಕ್ಷರು ಬಂದಾಗ ಹೋರಾಟ ಮಾಡಿದೆವು. 2018ರಲ್ಲಿ ಟ್ರಿಬ್ಯೂನಲ್ ಬಂತು. ಪೂರ್ಣ ಪ್ರಮಾಣದ ನೀರು ಸಿಗದಿದ್ರೂ, ಡೈವರ್ಷನ್ ಮಾಡಲು ಅನುಮತಿ ಸಿಕ್ಕಿತು. 2018ರಲ್ಲಿ ನೋಟಿಫಿಕೇಷನ್ ಆಗಿದೆ. ನಮಗೆ ಕಳಸಾದಲ್ಲಿ 1.72 TMC ನೀರು ಕಳಸದಿಂದ ಡೈವರ್ಟ್ ಮಾಡಲು ಹಾಗೂ 2.18 ಬಂದೇರಿಯಾಡ್ಯಾಮ್‌ನಿಂದ ಡೈವರ್ಟ್ ಮಾಡಲು ಒಪ್ಪಂದ ಆಗಿದೆ. ಬಳಿಕ DPR ಸಿದ್ದಪಡಿಸಲಾಯಿತು ಎಂದರು.

ಇದನ್ನೂ ಓದಿ: ಕರ್ನಾಟಕಕ್ಕೆ ಅತ್ಯಂತ ಅವಶ್ಯಕವಾಗಿದ್ದ ಕಳಸಾ ಬಂಡೂರಿ ವಿಸ್ತೃತ ಯೋಜನೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಬಹಳ ವರ್ಷದ ಕನಸು ನನಸಾಗಿದೆ

ಹೈಡ್ರಾಲಜಿ ಮತ್ತು ಡಿಸೈನ್ ಬಗ್ಗೆ CWC ನಲ್ಲಿ ತೀರ್ಮಾನ ಆಯ್ತು. ಅದೆಲ್ಲ ಸರಿಪಡಿಸಿ, ಸಬ್ಮಿಟ್ ಮಾಡಿದ್ದೇವೆ. ಎಲ್ಲಾ ಡೈರೆಕ್ಟ್ರೇಟ್ ಮನವಿ ಮಾಡಿ ಲಿಫ್ಟ್ ಮಾಡಿ ನೀರು ಪಡೆಯೋದಾಗಿ ಹೇಳಿದ್ದೇವೆ. ಕೇಂದ್ರ ಸರ್ಕಾರಕ್ಕೆ ಹೋಗಿ ನಮ್ಮ ಪ್ರಧಾನಿಗೆ ಹೋಗಿ, ನಮ್ಮ DPR ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ತಿಂಗಳಲ್ಲಿ ಮಹದಾಯಿ, ಕಳಸಾ ಬಂಡೂರಿ ಜಾರಿ ಮಾಡ್ತೀವಿ ಎಂದು ಯಡಿಯೂರಪ್ಪ ಸುಳ್ಳು ಭರವಸೆ ನೀಡಿದರು -M.B.ಪಾಟೀಲ್ ಟೀಕೆ

ಉತ್ತರ ಕರ್ನಾಟಕ ಭಾಗದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೊಡುಗೆ

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ. ಈ ಕಾರ್ಯಕ್ಕೆ ನಿರಂತರವಾಗಿ ಓಡಾಡಿದ ನೀರಾವರಿ ಸಚಿವ ಗೋವಿಂದ್ ಕಾರಜೋಳ ಅವರಿಗೆ ಅಭಿನಂದನೆ. ಕೂಡಲೇ ಡಿಪಿಆರ್ ಸಿದ್ದಪಡಿಸಿ ಕಾರ್ಯಯೋಜನೆ ಆರಂಭಿಸುತ್ತೇವೆ. ನಾವೇ ಅಡಿಗಲ್ಲು ಹಾಕಿ ಪೂಜೆ ನೆರವೇರಿಸುತ್ತೇವೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್